• Home
  • »
  • News
  • »
  • lifestyle
  • »
  • Weight Loss: ಡಯಟ್​​ನಲ್ಲಿ ಸಮೃದ್ಧ ಫೈಬರ್ ಸೇರಿಸಲು ಮರೆಯದಿರಿ

Weight Loss: ಡಯಟ್​​ನಲ್ಲಿ ಸಮೃದ್ಧ ಫೈಬರ್ ಸೇರಿಸಲು ಮರೆಯದಿರಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಸಾಮಾನ್ಯವಾಗಿ ಜನರು ಕಡಿಮೆ ಕ್ಯಾಲೋರಿ ಪದಾರ್ಥಗಳನ್ನು ಸೇವಿಸಲು ಮತ್ತು ತೂಕ ಇಳಿಸಲು ಹೆಚ್ಚು ವ್ಯಾಯಾಮ ಮಾಡುವಂತೆ ಸಲಹೆ ನೀಡುತ್ತಾರೆ. ಆಹಾರದಲ್ಲಿ ಪ್ರೋಟೀನ್ ಭರಿತ ಆಹಾರಗಳನ್ನು ಸೇರಿಸಲು ಅನೇಕ ತಜ್ಞರು ಶಿಫಾರಸು ಮಾಡುತ್ತಾರೆ. ತೂಕ ಇಳಿಸಲು ನಾವು ಏನು ತಿನ್ನಬೇಕು ಎಂಬುದನ್ನು ತಿಳಿಯುವುದು ತುಂಬಾ ಮುಖ್ಯ.

ಮುಂದೆ ಓದಿ ...
  • Share this:

    ತೂಕ ಇಳಿಸಲು (Weight Loss) ಸಾಕಷ್ಟು ತಾಳ್ಮೆ ಮತ್ತು ಕಠಿಣ ಶ್ರಮ ಬೇಕು. ತೂಕ ಇಳಿಸಲು ನೀವು ವ್ಯಾಯಾಮ (Exercise), ಜಿಮ್, ಡಯಟಿಂಗ್ (Dieting) ಏನೇ ಮಾಡಿದರೂ ಎಲ್ಲವನ್ನೂ ತಾಳ್ಮೆಯಿಂದ ಮಾಡಬೇಕಾಗುತ್ತದೆ. ಎಲ್ಲದಕ್ಕೂ ಸಮಯ (Time) ತೆಗೆದುಕೊಳ್ಳುತ್ತದೆ. ಹಾಗಾಗಿ ತೂಕ ಇಳಿಕೆ ಕಷ್ಟಕರ ಕೆಲಸ. ಆದರೆ ಸ್ಥೂಲಕಾಯದಿಂದ (Obesity) ಸುಲಭವಾಗಿ ಪರಿಹಾರ ಪಡೆಯಲು ಹಲವು ಮಾರ್ಗಗಳು ಇವೆ. ಸಾಮಾನ್ಯವಾಗಿ ಜನರು ಕಡಿಮೆ ಕ್ಯಾಲೋರಿ ಪದಾರ್ಥಗಳನ್ನು ಸೇವಿಸಲು ಮತ್ತು ತೂಕ ಇಳಿಸಲು ಹೆಚ್ಚು ವ್ಯಾಯಾಮ ಮಾಡುವಂತೆ ಸಲಹೆ ನೀಡುತ್ತಾರೆ. ಆಹಾರದಲ್ಲಿ ಪ್ರೋಟೀನ್ ಭರಿತ ಆಹಾರಗಳನ್ನು ಸೇರಿಸಲು ಅನೇಕ ತಜ್ಞರು ಶಿಫಾರಸು ಮಾಡುತ್ತಾರೆ.


    ತೂಕ ಇಳಿಸಲು ನಾವು ಏನು ತಿನ್ನಬೇಕು?


    ತೂಕ ಇಳಿಸಲು ನಾವು ಏನು ತಿನ್ನಬೇಕು ಎಂಬುದನ್ನು ತಿಳಿಯುವುದು ತುಂಬಾ ಮುಖ್ಯ. ಕೊಬ್ಬಿನಿಂದ ಸ್ಲಿಮ್ ಮತ್ತು ಪೌಷ್ಟಿಕ ತಜ್ಞೆ ಮತ್ತು ಡಯೆಟಿಷಿಯನ್ ನಿರ್ದೇಶಕರಾದ ಶಿಖಾ ಅಗರ್ವಾಲ್ ಶರ್ಮಾ ಅವರ ಪ್ರಕಾರ, ಈ ಎಲ್ಲಾ ಕ್ರಮಗಳು ಸಹಜವಾಗಿ ಅವಶ್ಯಕ ಆಗಿವೆ.


    ತೂಕ ಕಡಿಮೆ ಮಾಡಲು ಫೈಬರ್ ಸಹಕಾರಿ


    ಇವುಗಳ ಹೊರತಾಗಿ ಇನ್ನೂ ಒಂದು ಪ್ರಮುಖ ಅಂಶ ಗಮನಿಸಬೇಕು. ಅಂದ್ರೆ ನಿಮ್ಮ ಆಹಾರದಲ್ಲಿ ಫೈಬರ್ ಸೇವನೆ ಹೆಚ್ಚಿಸಬೇಕು. ಇದಕ್ಕಾಗಿ ನಾರಿನಂಶವಿರುವ ತರಕಾರಿಗಳ ಸೇವನೆ ಮಾಡಬಹುದು. ಹೊಟ್ಟೆ ಮತ್ತು ಕರುಳಿನ ಕಾರ್ಯ ಸುಧಾರಿಸುವ ಮೂಲಕ ತೂಕ ಕಡಿಮೆ ಮಾಡಲು ಫೈಬರ್ ಸಹಾಯ ಮಾಡುತ್ತದೆ ಎಂದು ಇಲ್ಲಿ ನಾವು ನೋಡೋಣ.


    ಇದನ್ನೂ ಓದಿ: ತ್ವಚೆಯ ಸಮಸ್ಯೆ ಇದ್ದಾಗ ಯಾವ ಪದಾರ್ಥಗಳ ಸೇವನೆ ತಪ್ಪಿಸಬೇಕು?


    ಫೈಬರ್ ಸಸ್ಯ ಮೂಲದ ಆಹಾರಗಳ ಒಂದು ಅಂಶ ಆಗಿದೆ. ಇದನ್ನು ಮಾನವರಲ್ಲಿ ಜೀರ್ಣಕಾರಿ ಕಿಣ್ವಗಳಿಂದ ಸುಲಭವಾಗಿ ಒಡೆಯಲು ಸಾಧ್ಯವಿಲ್ಲ. ನಾರಿನಂಶವು ದೇಹದಿಂದ ವಿಭಜನೆಯಾದಾಗ ಮತ್ತು ಹೀರಿಕೊಳ್ಳಲ್ಪಟ್ಟಾಗ ದೇಹವು ಅನಗತ್ಯ ಆಹಾರ ಹೀರಿಕೊಳ್ಳುವುದನ್ನು ತಡೆಯುತ್ತದೆ.


    ಕೋಸುಗಡ್ಡೆ


    ಈ ಹಸಿರು ತರಕಾರಿ ಫೈಬರ್ ಮತ್ತು ವಿಟಮಿನ್ ಸಿ ಎರಡನ್ನೂ ಹೇರಳವಾಗಿ ಹೊಂದಿದೆ. ಅಧ್ಯಯನಗಳ ಪ್ರಕಾರ ಕೋಸುಗಡ್ಡೆ ಪ್ರತಿ ಕಪ್‌ ಗೆ ಐದು ಗ್ರಾಂ ಫೈಬರ್ ನ್ನು ಹೊಂದಿದೆ. ಈ ರುಚಿಕರ ತರಕಾರಿ ಆನಂದಿಸಲು ಸ್ವಲ್ಪ ಎಣ್ಣೆ ಮತ್ತು ಬೆಳ್ಳುಳ್ಳಿ ಜೊತೆ ಹುರಿದು ಸೇವಿಸಿ.


    ಪಾಲಕ್ ಸೊಪ್ಪು


    ಪಾಲಕ್ ಸೊಪ್ಪನ್ನು ಸೇವಿಸುವುದು ಕಣ್ಣಿನ ಆರೋಗ್ಯ ಸುಧಾರಿಸುತ್ತದೆ. ಈ ಎಲೆಗಳ ತರಕಾರಿ ಆಕ್ಸಿಡೇಟಿವ್ ಒತ್ತಡ ಕಡಿಮೆ ಮಾಡಲು ಮತ್ತು ರಕ್ತದೊತ್ತಡ ಕಡಿಮೆ ಮಾಡಲು ಸಹಕಾರಿ ಆಗಿದೆ. ಪಾಲ್ ಸೊಪ್ಪಿನಲ್ಲಿ ಕರಗದ ನಾರಿನಂಶ ಇದೆ. ಇದು ಆರೋಗ್ಯ ಸುಧಾರಿಸುತ್ತದೆ.


    ಹಸಿರು ಬಟಾಣಿ


    ಹಸಿರು ಬಟಾಣಿ ರುಚಿಕರ ಹಾಗೂ ಪೋಷಕಾಂಶಗಳ ಖಜಾನೆ ಆಗಿದೆ. ಇದು ಫೈಬರ್, ಕಬ್ಬಿಣ ಮತ್ತು ವಿಟಮಿನ್ ಎ ಮತ್ತು ಸಿ ಯಲ್ಲಿ ಸಮೃದ್ಧ ಆಗಿದೆ. ಉತ್ತಮ ಭಾಗವೆಂದರೆ ಅದನ್ನು ತಯಾರಿಸುವುದು ಸುಲಭ.


    ಬೆಂಡೆಕಾಯಿ


    ಈ ಹಸಿರು ತರಕಾರಿ ಪೌಷ್ಟಿಕಾಂಶಗಳಿಂದ ಸಮೃದ್ಧ ತರಕಾರಿ ಆಗಿದೆ. ಇದು ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಕಾರ್ಬೋಹೈಡ್ರೇಟ್‌ಗಳು, ಪ್ರೋಟೀನ್, ವಿಟಮಿನ್‌ಗಳು, ಕಿಣ್ವಗಳು ಮತ್ತು ಇತರ ಅನೇಕ ಖನಿಜಗಳ ಉತ್ತಮ ಮೂಲ ಆಗಿದೆ. ಹೆಚ್ಚಿನ ಫೈಬರ್ ಅಂಶವು ಬೆಂಡೆಕಾಯಿ ಕರುಳು ಶುದ್ಧೀಕರಿಸಲು ಸಹಕಾರಿ ಆಗಿದೆ.


    ಇದನ್ನೂ ಓದಿ: ಮೂಳೆಗಳ ಕಾಯಿಲೆಗೆ ಕಾರಣವಾಗುವ ಲೂಬ್ರಿಕಂಟ್ ಎಂದರೇನು? ಇದನ್ನು ಪೂರೈಸುವ ಪದಾರ್ಥಗಳಿವು!


    ಕುಂಬಳಕಾಯಿ


    ಅನೇಕ ಜನರು ಈ ತರಕಾರಿ ಸೇವನೆ ಇಷ್ಟ ಪಡಲ್ಲ. ಆದರೆ ಇದು ಕ್ಯಾಲ್ಸಿಯಂ, ವಿಟಮಿನ್ ಎ ಮತ್ತು ಕೆ ಯ ಉತ್ತಮ ಮೂಲ ಆಗಿದೆ. ಇದನ್ನು ಸಿಹಿ ಮತ್ತು ಖಾರದ ವಸ್ತುಗಳ ತಯಾರಿಕೆಗೆ ಬಳಕೆ ಮಾಡುತ್ತಾರೆ. ತೂಕ ಇಳಿಸಲು ಕುಂಬಳಕಾಯಿ ತರಕಾರಿ ಉತ್ತಮ ಆಯ್ಕೆ ಆಗಿದೆ.

    Published by:renukadariyannavar
    First published: