• Home
  • »
  • News
  • »
  • lifestyle
  • »
  • Morning Breakfast: ಚಳಿಗಾಲದಲ್ಲಿ ಬೆಳಗಿನ ತಿಂಡಿಗೆ ವೆರೈಟಿ ಪರಾಠಾ ರೆಸಿಪಿ ಹೀಗೆ ಮಾಡಿ, ಸವಿಯಿರಿ!

Morning Breakfast: ಚಳಿಗಾಲದಲ್ಲಿ ಬೆಳಗಿನ ತಿಂಡಿಗೆ ವೆರೈಟಿ ಪರಾಠಾ ರೆಸಿಪಿ ಹೀಗೆ ಮಾಡಿ, ಸವಿಯಿರಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಚಳಿಗಾಲದಲ್ಲಿ ಬಿಸಿ ಬಿಸಿ ಪರಾಠಾ ರುಚಿ ಹಾಗೂ ವಿಶೇಷ ಅನುಭವ ನೀಡುತ್ತದೆ. ಬೆಳಗಿನ ಉಪಾಹಾರದಿಂದ ಮಧ್ಯಾಹ್ನದ ಊಟ ಹಾಗೂ ರಾತ್ರಿ ಊಟಕ್ಕೂ ನೀವು ಪರಾಠಾ ಸೇವನೆ ಮಾಡಬಹುದು. ಇದರಲ್ಲಿ ಸ್ಟಫ್ಡ್ ಸೇರಿದಂತೆ ವೆರೈಟಿ ಪರಾಠಾಗಳಿವೆ. ಇಂದು ನಾವು ಎಲೆಕೋಸು ಪರಾಠ ಮತ್ತು ಅಜ್ವೈನ್ ಪರಾಠಾ ಮಾಡುವುದು ಹೇಗೆ ಅಂತಾ ನೋಡೋಣ.

ಮುಂದೆ ಓದಿ ...
  • Share this:

    ಬೆಳಗಿನ ತಿಂಡಿಗೆ (Morning Breakfast) ನೀವು ವಿವಿಧ ತರಕಾರಿಗಳ (Vegetables) ಪರಾಠಾ (Paratha) ಮಾಡಿ ಸೇವನೆ ಮಾಡಬಹುದು. ಇದು ನಿಮಗೆ ದೀರ್ಘಕಾಲ ಶಕ್ತಿ (Energy) ನೀಡುತ್ತದೆ. ದೀರ್ಘಕಾಲ ಹೊಟ್ಟೆ ತುಂಬಿಸಿಡುತ್ತದೆ. ಜೊತೆಗೆ ಆರೋಗ್ಯಕರ (Healthy) ಆಯ್ಕೆಯೂ ಆಗಿದೆ. ದಿನವೂ ನೀವು ವಿವಿಧ ತರಕಾರಿಗಳ ಪರಾಠಾ ಮಾಡಿ ಸೇವನೆ ಮಾಡಬಹುದು. ಅದರಲ್ಲೂ ಬೆಳಗಿನ ತಿಂಡಿಗೆ ತರಕಾರಿ ಪರಾಠಾ ಸೇವನೆ ಮಾಡುವುದು ಆರೋಗ್ಯ ವೃದ್ಧಿಸುತ್ತದೆ. ಚಳಿಗಾಲದಲ್ಲಿ ಬಿಸಿ ಬಿಸಿ ಪರಾಠಾ ರುಚಿ ಹಾಗೂ ವಿಶೇಷ ಅನುಭವ ನೀಡುತ್ತದೆ. ಬೆಳಗಿನ ಉಪಾಹಾರದಿಂದ ಮಧ್ಯಾಹ್ನದ ಊಟ ಹಾಗೂ ರಾತ್ರಿ ಊಟಕ್ಕೂ ನೀವು ಪರಾಠಾ ಸೇವನೆ ಮಾಡಬಹುದು. ಇದರಲ್ಲಿ ಸ್ಟಫ್ಡ್ ಸೇರಿದಂತೆ ವೆರೈಟಿ ಪರಾಠಾಗಳಿವೆ.


    ಬೆಳಗಿನ ತಿಂಡಿಗೆ ವೆರೈಟಿ ತರಕಾರಿಗಳ ಪರಾಠಾ ಪಾಕವಿಧಾನ


    ನೀವು ಮನೆಯಲ್ಲಿ ಆಲೂಗಡ್ಡೆ, ಈರುಳ್ಳಿ ಪರಾಠಾ ಸೇವನೆ ಮಾಡಿರಬಹುದು. ಇಂದು ನಾವು ಎಲೆಕೋಸು ಪರಾಠ ಮತ್ತು ಅಜ್ವೈನ್ ಪರಾಠಾ ಮಾಡುವುದು ಹೇಗೆ ಅಂತಾ ನೋಡೋಣ. ಈ ಪರಾಠಾವನ್ನು ನೀವು ಮೊಸರು, ಬೆಣ್ಣೆ ಮತ್ತು ಉಪ್ಪಿನಕಾಯಿ, ನಿಮ್ಮಿಷ್ಟದ ಚಟ್ನಿ ಜೊತೆ ಸೇವನೆ ಮಾಡಬಹುದು.


    ನಿಮಗೆ ದಿನವೂ ಒಂದೇ ರೀತಿಯ ಪರಾಠಾ ಅಥವಾ ಖಾದ್ಯ ಸೇವನೆ ಮಾಡಿ ಬೇಸರವಾಗಿದ್ದರೆ ಈ ಎಲೆಕೋಸು ಪರಾಠ ಮತ್ತು ಅಜ್ವೈನ್ ಪರಾಠಾ ಮಾಡಿ ಸೇವನೆ ಮಾಡಿ. ಹಾಗಾದ್ರೆ ಬನ್ನಿ, ಇವುಗಳ ಪಾಕವಿಧಾನ ಹೇಗಿದೆ ನೋಡೋಣ.




    ಅಜ್ವೈನ್ ಪರಾಠಾ ರೆಸಿಪಿ


    ಬೇಕಾಗುವ ಪದಾರ್ಥಗಳು


    ಬೇಯಿಸಿದ ಮೂರು ಅರುಮ್, ಸಣ್ಣದಾಗಿ ಕೊಚ್ಚಿದ ಈರುಳ್ಳಿ ಅರ್ಧ ಬೌಲ್, ಎರಡು ಚಮಚ ಅಜ್ವೈನ್, ಒಂದು ಟೀಸ್ಪೂನ್ ಕೊತ್ತಂಬರಿ ಪುಡಿ, ಒಂದು ಟೀಚಮಚ ಗರಂ ಮಸಾಲಾ, ಒಂದು ಟೀಚಮಚ ಕೆಂಪು ಮೆಣಸಿನಕಾಯಿ ಪುಡಿ, ಕಸ್ತೂರಿ ಮೇತಿ ಒಂದು ಚಮಚ, ಸಣ್ಣದಾಗಿ ಕೊಚ್ಚಿದ ಒಂದು ಹಸಿರು ಮೆಣಸಿನಕಾಯಿ, ರುಚಿಗೆ ತಕ್ಕಷ್ಟು ಉಪ್ಪು ಬೇಕು.


    ಅಜ್ವೈನ್ ಪರಾಠಾ ರೆಸಿಪಿ ಮಾಡುವ ವಿಧಾನ


    ಮೊದಲು ಅರುಮ್ ಅಂದರೆ ಕೊಲೊಕಾಸಿಯಾವನ್ನು ಕತ್ತರಿಸಿ ಕುದಿಸಿ. ಅದು ಮೃದುವಾದ ನಂತರ ಮ್ಯಾಶ್ ಮಾಡಿ. ಇದಕ್ಕೆ ಅಜ್ವಾಯನ್, ಕತ್ತರಿಸಿದ ಈರುಳ್ಳಿ, ಹಸಿರು ಮೆಣಸಿನಕಾಯಿ, ಕಸ್ತೂರಿ ಮೇಥಿ ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ.


    ನಂತರ ಇದಕ್ಕೆ ಕೆಂಪು ಮೆಣಸಿನಕಾಯಿ, ಉಪ್ಪು, ಗರಂ ಮಸಾಲಾ ಮತ್ತು ಕೊತ್ತಂಬರಿ ಪುಡಿ ಸೇರಿಸಿ, ಮಿಶ್ರಣ ಮಾಡಿ. ನಂತರ ಹಿಟ್ಟಿನ ಉಂಡೆಯಲ್ಲಿ ಸ್ಟಫಿಂಗ್ ಮಾಡಿ, ಪರಾಠಾ ಮಾಡಿ. ಒಲೆಯ ಮೇಲೆ ತವೆ ಇಟ್ಟು ಬಿಸಿಯಾದ ನಂತರ ಪರಾಠಾ ಎರಡೂ ಬದಿ ಚೆನ್ನಾಗಿ ಬೇಯಿಸಿ, ನಂತರ ಸರ್ವ್ ಮಾಡಿ. ಬೆಣ್ಣೆ ಅಥವಾ ಮೊಸರಿನ ಜೊತೆ ಸವಿಯಿರಿ.


    ಸಾಂದರ್ಭಿಕ ಚಿತ್ರ


    ಕ್ಯಾರೆಟ್ ಮತ್ತು ಎಲೆಕೋಸು ಪರಾಠಾ ರೆಸಿಪಿ


    ಬೇಕಾಗುವ ಪದಾರ್ಥಗಳು


    ಒಂದು ಬೌಲ್ ತುರಿದ ಕ್ಯಾರೆಟ್, ಒಂದು ಬೌಲ್ ಎಲೆಕೋಸು, ಒಂದು ಟೀಚಮಚ ತುರಿದ ಶುಂಠಿ, ಸಣ್ಣದಾಗಿ ಕೊಚ್ಚಿದ ಈರುಳ್ಳಿ , ಅರ್ಧ ಟೀಚಮಚ ಗರಂ ಮಸಾಲಾ, ಒಂದು ಚಿಟಿಕೆ ಇಂಗು, ಒಂದು ಚಿಟಿಕೆ ಕೆಂಪು ಮೆಣಸಿನಕಾಯಿ ಪುಡಿ, ಒಂದು ಕತ್ತರಿಸಿದ ಹಸಿರು ಮೆಣಸಿನಕಾಯಿ, ರುಚಿಗೆ ತಕ್ಕಷ್ಟು ಉಪ್ಪು ಬೇಕು.


    ಕ್ಯಾರೆಟ್ ಮತ್ತು ಎಲೆಕೋಸು ಪರಾಠಾ ಮಾಡುವ ವಿಧಾನ


    ತುರಿದ ಕ್ಯಾರೆಟ್ ಮತ್ತು ಎಲೆಕೋಸನ್ನು ಒಂದು ಪಾತ್ರೆಗೆ ಹಾಕಿರಿ. ನಂತರ ಅದಕ್ಕೆ ಉಪ್ಪು ಸೇರಿಸಿ. ಕೆಂಪು ಮೆಣಸಿನಕಾಯಿ ಪುಡಿ, ಗರಂ ಮಸಾಲಾ, ಕತ್ತರಿಸಿದ ಶುಂಠಿ, ಕತ್ತರಿಸಿದ ಈರುಳ್ಳಿ, ಹಸಿರು ಮೆಣಸಿನಕಾಯಿ ಮತ್ತು ಇಂಗು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.


    ಇದನ್ನೂ ಓದಿ: ಈ ಪದಾರ್ಥಗಳ ಸೇವನೆಯಿಂದ ಆಸಿಡಿಟಿ ಸಮಸ್ಯೆ ಹೆಚ್ಚುತ್ತದೆ, ಹುಷಾರು!


    ಈಗ ಈ ಮಿಶ್ರಣವನ್ನು ಹಿಟ್ಟಿನ ಉಂಡೆಯೊಳಗೆ ತುಂಬಿರಿ. ನಂತರ ವೃತ್ತಾಕಾರದಲ್ಲಿ ಲಟ್ಟಿಸಿ. ನಂತರ ತವೆ ಬಿಸಿ ಮಾಡಿ, ಸ್ವಲ್ಪ ಎಣ್ಣೆ ಅನ್ವಯಿಸಿ, ಪರಾಠಾ ಹಾಕಿ, ಚೆನ್ನಾಗಿ ಎರಡೂ ಬದಿ ಬೇಯಿಸಿ ಸರ್ವ್ ಮಾಡಿ. ನಿಮ್ಮಿಷ್ಟದ ಚಟ್ನಿ ಜೊತೆ ತಿನ್ನಿರಿ.

    Published by:renukadariyannavar
    First published: