ಹಲ್ಲು ನೋವಿಗೆ ಸಾಸಿವೆ ಎಣ್ಣೆ ಶಾಶ್ವತ ಪರಿಹಾರ

news18
Updated:June 28, 2018, 2:05 PM IST
ಹಲ್ಲು ನೋವಿಗೆ ಸಾಸಿವೆ ಎಣ್ಣೆ ಶಾಶ್ವತ ಪರಿಹಾರ
news18
Updated: June 28, 2018, 2:05 PM IST
ದಿನಕ್ಕೆ ಎರಡು ಬಾರಿ ಹಲ್ಲುಜ್ಜಿದರೂ ಕೂಡ ಕೆಲವು ಬಾರಿ ಹಲ್ಲು ನೋವಿನ ಸಮಸ್ಯೆ ಹಾಗೆಯೇ ಉಳಿದಿರುತ್ತದೆ. ಅದರಲ್ಲೂ ಚಳಿಗಾಲ ಅಥವಾ ಮಳೆಗಾಲದಲ್ಲಿ ಹಲ್ಲು ನೋವು ವಿಪರೀತ ಕಾಡುತ್ತದೆ. ಇದಕ್ಕೆ ಪರಿಹಾರವಾಗಿ ಸಾಸಿವೆ ಎಣ್ಣೆಯನ್ನು ಮನೆಮದ್ದಾಗಿ ಬಳಸಿಕೊಳ್ಳಬಹುದು.


ಹಲ್ಲು ನೋವನ್ನು ನಿವಾರಿಸುವ  ಅನೇಕ ಗುಣಗಳು ಸಾಸಿವೆ ಎಣ್ಣೆಯಲ್ಲಿದೆ. ಇದರಲ್ಲಿರುವ ವಿಟಮಿನ್​ಗಳು, ಮಿನರಲ್ಸ್​ ಮತ್ತು ಬೀಟಾ ಕ್ಯಾರೋಟಿನ್​ ಸತ್ವಗಳು ಹಲ್ಲು ನೋವು ನಿವಾರಿಸುವಲ್ಲಿ ಮಹತ್ವದ ಪಾತ್ರವಹಿಸುತ್ತದೆ. ಹಾಗೆಯೇ ಸಾಸಿವೆ ಎಣ್ಣೆಯಲ್ಲಿರುವ ಮೆಗ್ನಿಷಿಯಂ, ಕ್ಯಾಲ್ಸಿಯಂ, ಕೊಬ್ಬಿನಾಮ್ಲ ಅಂಶಗಳು ಹಲ್ಲು ನೋವನ್ನು ಶಮನ ಮಾಡುತ್ತದೆ.


ಮೈಕೈ ನೋವಿಗೆ ಮನೆಮದ್ದಾಗಿರುವ ಸಾಸಿವೆ ಎಣ್ಣೆಯನ್ನು ನೋವಿರುವ ಹಲ್ಲಿನ ಭಾಗಕ್ಕೆ ಸವರುವುದರಿಂದ ಪರಿಹಾರ ಕಂಡುಕೊಳ್ಳಬಹುದು.


ಸಾಸಿವೆ ಎಣ್ಣೆಯಲ್ಲಿ ಸ್ವಲ್ಪ ಉಪ್ಪು ಮಿಶ್ರಣ ಮಾಡಿ ಹಲ್ಲುಜ್ಜುದರಿಂದ ಹಲ್ಲು ನೋವಿನ ಸಮಸ್ಯೆಯನ್ನು ದೂರ ಮಾಡಬಹುದು.


ಪ್ರತಿನಿತ್ಯ ಸಾಸಿವೆ ಎಣ್ಣೆಯಿಂದ ಹಲ್ಲುಜ್ಜಿದರೆ ಹಲ್ಲಿನ ಹಳದಿ ಬಣ್ಣವನ್ನು ಹೋಗಲಾಡಿಸುತ್ತದೆ. ದಿನ್ನಕ್ಕೆ ಎರಡು ಬಾರಿ ಸಾಸಿವೆ ಎಣ್ಣೆ ನೀರಿನಲ್ಲಿ ಬಾಯಿ ಮುಕ್ಕಳಿಸುವುದರಿಂದ ಹಲ್ಲು ನೋವು ನಿವಾರಣೆ ಆಗುವುದಲ್ಲದೆ, ವಸಡು ಗಟ್ಟಿಗೊಳ್ಳುತ್ತದೆ.
First published:June 28, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ