• Home
  • »
  • News
  • »
  • lifestyle
  • »
  • Weight Loss: ಹೊಟ್ಟೆಯ ಕೊಬ್ಬನ್ನು ತ್ವರಿತವಾಗಿ ಕರಗಿಸಲು ನೀವು ಮಾಡಬೇಕಿರೋದು ಇಷ್ಟು

Weight Loss: ಹೊಟ್ಟೆಯ ಕೊಬ್ಬನ್ನು ತ್ವರಿತವಾಗಿ ಕರಗಿಸಲು ನೀವು ಮಾಡಬೇಕಿರೋದು ಇಷ್ಟು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಒಂದೇ ಸ್ಥಳದಲ್ಲಿ ಕುಳಿತು ನಿರಂತರವಾಗಿ ಕೆಲಸ ಮಾಡುವುದು ಬೊಜ್ಜು ಹೆಚ್ಚಳಕ್ಕೆ ಕಾರಣ ಆಗುತ್ತಿದೆ. ದೇಹವು ಸ್ವಲ್ಪವೂ ಸಕ್ರಿಯವಾಗಿರಲು ಸಾಧ್ಯವಾಗದ ಹಿನ್ನೆಲೆ ಹೊಟ್ಟೆಯ ಕೊಬ್ಬು ಹೆಚ್ಚುತ್ತದೆ. ಹೊಟ್ಟೆಯ ಪ್ರದೇಶದಲ್ಲಿ ಸಂಗ್ರಹವಾಗುವ ಕೊಬ್ಬು ಸಾಕಷ್ಟು ಅಸ್ವಸ್ಥತೆಗಳಿಗೆ ಕಾರಣ ಆಗುತ್ತದೆ.

ಮುಂದೆ ಓದಿ ...
  • Share this:

    ಬದಲಾದ ಜೀವನಶೈಲಿ (Changing Lifestyle), ಆಹಾರ ಪದ್ಧತಿ (Food Plan) ಇತ್ತೀಚಿನ ದಿನಗಳಲ್ಲಿ ತೂಕ ಹೆಚ್ಚಳ (Weight Gain) ಮತ್ತು ನಿಯಂತ್ರಣ ಮಾಡಲು ಸಾಧ್ಯವಾಗದ್ದಕ್ಕೆ ಕಾರಣ ಆಗಿದೆ. ನಾವು ಡಬ್ಬಿಯಲ್ಲಿ ತುಂಬಿದ ಮತ್ತು ಸಂಸ್ಕರಿಸಿದ ಆಹಾರ ಸೇವಿಸುವ ಅಭ್ಯಾಸ ಬೆಳೆಸಿಕೊಂಡಿದ್ದೇವೆ. ಪ್ಯಾಕ್ ಮಾಡಿದ ಚಿಪ್ಸ್ ಮತ್ತು ಇತರ ತಿಂಡಿ (Breakfast) ಸೇವನೆ ಮಾಡುವುದು ಮತ್ತು ಒಂದೇ ಸ್ಥಳದಲ್ಲಿ ಕುಳಿತು ನಿರಂತರವಾಗಿ ಕೆಲಸ ಮಾಡುವುದು ಬೊಜ್ಜು ಹೆಚ್ಚಳಕ್ಕೆ ಕಾರಣ ಆಗುತ್ತಿದೆ. ದೇಹವು ಸ್ವಲ್ಪವೂ ಸಕ್ರಿಯವಾಗಿರಲು ಸಾಧ್ಯವಾಗದ ಹಿನ್ನೆಲೆ ಹೊಟ್ಟೆಯ ಕೊಬ್ಬು ಹೆಚ್ಚುತ್ತದೆ. ಹೊಟ್ಟೆಯ ಪ್ರದೇಶದಲ್ಲಿ ಸಂಗ್ರಹವಾಗುವ ಕೊಬ್ಬು ಸಾಕಷ್ಟು ಅಸ್ವಸ್ಥತೆಗಳಿಗೆ ಕಾರಣ ಆಗುತ್ತದೆ.


    ಆಸ್ಟಿಯೊಪೊರೋಸಿಸ್, ಸಂಧಿವಾತ ಈ ಕೊಬ್ಬಿನಿಂದ ಉಂಟಾಗುವ ಕಾಯಿಲೆಗಳು ಆಗಿವೆ. ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ವೈದ್ಯರು ಸಲಹೆ ನೀಡಿದಾಗ ಮೊದಲು ನಾವು ಮನೆಮದ್ದು ಮೊರೆ ಹೋಗುತ್ತೇವೆ. ನೀವು ಹೊಟ್ಟೆಯ ಕೊಬ್ಬನ್ನು ಹೆಚ್ಚಿಸಿದ್ದರೆ ಮತ್ತು ಅದನ್ನು ಕಡಿಮೆ ಮಾಡಲು ನೀವು ಮಾರ್ಗವನ್ನು ಹುಡುಕುತ್ತಿದ್ದರೆ ನೀವು ಮೊದಲು ಚಿಯಾ ಬೀಜ ಪ್ರಯತ್ನಿಸಿ.


    ಚಿಯಾ ಬೀಜಗಳು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಬಹಳ ಪರಿಣಾಮಕಾರಿ ಆಗಿದೆ. ಅದನ್ನು ಹೇಗೆ ಬಳಸಬೇಕೆಂದು ತಿಳಿಯುವುದು ಬಹಳ ಮುಖ್ಯ.


    ಇದನ್ನೂ ಓದಿ: ಅಜೀರ್ಣ ಸಮಸ್ಯೆಗೆ ಈ ಕಾಳು ಪರಿಹಾರ ಅನ್ನುತ್ತೆ ಆಯುರ್ವೇದ!


    ಹೊಟ್ಟೆಯ ಕೊಬ್ಬು ಎಂದರೇನು?


    ಯಾವುದೇ ಚಟುವಟಿಕೆಯಿಲ್ಲದ ಜೀವನ ಬಹಳಷ್ಟು ತೂಕ ಹೆಚ್ಚಿಸುತ್ತದೆ. ಕೆಟ್ಟ ಆಹಾರ ಪದ್ಧತಿಗಳು ಈ ಸಮಸ್ಯೆ ಹೆಚ್ಚಿಸುತ್ತವೆ. ಈ ಕಾರಣ ಹೊಟ್ಟೆ ಸುತ್ತಲೂ ಕೊಬ್ಬು ಸಂಗ್ರಹ ಆಗುತ್ತದೆ. ಇದನ್ನು ವಿಸ್ಸೆರಲ್ ಫ್ಯಾಟ್ ಎಂದು ಕರೆಯುತ್ತಾರೆ. ಇದನ್ನೇ ಹೊಟ್ಟೆಯ ಕೊಬ್ಬು ಎಂದು ಕರೆಯುತ್ತಾರೆ.


    ಕರುಳಿನ ಆರೋಗ್ಯಕ್ಕೆ ಚಿಯಾ ಬೀಜ ಸಹಕಾರಿ


    ಚಿಯಾ ಬೀಜಗಳಲ್ಲಿ ಫೈಬರ್, ಕಬ್ಬಿಣ, ಮೆಗ್ನೀಸಿಯಮ್, ಸೋಡಿಯಂ, ಪೊಟ್ಯಾಸಿಯಮ್, ಒಮೆಗಾ 3 ಕೊಬ್ಬಿನಾಮ್ಲಗಳು ಮತ್ತು ವಿಟಮಿನ್ ಸಿ ಇರುತ್ತದೆ. ಫೈಬರ್ ಕರುಳಿನ ಚಲನೆ ನಿಯಂತ್ರಿಸುತ್ತದೆ. ಇದು ಕರುಳಿನಲ್ಲಿ ಸಂಗ್ರಹವಾಗಿರುವ ವಿಷ ಹೊರ ಹಾಕುತ್ತದೆ.


    ಚಿಯಾ ಬೀಜಗಳು ಒಳಾಂಗಗಳ ಅಡಿಪೋಸ್ ಅಂಗಾಂಶ ಕಡಿಮೆ ಮಾಡುತ್ತದೆ. ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಚಿಯಾ ಬೀಜಗಳನ್ನು ತೆಗೆದುಕೊಳ್ಳುವ ಆರೋಗ್ಯಕರ ಮತ್ತು ಟೇಸ್ಟಿ ಮಾರ್ಗ ಹೀಗಿದೆ.


    ಚಿಯಾ ಬೀಜದ ನೀರನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಿ. ಮೊದಲು 1 ಚಮಚ ಚಿಯಾ ಬೀಜಗಳನ್ನು ತೆಗೆದುಕೊಳ್ಳಿ. ಇದನ್ನು 1 ಲೀಟರ್ ನೀರಿನಲ್ಲಿ ಹಾಕಿ ಮತ್ತು ರಾತ್ರಿಯಿಡೀ ನೆನೆಯಲು ಬಿಡಿ. ನಂತರ ಬೆಳಗ್ಗೆ ಶೋಧಿಸಿ ನೀರನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿ.


    ಚಿಯಾ ಬೀಜಗಳು


    ಚಿಯಾ ಬೀಜಗಳು ಉತ್ಕರ್ಷಣ ನಿರೋಧಕ, ಒಮೆಗಾ 3 ಕೊಬ್ಬಿನಾಮ್ಲ, ಫೈಬರ್ ಮತ್ತು ಮೆಗ್ನೀಸಿಯಮ್ಗಳ ಉತ್ತಮ ಮೂಲ ಆಗಿದೆ.


    ನೀವು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಚಿಯಾ ಬೀಜಗಳ ನೀರು ತೆಗೆದುಕೊಳ್ಳಬಹುದು. ಹೊಟ್ಟೆ ಖಾಲಿಯಾದಾಗ ಎರಡು ಊಟಗಳ ನಡುವೆ ಈ ಪಾನೀಯ ಸೇವಿಸಬಹುದು.


    ಚಿಯಾ ಬೀಜಗಳು ನೀರು ಮತ್ತು ಹಣ್ಣುಗಳು


    ಚಿಯಾ ಬೀಜಗಳನ್ನು ನೀರಿನಲ್ಲಿ ನೆನೆಸಿ. ಒಂದು ಗಂಟೆಯ ನಂತರ ಅದರಲ್ಲಿ ನಿಂಬೆ ಅಥವಾ ಕಿತ್ತಳೆ ರಸವನ್ನು ಹಿಂಡಿ. ಅದರಲ್ಲಿ ಆವಕಾಡೊ, ಚೆರ್ರಿ ಮುಂತಾದ ಹಣ್ಣುಗಳನ್ನು ಕತ್ತರಿಸಿ ಹಾಕಿ. ಇದನ್ನು ಒಂದು ಬಟ್ಟಲಿನಲ್ಲಿ ತೆಗೆದುಕೊಂಡು ಕುಡಿಯಿರಿ ಮತ್ತು ಹಣ್ಣುಗಳನ್ನು ತಿನ್ನಿರಿ.


    ಸಲಾಡ್ ಜೊತೆ


    ಸೌತೆಕಾಯಿ, ಮೂಲಂಗಿ, ಟೊಮೆಟೊ, ಈರುಳ್ಳಿ, ಕ್ಯಾರೆಟ್ ಇತ್ಯಾದಿಗಳ ಸಲಾಡ್‌ನೊಂದಿಗೆ ಚಿಯಾ ಬೀಜಗಳನ್ನು ಬೆರೆಸಿ ತಿನ್ನಬಹುದು.


    ಹಣ್ಣುಗಳ ಜೊತೆ


    ಸೇಬು, ಪೇರಲ, ಪೇರಳೆ ಮುಂತಾದ ಹಣ್ಣುಗಳನ್ನು ಕತ್ತರಿಸಿ. ಅದರ ಮೇಲೆ ಚಿಯಾ ಬೀಜಗಳನ್ನು ಸಿಂಪಡಿಸಿ ತಿನ್ನಬಹುದು.


    ಇದನ್ನೂ ಓದಿ: ಹಣ್ಣುಗಳ ಸೇವನೆ ಎಷ್ಟು ಅನುಕೂಲಕರ? ಇವುಗಳ ಜೊತೆ ಬೇರೆ ಏನನ್ನು ತಿನ್ನಬೇಕು?


    ಚಿಯಾ ಬೀಜಗಳು ಪಾನೀಯ


    ಒಂದು ಚಮಚ ಚಿಯಾ ಬೀಜಗಳನ್ನು ಒಂದು ಗ್ಲಾಸ್ ನೀರಿನೊಂದಿಗೆ ಕಡಿಮೆ ಉರಿಯಲ್ಲಿ ಕುದಿಸಿ. ಫಿಲ್ಟರ್ ಮಾಡಿದ ನಂತರ ಅದನ್ನು ಚಹಾದಂತೆ ಕುಡಿಯಬಹುದು. ಈ ಪಾನೀಯವನ್ನು ನಿಯಮಿತವಾಗಿ ಸೇವಿಸುವುದರಿಂದ ಹೊಟ್ಟೆಯ ಕೊಬ್ಬು ಕಡಿಮೆಯಾಗುತ್ತದೆ.

    Published by:renukadariyannavar
    First published: