Mustard Oil And Skin: ಆರೋಗ್ಯಕರ ಪ್ರಯೋಜನ ನೀಡುವ ಸಾಸಿವೆ ಎಣ್ಣೆಯನ್ನು ತ್ವಚೆಯ ಆರೈಕೆಗೆ ಹೀಗೆ ಬಳಸಿ

ಸಾಸಿವೆ ಎಣ್ಣೆಯು ಅನೇಕ ಆರೋಗ್ಯ ಪ್ರಯೋಜನ ಹೊಂದಿದೆ. ಹಲವು ಕಾಯಿಲೆಗಳ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ. ಇದನ್ನು ಆರೋಗ್ಯಕರ ಟಾನಿಕ್ ಆಗಿ ಬಳಸಬಹುದು. ಇದು ಇಡೀ ದೇಹಕ್ಕೆ ಪ್ರಯೋಜನ ನೀಡುತ್ತದೆ. ಸಾಸಿವೆ ಎಣ್ಣೆಯ ನಿಯಮಿತ ಬಳಕೆ ನಿಮಗೆ ಹೊಳೆಯುವ ಮತ್ತು ಆರೋಗ್ಯಕರ ಚರ್ಮ ನೀಡುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ತ್ವಚೆ ಮತ್ತು ಕೂದಲ ಆರೈಕೆಗೆ (Skin And Hair Care) ಎಣ್ಣೆಯನ್ನು (Oil) ಬಳಕೆ ಮಾಡುವುದು ತುಂಬಾ ಉತ್ತಮವೆಂದು ಪರಿಗಣಿಸಲ್ಪಟ್ಟಿದೆ. ಅದರಲ್ಲೂ ಸಾಸಿವೆ ಎಣ್ಣೆಯು (Mustard Oil) ಸಾಕಷ್ಟು ಪೋಷಕಾಂಶಗಳಿಂದ (Nutrients) ಕೂಡಿದೆ. ಮೊನೊಸಾಚುರೇಟೆಡ್ ಕೊಬ್ಬಿನಾಮ್ಲಗಳ ಸಮೃದ್ಧ ಮೂಲವೂ ಆಗಿದೆ ಸಾಸಿವೆ ಎಣ್ಣೆ. ಮತ್ತು ಸಾಸಿವೆ ಎಣ್ಣೆ ಉರಿಯೂತದ ಗುಣಲಕ್ಷಣ ಹೊಂದಿದೆ. ಇದರ ಜೊತೆಗೆ ಸಾಸಿವೆ ಎಣ್ಣೆ ಇದು ಒಮೆಗಾ 3 ಮತ್ತು ಒಮೆಗಾ 6 ಕೊಬ್ಬಿನಾಮ್ಲ, ಶಕ್ತಿಯುತ ಉತ್ಕರ್ಷಣ ನಿರೋಧಕ ಮತ್ತು ಆರೋಗ್ಯಕ್ಕೆ ಪ್ರಯೋಜನಕಾರಿ ಅಗತ್ಯ ಖನಿಜಾಂಶ ಹೊಂದಿದೆ. ಸಾಸಿವೆ ಎಣ್ಣೆ ನಿಮ್ಮ ಒಟ್ಟಾರೆ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಕಾರಿ ಆಗಿದೆ.

    ಸಾಸಿವೆ ಎಣ್ಣೆಯು ಅನೇಕ ಆರೋಗ್ಯ ಪ್ರಯೋಜನ ಹೊಂದಿದೆ

    ಸಾಸಿವೆ ಎಣ್ಣೆಯು ಅನೇಕ ಆರೋಗ್ಯ ಪ್ರಯೋಜನ ಹೊಂದಿದೆ. ಇದು ಹೃದಯ, ಚರ್ಮ, ಕೀಲು ನೋವು, ಸ್ನಾಯು ಹಾಗೂ ಇತರ ಪ್ರಯೋಜನಗಳ ಜೊತೆಗೆ ಸಂಬಂಧಿಸಿದ ಕಾಯಿಲೆಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ.

    ಈ ಸಾಸಿವೆ ಎಣ್ಣೆಯನ್ನು ಆರೋಗ್ಯಕರ ಟಾನಿಕ್ ಆಗಿ ಬಳಸಬಹುದು. ಇದು ಇಡೀ ದೇಹಕ್ಕೆ ಪ್ರಯೋಜನ ನೀಡುತ್ತದೆ. ಸಾಸಿವೆ ಎಣ್ಣೆಯ ನಿಯಮಿತ ಬಳಕೆ ನಿಮಗೆ ಹೊಳೆಯುವ ಮತ್ತು ಆರೋಗ್ಯಕರ ಚರ್ಮ ನೀಡುತ್ತದೆ.

    ಇದನ್ನೂ ಓದಿ: ಹಿಮಾಲಯ ಅಂಜೂರದಲ್ಲಿದೆ ಹಲವು ಪೋಷಕಾಂಶ! ಆರೋಗ್ಯಕ್ಕೆ ಬೆಸ್ಟ್

    ಸಾಸಿವೆ ಎಣ್ಣೆಯನ್ನು ಆಹಾರ ಸೇವನೆ ಹೊರತಾಗಿ ತ್ವಚೆಯ ಆರೋಗ್ಯಕ್ಕೆ ಹೇಗೆ ಬಳಸಬೇಕು?

    ಒಡೆದ ತುಟಿ ಸರಿಪಡಿಸಲು ಸಾಸಿವೆ ಎಣ್ಣೆ ಹೀಗೆ ಬಳಸಿ

    ಸಂಶೋಧನೆಯ ಪ್ರಕಾರ ಒಡೆದ ತುಟಿಗಳಿಗೆ ಎಣ್ಣೆ ಹಚ್ಚುವುದರಿಂದ ಅದಕ್ಕೆ ಆರೈಕೆ ಸಿಗುತ್ತದೆ. ಮಲಗುವ ಮೊದಲು ಹೊಕ್ಕುಳಲ್ಲಿ ಕೆಲವು ಹನಿ ಎಣ್ಣೆ ಹಾಕುವುದರಿಂದ ಒಡೆದ ತುಟಿ ಗುಣಪಡಿಸಲು ಸಹಾಯ ಮಾಡುತ್ತದೆ ಎಂದು ಕೆಲವರು ಹೇಳುತ್ತಾರೆ.

     ಟ್ಯಾನ್ ಮತ್ತು ಕಪ್ಪು ಕಲೆ ಕಡಿಮೆ ಮಾಡಲು ಸಾಸಿವೆ ಎಣ್ಣೆ ಹೀಗೆ ಬಳಸಿ

    ಸಾಸಿವೆ ಎಣ್ಣೆಯಿಂದ ನಿಮ್ಮ ಮುಖದ ಮೇಲೆ ನಿಯಮಿತ ಮಸಾಜ್ ಮಾಡುವುದು ಟ್ಯಾನ್, ಕಪ್ಪು ಕಲೆ ಮತ್ತು ಚರ್ಮದ ಟೋನ್ ಅನ್ನು ಗಮನಾರ್ಹವಾಗಿ ಚೆನ್ನಾಗಿ ಇರಿಸಲು ಕೆಲಸ ಮಾಡುತ್ತದೆ.

    ಸಾಸಿವೆ ಎಣ್ಣೆಗೆ ಬೇಳೆ ಹಿಟ್ಟು, ಒಂದು ಚಮಚ ಮೊಸರು ಮತ್ತು ಕೆಲವು ಹನಿ ನಿಂಬೆ ರಸ ಬೆರೆಸಿ ಪೇಸ್ಟ್ ಮಾಡಿ. ಇದನ್ನು ನಿಮ್ಮ ಮುಖ ಮತ್ತು ಕುತ್ತಿಗೆಗೆ ಹಚ್ಚಿರಿ. ತಣ್ಣೀರಿನಿಂದ ತೊಳೆಯುವ ಮೊದಲು 10 ರಿಂದ 15 ನಿಮಿಷಗಳ ಕಾಲ ಅದನ್ನು ಹಾಗೇ ಬಿಡಿ. ಕೆಲವು ತಿಂಗಳು ವಾರಕ್ಕೆ ಮೂರು ಬಾರಿ ಈ ಫೇಸ್ ಪ್ಯಾಕ್ ಮಾಡಿ ಅನ್ವಯಿಸಿ. ಇದು ನಿಮಗೆ ಸೂಕ್ತ ವ್ಯತ್ಯಾಸ ಕಾಣಬಹುದು.

    ಚರ್ಮದ ಟೋನ್ ಸುಧಾರಿಸಲು ಸಾಸಿವೆ ಎಣ್ಣೆ ಹೀಗೆ ಬಳಸಿ

    ಸಾಸಿವೆ ಎಣ್ಣೆಯಲ್ಲಿ ಬಿ-ಕಾಂಪ್ಲೆಕ್ಸ್ ವಿಟಮಿನ್ ಗಳು ಸಮೃದ್ಧವಾಗಿವೆ. ಈ ಜೀವಸತ್ವಗಳು ಚರ್ಮದ ಆರೋಗ್ಯ ಉತ್ತೇಜಿಸುತ್ತವೆ. ನೀವು ಸಾಸಿವೆ ಮತ್ತು ತೆಂಗಿನ ಎಣ್ಣೆಯನ್ನು ಸಮಾನ ಭಾಗಗಳಲ್ಲಿ ಮಿಶ್ರಣ ಮಾಡಿ. ಪ್ರತಿ ರಾತ್ರಿ 15 ನಿಮಿಷ ಕಾಲ ಈ ಮಿಶ್ರಣವನ್ನು ನಿಮ್ಮ ಚರ್ಮಕ್ಕೆ ಮಸಾಜ್ ಮಾಡಿ. ಮತ್ತು ನಂತರ ಸೌಮ್ಯವಾದ ಫೇಸ್ ವಾಶ್‌ನಿಂದ ತೊಳೆಯಿರಿ.

    ನೀವು ಇದನ್ನು ನಿಯಮಿತವಾಗಿ ಬಳಸಬೇಕು. ನಿಮ್ಮ ಚರ್ಮದ ಟೋನ್ ಸುಧಾರಣೆ ಇದರಿಂದ ಕಂಡು ಬರುತ್ತದೆ. ಇದು ಸುಕ್ಕು ಹಾಗೂ ಕಲೆ ನಿವಾರಿಸುತ್ತದೆ. ಜೊತೆಗೆ ವಯಸ್ಸಾಗುವಿಕೆ ಚಿಹ್ನೆಗಳನ್ನು ಕಡಿಮೆ ಮಾಡುತ್ತದೆ.

    ನೈಸರ್ಗಿಕ ಸನ್‌ಸ್ಕ್ರೀನ್ ನಂತೆ ಸಾಸಿವೆ ಎಣ್ಣೆ ಹೀಗೆ ಬಳಸಿ

    ನೀವು ಹೊರಗೆ ತಿರುಗಾಡಲು ಹೋಗುವ ಮೊದಲು ಚರ್ಮದ ಮೇಲೆ ಸ್ವಲ್ಪ ಪ್ರಮಾಣದ ಸಾಸಿವೆ ಎಣ್ಣೆ ಮಸಾಜ್ ಮಾಡಿ. ಎಣ್ಣೆಯಲ್ಲಿ ವಿಟಮಿನ್ ಇ ಸಮೃದ್ಧವಾಗಿದೆ. ಇದರ ಪೋಷಕಾಂಶವು ನಿಮ್ಮ ಚರ್ಮವನ್ನು ಹಾನಿಕಾರಕ ಯುವಿ ಕಿರಣಗಳು ಮತ್ತು ಪರಿಸರ ವಿಷದಿಂದ ರಕ್ಷಿಸುತ್ತದೆ. ನಿಮ್ಮ ಮುಖದ ಮೇಲೆ ಹೆಚ್ಚು ಎಣ್ಣೆ ಹಾಕಬೇಡಿ. ಅದು ಧೂಳು ಮತ್ತು ಮಾಲಿನ್ಯ ಆಕರ್ಷಿಸುತ್ತದೆ.

    ಇದನ್ನೂ ಓದಿ: ಕೂದಲು ಉದುರುವ ಸಮಸ್ಯೆ ಏಕೆ ಉಂಟಾಗುತ್ತದೆ? ಪರಿಹಾರವೇನು?

    ದದ್ದು ಮತ್ತು ಸೋಂಕು ತಡೆಗೆ ಚಿಕಿತ್ಸೆ ನೀಡುತ್ತದೆ

    ಸಾಸಿವೆ ಎಣ್ಣೆ ಶಕ್ತಿಯುತ ಉರಿಯೂತ, ಆಂಟಿಬ್ಯಾಕ್ಟೀರಿಯಲ್ ಮತ್ತು ಆಂಟಿಫಂಗಲ್ ಗುಣಲಕ್ಷಣ  ಹೊಂದಿದೆ. ತೈಲವು ಚರ್ಮದ ದದ್ದು, ಅಲರ್ಜಿ ಮತ್ತು ಸೋಂಕು ಗುಣಪಡಿಸಲು ಸಹಾಯ ಮಾಡುತ್ತದೆ. ಇದು ಚರ್ಮದ ಶುಷ್ಕತೆ ಮತ್ತು ತುರಿಕೆ ತಡೆಯುತ್ತದೆ. ವಯಸ್ಸಾಗುವಿಕೆ ಚಿಹ್ನೆಗಳನ್ನು ಕಡಿಮೆ ಮಾಡುತ್ತದೆ.
    Published by:renukadariyannavar
    First published: