• Home
 • »
 • News
 • »
 • lifestyle
 • »
 • Liver Health: ಬೆಳಗಿನ ತಿಂಡಿಗೆ ಓಟ್ಸ್, ಕಾರ್ನ್ ಫ್ಲೆಕ್ಸ್‌ ಸೇವಿಸ್ತೀರಾ? ಹಾಗಿದ್ರೆ ನಿಮ್ಮ ಲಿವರ್‌ಗೆ ಪ್ರಾಬ್ಲಮ್ ಆಗಬಹುದು ಹುಷಾರ್!

Liver Health: ಬೆಳಗಿನ ತಿಂಡಿಗೆ ಓಟ್ಸ್, ಕಾರ್ನ್ ಫ್ಲೆಕ್ಸ್‌ ಸೇವಿಸ್ತೀರಾ? ಹಾಗಿದ್ರೆ ನಿಮ್ಮ ಲಿವರ್‌ಗೆ ಪ್ರಾಬ್ಲಮ್ ಆಗಬಹುದು ಹುಷಾರ್!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಓಟ್ಸ್ ಮತ್ತು ಕಾರ್ನ್ ಫ್ಲೆಕ್ಸ್ ತಿಂಡಿ ಅನೇಕರಿಗೆ ಇಷ್ಟವಾಗುತ್ತದೆ. ಆದರೆ ಓಟ್ಸ್ ಮತ್ತು ಕಾರ್ನ್ ಫ್ಲೆಕ್ಸ್ ಸೇವನೆಯಿಂದ ಯಕೃತ್‌ಗೆ ಹಾನಿಯಾಗಿರುವ ಪ್ರಕರಣ ಕಂಡು ಬಂದಿದೆ. ಹೀಗಾಗಿ ಈ ಬಗ್ಗೆ ತಜ್ಞರು ಎಚ್ಚರಿಸಿದ್ದಾರೆ.

 • Share this:

  ಬೆಳಗಿನ ಉಪಹಾರದ (Morning Breakfast) ಈ ತಿಂಡಿ ನಿಮ್ಮ ಲಿವರ್ (Liver) ನ್ನು ಡ್ಯಾಮೇಜ್ (Damage) ಮಾಡುವ ಸಾಧ್ಯತೆ ಇದೆ. ಆರೋಗ್ಯ (Health) ತುಂಬಾನೆ ಮುಖ್ಯ. ಬೆಳಗ್ಗೆ ಶಾಲೆ, ಕಾಲೇಜು, ವೃತ್ತಿ, ಕೆಲಸ, ಆಫೀಸು ಹೀಗೆ ಹಲವು ಕೆಲಸಗಳಿಂದಾಗಿ ಜನರು ಧಾವಂತದಲ್ಲಿ ಕೆಲವೊಮ್ಮೆ ಬೆಳಗಿನ ಉಪಹಾರ ಸೇವನೆ ಮಾಡಲ್ಲ. ಇನ್ನು ಕೆಲವರು ತಡವಾಗಿ ತಿಂಡಿ ತಿನ್ನುತ್ತಾರೆ. ಇನ್ನು ಕೆಲವರು ತ್ವರಿತ ಆಹಾರಗಳ ಸೇವನೆ ಮಾಡ್ತಾರೆ. ಬೆಳಿಗ್ಗೆ ಎದ್ದಾಗ ತಿಂಡಿ ಮಾಡಲು ತೊಂದರೆ ಹೆಚ್ಚಾಗುತ್ತದೆ. ಹೆಚ್ಚಿನ ಜನರು ಕೆಲವು ತ್ವರಿತ ಆಹಾರ ಆಯ್ಕೆಗಳನ್ನು ಮನೆಯಲ್ಲಿ ಇರಿಸುತ್ತಾರೆ. ಇದು ಓಟ್ಸ್ ಮತ್ತು ಕಾರ್ನ್ ಫ್ಲೆಕ್ಸ್ ಧಾನ್ಯಗಳನ್ನು ಒಳಗೊಂಡಿದೆ. ವಿವಿಧ ಸುವಾಸನೆ ಮತ್ತು ಗಾತ್ರಗಳಲ್ಲಿ ಲಭ್ಯ ಇದೆ.


  ಅತಿಯಾದ ಓಟ್ಸ್ ಮತ್ತು ಕಾರ್ನ್ ಫ್ಲೆಕ್ಸ್ ಸೇವನೆ ಹಾನಿಕರ


  ಓಟ್ಸ್ ಮತ್ತು ಕಾರ್ನ್ ಫ್ಲೆಕ್ಸ್ ತ್ವರಿತ ತಿಂಡಿ ಅನೇಕರಿಗೆ ಇಷ್ಟವಾಗುತ್ತದೆ. ಆದರೆ ಇತ್ತೀಚಿಗೆ ಓಟ್ಸ್ ಮತ್ತು ಕಾರ್ನ್ ಫ್ಲೆಕ್ಸ್ ಸೇವನೆಯಿಂದ ಯಕೃತ್‌ ಗೆ ಹಾನಿಯಾಗಿರುವ ಪ್ರಕರಣ ಕಂಡು ಬಂದಿದೆ. ಇಂಗ್ಲೆಂಡಿನ ಅಪ್ಪರ್ ಬೀಡಿಂಗ್‌ನ ಕ್ರಿಸ್ ಕಿರ್ಕ್ ಕೆಲಸ ಮಾಡುವ ವ್ಯಕ್ತಿ, ಆತುರವಾಗಿ ಬೆಳಗಿನ ಉಪಾಹಾರ ಮಾತ್ರವಲ್ಲದೆ ಮಧ್ಯಾಹ್ನದ ಊಟಕ್ಕೂ ಹೆಚ್ಚಾಗಿ ಓಟ್ಸ್ ಮತ್ತು ಕಾರ್ನ್ ಫ್ಲೆಕ್ಸ್ ಸೇವಿಸುತ್ತಿದ್ದರು.


  ಎಕ್ಸ್‌ಪ್ರೆಸ್ ಯುಕೆ ಪ್ರಕಾರ, ಈ ತ್ವರಿತ ಉಪಹಾರ ಆಹಾರವು ಕ್ರಿಸ್ ಕಿರ್ಕ್‌ಗೆ ತಿನ್ನಲು ತುಂಬಾ ದುಬಾರಿ.  ಓಟ್ಸ್ ಮತ್ತು ಕಾರ್ನ್ ಫ್ಲೆಕ್ಸ್ ಸೇವನೆ ಕೆಲವೇ ತಿಂಗಳುಗಳಲ್ಲಿ ಅವರ ಯಕೃತ್ತನ್ನು ಹದಗೆಡಿಸಿದೆ. ಕ್ರಿಸ್ ತನ್ನ ಸಾಮಾನ್ಯ ರಕ್ತ ಪರೀಕ್ಷೆಯಿಂದ ಈ ವಿಷಯ ತಿಳಿದುಕೊಂಡಿದ್ದಾರೆ.


  ಇದನ್ನೂ ಓದಿ: ಅರಿಶಿನ ಫೇಸ್​ಪ್ಯಾಕ್​ ಹಾಕಿದ್ರೆ ಸಾಕು ತ್ವಚೆ ಒಣಗುವ ಸಮಸ್ಯೆಗೆ ಪರಿಹಾರ ಸಿಗುತ್ತೆ


  ಪ್ರತಿದಿನ ಎರಡು ಬಟ್ಟಲು ಓಟ್ಸ್ ಮತ್ತು ಕಾರ್ನ್ ಫ್ಲೆಕ್ಸ್ ತಿಂದಿದ್ದೆ ಇದಕ್ಕೆ ಕಾರಣವಂತೆ !


  ಕ್ರಿಸ್, ಪ್ರತಿದಿನ ಸುಮಾರು ಎರಡು ಬೌಲ್ ಕಾರ್ನ್‌ ಫ್ಲೆಕ್ಸ್ ಗಳನ್ನು ತಿನ್ನುತ್ತಿದ್ದರು. ಹೀಗಾಗಿ ಅವರ ದೇಹದಲ್ಲಿ ಕಬ್ಬಿಣದ ಅಂಶ ವಿಪರೀತವಾಗಿತ್ತು. ಕೈಕಾಲುಗಳಲ್ಲಿ ತುರಿಕೆ, ನಿದ್ರಾಹೀನತೆ, ಕಡಿಮೆ ಶಕ್ತಿ ಲಕ್ಷಣ ಹೊಂದಿದ್ದರು. ಅದರ ನಂತರ ಅವರು ಮುಂದಿನ ಆರು ತಿಂಗಳಲ್ಲಿ ಯಕೃತ್ತಿನ ವೈಫಲ್ಯಕ್ಕೆ ತುತ್ತಾಗಿದ್ದಾರೆ.


  ಯಕೃತ್ತಿನ ಹಾನಿಯ ನಿಜವಾದ ಕಾರಣ ಬೇಗ ಗೊತ್ತಾಗಿರಲಿಲ್ಲ


  ಕ್ರಿಸ್ ತಾವು ಸ್ಥೂಲಕಾಯ ಹೊಂದಿದ್ದಾಗಿ ಹೇಳಿದ್ದಾರೆ. ಹಾಗಾಗಿ ತಮ್ಮ ಯಕೃತ್ತಿನ ಹಾನಿ ಸಮಸ್ಯೆಗೆ ಕಾರಣಗಳನ್ನು ಅರ್ಥ ಮಾಡಿಕೊಳ್ಳದೆ ಹೋಗಿದ್ದೆ. ಸ್ಥೂಲಕಾಯದ ಪರಿಣಾಮವಾಗಿ ಯಕೃತ್ತಿಗೆ ಹಾನಿ ಆಗಿತ್ತು ಎಂದು ಅರ್ಥ ಮಾಡಿಕೊಂಡಿದ್ದೆ. ಆದರೆ ವಾಸ್ತವದಲ್ಲಿ ಸ್ಥೂಲಕಾಯದ ಜನರಲ್ಲಿ ಲಿವರ್ ಸಿರೋಸಿಸ್ ಪ್ರಕರಣಗಳು ಹೆಚ್ಚು. ಹಾಗಾಗಿ ಹೆಚ್ಚು ತನಿಖೆ ಮಾಡಿರಲಿಲ್ಲ ಎಂದಿದ್ದಾರೆ.


  ನಂತರ ವ್ಯಾಪಕ ಪರೀಕ್ಷೆಯ ನಂತರ, ಅವರ ಫೆರಿಟಿನ್ ಮಟ್ಟ ಹೆಚ್ಚಿದ್ದು ಗೊತ್ತಾಯಿತು. ಫೆರಿಟಿನ್ ನಿಮ್ಮ ಜೀವಕೋಶಗಳಲ್ಲಿ ಕಬ್ಬಿಣವನ್ನು ಸಂಗ್ರಹಿಸುವ ಪ್ರೋಟೀನ್ ಆಗಿದೆ. ಫೆರಿಟಿನ್ ರಕ್ತ ಪರೀಕ್ಷೆಯು ನೀವು ಹೆಚ್ಚು ಅಥವಾ ಕಡಿಮೆ ಕಬ್ಬಿಣವನ್ನು ಪಡೆಯುತ್ತೀರಾ ಎಂದು ಹೇಳುತ್ತದೆ.


  ಈ ಚಿಕಿತ್ಸೆಯಿಂದ ಆರೋಗ್ಯದಲ್ಲಿ ಸುಧಾರಣೆ


  ಹೆಚ್ಚು ಕಾರ್ನ್‌ಫ್ಲೇಕ್‌ ಗಳನ್ನು ತಿಂದಿದ್ದು, ಕ್ರಿಸ್ ತನ್ನ ಯಕೃತ್ತಿನಲ್ಲಿ ಹೆಚ್ಚುವರಿ ಕಬ್ಬಿಣ ಸಂಗ್ರಹಿಸಲು ಕಾರಣವಾಗಿತ್ತು. ಇದು ಯಕೃತ್ತಿನ ಜೀವಕೋಶಗಳನ್ನು ವಿಷ ಆಗಿಸಿತ್ತು. ಕ್ರಿಸ್ ಅವರ ವೈದ್ಯರು ಕಬ್ಬಿಣದ ಭರಿತ ಆಹಾರ ತೆಗೆದು ಹಾಕಲು ಸಲಹೆ ನೀಡಿದರು. ನಂತರ ದೇಹದಲ್ಲಿ ಯಕೃತ್ತಿನ ಹಾನಿಯ ಲಕ್ಷಣಗಳಲ್ಲಿ ಭಾರಿ ಕಡಿತ ಕಂಡು ಬಂದಿದೆ. ಫೆರಿಟಿನ್ ಮಟ್ಟ ಸಾಮಾನ್ಯವಾಗಿದೆ ಎಂದಿದ್ದಾರೆ.


  ಓಟ್ಸ್ ಮತ್ತು ಕಾರ್ನ್ ಫ್ಲೇಕ್ಸ್‌ ನಿಂದ ದೇಹದಲ್ಲಿ ಕಬ್ಬಿಣದ ಮಿತಿ ಮೀರಿದ ಪ್ರಮಾಣ


  ಒಬ್ಬ ವ್ಯಕ್ತಿಯು ಎಷ್ಟು ಕಬ್ಬಿಣ ಸೇವಿಸುತ್ತಾನೆ ಎಂಬುದರ ಮೇಲೆ ಕಬ್ಬಿಣದ ವಿಷತ್ವವು ಅವಲಂಬಿತವಾಗಿದೆ ಎಂದು ಡಾ ಬೆನ್ಮಿರಾ ಹೇಳಿದ್ದಾರೆ.


  ಇದನ್ನೂ ಓದಿ: ಕ್ಯಾನ್ಸರ್ ಅಪಾಯ ಕಡಿಮೆ ಮಾಡಲು ಮತ್ತು ಕಣ್ಣುಗಳ ಆರೋಗ್ಯಕ್ಕೆ ಈ ಹಣ್ಣು ಪ್ರಯೋಜನಕಾರಿ


  ಸರಿಯಾದ ಧಾನ್ಯ ಹೇಗೆ ಆರಿಸುವುದು


  ಬಲವರ್ಧಿತ ಧಾನ್ಯಗಳ ತಿನ್ನುವುದು ಪೋಷಕಾಂಶಗಳ ಕೊರತೆ ತಡೆಯುತ್ತದೆ. ಅದರ ಲೇಬಲ್ ಅನ್ನು ಪರಿಶೀಲಿಸಿ ನಂತರ ಬಳಸಿ. ಧಾನ್ಯಗಳಲ್ಲಿ ಹೆಚ್ಚಿನ ಸಕ್ಕರೆ ಮತ್ತು ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ ಅಧಿಕವಾಗಿವೆ. ಕಡಿಮೆ ಸಕ್ಕರೆ ಮತ್ತು ನಾರಿನಂಶವಿರುವ ಧಾನ್ಯ ಆಯ್ಕೆ ಮಾಡಿ. ನಿಯಂತ್ರಿತ ಪ್ರಮಾಣದಲ್ಲಿ ಸೇವಿಸಿ.

  Published by:renukadariyannavar
  First published: