ಪ್ರತಿಯೊಬ್ಬರು ತಮ್ಮ ಮನೆಗಳಲ್ಲಿ (Home) ಊಟದಲ್ಲಿ ಹಾಗೂ ಡಯಟ್‌ನಲ್ಲಿ (Diet) ತಪ್ಪದೇ ಸೌತೆಕಾಯಿ (Cucumber) ಬಳಕೆ ಮಾಡುತ್ತಾರೆ. ನಮ್ಮ ಮನೆಗಳಲ್ಲಿ ಸಲಾಡ್ (Salad) ಆಗಿ ಬಳಸುವ ಸೌತೆಕಾಯಿ ಅನೇಕ ಪ್ರಮುಖ ಪೋಷಕಾಂಶಗಳಿಂದ (Nutrients) ಸಮೃದ್ಧವಾಗಿದೆ. ಇದು ದೈಹಿಕ ಆರೋಗ್ಯಕ್ಕೆ (Physical Health) ಪ್ರಯೋಜನಕಾರಿ ಆಗಿದೆ. ಜೊತೆಗೆ ನಿಮ್ಮ ಚರ್ಮಕ್ಕೆ ಅದ್ಭುತ ಪ್ರಯೋಜನ ನೀಡುತ್ತದೆ. ಸೌತೆಕಾಯಿ 96 ಪ್ರತಿಶತ ನೀರಿನಿಂದ ಕೂಡಿದೆ. ಜೊತೆಗೆ ತಂಪಾಗಿಸುವ ಗುಣ ಹೊಂದಿದೆ. ಇದು ಹೊಟ್ಟೆಗೆ ತಂಪು ನೀಡುತ್ತದೆ. ಮತ್ತು ಜೀರ್ಣಾಂಗ ವ್ಯವಸ್ಥೆ ಆರೋಗ್ಯವಾಗಿರಲು ಸಹಾಯ ಮಾಡುತ್ತದೆ. ಜೀರ್ಣಕ್ರಿಯೆ ಆರೋಗ್ಯವಾಗಿದ್ದರೆ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ದೂರವಿರಲು ಸಹಕಾರಿ.
ತ್ವಚೆಯ ಆರೋಗ್ಯಕ್ಕೆ ಸೌತೆಕಾಯಿ ಬಳಕೆ
ವಿಟಮಿನ್‌ಗಳು ಮತ್ತು ಖನಿಜಾಂಶಗಳಿಂದ ಸೌತೆಕಾಯಿ ಸಮೃದ್ಧವಾಗಿದೆ. ಚರ್ಮದ ಉರಿಯೂತ, ಮೊಡವೆ ಸಮಸ್ಯೆ ಮತ್ತು ಒಡೆಯುವಿಕೆ ಸಮಸ್ಯೆ ತಡೆದು ತ್ವಚೆಗೆ ಉತ್ತಮ ಪೋಷಣೆ ನೀಡಲು ಸೌತೆಕಾಯಿ ಸಹಕಾರಿ ಆಗಿದೆ.
ತ್ವಚೆಗೆ ಸಂಬಂಧಿಸಿದ ಸಮಸ್ಯೆ ನಿವಾರಣೆಗೆ ತ್ವಚೆಯ ಆರೈಕೆಯಲ್ಲಿ ಈ 4 ವಿಧಾನಗಳಲ್ಲಿ ಸೌತೆಕಾಯಿ ಬಳಕೆ ಮಾಡಿ. ನಿಯಮಿತವಾಗಿ ಸೌತೆಕಾಯಿ ಬಳಕೆ ಮಾಡಿದರೆ ಅದು ದೇಹವನ್ನು ಹೈಡ್ರೇಟ್ ಆಗಿಸುತ್ತದೆ. ನೈಸರ್ಗಿಕ ಹೊಳಪು ನೀಡುತ್ತದೆ.
ಸೌತೆಕಾಯಿ ಚರ್ಮಕ್ಕೆ ಹೇಗೆ ಕೆಲಸ ಮಾಡುತ್ತದೆ?
ಸೌತೆಕಾಯಿಯಲ್ಲಿರುವ ಪ್ರಮುಖ ಖನಿಜ, ಜೀವಸತ್ವ ಮತ್ತು ಉತ್ಕರ್ಷಣ ನಿರೋಧಕಗಳು ಮುಚ್ಚಿದ ರಂಧ್ರಗಳನ್ನು ತೆರೆಯಲು ಸಹಕಾರಿ. ವಿಸ್ತರಿಸಿದ ರಂಧ್ರಗಳನ್ನು ಮುಚ್ಚಲು ಸಹಕಾರಿ. ಚರ್ಮದಿಂದ ಹೆಚ್ಚುವರಿ ಎಣ್ಣೆಯಂಶವನ್ನು ತೊಡೆದು ಹಾಕುತ್ತದೆ. ಇದು ಜಲಸಂಚಯನಕ್ಕೆ ಬಹಳ ಪ್ರಯೋಜನಕಾರಿ.
ಚಳಿಗಾಲದಲ್ಲಿ ಸೌತೆಕಾಯಿ ಬಳಕೆಯು ಚರ್ಮದ ಶುಷ್ಕತೆ ಕಡಿಮೆ ಮಾಡುತ್ತದೆ. ಕಪ್ಪು ಕಲೆ ಸಮಸ್ಯೆ ನಿವಾರಿಸುತ್ತದೆ. ಸೌತೆಕಾಯಿ ಚರ್ಮವನ್ನು ಹಗುರಗೊಳಿಸುವ ಮತ್ತು ತಂಪಾಗಿಸುವ ಗುಣ ಹೊಂದಿದೆ. ಇದು ಕಪ್ಪು ಕಲೆ ಸಮಸ್ಯೆ ನಿವಾರಣೆಗೆ ಉತ್ತಮ ಆಯ್ಕೆಯಾಗಿದೆ.
ಇದರ ಬಳಕೆಯು ಕಾಲಜನ್ ಮಟ್ಟ ಹೆಚ್ಚಿಸುತ್ತದೆ. ಇದು ಜೀವಕೋಶಗಳ ಪುನರ್ ಉತ್ಪಾದನೆಗೆ ಸಹಕಾರಿ. ಸೌತೆಕಾಯಿಯಲ್ಲಿರುವ ಆ್ಯಂಟಿ ಆಕ್ಸಿಡೆಂಟ್‌ಗಳು ಸುಕ್ಕು, ವಯಸ್ಸಾಗುವಿಕೆ ಸಮಸ್ಯೆ ಕಡಿಮೆ ಮಾಡುತ್ತದೆ. ನೈಸರ್ಗಿಕ ಹೊಳಪು ನೀಡುತ್ತದೆ.
ನಾಲ್ಕು ವಿಧಾನಗಳಲ್ಲಿ ಸೌತೆಕಾಯಿಯನ್ನು ಚರ್ಮದ ಮೇಲೆ ಬಳಸಿ
ಟೋನರ್ ಆಗಿ ಬಳಸಿ
ಮನೆಯಲ್ಲಿ ತಯಾರಿಸಿದ ಸೌತೆಕಾಯಿ ಟೋನರ್ ತಂಪಾಗಿಸುವ ಗುಣ ಹೊಂದಿದೆ. ಇದು ಚರ್ಮವನ್ನು ತಂಪಾಗಿಸುತ್ತದೆ. ಚರ್ಮದ ಮೇಲೆ ಸೂರ್ಯನ ಕಿರಣಗಳ ಹಾನಿಕಾರಕ ಪರಿಣಾಮ ಕಡಿಮೆ ಮಾಡುತ್ತದೆ.
ಸೌತೆಕಾಯಿ ತೊಳೆದು ಅದರ ಸಿಪ್ಪೆ ತೆಗೆದು ಸಣ್ಣ ತುಂಡುಗಳಾಗಿ ಕತ್ತರಿಸಿ. ಒಂದು ಪ್ಯಾನ್ ತೆಗೆದುಕೊಳ್ಳಿ. ಅದರಲ್ಲಿ ನೀರು ಹಾಕಿ. ನೀರನ್ನು ಕುದಿಯಲು ಬಿಡಿ. ನಂತರ ಸೌತೆಕಾಯಿ ತುಂಡು ಹಾಕಿ ಬೇಯಿಸಿ. ನಂತರ ಬ್ಲೆಂಡರ್ ನಲ್ಲಿ ಹಾಕಿ ನಯವಾದ ಪೇಸ್ಟ್ ತಯಾರಿಸಿ.
ಈಗ ಸಿದ್ಧಪಡಿಸಿದ ಪೇಸ್ಟ್ ನ ಸೌತೆಕಾಯಿ ರಸವನ್ನು ಶುದ್ಧವಾದ ಹತ್ತಿ ಬಟ್ಟೆ ಅಥವಾ ಸ್ಟ್ರೈನರ್ ಸಹಾಯದಿಂದ ತೆಗೆದು ಸ್ಪ್ರೇ ಬಾಟಲಿಯಲ್ಲಿ ಸಂಗ್ರಹಿಸಿ. ಇದಕ್ಕೆ ಮೂರು ಚಮಚ ರೋಸ್ ವಾಟರ್ ಸೇರಿಸಿ ಬಳಸಿ. ನಾಲ್ಕು ದಿನದ ನಂತರ ಮತ್ತೆ ತಾಜಾ ಟೋನರ್ ಸಿದ್ಧಪಡಿಸಿ.
ಸೌತೆಕಾಯಿ ಫೇಸ್ ಮಾಸ್ಕ್
ಮೊಡವೆ ಸಮಸ್ಯೆ ಹೋಗಲಾಡಿಸಲು ಸೌತೆಕಾಯಿ ಫೇಸ್ ಮಾಸ್ಕ್ ಬಳಸಿ. ಸೌತೆಕಾಯಿಯನ್ನು ಪುಡಿಮಾಡಿ ಮತ್ತು ಅದನ್ನು ನೇರವಾಗಿ ಚರ್ಮದ ಮೇಲೆ ಅನ್ವಯಿಸಿ.
ಮೊಡವೆ ಪೀಡಿತ ಪ್ರದೇಶದಲ್ಲಿ ಸೌತೆಕಾಯಿಯ ಸ್ಲೈಸ್ ಅನ್ನು ಇರಿಸಿ ಮತ್ತು ಸ್ವಲ್ಪ ಸಮಯ ಬಿಡಿ. ಇದರ ಕೂಲಿಂಗ್ ಗುಣಲಕ್ಷಣಗಳು ಮೊಡವೆ ಕಡಿಮೆ ಮಾಡುತ್ತದೆ.
ಸೌತೆಕಾಯಿ ನೀರಿನಿಂದ ಚರ್ಮವನ್ನು ಸ್ವಚ್ಛಗೊಳಿಸಿ
ಸೌತೆಕಾಯಿ ನೀರಿನಿಂದ ಮುಖ ತೊಳೆಯಿರಿ. ಇದು ಬೆಳಿಗ್ಗೆ ತಾಜಾತನ ನೀಡುತ್ತದೆ. ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆ ಹೋಗಲಾಡಿಸುತ್ತದೆ. ಪಾತ್ರೆಯಲ್ಲಿ ಶುದ್ಧ ನೀರನ್ನು ತೆಗೆದುಕೊಂಡು 10 ಸೌತೆಕಾಯಿ ಹಾಕಿ. ಅಲೋವೆರಾ, ತುಳಸಿ ಮತ್ತು ಪುದೀನ ಎಲೆ ಕೂಡ ಸೇರಿಸಬಹುದು.
ಇದನ್ನೂ ಓದಿ: ಮೂಳೆಗಳ ಊತ ಹಾಗೂ ಪಾದಗಳ ಸುಡುವ ಸಂವೇದನೆ ಸಮಸ್ಯೆಗೆ ಕಾರಣವೇನು?
ಈಗ ನೀರನ್ನು ಮುಚ್ಚಿ ಮತ್ತು ರಾತ್ರಿಯಿಡೀ ನೆನೆಯಲು ಬಿಡಿ. ಬೆಳಿಗ್ಗೆ ಎದ್ದ ನಂತರ ಈ ನೀರಿನಿಂದ ನಿಮ್ಮ ಚರ್ಮವನ್ನು ಸ್ವಚ್ಛಗೊಳಿಸಿ. ಸೌತೆಕಾಯಿಯನ್ನು ಸಲಾಡ್ ಅಥವಾ ಜ್ಯೂಸ್ ರೂಪದಲ್ಲಿ ಸೇವಿಸಿ. ಸೌತೆಕಾಯಿಯನ್ನು ಡಿಟಾಕ್ಸ್ ಪಾನೀಯವಾಗಿ ಸೇವಿಸಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ