ಫಿಟ್ (Fit) ಆಗಿರೋದು ದಿನ ನಿತ್ಯದ ಜೀವನದ ಭಾಗವಾಗ್ಬೇಕು ಅಂದಾಗ ಮಾತ್ರ ವ್ಯಕ್ತಿ ಸದೃಢ ಆರೋಗ್ಯ (Health) ಕಾಯ್ದುಕೊಳ್ಳಲು ಸಾಧ್ಯ. ಹಲವು ನಟ ನಟಿಯರು ಜಿಮ್ ನಲ್ಲಿ (Jim) ಬೆವರು ಹರಿಸುವ ಮೂಲಕ ತಮ್ಮ ಫಿಟ್ನೆಸ್ (Fitness) ಕಾಯ್ದುಕೊಳ್ಳುತ್ತಾರೆ. ಸದಾ ಯೋಗದೊಂದಿಗೆ ನಂಟು ಹೊಂದಿರುವ ಯಾವಾಗಲೂ ಫಿಟ್ನೆಸ್ ಬಗ್ಗೆ ಜಾಗೃತಿ ಮೂಡಿಸುವ ನಟಿ ಅಂದ್ರೆ ಶಿಲ್ಪಾ ಶೆಟ್ಟಿ ಕುಂದ್ರಾ (Actress Shilpa Shetty Kundra). ತಮ್ಮ ನಟನೆ ಮಾತ್ರವಲ್ಲದೇ ತಮ್ಮ ಯೋಗದ ಮೂಲಕವೂ ಜನರ ಮನದಲ್ಲಿ ಛಾಪು ಮೂಡಿಸಿದ್ದಾರೆ ನಟಿ ಶಿಲ್ಪಾ ಶೆಟ್ಟಿ ಕುಂದ್ರಾ. ಇನ್ನೇನು ಹೊಸ ವರ್ಷಕ್ಕೆ ಕೆಲವೇ ದಿನಗಳು ಬಾಕಿ ಇದೆ.
ಫಿಟ್ನೆಸ್ ಜಾಗೃತಿ
ಕೇವಲ ತೂಕ ಇಳಿಕೆ ಮಾತ್ರವಲ್ಲ, ಫಿಟ್ನೆಸ್ ಕಾಪಾಡಿಕೊಳ್ಳುವುದು ಸಹ ತುಂಬಾ ಮುಖ್ಯ. ಹೀಗಾಗಿ ನಟಿ ಶಿಲ್ಪಾ ಶೆಟ್ಟಿ ಕುಂದ್ರಾ ತಮ್ಮ ಅಭಿಮಾನಿಗಳಿಗೆ ವ್ಯಾಯಾಮ ಮತ್ತು ಯೋಗ ಹಾಗೂ ಫಿಟ್ನೆಸ್ ಬಗ್ಗೆ ಸ್ಫೂರ್ತಿ ತುಂಬುವ ಕೆಲಸ ಮಾಡ್ತಿದ್ದಾರೆ. ಇನ್ಸ್ಟಾಗ್ರಾಮ್ ಪೋಸ್ಟ್ ನಲ್ಲಿ ನಟಿ ಶಿಲ್ಪಾ ಶೆಟ್ಟಿ ಕುಂದ್ರಾ ಕೆಲವು ವ್ಯಾಯಾಮ ಮತ್ತು ಯೋಗದ ಭಂಗಿಗಳನ್ನು ಮಾಡಿದ್ದು, ವೀಡಿಯೋ ಶೇರ್ ಮಾಡಿದ್ದಾರೆ.
47ರ ಹರೆಯದಲ್ಲೂ ಶಿಲ್ಪಾ ಅದ್ಬುತ ವ್ಯಕ್ತಿತ್ವ ಹೊಂದಿದ್ದಾರೆ. ಶಿಲ್ಪಾ ತನ್ನ ತರಬೇತಿಯ ತುಣುಕುಗಳನ್ನು ಹಂಚಿಕೊಂಡಿದ್ದಾರೆ. ಕಿಬ್ಬೊಟ್ಟೆಯ, ಶ್ರೋಣಿ ಕುಹರದ, ಸೊಂಟ ಮತ್ತು ಕೆಳ ಬೆನ್ನಿನ ಸ್ನಾಯುಗಳ ವ್ಯಾಯಾಮ ಭಂಗಿಗಳನ್ನು ತೋರಿಸಿದ್ದಾರೆ. ನೀವೂ ಸಹ ಸ್ಲಿಮ್ ಆ್ಯಂಡ್ ಫಿಟ್ ಆಗ್ಬೇಕಂದ್ರೆ ಶಿಲ್ಪಾ ಶೆಟ್ಟಿಯವರ ಈ ಫಿಟ್ನೆಸ್ ಸಲಹೆ ಫಾಲೋ ಮಾಡಿ.
ದೇಹದ ಪ್ರತಿಯೊಂದು ಸ್ನಾಯು ಸಹ ಮುಖ್ಯ. ಬೆನ್ನುಮೂಳೆಯನ್ನು ಆರೋಗ್ಯವಾಗಿಡಲು ಕೆಲವು ವ್ಯಾಯಾಮ ಮಾಡ್ಬೇಕು. ದೇಹದ ಸ್ಥಿರೀಕರಣ ಮತ್ತು ಶಕ್ತಿ ತುಂಬಾ ಮುಖ್ಯವಾಗಿರುತ್ತದೆ. ನಟಿ ಶಿಲ್ಪಾ ಅವರು ಕೆಲವು ಕೋರ್ ಟ್ರೈನಿಂಗ್ ಸಲಹೆ ನೀಡಿದ್ದಾರೆ.
ಕೋರ್ ಟ್ರೈನಿಂಗ್ ಸಲಹೆ
ಕೋರ್ ಟ್ರೈನಿಂಗ್ ಇದು ಫಿಟ್ನೆಸ್ ಉತ್ಸಾಹಿಗಳಲ್ಲಿ ಹೆಚ್ಚು ಜನಪ್ರಿಯವಾಗುತ್ತಿದೆ. ಕೋರ್ ತರಬೇತಿಯು ಗಾಯದ ಚೇತರಿಕೆಗೆ ಸಹಕಾರಿ ಆಗಿದೆ. ದೀರ್ಘಕಾಲದ ಬೆನ್ನುನೋವಿಗೆ ಪರಿಹಾರ ನೀಡುತ್ತದೆ. ಕೋರ್ ತರಬೇತಿಯಲ್ಲಿ ನಂಬಿಕೆ ಇಟ್ಟಿದ್ದಾರೆ ನಟಿ ಶಿಲ್ಪಾ ಶೆಟ್ಟಿ.
ಉತ್ತಮ ಸ್ಥಿರತೆಗಾಗಿ ಕೋರ್ ತರಬೇತಿ
ನಟಿ ಶಿಲ್ಪಾ ಹೊಸ ಕೋರ್ ತರಬೇತಿ ವಿಡಿಯೋ ತುಣುಕುಗಳ ಆಯ್ದ ಭಾಗಗಳನ್ನು ಶೇರ್ ಮಾಡಿದ್ದಾರೆ. ಕೋರ್ ತರಬೇತಿಯು ಕಿಬ್ಬೊಟ್ಟೆಯ, ಶ್ರೋಣಿಯ, ಸೊಂಟ ಮತ್ತು ಕೆಳ ಬೆನ್ನಿನ ಸ್ನಾಯುಗಳ ವ್ಯಾಯಾಮವನ್ನು ಒಳಗೊಂಡಿದೆ.
ವಿ-ಸ್ಟ್ಯಾನ್ಸ್ ಸೈಡ್ ಟು ಸೈಡ್ ಮೊಣಕಾಲು ಟಕ್
ನಟಿ ಶಿಲ್ಪಾ ವಿ-ಸ್ಟ್ಯಾನ್ಸ್ ಸೈಡ್ ಟು ಸೈಡ್ ಮೊಣಕಾಲು ಟಕ್ನೊಂದಿಗೆ ವ್ಯಾಯಾಮ ಆರಂಭಿಸುವುದಾಗಿ ಹೇಳಿದ್ದಾರೆ. ಮೂರು ಸೆಟ್ ಗಳಲ್ಲಿ 18 ಬಾರಿ ಪುನರಾವರ್ತಿಸಿ. ರಷ್ಯನ್ ಟ್ವಿಸ್ಟ್ ನ್ನು 12 ರಿಂದ 18 ಬಾರಿ ಮಾಡುತ್ತಾರೆ.
ವಿರುದ್ಧ ದಿಕ್ಕಿನಲ್ಲಿ ತೋಳುಗಳನ್ನು ಬೀಸುವುದು 12 ರಿಂದ 18 ಬಾರಿ ಪುನರಾವರ್ತಿಸಿ. ದೇಹದ ವಿಶ್ರಾಂತಿಗೆ ಸ್ಟ್ರೆಚಿಂಗ್ ಮಾಡುವಂತೆ ಸೂಚಿಸುತ್ತಾರೆ.
ಹೊಟ್ಟೆಯ ಸ್ನಾಯುಗಳ ಮೇಲೆ ಪರಿಣಾಮ ಬೀರುವ ವ್ಯಾಯಾಮಗಳು
ಮೊದಲ ಎರಡು ವ್ಯಾಯಾಮಗಳು ನೇರವಾಗಿ ಹೊಟ್ಟೆಯ ಸ್ನಾಯುಗಳ ಮೇಲೆ ಪರಿಣಾಮ ಬೀರುತ್ತವೆ. ರೆಕ್ಟಸ್ ಅಬ್ಡೋಮಿನಿಸ್ ಮತ್ತು ಓರೆ ವ್ಯಾಯಾಮ. ಮೂರನೇ ವ್ಯಾಯಾಮವು ಬೆನ್ನು ಮತ್ತು ಗ್ಲುಟ್ಗಳ ಮೇಲೆ ಪರಿಣಾಮ ಬೀರುತ್ತದೆ.
ಕೋರ್ ತರಬೇತಿ ವೇಳೆ ಬಾಯಿಯ ಮೂಲಕ ಮೇಲಕ್ಕೆ ಹೋಗುವ ಮೂಲಕ ಉಸಿರನ್ನು ಬಿಡಬೇಕು. ಅದೇ ವೇಳೆ ಸ್ನಾಯುಗಳನ್ನು ಇನ್ನಷ್ಟು ಎಚ್ಚರಿಕೆಯಿಂದ ಸಂಕುಚಿತಗೊಳಿಸಬೇಕು. ಕೆಳಗೆ ಹೋಗುವಾಗ ಮೂಗಿನ ಮೂಲಕ ಉಸಿರಾಡಬೇಕು. ನೀವು ವ್ಯಾಯಾಮವನ್ನು ನಿಧಾನವಾಗಿ ಮತ್ತು ನಿಯಂತ್ರಿತ ರೀತಿಯಲ್ಲಿ ಮಾಡ್ಬೇಕು.
ಇದನ್ನೂ ಓದಿ: ತಜ್ಞರು ಹೇಳಿರುವ ಈ ಸಲಹೆಗಳನ್ನು ಪಾಲಿಸಿ ತೂಕ ಇಳಿಸಿ
ಉತ್ತಮ ಫಲಿತಾಂಶಕ್ಕೆ ಕೆಲವು ಕ್ರಿಯಾತ್ಮಕ ವ್ಯಾಯಾಮ ಮಾಡಿ ಎಂದು ನಟಿ ಸಲಹೆ ನೀಡುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ