ತುಂಬಾ ಜನರು (People) ತೂಕ ನಷ್ಟಕ್ಕೆ (Weight Loss) ಹಲವು ಪ್ರಯತ್ನ ಮಾಡ್ತಾರೆ. ಆದ್ರೆ ದೀರ್ಘ ಸಮಯದ ನಂತರವೂ ಕೆಲವರು ಸರಿಯಾದ ಫಲಿತಾಂಶ ಸಿಗದೇ ಬೇಸರ ಮಾಡಿಕೊಳ್ತಾರೆ. ತೂಕ ಇಳಿಕೆ ಕೇವಲ ಒಂದೆರೆಡು ದಿನದ ಮಾತಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ತೂಕ ನಷ್ಟಕ್ಕೆ ಸರಿಯಾದ ಶ್ರಮ, ಡಯಟ್ (Diet), ತಾಳ್ಮೆ, ವರ್ಕೌಟ್ (Workout) ಮಾಡಬೇಕಾಗುತ್ತದೆ. ತಿನ್ನುವ ಆಹಾರ ಮತ್ತು ಪಾನೀಯದ (Food And Water) ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು ಅಂತಾರೆ ತಜ್ಞರು. ತೂಕ ಇಳಿಸಲು ಮುಂದಾದ ನಂತರ ಮೊದಲ ವಾರದಲ್ಲೇ ಕೆಲವರು ಸೋತು ಬಿಡ್ತಾರೆ. ಆದ್ರೆ ಹಾಗೇ ಮಾಡಬೇಡಿ. ತೂಕ ಇಳಿಕೆಯನ್ನು ಉತ್ಸಾಹ ಮತ್ತು ಆನಂದದಿಂದ ಮಾಡಿ.
ತೂಕ ನಷ್ಟದ ವೇಳೆ ಡಯಟ್ ಬಗ್ಗೆ ಕಾಳಜಿ ವಹಿಸಿ
ಉತ್ತರಾಯಣದ ನಂತರದ ಸಮಯವು ವ್ಯಾಯಾಮ ಮತ್ತು ತೂಕ ಇಳಿಕೆಗೆ ಸರಿಯಾದ ಸಮಯ. ವ್ಯಾಯಾಮದ ಜೊತೆಗೆ ಪರಿಪೂರ್ಣ ಆಹಾರ ಯೋಜನೆ ಸಿದ್ಧಪಡಿಸಿದರೆ ಖಂಡಿತ ತೂಕ ಇಳಿಸಬಹುದು. ತಜ್ಞರು ತೂಕ ನಷ್ಟಕ್ಕೆ ಕೆಲವು ಪ್ರಮುಖ ಸಲಹೆ ನೀಡಿದ್ದಾರೆ. ಅವುಗಳ ಬಗ್ಗೆ ಇಲ್ಲಿ ನೋಡೋಣ.
ಆರೋಗ್ಯವಾಗಿರಲು ಮತ್ತು ಫಿಟ್ ಆಗಿರಲು ನೆಚ್ಚಿನ ಖಾದ್ಯ, ಸಿಹಿ ತಿಂಡಿಗಳ ಕಡು ಬಯಕೆ, ಊಟ, ತಿಂಡಿ, ಜಂಕ್ ಫುಡ್ ಹೀಗೆ ಎಲ್ಲದರ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಆಹಾರದ ಅಗತ್ಯ ಬದಲಾವಣೆಗಳ ಬಗ್ಗೆ ಸೂಕ್ತ ಗಮನಹರಿಸಬೇಕಾಗುತ್ತದೆ. ಇಲ್ಲದಿದ್ದರೆ ಇದು ಅನಾರೋಗ್ಯ ಉಂಟು ಮಾಡುತ್ತದೆ.
ಋತುಮಾನದ ಜೊತೆಗೆ ಆಹಾರದ ಯೋಜನೆ ಬದಲಾಯಿಸಿ
ಆಹಾರ ತಜ್ಞರ ಪ್ರಕಾರ, ಋತುಮಾನದ ಜೊತೆಗೆ ಆಹಾರದ ಯೋಜನೆ ಸಹ ಬದಲಾಯಿಸಬೇಕು. ಇದು ತೂಕ ಇಳಿಕೆಗೆ ಸಹಕಾರಿ ಅಂತಾರೆ. ದೇಹವು ಅಗತ್ಯ ಪೋಷಕಾಂಶದ ಜೊತೆಗೆ ರೋಗಗಳ ವಿರುದ್ಧ ಹೋರಾಡುವ ಶಕ್ತಿ ಪಡೆಯುತ್ತದೆ. ಆಹಾರ ತಜ್ಞೆ ಪೂನಂ ದುನೇಜಾ ತೂಕ ನಷ್ಟಕ್ಕೆ ಚಳಿಗಾಲದ ಆಹಾರ ಯೋಜನೆ ಸಲಹೆ ನೀಡಿದ್ದಾರೆ.
ಚಳಿಗಾಲದಲ್ಲಿ ಆಹಾರದಲ್ಲಿ ಬಿಸಿ ಪರಿಣಾಮ ಹೊಂದಿರುವ ಆಹಾರ ಸೇರಿಸಿ. ಆಹಾರ ಯೋಜನೆಯಲ್ಲಿ ಆರೋಗ್ಯಕರ ಕೊಬ್ಬು ಮತ್ತು ಅಗತ್ಯವಾದ ಕೊಬ್ಬಿನಾಮ್ಲ ಸೇರಿಸಿ. ಇದು ಚರ್ಮ, ಕೂದಲು ಮತ್ತು ಕೀಲು ಹಾಗೂ ದೇಹವನ್ನು ಆರೋಗ್ಯವಾಗಿಸುತ್ತದೆ.
ನೆನೆಸಿದ ಬೀಜಗಳ ಸೇವನೆ ಮಾಡಿ
ಬಾದಾಮಿ ಮತ್ತು ಒಣದ್ರಾಕ್ಷಿಯನ್ನು ನೆನೆಸಿಟ್ಟು ಸೇವನೆ ಮಾಡಿ. ಆಹಾರದಲ್ಲಿ ಸೇರಿಸಿ. ಇದರಿಂದ ದೇಹವು ಉತ್ತಮ ಪ್ರಮಾಣದ ಕೊಬ್ಬು, ಫೈಬರ್, ವಿಟಮಿನ್-ಇ ಮತ್ತು ಪ್ರೋಟೀನ್ ಸೂಕ್ಷ್ಮ ಪೋಷಕಾಂಶ ಪಡೆಯುತ್ತದೆ.
ಕ್ಯಾಲೊರಿ ಸೇವನೆ ಬಗ್ಗೆ ಕಾಳಜಿ ವಹಿಸಿ
ದೈಹಿಕ ಚಟುವಟಿಕೆ ಕಡಿಮೆ ಮಾಡಿ, ಹೆಚ್ಚಿನ ಕ್ಯಾಲೊರಿ ಆಹಾರ ಸೇವನೆ ಮಾಡಬೇಡಿ. ದೈನಂದಿನ ಊಟದಲ್ಲಿ ಎಷ್ಟು ಕ್ಯಾಲೋರಿ ಸೇರಿಸುತ್ತೀರಿ ಎಂಬುದನ್ನು ನೋಡಿಕೊಳ್ಳಿ. ಮನೆಯಲ್ಲಿ ಲಘು ವ್ಯಾಯಾಮ ಮಾಡಿ.
ಹೆಚ್ಚು ನೀರು ಸೇವಿಸಿ
ಹೆಚ್ಚು ನೀರಿನ ಸೇವನೆ ಮಾಡಿ. ಇದು ದೇಹವನ್ನು ತೇವಾಂಶ ಭರಿತವಾಗಿರಿಸುತ್ತದೆ. ಸಮತೋಲಿತ ಆಹಾರ, 8 ಗ್ಲಾಸ್ ನೀರನ್ನು ಸೇವಿಸಿ. ಹೆಚ್ಚಿನ ಸಕ್ಕರೆ, ಅಧಿಕ ಕೊಬ್ಬು, ಕಡಿಮೆ ಪ್ರೋಟೀನ್ ಹೊಂದಿರುವ ಆಹಾರ ಸೇವನೆ ತಪ್ಪಿಸಿ.
ಇದನ್ನೂ ಓದಿ: ರೆಡ್ ರಾಸ್ಪ್ಬೆರಿ ಟೀ ಆರೋಗ್ಯಕಾರಿಯೇ? ಇದು ಹೇಗೆ ಒತ್ತಡ ನಿವಾರಿಸಲು ಸಹಾಯ ಮಾಡುತ್ತದೆ?
ಸಿಹಿ ಕಡು ಬಯಕೆ ನಿರ್ವಹಿಸುವುದು ಹೇಗೆ?
ಸಿಹಿತಿಂಡಿ ಸೇವನೆ, ಸಕ್ಕರೆ ಭರಿತ ತಿಂಡಿ ಸೇವನೆ ತಪ್ಪಿಸಿ. ಇದು ಇನ್ಸುಲಿನ್ ಸ್ಪೈಕ್ ಗೆ ಕಾರಣವಾಗುತ್ತದೆ. ಪೂರ್ವ-ಮಧುಮೇಹಕ್ಕೂ ಕಾರಣವಾಗುತ್ತದೆ. ಸರಿಯಾದ ಪ್ರಮಾಣದಲ್ಲಿ ಬೆಲ್ಲ ಸೇರಿಸಿ. ಆಹಾರದಲ್ಲಿ ಕ್ಯಾರೆಟ್, ಕಡಲೆಕಾಯಿ ಚಿಕ್ಕಿ, ಎಳ್ಳು ಲಡ್ಡೂ, ಸೇರಿಸಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ