ಬೆಳಗಿನ ತಿಂಡಿಗೆ (Morning Breakfast) ಕ್ವಿನೋವಾ (Quinoa) ಪದಾರ್ಥದ ಖಾದ್ಯ ಉತ್ತಮವಾಗಿದೆ. ಕ್ವಿನೋವಾ ಹಲವು ಆರೋಗ್ಯ ಪ್ರಯೋಜನ (Health Problem) ನೀಡುತ್ತದೆ. ಕ್ವಿನೋವಾ ಹಲವು ಪೋಷಕಾಂಶಗಳಿಂದ (Nutrients) ತುಂಬಿದೆ. ಇಂದು ನಾವು ಬೆಳಗಿನ ತಿಂಡಿಗೆ ಕ್ವಿನೋವಾ ಅವಕಾಡೋ ಚಾಟ್ ರೆಸಿಪಿ ಮಾಡುವುದು ಹೇಗೆ ಎಂದು ನೋಡೋಣ. ಅಂದ ಹಾಗೆ, ಕ್ವಿನೋವಾ ಸೇವನೆ ಮಧುಮೇಹ ನಿಯಂತ್ರಣಕ್ಕೆ ಸಹಕಾರಿ ಆಗಿದೆ ಎನ್ನುತ್ತಾರೆ ತಜ್ಞರು. ಮಧುಮೇಹ ರೋಗಿಗಳು ಆಹಾರದಲ್ಲಿ ಕ್ವಿನೋವಾ ಮತ್ತು ಆವಕಾಡೊ ಸೇರಿಸುವುದು ಪ್ರಯೋಜನ ನೀಡುತ್ತದೆ ಎಂದು ಹೇಳಲಾಗಿದೆ. ಈ ಎರಡನ್ನು ಆಹಾರದಲ್ಲಿ ಪೌಷ್ಟಿಕಾಂಶದ ರೀತಿ ಸೇರಿಸಿದರೆ ಸಾಕಷ್ಟು ಪ್ರಯೋಜನ ಸಿಗುತ್ತದೆ.
ಮಧುಮೇಹ ರೋಗಿಗಳಿಗೆ ಕ್ವಿನೋವಾ ಅವಕಾಡೋ ಚಾಟ್ ರೆಸಿಪಿ ಪ್ರಯೋಜನಕಾರಿ ಆಗಿದೆ.
ಬೆಳಗಿನ ತಿಂಡಿಗೆ ಕ್ವಿನೋವಾ ಅವಕಾಡೋ ಚಾಟ್ ರೆಸಿಪಿ
ಬೇಕಾಗುವ ಪದಾರ್ಥಗಳು
ಕ್ವಿನೋವಾ, ಆವಕಾಡೊ, ಹುಣಸೆ ಚಟ್ನಿ, ಪುದೀನ ಚಟ್ನಿ, ಚಾಟ್ ಮಸಾಲಾ, ಸೌತೆಕಾಯಿ, ಈರುಳ್ಳಿ, ತುಳಸಿ, ಟೊಮೆಟೊ, ಹಸಿರು ಮೆಣಸಿನಕಾಯಿ, ಹಸಿರು ಕೊತ್ತಂಬರಿ, ಕಪ್ಪು ಉಪ್ಪು ಬೇಕಾಗುತ್ತದೆ.
ಆರೋಗ್ಯಕರ ಮತ್ತು ಟೇಸ್ಟಿ ಕ್ವಿನೋವಾ ಆವಕಾಡೊ ಚಾಟ್ ರೆಸಿಪಿ ಮಾಡುವ ವಿಧಾನ
ಮೊದಲು ಕ್ವಿನೋವಾವನ್ನು ನೀರಿನಲ್ಲಿ ನೆನೆಸಿ. ನಂತರ ಒಂದು ಗಂಟೆ ನೀರಿನಲ್ಲಿ ನೆನೆದ ನಂತರ ಚೆನ್ನಾಗಿ ತೊಳೆಯಿರಿ. ಚಾಟ್ ಮಾಡುವ ಮೊದಲು ಕ್ವಿನೋವಾವನ್ನು ಚೆನ್ನಾಗಿ ತೊಳೆಯಬೇಕು. ನಂತರ ಈಗ ಒಂದು ಬೌಲ್ ತೆಗೆದುಕೊಳ್ಳಿ. ಇದಕ್ಕೆ ನೆನೆಸಿ, ಚೆನ್ನಾಗಿ ತೊಳೆದ ಕ್ವಿನೋವಾ ಸೇರಿಸಿ.
ಈಗ ಅವಕಾಡೊ ಚೆನ್ನಾಗಿ ತೊಳೆಯಿರಿ. ನಂತರ ಅದನ್ನು ಚಿಕ್ಕ ಚಿಕ್ಕ ತುಂಡುಗಳಾಗಿ ಕತ್ತರಿಸಿ. ಈಗ ನಂತರ ಸೌತೆಕಾಯಿ ಕತ್ತರಿಸಿ. ನಂತರ ಟೊಮೆಟೊ ತೊಳೆದು ನಂತರ ಚಿಕ್ಕದಾಗಿ ಮತ್ತು ದೊಡ್ಡದಾಗಿ ಕಾಣದ ರೀತಿ ಕತ್ತರಿಸಿ. ಹಸಿರು ಮೆಣಸಿನಕಾಯಿ ಮತ್ತು ಕೊತ್ತಂಬರಿ ಸೊಪ್ಪನ್ನು ನುಣ್ಣಗೆ ಕತ್ತರಿಸಿ.
ಈಗ ಬಟ್ಟಲಿಗೆ ಆವಕಾಡೊ, ಸೌತೆಕಾಯಿ, ಈರುಳ್ಳಿ, ತುಳಸಿ, ಟೊಮೆಟೊ, ಹಸಿರು ಮೆಣಸಿನಕಾಯಿ, ಹಸಿರು ಕೊತ್ತಂಬರಿ ಸೊಪ್ಪು, ಹುಣಸೆ ಚಟ್ನಿ, ಪುದೀನ ಚಟ್ನಿ, ಚಾಟ್ ಮಸಾಲ, ಕಪ್ಪು ಉಪ್ಪನ್ನು ಕ್ವಿನೋವಾ ಜೊತೆಗೆ ಎಲ್ಲವನ್ನೂ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಿದ ನಂತರ ಸಿಹಿಗೆ ಬೇಕಾದ್ರೆ ಸಕ್ಕರೆ ಸೇರಿಸಬಹುದು.
ಆದರೆ ನೀವು ಮಧುಮೇಹಿಗಳಾಗಿದ್ದರೆ ಇದಕ್ಕೆ ಸಕ್ಕರೆ ಸೇರಿಸದೇ, ಜೇನುತುಪ್ಪ ಸೇರಿಸಿ ತಿನ್ನಬಹುದು. ಆವಕಾಡೊದ ಸಿಹಿ ರುಚಿ ಸಾಕಷ್ಟು ಟೇಸ್ಟ್ ನೀಡುತ್ತದೆ. ಈಗ ನಿಮ್ಮ ಕ್ವಿನೋವಾ ಅವಕಾಡೋ ಚಾಟ್ ಸಿದ್ಧವಾಗಿದೆ. ರುಚಿಯಾದ ಮತ್ತು ಪೌಷ್ಟಿಕವಾದ ಚಾಟ್ ನ್ನು ಕುಟುಂಬ ಸದಸ್ಯರ ಜೊತೆ ಸೇರಿ ಸೇವಿಸಿ.
ಕ್ವಿನೋವಾ
ಕ್ವಿನೋವಾ ಧಾನ್ಯವಲ್ಲ ಇದು ಬೀಜ. ಇದನ್ನು ಅಕ್ಕಿಗೆ ಪರ್ಯಾಯವಾಗಿ ಬಳಕೆ ಮಾಡಲಾಗುತ್ತದೆ. ಸಾಮಾನ್ಯವಾಗಿ ಇದರ ಬೀಜಗಳು ಬಿಳಿ, ಕೆಂಪು, ಬಿಳಿ ಮತ್ತು ಕಪ್ಪು ಬಣ್ಣದಲ್ಲಿ ಲಭ್ಯ ಇದೆ. ಕ್ವಿನೋವಾ ಪೋಷಕಾಂಶಗಳ ಶಕ್ತಿಯ ನಿಧಿ ಆಗಿದೆ. ಪ್ರೋಟೀನ್ ಭರಿತ ಕ್ವಿನೋವಾ ಸಸ್ಯಾಹಾರಿಗಳಿಗೆ ಪೌಷ್ಟಿಕ ಆಹಾರವಾಗಿದೆ.
ಕ್ವಿನೋವಾ ಗ್ಲುಟನ್ ಮುಕ್ತ, ಹೆಚ್ಚಿನ ಫೈಬರ್ ಮತ್ತು ಜೀರ್ಣಕ್ರಿಯೆಗೆ ಸಾಕಷ್ಟು ಸಹಕಾರಿ ಆಗಿದೆ. ಕ್ವಿನೋವಾ ಒಂದು ಕಾರ್ಬೋಹೈಡ್ರೇಟ್ ಆಗಿದೆ. ಹಾಗಾಗಿ ಅದು ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತೆ. ದೀರ್ಘಕಾಲದವರೆಗೆ ಹೊಟ್ಟೆ ತುಂಬಿಸಿಡಲು ಸಹಕಾರಿ ಆಗಿದೆ. ಇದು ತೂಕ ನಷ್ಟಕ್ಕೂ ಸಹಕಾರಿ ಆಗಿದೆ.
ಇದನ್ನೂ ಓದಿ: ಸ್ನಾನಕ್ಕೂ ಮೊದಲು ದೇಹಕ್ಕೆ ಬೇಕು ಎಣ್ಣೆಯ ಮಸಾಜ್, ಇದರಿಂದ ಎಷ್ಟೆಲ್ಲಾ ಲಾಭ ಇದೆ ಗೊತ್ತಾ?
ಮಧುಮೇಹದಲ್ಲಿ ಕ್ವಿನೋವಾ ವಿಶೇಷವಾಗಿ ಪ್ರಯೋಜನಕಾರಿ ಆಗಿದೆ. ಕ್ವಿನೋವಾದಲ್ಲಿ ಫೈಬರ್ ಮತ್ತು ಪ್ರೊಟೀನ್ ಇದೆ. ರಕ್ತದ ಸಕ್ಕರೆ ನಿಯಂತ್ರಿಸಲು ಸಹಕಾರಿಯಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ