• Home
  • »
  • News
  • »
  • lifestyle
  • »
  • Face Pack: ಗ್ಲೋಯಿಂಗ್ ಸ್ಕಿನ್ ನಿಮ್ಮದಾಗಲು ಮನೆಯಲ್ಲೇ ಈ ಫೇಸ್​ ಪ್ಯಾಕ್ ಹಾಕಿ!

Face Pack: ಗ್ಲೋಯಿಂಗ್ ಸ್ಕಿನ್ ನಿಮ್ಮದಾಗಲು ಮನೆಯಲ್ಲೇ ಈ ಫೇಸ್​ ಪ್ಯಾಕ್ ಹಾಕಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನೈಸರ್ಗಿಕವಾಗಿ ಚರ್ಮದ ಕಾಳಜಿ ಮಾಡುವುದು ಯಾವುದೇ ಅಡ್ಡ ಪರಿಣಾಮ ಬೀರಲ್ಲ. ಹಾಗಾಗಿ ನಾವು ಇಂದು ನೈಸರ್ಗಿಕ ಗುಣಗಳಿಂದ ಕೂಡಿದ ಉಬ್ಟಾನ್ ಫೇಸ್ ಮಾಸ್ಕ್‌ ಅನ್ವಯಿಸುವ ಪರಿಣಾಮಕಾರಿ ಪಾಕ ವಿಧಾನದ ಬಗ್ಗೆ ತಿಳಿಯೋಣ.

  • Share this:

    ದೇಹ (Body) ಹೇಗೆ ಪೋಷಕಾಂಶವಿಲ್ಲದೇ ಹೋದರೆ, ನೀರು ಇಲ್ಲದೇ ಹೋದರೆ ಹೇಗೆ ಬಾಡುತ್ತದೆಯೋ ಹಾಗೆಯೇ ಪಂಚೇಂದ್ರಿಯಗಳಲ್ಲಿ ಒಂದಾದ ಚರ್ಮವು (Skin) ಸಹ ಧೂಳು, ಕೊಳೆಯಿಂದ ದಣಿಯುತ್ತದೆ. ಚರ್ಮ ಅತಿಯಾದ ಬಿಸಿಲಿಗೆ ಮೈಯೊಡ್ಡುವುದರಿಂದ ನಿರ್ಜೀವವಾಗುತ್ತದೆ. ಒಣಚರ್ಮ (Dry Skin), ತುರಿಕೆ ಸಮಸ್ಯೆ (Itching Problem) ಉಂಟಾಗುತ್ತದೆ. ಹಾಗಾಗಿ ಚರ್ಮಕ್ಕೆ ಸರಿಯಾದ ಕಾಳಜಿ (Care) ತೋರುವುದು ಮುಖ್ಯವಾಗಿದೆ. ಇಲ್ಲದಿದ್ದರೆ ಚರ್ಮವು ಬೇಗ ಕಳೆಗುಂದುತ್ತದೆ. ಕಲೆ, ಮೊಡೆ, ಸುಕ್ಕುಗಟ್ಟುತ್ತದೆ. ಚರ್ಮದ ಬಗ್ಗೆ ನಿಷ್ಕಾಳಜಿ ತೋರಿದರೆ ಅದು ಗಂಭೀರ ಚರ್ಮದ ಸಮಸ್ಯೆ ಉಂಟು ಮಾಡುತ್ತದೆ. ಹೀಗಾಗಿ ಚರ್ಮದ ಆರೈಕೆಗೆ ತುಂಬಾ ಮಹಿಳೆಯರು ಹಲವು ದುಬಾರಿ ಉತ್ಪನ್ನಗಳ ಮೊರೆ ಹೋಗ್ತಾರೆ.


    ಚರ್ಮದ ಕಾಳಜಿ ಈಗ ಮನೆಯಲ್ಲೇ ಮಾಡಿ


    ಈ ಪಾರ್ಲರ್ ಮತ್ತು ಸೌಂದರ್ಯ ವರ್ಧಕ ಉತ್ಪನ್ನಗಳಿಗೆ ಸಾವಿರಾರು ರೂಪಾಯಿ ಖರ್ಚು ಮಾಡ್ತಾರೆ. ಆದ್ರೆ ಇದು ದೀರ್ಘಕಾಲದ ಯಾವುದೇ ಫಲಿತಾಂಶ ನೀಡಲ್ಲ. ಹಾಗಾಗಿ ನೀವು ಮನೆಯಲ್ಲೇ ನೈಸರ್ಗಿಕವಾಗಿ ತ್ವಚೆಯ ಆರೈಕೆ ಮಾಡಬಹುದು. ಇದಕ್ಕಾಗಿ ಕೆಲವು ಫೇಸ್ ಪ್ಯಾಕ್ ಹಾಕಿರಿ.


    ನೈಸರ್ಗಿಕವಾಗಿ ಚರ್ಮದ ಕಾಳಜಿ ಮಾಡುವುದು ಯಾವುದೇ ಅಡ್ಡ ಪರಿಣಾಮ ಬೀರಲ್ಲ. ಹಾಗಾಗಿ ನಾವು ಇಂದು ನೈಸರ್ಗಿಕ ಗುಣಗಳಿಂದ ಕೂಡಿದ ಉಬ್ಟಾನ್ ಫೇಸ್ ಮಾಸ್ಕ್‌ ಅನ್ವಯಿಸುವ ಪರಿಣಾಮಕಾರಿ ಪಾಕ ವಿಧಾನದ ಬಗ್ಗೆ ತಿಳಿಯೋಣ. ಉಬ್ಟಾನ್ ಫೇಸ್ ಮಾಸ್ಕ್‌ ತಯಾರಿಸುವುದು ಹೇಗೆ? ಇದು ಹೇಗೆ ಕೆಲಸ ಮಾಡುತ್ತದೆ ಎಂದು ನೋಡೋಣ.




    ಉಬ್ಟಾನ್ ಫೇಸ್ ಪ್ಯಾಕ್ ಹೀಗಿದೆ


    ಶ್ರೀಗಂಧ ಮತ್ತು ಹಾಲಿನ ಫೇಸ್ ಪ್ಯಾಕ್


    ಒಂದು ಟೀಚಮಚ ಶ್ರೀಗಂಧ , ಎರಡು ಚಮಚ ಕಡಲೆ ಬೇಳೆ ಹಿಟ್ಟು, ಎರಡು ಚಮಚ ಹಾಲು, ಅರ್ಧ ಚಮಚ ಅರಿಶಿನ ಪುಡಿ ಬೇಕು. ಒಂದು ಬಟ್ಟಲಿನಲ್ಲಿ ಶ್ರೀಗಂಧ, ಬೇಳೆ ಹಿಟ್ಟು, ಹಾಲು ಮತ್ತು ಅರಿಶಿನ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.


    ಈ ಮಿಶ್ರಣವನ್ನು ಬೆರಳುಗಳ ಸಹಾಯದಿಂದ ಲಘುವಾಗಿ ಮುಖಕ್ಕೆ ಅನ್ವಯಿಸಿ. ಲಘು ಕೈಗಳಿಂದ ಮಸಾಜ್ ಮಾಡಿ. ಉಳಿದ ಮಿಶ್ರಣವನ್ನು ಕುತ್ತಿಗೆ ಭಾಗಕ್ಕೂ ಹಚ್ಚಿರಿ. 20 ನಿಮಿಷದ ನಂತರ ಉಗುರು ಬೆಚ್ಚಗಿನ ನೀರಿನಿಂದ ಸ್ವಚ್ಛಗೊಳಿಸಿ. ವಾರಕ್ಕೆ ಕನಿಷ್ಠ 3 ಬಾರಿ ಅನ್ವಯಿಸಿ. ಈ ಫೇಸ್ ಪ್ಯಾಕ್ ಮೊಡವೆ, ಬ್ರೇಕೌಟ್ ಮತ್ತು ಪಿಗ್ಮೆಂಟೇಶನ್ ಹೋಗಲಾಡಿಸುತ್ತದೆ.


    ಅರಿಶಿನ


    ಅರಿಶಿನವು ಸಕ್ರಿಯ ಸಂಯುಕ್ತ ಕರ್ಕ್ಯುಮಿನ್  ಮತ್ತು ಆಂಟಿಆಕ್ಸಿಡೆಂಟ್‌ ಹೊಂದಿದೆ. ಇದು ಮೊಡವೆ ಮತ್ತು ಒಡೆಯುವಿಕೆ ಸಮಸ್ಯೆ ನಿವಾರಿಸುತ್ತದೆ. ಉರಿಯೂತದ ಗುಣಲಕ್ಷಣ, ಚರ್ಮದ ಮೇಲಿನ ಊತ ಕಡಿಮೆ ಮಾಡುತ್ತದೆ. ಚರ್ಮದಲ್ಲಿ ಇರುವ ನೈಸರ್ಗಿಕ ತೈಲ ಸಮತೋಲನಗೊಳಿಸುತ್ತದೆ.


    ಸಾಂದರ್ಭಿಕ ಚಿತ್ರ


    ಸೂರ್ಯನ ಹಾನಿಕಾರಕ ಕಿರಣಗಳಿಂದ, ಪರಿಸರ ಮಾಲಿನ್ಯದಿಂದ ಚರ್ಮವನ್ನು ರಕ್ಷಿಸುತ್ತದೆ. ಚರ್ಮದ ಸ್ಥಿತಿಸ್ಥಾಪಕತ್ವ ಕಾಪಾಡುತ್ತದೆ. ವಯಸ್ಸಾಗುವಿಕೆ ಲಕ್ಷಣ ಕಡಿಮೆ ಮಾಡುತ್ತದೆ. ಸ್ವತಂತ್ರ ರಾಡಿಕಲ್ಗಳ ಪರಿಣಾಮ ಕಡಿಮೆ ಮಾಡುತ್ತದೆ. ಚರ್ಮದ ಜೀವಕೋಶಗಳ ಹಾನಿ ತಡೆಯುತ್ತದೆ.


    ಕಡಲೆ ಬೇಳೆ ಹಿಟ್ಟು


    ಕಡಲೆ ಬೇಳೆ ಹಿಟ್ಟಿನಲ್ಲಿ ಸತು ಇದೆ. ಇದು ಮೊಡವೆ ರಹಿತ ರಕ್ಷಿಸಲು ಸಹಾಯ ಮಾಡುತ್ತದೆ. ಕ್ಷಾರೀಯ ಮತ್ತು ಎಫ್ಫೋಲಿಯೇಟಿಂಗ್ ಗುಣಲಕ್ಷಣಗಳು ಚರ್ಮದ ಮೇಲೆ ಸಂಗ್ರಹವಾದ ಕಲ್ಮಶ ನಿವಾರಿಸುತ್ತವೆ. ರಂಧ್ರಗಳನ್ನು ಸ್ವಚ್ಛಗೊಳಿಸುತ್ತದೆ.


    ಚರ್ಮದ ಟ್ಯಾನಿಂಗ್ ಕಡಿಮೆ ಮಾಡುತ್ತದೆ. ಸತ್ತ ಚರ್ಮದ ಕೋಶಗಳನ್ನು ತೆಗೆದು ಹಾಕುತ್ತದೆ. ಇದು ನೈಸರ್ಗಿಕ ಚರ್ಮದ ಟೋನ್ ಹೊರಹೊಮ್ಮಲು ಸಹಾಯ ಮಾಡುತ್ತದೆ. ಚರ್ಮದ ಪಿಹೆಚ್ ಮಟ್ಟ ಮತ್ತು ಮೇದೋಗ್ರಂಥಿಗಳ ಸ್ರಾವ ಸಮತೋಲನ ಮಾಡುತ್ತದೆ.


    ಇದನ್ನೂ ಓದಿ: ದೇಹಕ್ಕೆ ಕ್ಯಾಲ್ಸಿಯಂ ಒದಗಿಸಲು ಈ ಸೂಪರ್ ಫುಡ್ ಸೇವಿಸಿ


    ಶ್ರೀಗಂಧ


    ಶ್ರೀಗಂಧದಲ್ಲಿರುವ ಉರಿಯೂತ, ಆಂಟಿಮೈಕ್ರೊಬಿಯಲ್, ಆಂಟಿವೈರಲ್ ಮತ್ತು ನಂಜುನಿರೋಧಕ ಗುಣಲಕ್ಷಣ ಚರ್ಮ ಸಮಸ್ಯೆಗಳಾದ ಕಲೆ, ಸುಕ್ಕು, ಉರಿಯೂತ, ಎಸ್ಜಿಮಾ, ಸೋರಿಯಾಸಿಸ್, ಮೊಡವೆ ಮತ್ತು ಪಿಗ್ಮೆಂಟೇಶನ್ ಸಮಸ್ಯೆ ತಡೆಯುತ್ತದೆ.

    Published by:renukadariyannavar
    First published: