• Home
  • »
  • News
  • »
  • lifestyle
  • »
  • Breakfast: ಬೆಳಗಿನ ಉಪಹಾರಕ್ಕೆ ರುಚಿಕರ, ಆರೋಗ್ಯಕರ ಮೊಸರು ರವೆ ಸ್ಯಾಂಡ್ವಿಚ್ ರೆಸಿಪಿ

Breakfast: ಬೆಳಗಿನ ಉಪಹಾರಕ್ಕೆ ರುಚಿಕರ, ಆರೋಗ್ಯಕರ ಮೊಸರು ರವೆ ಸ್ಯಾಂಡ್ವಿಚ್ ರೆಸಿಪಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕಡಿಮೆ ಸಮಯದಲ್ಲಿ ಸುಲಭವಾಗಿ ಮೊಸರು ರವೆ ಸ್ಯಾಂಡ್ವಿಚ್ ರೆಸಿಪಿ ಮಾಡಬಹುದು. ಮೊಸರು ರವೆ ಸ್ಯಾಂಡ್ವಿಚ್ ತಿನ್ನಲು ತುಂಬಾ ರುಚಿ ಆಗಿರುತ್ತದೆ. ಮತ್ತು ನಿಮ್ಮ ಮಗು ಸಹ ಬೆಳಗಿನ ಉಪಹಾರವನ್ನು ಹೆಚ್ಚು ಇಷ್ಟ ಪಟ್ಟು ಸೇವನೆ ಮಾಡುತ್ತದೆ.

  • Share this:

    ಸಾಮಾನ್ಯವಾಗಿ ಬೆಳಗ್ಗೆ ಉಪಹಾರಕ್ಕೆ (Morning Breakfast) ನೀವು ಹಲವು ರೆಸಿಪಿಗಳನ್ನು (Recipe) ಮಾಡಿ ಸೇವನೆ ಮಾಡಿರಬಹುದು. ಇಂದು ನಾವು ನಿಮಗಾಗಿ ವಿಶೇಷ (Special) ರೆಸಿಪಿ ತಂದಿದ್ದೇವೆ. ಈ ರೆಸಿಪಿ ಮಕ್ಕಳಿಂದ (Children’s) ಹಿಡಿದು ವೃದ್ಧರವರೆಗೆ ಎಲ್ಲರೂ ತುಂಬಾ ಇಷ್ಟಪಟ್ಟು ತಿನ್ನುವ ರೆಸಿಪಿ ಆಗಿದೆ. ಬೆಳಗಿನ ಆಹಾರಕ್ಕೆ ನೀವು ಏನು ಮಾಡಿ ಸೇವನೆ ಮಾಡಬೇಕೆಂದು ನಿಮಗೆ ಅರ್ಥವೇ ಆಗುವುದಿಲ್ಲ. ಬೆಳಗಿನ ಉಪಹಾರದಲ್ಲಿ ಸ್ವಲ್ಪ ಹಗುರ ಮತ್ತು ಟೇಸ್ಟಿ (Tasty) ಚೀಸ್ ತಿನ್ನಲು ಈ ರೆಸಿಪಿ ನಿಮಗೆ ಸಹಾಯ ಮಾಡುತ್ತದೆ. ಅದೇ ವೇಳೆ ನೀವು ಸೇವನೆ ಮಾಡುವ ಉಪಹಾರ ಆರೋಗ್ಯಕರ ಆಗಿರಬೇಕು.


    ಮೊಸರು ರವೆ ಸ್ಯಾಂಡ್ವಿಚ್ ರೆಸಿಪಿ


    ಅಷ್ಟೇ ಅಲ್ಲದೇ ಕಡಿಮೆ ಸಮಯದಲ್ಲಿ ಸುಲಭವಾಗಿ ತಯಾರಿಸಬಹುದಾದ ಇಂತಹ ಉಪಹಾರ ನೀವು ಹುಡುಕುತ್ತಿದ್ದರೆ ಈ ರೆಸಿಪಿ ಸಹಕಾರಿ ಆಗಿದೆ. ನೀವು 15 ನಿಮಿಷಗಳಲ್ಲಿ ಮೊಸರು ರವೆ ಸ್ಯಾಂಡ್ ವಿಚ್ ರೆಸಿಪಿ ಮಾಡಬಹುದಾದ ಅಂತಹ ಒಂದು ಉಪಹಾರ ಪಾಕವಿಧಾನ ಆಗಿದೆ. ಮೊಸರು ರವೆ ಸ್ಯಾಂಡ್‌ವಿಚ್ ಮಾಡುವುದು ಹೇಗೆ ಎಂದು ಇಲ್ಲಿ ನಾವು ನೋಡೋಣ.


    ಮೊಸರು ರವೆ ಸ್ಯಾಂಡ್ವಿಚ್ ತಿನ್ನಲು ತುಂಬಾ ರುಚಿ ಆಗಿರುತ್ತದೆ. ಮತ್ತು ನಿಮ್ಮ ಮಗು ಸಹ ಬೆಳಗಿನ ಉಪಹಾರವನ್ನು ಹೆಚ್ಚು ಇಷ್ಟ ಪಟ್ಟು ಸೇವನೆ ಮಾಡುತ್ತದೆ. ಈ ಸ್ಯಾಂಡ್‌ವಿಚ್ ಆರೋಗ್ಯಕರವೂ ಆಗಿದೆ. ಹಾಗಾದರೆ ಮೊಸರು ರವೆ ಸ್ಯಾಂಡ್‌ವಿಚ್ ಹೇಗೆ ಮಾಡಬೇಕೆಂದು ನೋಡೋಣ.


    ಇದನ್ನೂ ಓದಿ: ದೇಹಕ್ಕೆ ಕ್ಯಾಲ್ಸಿಯಂ ಯಾಕೆ ಬೇಕು? ಯಾವ ಪದಾರ್ಥಗಳು ಮೂಳೆಗಳನ್ನು ಬಲಿಷ್ಠಗೊಳಿಸುತ್ತವೆ?


    ಮೊಸರು ರವೆ ಸ್ಯಾಂಡ್ವಿಚ್ ರೆಸಿಪಿ


    ಬೇಕಾಗುವ ಪದಾರ್ಥಗಳು


    ಬ್ರೆಡ್ ಆರು ತುಂಡುಗಳು, ರವೆ ಒಂದು ಕಪ್, ಮೊಸರು ಒಂದು ಕಪ್, ಸಣ್ಣಗೆ ಕೊಚ್ಚಿದ ಎರಡು ಹಸಿರು ಮೆಣಸಿನಕಾಯಿ, ಒಂದು ಟೀ ಸ್ಪೂನ್ ಶುಂಠಿ ಪೇಸ್ಟ್, ಸಣ್ಣದಾಗಿ ಕೊಚ್ಚಿದ ಎರಡು ಟೀ ಸ್ಪೂನ್ ಹಸಿರು ಕೊತ್ತಂಬರಿ, ಎಣ್ಣೆ ಅಗತ್ಯಕ್ಕೆ ತಕ್ಕಷ್ಟು, ಉಪ್ಪು ರುಚಿಗೆ ತಕ್ಕಂತೆ ಬೇಕಾಗುತ್ತದೆ.


    ಮೊಸರು ರವೆ ಸ್ಯಾಂಡ್ವಿಚ್ ಮಾಡುವುದು ಹೇಗೆ?


    ಮೊಸರು ರವೆ ಸ್ಯಾಂಡ್ವಿಚ್ ಮಾಡಲು ಮೊದಲು ಹಸಿರು ಮೆಣಸಿನಕಾಯಿ ನುಣ್ಣಗೆ ಕತ್ತರಿಸಿ. ಹಸಿರು ಕೊತ್ತಂಬರಿ ಸೊಪ್ಪನ್ನು ಕೂಡ ನುಣ್ಣಗೆ ಕತ್ತರಿಸಿ. ಈಗ ಒಂದು ಪಾತ್ರೆಯಲ್ಲಿ ರವೆ ಮತ್ತು ಮೊಸರು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಹತ್ತು ನಿಮಿಷ ಮುಚ್ಚಿಡಿ.


    ಹತ್ತು ನಿಮಿಷಗಳ ನಂತರ ಈ ಮಿಶ್ರಣಕ್ಕೆ ಕತ್ತರಿಸಿ ಇಟ್ಟಿರುವ ಹಸಿರು ಕೊತ್ತಂಬರಿ, ಶುಂಠಿ ಪೇಸ್ಟ್ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈಗ ಚಾಕುವಿನ ಸಹಾಯದಿಂದ ಬ್ರೆಡ್ ನ ಮಧ್ಯದಲ್ಲಿ ಎರಡು ಮೂಲೆಗಳಿಂದ ಕತ್ತರಿಸಿ. ಅದನ್ನು ತ್ರಿಕೋನಾಕಾರದಲ್ಲಿ ಇಡಿ.


    ಈಗ ಒಂದು ತುಂಡು ಬ್ರೆಡ್ ತೆಗೆದುಕೊಂಡು ಅದರ ಎರಡೂ ಬದಿಗಳಲ್ಲಿ ಈ ಮಿಶ್ರಣವನ್ನು ಮೊಸರಿನಿಂದ ಚೆನ್ನಾಗಿ ಅನ್ವಯಿಸಿ. ಇದೇ ರೀತಿ ಮಿಶ್ರಣವನ್ನು ಎಲ್ಲಾ ಬ್ರೆಡ್ ಗಳಿಗೂ ಹಚ್ಚಿರಿ. ಮಧ್ಯಮ ಉರಿಯಲ್ಲಿ ಗ್ಯಾಸ್ ಮೇಲೆ ಗ್ರಿಡಲ್ ಹಾಕಿ ಮತ್ತು ಬಿಸಿಯಾಗಲು ಬಿಡಿ.


    ಇದನ್ನೂ ಓದಿ: ಮಧುಮೇಹ ನಿಯಂತ್ರಣಕ್ಕೆ ಯಾವ ಗಿಡಮೂಲಿಕೆ ಸೂಕ್ತ? ಇಲ್ಲಿದೆ ಮಾಹಿತಿ


    ತವಾ ಬಿಸಿಯಾದಾಗ ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ. ನಂತರ ಈ ಮಿಶ್ರಣವನ್ನು ಮೊಸರಿನಲ್ಲಿ ಅದ್ದಿ ಬ್ರೆಡ್ ಪೀಸ್ ಹಾಕಿ ಬ್ರೌನ್ ಆಗುವವರೆಗೆ ಬೇಕ್ ಮಾಡಿ. ಅದೇ ರೀತಿ ಎಲ್ಲಾ ಬ್ರೆಡ್‌ಗಳನ್ನು ಬೇಯಿಸಿ. ಈಗ ನಿಮ್ಮ ಬೆಳಗಿನ ರುಚಿಕರ ಉಪಹಾರ ಮೊಸರು ರವೆ ಸ್ಯಾಂಡ್‌ ವಿಚ್ ಸಿದ್ಧ ಆಗಿದೆ. ಇದನ್ನು ಪ್ಲೇಟ್‌ ಗೆ ಹಾಕಿ ಟೊಮೆಟೊ ಸಾಸ್, ಹಸಿರು ಚಟ್ನಿ ಅಥವಾ ನಿಮ್ಮ ಆಯ್ಕೆಯ ಯಾವುದೇ ಚಟ್ನಿ ಜೊತೆ ಸೇವಿಸಿ.

    Published by:renukadariyannavar
    First published: