• Home
  • »
  • News
  • »
  • lifestyle
  • »
  • Weight Loss Tips: ತೂಕ ಇಳಿಸಲು ಜಿಮ್, ಡಯೆಟ್ ಬೇಡ - ಈ ಟಿಪ್ಸ್ ಫಾಲೋ ಮಾಡಿ ಸಾಕು

Weight Loss Tips: ತೂಕ ಇಳಿಸಲು ಜಿಮ್, ಡಯೆಟ್ ಬೇಡ - ಈ ಟಿಪ್ಸ್ ಫಾಲೋ ಮಾಡಿ ಸಾಕು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ರೋಗಗಳನ್ನು ತಪ್ಪಿಸಲು ಸ್ಥೂಲಕಾಯ ಹೊಡೆದೋಡಿಸುವ ಮೂಲಕ ನಿಮ್ಮನ್ನು ನೀವು ಆರೋಗ್ಯಕರ ಮತ್ತು ಫಿಟ್ ಆಗಿಟ್ಟುಕೊಳ್ಳಲು ಪ್ರಯತ್ನಿಸಿ. ಫಿಟ್ ಆಗಿರಲು ಮೊದಲು ತೂಕ ನಿಯಂತ್ರಿಸುವುದು ಮುಖ್ಯ. ಜಿಮ್ ಮತ್ತು ಡಯಟ್ ಮಾಡಲು ಮನಸ್ಸಿಲ್ಲದಿದ್ದರೆ ಈ ಸರಳ ಸಲಹೆ ಫಾಲೋ ಮಾಡಿ.

  • Share this:

    ಇತ್ತೀಚಿನ ದಿನಗಳಲ್ಲಿ ಅನಾರೋಗ್ಯಕ ಆಹಾರ (Unhealthy Food) ಪದ್ಧತಿ ಮತ್ತು ಕೆಟ್ಟ ಜೀವನಶೈಲಿಯು (Bad Lifestyle) ಜನರ ಆರೋಗ್ಯದ (People Health) ಮೇಲೆ ಸಾಕಷ್ಟು ಗಂಭೀರ ಪರಿಣಾಮ (Serious Effects) ಬೀರುತ್ತಿದೆ. ಅದರಲ್ಲಿ ಸ್ಥೂಲಕಾಯ (Obesity) ಹೇಳದೇ ಕೇಳದೇ ಬಂದು ಬಿಡುತ್ತದೆ. ಒಮ್ಮೆ ಸ್ಥೂಲಕಾಯ ದೇಹವನ್ನು ಆಕ್ರಮಿಸಿಕೊಂಡರೆ, ಹೊಡೆದೋಡಿಸುವುದು ತುಂಬಾ ಕಷ್ಟಕರ. ಕೆಲವು ಕಾಯಿಲೆಗಳ ಹುಟ್ಟಿಗೆ ಸ್ಥೂಲಕಾಯ ಕೂಡ ಕಾರಣವಾಗಿದೆ. ಹೀಗಾಗಿ ಸ್ಥೂಲಕಾಯ ಒಂದು ಗಂಭೀರ ಸಮಸ್ಯೆ ಆಗಿದೆ. ಅದು ಅನೇಕ ಗಂಭೀರ ಕಾಯಿಲೆಗಳ ಅಪಾಯ ಹೆಚ್ಚಿಸುತ್ತದೆ ಎಂಬುದು ಅನೇಕ ವರದಿ ಮತ್ತು ಸಂಶೋಧನೆಗಳಿಂದ ಸಾಬೀತಾಗಿದೆ. ಸ್ಥೂಲಕಾಯ ಒಂದಕ್ಕೊಂದು ಕಾಯಿಲೆಗಳನ್ನು ಫ್ರಿಯಾಗಿ ಅಂಟುವಂತೆ ಮಾಡುತ್ತದೆ.


    ತೂಕ ನಿಯಂತ್ರಣ


    ಸ್ಥೂಲಕಾಯ ಜನರಲ್ಲಿ ಮಧುಮೇಹ, ರಕ್ತದೊತ್ತಡ, ಕ್ಯಾನ್ಸರ್ ಮತ್ತು ಕರೋನಾ ವೈರಸ್‌ ಸೇರಿದಂತೆ ಅನೇಕ ಮಾರಣಾಂತಿಕ ಕಾಯಿಲೆಗೆ ತುತ್ತಾಗುವಂತೆ ಮಾಡುತ್ತದೆ. ಹಾಗಾಗಿ ಸ್ಥೂಲಕಾಯ ಹೊಡೆದೋಡಿಸುವ ಮೂಲಕ ನಿಮ್ಮನ್ನು ನೀವು ಆರೋಗ್ಯಕರ ಮತ್ತು ಫಿಟ್ ಆಗಿಟ್ಟುಕೊಳ್ಳಲು ಪ್ರಯತ್ನಿಸಿ.


    ನಿಮ್ಮನ್ನು ನೀವು ಫಿಟ್ ಆಗಿಟ್ಟುಕೊಳ್ಳಲು ಮೊದಲು ತೂಕ ನಿಯಂತ್ರಿಸುವುದು ಮುಖ್ಯ. ಜಿಮ್ ಮತ್ತು ಡಯಟ್ ಮಾಡುವುದು ತೂಕ ಇಳಿಕೆಗೆ ಸಹಕಾರಿ ಎಂದು ಸಲಹೆ ನೀಡಲಾಗುತ್ತದೆ. ನೀವು ಜಿಮ್‌ಗೆ ಹೋಗುವ ಸಾಮರ್ಥ್ಯ ಹೊಂದಿಲ್ಲದೇ ಇದ್ದರೆ, ದುಬಾರಿ ಆಹಾರ ಕ್ರಮ ಫಾಲೋ ಮಾಡಲು ಸಾಧ್ಯವಾಗದೇ ಇದ್ದರೆ ಸರಳ ಚಿಕಿತ್ಸೆಯ ಮೂಲಕ ತೂಕ ಕಳೆದುಕೊಳ್ಳಬಹುದು.


    ಇದನ್ನೂ ಓದಿ: ದೇಹಕ್ಕೆ ಕ್ಯಾಲ್ಸಿಯಂ ಯಾಕೆ ಬೇಕು? ಯಾವ ಪದಾರ್ಥಗಳು ಮೂಳೆಗಳನ್ನು ಬಲಿಷ್ಠಗೊಳಿಸುತ್ತವೆ?


    ತೂಕ ಇಳಿಸಲು ಸರಳ ಪರಿಹಾರವೆಂದರೆ ಪ್ರತಿದಿನ ವಾಕಿಂಗ್ ಮಾಡುವುದು


    ನೀವು ಸರಳ ಮತ್ತು ಆರಾಮದಾಯಕವಾಗಿ ತೂಕ ಇಳಿಸಲು ಸರಳ ಪರಿಹಾರವೆಂದರೆ ಪ್ರತಿದಿನ ವಾಕಿಂಗ್ ಮಾಡುವುದು. ತೂಕ ಇಳಿಕೆ ತರಬೇತುದಾರ ಡಾ. ಸ್ನೇಹಲ್ ಅವರ ಪ್ರಕಾರ, ಪ್ರತಿದಿನ 10,000 ಹೆಜ್ಜೆ ನಡೆಯುವುದು ನಿಮ್ಮ ತೂಕ ಇಳಿಕೆಗೆ ಸಹಕಾರಿ ಎನ್ನುತ್ತಾರೆ.


    ಇದು ಒಂದು ಅಭ್ಯಾಸ. ನೀವು ಪ್ರತಿದಿನ ನಡೆಯಬೇಕು. ಇದು ನಿಜವಾಗಿಯೂ ತೂಕ ಕಡಿಮೆ ಮಾಡಲು ಮತ್ತು ನಿಮ್ಮನ್ನು ಆರೋಗ್ಯಕರವಾಗಿ ಇಟ್ಟುಕೊಳ್ಳಲು ಸಹಾಯ ಮಾಡುತ್ತದೆ. ನಿಮಗೆ ಗೊತ್ತಿಲ್ಲದೆ ತೂಕ ಇಳಿಸಲು ನೀವು ಬಯಸಿದರೆ ದಿನಕ್ಕೆ ಕನಿಷ್ಠ ಹತ್ತು ಸಾವಿರ ಹೆಜ್ಜೆ ನಡೆಯಿರಿ.


    ಸಮಯದ ಅಭಾವ ಅಥವಾ ಸೋಮಾರಿತನದಿಂದ ಅನೇಕರು ಜಿಮ್‌ ಗೆ ಹೋಗುವುದಿಲ್ಲ. ಅಂತಹ ಜನರು ಪ್ರತಿದಿನ ವಾಕಿಂಗ್ ಮಾಡುವ ಪರಿಹಾರವನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಬಹುದು. ದಿನ ನಿತ್ಯ ನೀವು ವಾಕಿಂಗ್ ಮಾಡುವ ಮೂಲಕ ಹೇಗೆ ತೂಕ ಇಳಿಸುವುದು ಎಂದು ಇಲ್ಲಿ ನೋಡೋಣ.


    ಪ್ರತಿದಿನ ಹತ್ತು ಸಾವಿರ ಹೆಜ್ಜೆ ನಡೆಯುವುದು ಅಸಾಧ್ಯವಲ್ಲ


    ನೀವು ನಿಜವಾಗಿಯೂ ಆರೋಗ್ಯಕರ ಮತ್ತು ಫಿಟ್ ಆಗಿರಲು ಬಯಸಿದರೆ ದಿನವೂ ವಾಕಿಂಗ್ ಮಾಡಿ. ಇದು ನಿಮಗೆ ಉತ್ತಮ ಪರಿಹಾರ ಅಂತಾರೆ ವೈದ್ಯರು. ಇದು ಕಷ್ಟದ ಕೆಲಸ ಅನ್ನಿಸಿದರೆ, ಯಾವುದೂ ಅಸಾಧ್ಯವಲ್ಲ ಎಂಬ ವಿಷಯ ನೆನಪಿಡಿ. ಅದಕ್ಕೆ ನೀವು ಸಿದ್ಧರಾಗಿ. ನಿಮ್ಮ ಸ್ನೇಹಿತರನ್ನು ಸೇರಿಸಿಕೊಂಡು, ಹರಟೆ, ನಗುತ್ತಾ, ವಿನೋದದಿಂದ ವಾಕಿಂಗ್ ಮಾಡಿ.


    ಸ್ನೇಹಿತರ ಜೊತೆಗೆ ವಾಕಿಂಗ್ ಮಾಡಿ


    ನಿಸ್ಸಂಶಯವಾಗಿ ಪ್ರತಿದಿನ ಹತ್ತು ಸಾವಿರ ಹೆಜ್ಜೆ ನಡೆಯುವುದು ನೀರಸ ಆಗಬಹುದು. ಹಾಗಾಗಿ ಈ ಕೆಲಸ ಸಂತೋಷದಿಂದ ಪೂರ್ಣಗೊಳಿಸಿ. ನಿಮ್ಮೊಂದಿಗೆ ನಿಮ್ಮ ಸ್ನೇಹಿತರನ್ನು ಸೇರಿಸಿ. ಇದು ತೂಕ ಇಳಿಕೆಯ ನಿಮ್ಮ ಜರ್ನಿಗೆ ಸಹಾಯ ಮಾಡುತ್ತದೆ.


    300 ರಿಂದ 400 ಕ್ಯಾಲೊರಿ ಬರ್ನ್ ಮಾಡಬಹುದು


    ಹತ್ತು ಸಾವಿರ ಹೆಜ್ಜೆ ನಡೆಯಬೇಕು ಎಂದರೆ ನಿತ್ಯ ಅರ್ಧ ಗಂಟೆಯಾದರೂ ವಾಕ್ ಮಾಡಬೇಕಾಗುತ್ತದೆ. ದಿನಕ್ಕೆ ಸುಮಾರು 300 ರಿಂದ 400 ಕ್ಯಾಲೊರಿ ಬರ್ನ್ ಮಾಡಬಹುದು. ಅಂದರೆ ನೀವು ವೇಗವಾಗಿ ತೂಕ ಕಳೆದುಕೊಳ್ಳಲು ಇದು ಸಹಾಯ ಮಾಡುತ್ತದೆ.


    ಇದನ್ನೂ ಓದಿ: ಮಧುಮೇಹ ನಿಯಂತ್ರಣಕ್ಕೆ ಯಾವ ಗಿಡಮೂಲಿಕೆ ಸೂಕ್ತ? ಇಲ್ಲಿದೆ ಮಾಹಿತಿ


    ಆಹಾರದ ಬಗ್ಗೆ ಕಾಳಜಿ ವಹಿಸಿ


    ನೀವು ದಿನಕ್ಕೆ 300 ರಿಂದ 400 ಕ್ಯಾಲೊರಿ ಬರ್ನ್ ಮಾಡಲು ದಿನಕ್ಕೆ 500 ಕ್ಯಾಲೊರಿಗಿಂತ ಕಡಿಮೆ ಆಹಾರ ಸೇವಿಸಿ. ಒಂದು ವಾರದಲ್ಲಿ ಒಟ್ಟು ಎರಡು ಕೆಜಿ ತೂಕ ಇಳಿಸಬಹುದು.

    Published by:renukadariyannavar
    First published: