ತೂಕ ಇಳಿಕೆಗೆ (Weight Loss) ಪ್ರತೀ ವರ್ಷದ (Every Year) ಆರಂಭದಲ್ಲಿ ಸಾಕಷ್ಟು ಉತ್ಸಾಹದಿಂದ ಹಲವು ಯೋಜನೆ (Plan) ಹಾಕಿಕೊಳ್ಳಲಾಗುತ್ತದೆ. ಆದರೆ ದಿನಗಳು ಕಳೆದಂತೆ ಆ ಉತ್ಸಾಹ ಮಾಯವಾಗುತ್ತದೆ. ಹಾಕಿಕೊಂಡ ಯೋಜನೆಗಳು ಯಾವುದೂ ಫಲಿತಾಂಶ ನೀಡುವುದಿಲ್ಲ. ಕೆಲವೇ ದಿನಗಳಲ್ಲಿ ಆ ತೂಕ ಇಳಿಕೆ ಯೋಜನೆಗಳು ಸಹ ಹಳ್ಳ ಹಿಡಿಯುತ್ತವೆ. ನೀವೂ ಹೀಗೆ ಮಾಡಿದವರಲ್ಲಿ ಒಬ್ಬರಾಗಿರಬಹುದು. ಆದರೆ ಈ ಬಾರಿಯ 2023ರ ನೂತನ ವರ್ಷಕ್ಕೆ ನೀವು ಹಾಕಿಕೊಳ್ಳುವ ಯೋಜನೆಯಲ್ಲಿ ಸಕ್ಸಸ್ (Success) ಆಗಲು ಪಣ ತೊಡಿ. ಅದಕ್ಕಾಗಿ ಶ್ರಮ ಪಡಿ. ಕೆಲವೇ ದಿನಗಳಲ್ಲಿ ಸ್ಲಿಮ್ ಮತ್ತು ಫಿಟ್ (Slim And Fit) ಆಗಿ. ಇದು ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡುತ್ತದೆ.
ಹೊಸ ವರ್ಷಕ್ಕೆ ನಿಮ್ಮ ತೂಕ ಇಳಿಕೆ ಯೋಜನೆಗೆ ಕೆಲವು ಸಲಹೆಗಳು ಹೀಗಿವೆ
ಹೊಸ ವರ್ಷ 2023 ರ ಆಗಮನಕ್ಕೆ ಇನ್ನು ಒಂದೇ ದಿನ ಬಾಕಿಯಿದೆ. ಎಲ್ಲರೂ ಹೊಸ ವರ್ಷವನ್ನು ಸಖತ್ ಆಗಿ ಸೆಲೆಬ್ರೇಟ್ ಮಾಡಲು ಯೋಜನೆ ಹಾಕಿದ್ದಾರೆ. ಡ್ರೆಸ್ ಇಂದ ಹಿಡಿದು, ಊಟ, ಕುಡಿತ, ಮೋಜು, ಮಸ್ತಿ ಹೀಗೆ ಎಲ್ಲದಕ್ಕೂ ತಯಾರಿ ಮಾಡಿದ್ದಾರೆ. ಜೊತೆಗೆ ಬರುವ 2023ರಲ್ಲಿ ಕೆಲವೊಂದಿಷ್ಟು ಮುಖ್ಯ ರೆಸ್ಯುಲ್ಯೂಷನ್ ಕೂಡ ಪ್ಲಾನ್ ಮಾಡಿರ್ತಾರೆ.
ಆ ರೆಸ್ಯುಲ್ಯೂಷನ್ ಗಳಲ್ಲಿ ತೂಕ ನಷ್ಟವೂ ಇದ್ರೆ ಅದಕ್ಕಾಗಿ ನೀವು ತಪ್ಪದೇ ಕೆಲವು ಸಲಹೆ ಪಾಲಿಸಿ. ಇದು ನಿಮಗೆ ಬೇಗ ರಿಸಲ್ಟ್ ಕೊಡುತ್ತೆ. ಅತ್ಯಂತ ಕಡಿಮೆ ಸಮಯದಲ್ಲಿ ನೀವು ಫಿಟ್ ಮತ್ತು ಸ್ಲಿಮ್ ಆಗಬಹುದು.
ತೂಕ ಕಳೆದುಕೊಳ್ಳಲು ಆಯುರ್ವೇದ ಸಲಹೆಗಳು
ತೂಕ ಕಳೆದುಕೊಳ್ಳಲು ಆಯುರ್ವೇದ ಸಲಹೆಗಳು ತುಂಬಾ ಪರಿಣಾಮಕಾರಿ ಎಂಬುದು ಆಯುರ್ವೇದ ತಜ್ಞರ ಮಾತು. ಆಯುರ್ವೇದ ಸಲಹೆಗಳು ವರ್ಷ ಪೂರ್ತಿ ಆರೋಗ್ಯವಾಗಿರಲು ನಿಮಗೆ ಸಹಾಯ ಮಾಡುತ್ತದೆ ಅಂತಾರೆ ಆಯುರ್ವೇದ ತಜ್ಞೆ ಡಾ.ವರಲಕ್ಷ್ಮಿ.
ಅವರು ಹೇಳಿದ ಕೆಲವು ಸಣ್ಣ ಆಯುರ್ವೇದ ಸಲಹೆಗಳನ್ನ ಫಾಲೋ ಮಾಡಿದ್ರೆ ಹೊಸ ವರ್ಷದ ತೂಕ ಇಳಿಕೆ ರೆಸ್ಯುಲ್ಯೂಷನ್ ಬೇಗ ಪೂರ್ಣವಾಗುತ್ತದೆ. ಇದು ತುಂಬಾ ಸುಲಭ ಮತ್ತು ಇದು ತುಂಬಾ ಪ್ರಯೋಜನಕಾರಿ ಆಗಿದೆ.
ಬೆಳಗ್ಗೆ ಏಳಲು ಮತ್ತು ರಾತ್ರಿ ಮಲಗಲು ಸರಿಯಾದ ಸಮಯ ನಿಗದಿ ಮಾಡಿ
ತೂಕ ಇಳಿಕೆಗೆ ದೇಹದಲ್ಲಿ ಜೀರ್ಣಕ್ರಿಯೆ ಸರಿಯಾಗಿರುವುದು ಮುಖ್ಯ. ಅದಕ್ಕಾಗಿ ನೀವು ಬೆಳಗ್ಗೆ ಬೇಗ ಏಳಬೇಕು. ದೇಹಕ್ಕೆ ಸರಿಯಾದ ಪೋಷಣೆ ಸಿಗಲು, ಚಯಾಪಚಯ ಮತ್ತು ಜೈವಿಕ ಕ್ರಿಯೆಗೆ ಸೂರ್ಯನ ಬೆಳಕು ಬೇಕು. ವಿಟಮಿನ್ ಡಿ ಪಡೆಯಲು ಬೆಳಗ್ಗೆ ಬೇಗ ಏಳುವುದನ್ನು ರೂಢಿಸಿಕೊಳ್ಳಿ.
ಇದು ನಿಮ್ಮ ತೂಕ ನಷ್ಟದ ಮೊದಲ ಹೆಜ್ಜೆಯಾಗಿದೆ. ಬೆಳಗಿನ ಒಂಭತ್ತು ಗಂಟೆಯೊಳಗೆ ಸೂರ್ಯನ ಬಿಸಿಲು ಮೈಗೆ ತಾಗಿದ್ರೆ ಸಾಕಷ್ಟು ವಿಟಮಿನ್ ಡಿ ಸಿಗುತ್ತದೆ. ಈ ಸಣ್ಣ ಅಭ್ಯಾಸವು ನಿಮ್ಮ ಆರೋಗ್ಯ ಮತ್ತು ಜೀವನ ಬದಲಾಯಿಸುತ್ತದೆ.
ನೀವೇ ಫ್ರೆಶ್ ಆಗಿ ಆಹಾರ ಮಾಡಿ ಸೇವಿಸಿ
ಅಡುಗೆ ಮಾಡುವುದು ಬೇಜಾರಿನ ಸಂಗತಿಯಲ್ಲ. ಆಹಾರವನ್ನು ನೀವೇ ಕಾಳಜಿಯಿಂದ ತಯಾರಿಸಿ. ನಿಮಗೆ ಬೇಕಾದ, ಇಷ್ಟದ ಪದಾರ್ಥ ಸೇವನೆ ಮಾಡಿ. ಇದು ದೇಹದ ಬಗ್ಗೆ ಕಾಳಜಿ ವಹಿಸಲು ಇದು ಅತ್ಯುತ್ತಮ ಮಾರ್ಗ. ನೀವೆ ಆಹಾರ ಬೇಯಿಸಿ ತಿನ್ನುವುದು ದೇಹಕ್ಕೆ ಪೌಷ್ಟಿಕಾಂಶ ನೀಡುತ್ತದೆ. ಒತ್ತಡ ನಿವಾರಿಸುತ್ತದೆ.
ಇಂದ್ರಿಯಗಳ ಆರೋಗ್ಯ ಕಾಪಾಡಿ
ದೇಹದ ಐದು ಇಂದ್ರಿಯಗಳಾದ ಕಣ್ಣು, ಕಿವಿ, ಮೂಗು, ಚರ್ಮ ಮತ್ತು ನಾಲಿಗೆಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಕಿವಿಗೆ ಎಣ್ಣೆ ಹಾಕುವುದು, ಚರ್ಮ ಒಣಗದಂತೆ ಪೋಷಿಸುವುದು, ಕಣ್ಣಿನ ಆರೋಗ್ಯ ಕಾಪಾಡುವುದು, ನಾಲಿಗೆ ಸ್ವಚ್ಛ ಮಾಡುವುದು, ಮೂಗನ್ನು ಸ್ವಚ್ಛಗೊಳಿಸುವುದು ಮುಖ್ಯವಾಗಿ ಮಾಡಿ. ಇದು ನಿಮ್ಮನ್ನು ಆರೋಗ್ಯವಾಗಿರಿಸುತ್ತದೆ.
ಇದನ್ನೂ ಓದಿ: ಗರ್ಭಾವಸ್ಥೆಯಲ್ಲಿ ಮಗುವಿನ ಆರೋಗ್ಯ ಕಾಪಾಡಲು ಇಷ್ಟು ಟಿಪ್ಸ್ ಫಾಲೋ ಮಾಡಿ ಸಾಕು
ದೇಹದ ಮಾತು ಕೇಳಿ
ಆಯುರ್ವೇದ ವೈದ್ಯರ ಪ್ರಕಾರ, ದೇಹ ತುಂಬಾ ಬುದ್ಧಿವಂತವಾಗಿದ್ದು, ಯಾವಾಗ ಏನು ಮಾಡ್ಬೇಕು, ಏನು ಮಾಡ್ಬಾರದು ಎಂದು ಹೇಳುತ್ತದೆ. ಅದನ್ನು ಆಲಿಸಿ, ಪಾಲಿಸಿ. ಸಮಯಕ್ಕೆ ಸರಿಯಾಗಿ ಊಟ ಮಾಡಿ. ಸಮಯಕ್ಕೆ ಸರಿಯಾಗಿ ಹೊಟ್ಟೆ ಕ್ಲೀನ್ ಮಾಡಿ. ಇದು ತೂಕ ನಷ್ಟಕ್ಕೆ ಸಹಕಾರಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ