• Home
  • »
  • News
  • »
  • lifestyle
  • »
  • Morning Breakfast: ತೂಕ ನಷ್ಟಕ್ಕೆ ಬೆಳಗಿನ ತಿಂಡಿಗೆ ಓಟ್ಸ್ ಇಡ್ಲಿ ರೆಸಿಪಿ ಹೀಗಿದೆ!

Morning Breakfast: ತೂಕ ನಷ್ಟಕ್ಕೆ ಬೆಳಗಿನ ತಿಂಡಿಗೆ ಓಟ್ಸ್ ಇಡ್ಲಿ ರೆಸಿಪಿ ಹೀಗಿದೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಆರೋಗ್ಯಕರವಾಗಿ ತೂಕ ಇಳಿಸಲು ಡಯಟ್ ಸಹಾಯ ಮಾಡುತ್ತದೆ. ವ್ಯಾಯಾಮದ ಮೊದಲು ಉತ್ತಮ ಆಹಾರ ಸೇವನೆ ಮಾಡಬೇಕು. ಇಂದು ನಾವು ತೂಕ ನಷ್ಟ ಹಾಗೂ ಡಯಟ್ ಫಾಲೋ ಮಾಡುವವರು ಓಟ್ಸ್ ಇಡ್ಲಿಯನ್ನು ಆರೋಗ್ಯಕರ ರೀತಿಯಲ್ಲಿ ಹೇಗೆ ತಯಾರಿಸಿ ಸೇವನೆ ಮಾಡಬೇಕು ಎಂಬ ರೆಸಿಪಿ ಇಲ್ಲಿದೆ ನೋಡೋಣ.

  • Share this:

    ಇತ್ತೀಚಿನ ದಿನಗಳಲ್ಲಿ ಫಿಟ್ನೆಸ್ (Fitness) ಗಾಗಿ ಜನರು (People) ವ್ಯಾಯಾಮ ಮತ್ತು ಡಯಟ್ (Exercise And Diet) ನತ್ತ ಹೆಚ್ಚು ಕಾಳಜಿ ವಹಿಸುತ್ತಿದ್ದಾರೆ. ತಮ್ಮನ್ನು ಫಿಟ್ ಆಗಿಟ್ಟುಕೊಳ್ಳಲು ಬೆಳಗಿನ ತಿಂಡಿಗೆ (Morning Breakfast) ತುಂಬಾ ಜನರು ಪ್ರೊಟೀನ್ ಹಾಗೂ ಫೈಬರ್ ಸಮೃದ್ಧ ಆಹಾರ ಸೇವನೆ ಮಾಡ್ತಾರೆ. ಅದರಲ್ಲೂ ಓಟ್ಸ್ ರೆಸಿಪಿಗಳನ್ನು (Oats Recipes) ಹೆಚ್ಚು ಸೇವನೆ ಮಾಡ್ತಾರೆ. ಇದು ತೂಕ ಇಳಿಕೆ ಹಾಗೂ ಒಟ್ಟಾರೆ ಆರೋಗ್ಯಕ್ಕೆ ಉತ್ತಮ ಎಂಬ ನಂಬಿಕೆ ಇದೆ. ಹಾಗಾಗಿ ವ್ಯಾಯಾಯಮಕ್ಕೂ ಮೊದಲು ಮತ್ತು ನಂತರ ಹಾಗೂ ಬೆಳಗಿನ ತಿಂಡಿ, ಸ್ನ್ಯಾಕ್ಸ್ ಸಮಯದಲ್ಲೂ ಓಟ್ಸ್ ಸೇವನೆ ಮಾಡುವುದು ರೂಢಿಯಲ್ಲಿದೆ.


    ಬೆಳಗಿನ ತಿಂಡಿಗೆ ಓಟ್ಸ್ ಇಡ್ಲಿ ರೆಸಿಪಿ


    ಇಂದು ನಾವು ತೂಕ ನಷ್ಟ ಹಾಗೂ ಡಯಟ್ ಫಾಲೋ ಮಾಡುವವರು ಓಟ್ಸ್ ಇಡ್ಲಿಯನ್ನು ಆರೋಗ್ಯಕರ ರೀತಿಯಲ್ಲಿ ಹೇಗೆ ತಯಾರಿಸಿ ಸೇವನೆ ಮಾಡಬೇಕು ಎಂಬ ರೆಸಿಪಿ ಇಲ್ಲಿದೆ ನೋಡೋಣ.


    ವ್ಯಾಯಾಮದ ಜೊತೆಗೆ ಊಟ ಮತ್ತು ಡಯಟ್ ಕೂಡ ಅಗತ್ಯ. ಜಿಮ್‌ ಗೆ ಹೋಗಿ, ಚೆನ್ನಾಗಿ ವ್ಯಾಯಾಮ ಮಾಡಬಹುದು. ಇದು ನೀವು ಆರೋಗ್ಯಕರವಾಗಿ ತೂಕ ಇಳಿಸಲು ಸಹಾಯ ಮಾಡುತ್ತದೆ. ವ್ಯಾಯಾಮದ ಮೊದಲು ಉತ್ತಮ ಆಹಾರ ಸೇವನೆ ಮಾಡಬೇಕು.




    ಉತ್ತಮ ಶಕ್ತಿ ಹೊಂದಲು ಇದು ಸಹಾಯ ಮಾಡುತ್ತದೆ. ತೂಕ ಇಳಿಕೆಯ ಫಲಿತಾಂಶ ತ್ವರಿತವಾಗಿ ಪಡೆಯಬಹುದು. ಮತ್ತು ನಿಮ್ಮ ಆರೋಗ್ಯ ಮತ್ತು ಫಿಟ್‌ ನೆಸ್ ಗುರಿ ಸುಲಭವಾಗಿ ತಲುಪಬಹುದು.


    ವ್ಯಾಯಾಮ ಪೂರ್ವದಲ್ಲಿ ಓಟ್ಸ್ ಸೇವನೆ, ಫೈಬರ್ ಮತ್ತು ಇತರ ಪ್ರಯೋಜನಕಾರಿ ಪೋಷಕಾಂಶ ನೀಡುತ್ತದೆ. ಅತ್ಯಂತ ಟ್ರೆಂಡಿಂಗ್ ಆಹಾರಗಳಲ್ಲಿ ಒಂದಾಗಿದೆ. ಓಟ್ಸ್ ಕಾರ್ಬೋಹೈಡ್ರೇಟ್‌ ನಿಧಾನವಾಗಿ ಬಿಡುಗಡೆ ಮಾಡುತ್ತದೆ. ಶಕ್ತಿ ನೀಡುತ್ತದೆ.


    ಓಟ್ಸ್ ಇಡ್ಲಿ ಮಾಡುವ ವಿಧಾನ ಹೀಗಿದೆ..


    ಮೊದಲು ಗ್ರೈಂಡರ್ ಅಥವಾ ಬ್ಲೆಂಡರ್‌ನಲ್ಲಿ 1 ಕಪ್ ಓಟ್ಸ್ ಅಥವಾ ರೋಲ್ಡ್ ಓಟ್ಸ್ ಹಾಕಿ ಅದನ್ನು ನುಣ್ಣಗೆ ರುಬ್ಬಿಕೊಳ್ಳಿ . ನಂತರ ಸಣ್ಣ ಮತ್ತು ಮಧ್ಯಮ ಎರಡು ಕ್ಯಾರೆಟ್ ಸಿಪ್ಪೆ ತೆಗೆದು ತುರಿ ಮಾಡಿ.


    ಮಸಾಲೆಗೆ ಸಾಸಿವೆ, ಜೀರಿಗೆ, ಚನಾ ದಾಲ್, ಪುಡಿಮಾಡಿದ ಕರಿಮೆಣಸು, ಕತ್ತರಿಸಿದ ಕೊತ್ತಂಬರಿ ಸೊಪ್ಪು, ಸಣ್ಣದಾಗಿ ಕೊಚ್ಚಿದ ಕರಿಬೇವಿನ ಎಲೆಗಳು, ಸಣ್ಣದಾಗಿ ಕೊಚ್ಚಿದ ಶುಂಠಿ, ಕತ್ತರಿಸಿದ ಹಸಿರು ಮೆಣಸಿನಕಾಯಿಗಳು, ಕತ್ತರಿಸಿದ 8 ರಿಂದ 10 ಗೋಡಂಬಿ ತೆಗೆದುಕೊಳ್ಳಿ.


    ಸಾಂದರ್ಭಿಕ ಚಿತ್ರ


    ಈಗ ಪ್ಯಾನ್ ಬಿಸಿ ಮಾಡಿ ಸ್ವಲ್ಪ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ, ಜೀರಿಗೆ, ಸಾಸಿವೆ, ಚನಾ ದಾಲ್ ಸೇರಿಸಿ, ಬೇಯಿಸಿ. ಈಗ 1 ಟೀಸ್ಪೂನ್ ಕತ್ತರಿಸಿದ ಹಸಿರು ಮೆಣಸಿನಕಾಯಿ, ಕತ್ತರಿಸಿದ ಶುಂಠಿ, ಸಣ್ಣದಾಗಿ ಕೊಚ್ಚಿದ ಕರಿಬೇವಿನ ಎಲೆಗಳು, ಗೋಡಂಬಿ, ಕರಿಮೆಣಸು, ಚಿಟಿಕೆ ಇಂಗು ಸೇರಿಸಿ, ಫ್ರೈ ಮಾಡಿ. ಮೂರು ನಿಮಿಷ ಬಿಟ್ಟು ತೆಗೆದಿರಿಸಿ.


    ಈಗ ಈ ಮಿಶ್ರಣಕ್ಕೆ ರವಾ ಹಾಕಿ. ಕಡಿಮೆ ಉರಿಯಲ್ಲಿ ಬೆರೆಸಿ ಫ್ರೈ ಮಾಡಿ. ನಂತರ ರುಬ್ಬಿದ್ದ ಓಟ್ಸ್ ಹಿಟ್ಟು ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ. ನಂತರ, ಹಿಟ್ಟಿನ ಮಿಶ್ರಣವನ್ನು ಮಿಕ್ಸಿಂಗ್ ಬೌಲ್‌ ಗೆ ಹಾಕಿ ತಣ್ಣಗಾಗಲು ಬಿಡಿ.


    ಕ್ಯಾರೆಟ್ ತುರಿ, ಕೊತ್ತಂಬರಿ ಸೊಪ್ಪನ್ನು, ಅವರೆಕಾಳು, ಫ್ರೆಂಚ್ ಬೀನ್ಸ್ ಸೇರಿಸಿ. ಮಿಕ್ಸ್ ಮಾಡಿ. ನಂತರ ಹಿಟ್ಟಿಗೆ ಮೊಸರು ಸೇರಿಸಿ. ನೀರು ಸೇರಿಸಿ. ಚೆನ್ನಾಗಿ ಬೆರೆಸಿ. ಈಗ ಇಡ್ಲಿ ಹಿಟ್ಟು ರೆಡಿಯಾಗಿದೆ.


    ಇದನ್ನೂ ಓದಿ: ಚಳಿಗಾಲದಲ್ಲಿ ಈ ಪಾನೀಯಗಳನ್ನು ಕುಡಿದ್ರೆ ಬೊಜ್ಜು ಕರಗುತ್ತೆ


    ಹದಿನೈದು ನಿಮಿಷದ ನಂತರ ಿಡ್ಲಿ ಸೆಟ್ ತೆಗೆದುಕೊಂಡು, ಎಣ್ಣೆ ಸವರಿ, ಹಿಟ್ಟು ಹಾಗಿ 12 ನಿಮಿಷ ಬೇಯಿಸಿ, ತೆಗೆಯಿರಿ. ನಿಮ್ಮಿಷ್ಟದ ಚಟ್ನಿ ಜೊತೆ ಸವಿಯಿರಿ.

    Published by:renukadariyannavar
    First published: