ಸ್ನಾನ ಮಾಡುವ ಮೊದಲು ಈ ವಿಷಯ ನಿಮಗೆ ತಿಳಿದಿರಲೇಬೇಕು

ಈ ಮಿಶ್ರಣವನ್ನು ತಯಾರಿಸಲು ಹೀಗೆ ಮಾಡಿ. ಅರ್ಧ ಬಟ್ಟಲಿನಲ್ಲಿ ಹಾಲನ್ನು ಹಾಗೂ ಅದಕ್ಕೆ ಎರಡು ದೊಡ್ಡ ಚಮಚ ಕಡಲೆ ಹಿಟ್ಟು ಚೆನ್ನಾಗಿ ಮಿಶ್ರಣ ಮಾಡಿ. ಈ ಪೇಸ್ಟ್​ನ್ನು ಇಡೀ ದೇಹದ ಮೇಲೆ ಹಚ್ಚಿಕೊಳ್ಳಿ

zahir | news18-kannada
Updated:August 2, 2019, 6:31 PM IST
ಸ್ನಾನ ಮಾಡುವ ಮೊದಲು ಈ ವಿಷಯ ನಿಮಗೆ ತಿಳಿದಿರಲೇಬೇಕು
.
  • Share this:
ದಿನನಿತ್ಯ ಸ್ನಾನ ಮಾಡುವುದರಿಂದ ದೇಹವು ಸ್ವಚ್ಛವಾಗಿರುವುದಲ್ಲದೆ, ಮನಸ್ಸು ಚೈತನ್ಯತೆಯಿಂದ ಕೂಡಿರುತ್ತದೆ. ಹಾಗೆಯೇ ಚರ್ಮವು ಆರೋಗ್ಯಕರವಾಗಿರುತ್ತದೆ. ಇದರಿಂದ ಅನಾರೋಗ್ಯದ ಸಮಸ್ಯೆಗಳು ಕೂಡ ದೂರವಾಗುತ್ತವೆ. ಆದರೆ ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಸ್ನಾನಕ್ಕಾಗಿ ಹಲವು ಉತ್ಪನ್ನಗಳು ಲಭ್ಯವಿದೆ. ಇವುಗಳನ್ನು ಬಳಸುವ ಮುನ್ನ ಎಚ್ಚರವಿರಲಿ. ಏಕೆಂದರೆ ನಿಮ್ಮ ಚರ್ಮದ ಸಮಸ್ಯೆಗೆ ಇಂತಹ ರಾಸಾಯನಿಕಯುಕ್ತ ಉತ್ಪನ್ನಗಳೇ ಕಾರಣವಾಗಬಹುದು.

ಸಾಮಾನ್ಯವಾಗಿ ಸೌಂದರ್ಯ ಮತ್ತು ತ್ವಚ್ಛೆಯ ತಾಜಾತನವನ್ನು ಕಾಪಾಡಿಕೊಳ್ಳುವಂತಹ ಜಾಹೀರಾತಿನೊಂದಿಗೆ ಮಾರುಕಟ್ಟೆಗೆ ಬರುವ ಇಂತಹ ಉತ್ಪನ್ನಗಳಿಗೆ ಮಾರು ಹೋಗುವವರೇ ಹೆಚ್ಚು. ಆದರೆ ನೆನಪಿಟ್ಟುಕೊಳ್ಳಿ, ನಿಮ್ಮ ಅಡುಗೆಮನೆಯಲ್ಲಿರುವ ಕೆಲವು ಉತ್ಪನ್ನಗಳನ್ನು ಬಳಸಿ ಸ್ನಾನ ಮಾಡುವುದರಿಂದ ಸಹ ನಿಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳಬಹುದು. ಅದು ಕೂಡ ಅತ್ಯಂತ ಸುಲಭವಾಗಿ ಎಂದರೆ ಒಪ್ಪಲೇಬೇಕು.

ಮಾರುಕಟ್ಟೆಯಲ್ಲಿ ಲಭ್ಯವಿರುವ ಕೆಮಿಕಲ್​ ಸಾಬೂನುಗಳ ಅತಿಯಾದ ಬಳಕೆ ನಿಮ್ಮ ಚರ್ಮವು ಸುಕ್ಕುಗಟ್ಟುವಂತೆ ಮಾಡುತ್ತದೆ. ಇದರಿಂದ ಪಾರಾಗಲು ನೀವು ವಾರಕ್ಕೆ ಒಮ್ಮೆಯಾದರು ಕಡಲೆ ಹಿಟ್ಟು ಮತ್ತು ಹಾಲನ್ನು ಮಿಶ್ರಣ ಮಾಡಿ ಚರ್ಮದ ಮೇಲೆ ಹಚ್ಚಬೇಕು.

* ಈ ಮಿಶ್ರಣವನ್ನು ತಯಾರಿಸಲು ಹೀಗೆ ಮಾಡಿ. ಅರ್ಧ ಬಟ್ಟಲಿನಲ್ಲಿ ಹಾಲನ್ನು ಹಾಗೂ ಅದಕ್ಕೆ ಎರಡು ದೊಡ್ಡ ಚಮಚ ಕಡಲೆ ಹಿಟ್ಟು ಚೆನ್ನಾಗಿ ಮಿಶ್ರಣ ಮಾಡಿ. ಈ ಪೇಸ್ಟ್​ನ್ನು ಇಡೀ ದೇಹದ ಮೇಲೆ ಹಚ್ಚಿಕೊಳ್ಳಿ. ಇದು ಒಣಗುತ್ತಿದ್ದಂತೆ ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿ. ಇದರಿಂದ ದೇಹದ ಕೊಳೆ ಹೋಗುವುದಲ್ಲದೆ, ಚರ್ಮದ ಕಾಂತಿ ಹೆಚ್ಚುತ್ತದೆ.

*  ಸ್ನಾನ ಮಾಡಲು ಉಗುರು ಬೆಚ್ಚಗಿನ ನೀರನ್ನು ಬಳಸಿ. ಈ ನೀರಿನಲ್ಲಿ ಉಪ್ಪು ಮತ್ತು ಆಲಮ್ ಮಿಶ್ರ ಮಾಡಿ. ಈ ನೀರಿನಿಂದ ಸ್ನಾನ ಮಾಡುವುದರಿಂದ ಆಯಾಸ ಕಡಿಮೆಯಾಗುತ್ತದೆ. ಹಾಗೆಯೇ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ. ಪ್ರತಿನಿತ್ಯ ಈ ರೀತಿಯಾಗಿ ಸ್ನಾನ ಮಾಡಿದರೆ ಸ್ನಾಯುಗಳು ಸಡಿಲಗೊಳ್ಳುತ್ತವೆ.

* ಸ್ನಾನದ ನೀರಿನಲ್ಲಿ 5 ಚಮಚ ಅಡುಗೆ ಸೋಡಾ ಹಾಕಿ. ಈ ನೀರಿನಿಂದ ಸ್ನಾನ ಮಾಡುವುದರಿಂದ ದೇಹದ ವಿಷಕಾರಿ ಅಂಶಗಳು ಹೊರಬರುತ್ತವೆ. ಇದರಿಂದ ಅನಾರೋಗ್ಯದ ಸಮಸ್ಯೆ ಕಡಿಮೆಯಾಗುತ್ತವೆ.

* ಸ್ನಾನಕ್ಕೂ ಮುನ್ನ ಬಿಸಿನೀರಿನಲ್ಲಿ 15-20 ಬೇವಿನ ಎಲೆಗಳನ್ನು ಹಾಕಿ ಚೆನ್ನಾಗಿ ಕುದಿಸಿ. ಈ ನೀರು ತಣ್ಣಗಾದ ಬಳಿಕ ಸಾಮಾನ್ಯ ನೀರಿನೊಂದಿಗೆ ಬೆರೆಸಿ ಸ್ನಾನ ಮಾಡಿ. ಇದು ಚರ್ಮದಲ್ಲಿ ಸೋಂಕಿನ ಸಾಧ್ಯತೆಯನ್ನು ದೂರು ಮಾಡುತ್ತದೆ. ಹಾಗೆಯೇ ಪ್ರತಿನಿತ್ಯ ಇದೇ ಮಾದರಿಯಲ್ಲಿ ಸ್ನಾನ ಮಾಡುವುದರಿಂದ ತ್ವಚ್ಛೆಯು ಕಾಂತಿಯುತವಾಗುತ್ತದೆ.
First published: August 2, 2019, 6:31 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading