Morning Breakfast: ಬೆಳಗಿನ ತಿಂಡಿ, ಮಧ್ಯಾಹ್ನದ ಡಬ್ಬಕ್ಕೂ ಓಕೆಯಾಗುತ್ತೆ ಆಲೂ ದಮ್ ಬಿರಿಯಾನಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಇವತ್ತು ನಾವು ಆಲೂ ದಮ್ ಬಿರಿಯಾನಿ ಮಾಡುವುದು ಹೇಗೆ ಅಂತಾ ನೋಡೋಣ. ಬಿರಿಯಾನಿ ಹಲವರ ಸಾರ್ವಕಾಲಿಕ ನೆಚ್ಚಿನ ಭಕ್ಷ್ಯವೂ ಆಗಿದೆ. ಇದು ಮಕ್ಕಳು ಮತ್ತು ದೊಡ್ಡವರ ಫೇವರೆಟ್ ಫುಡ್. ಹಾಗಿದ್ರೆ ಆಲೂ ದಮ್ ಬಿರಿಯಾನಿ ಪಾಕ ವಿಧಾನ ನೋಡೋಣ.

  • Share this:

    ನೀವು ಬೆಳಗಿನ ತಿಂಡಿಗೆ (Morning Breakfast) ಹಲವು ಖಾದ್ಯಗಳನ್ನು (Recipe) ಮಾಡಿ ಸೇವನೆ ಮಾಡಿರಬಹುದು. ಅದರಲ್ಲೂ ವಾರದಲ್ಲಿ ಒಂದು ದಿನ ಬೆಳಗಿನ ತಿಂಡಿಗೆ ಬಿರಿಯಾನಿ ಮಾಡಿ ತಿನ್ನುವುದು ಮಜವೇ ಬೇರೆ. ದಿನವೂ ದೋಸೆ, ಇಡ್ಲಿ, ಉಪ್ಪಿಟ್ಟು, ಅವಲಕ್ಕಿ ಇದ್ದೇ ಇರುತ್ತದೆ. ಆದರೆ ಬೆಳಗ್ಗೆ ಬಿರಿಯಾನಿ ಅದರಲ್ಲೂ ನೀವು ವೆಜಿಟೇರಿಯನ್ ಆಗಿದ್ದರೆ ಆಲೂ ದಮ್ ಬಿರಿಯಾನಿ (Aloo Dam Biriyani) ಮಾಡಿ ತಿನ್ನಿರಿ. ಇವತ್ತು ನಾವು ಆಲೂ ದಮ್ ಬಿರಿಯಾನಿ ಮಾಡುವುದು ಹೇಗೆ ಅಂತಾ ನೋಡೋಣ. ಬಿರಿಯಾನಿ ಹಲವರ ಸಾರ್ವಕಾಲಿಕ ನೆಚ್ಚಿನ ಭಕ್ಷ್ಯವೂ ಆಗಿದೆ. ಇದು ಮಕ್ಕಳು ಮತ್ತು ದೊಡ್ಡವರ ಫೇವರೆಟ್ ಫುಡ್. ಹಾಗಿದ್ರೆ ಆಲೂ ದಮ್ ಬಿರಿಯಾನಿ ಪಾಕ ವಿಧಾನ ನೋಡೋಣ.


    ಬೆಳಗಿನ ತಿಂಡಿಗೆ ಆಲೂ ದಮ್ ಬಿರಿಯಾನಿ ಪಾಕವಿಧಾನ


    ಆಲೂ ದಮ್ ಬಿರಿಯಾನಿ ರೆಸಿಪಿಯು ದೀರ್ಘಕಾಲ ಹೊಟ್ಟೆ ತುಂಬಿಸಿಡುತ್ತದೆ. ಇದು ಹಲವು ಪೋಷಕಾಂಶಗಳನ್ನು ನೀಡುತ್ತದೆ. ಜೊತೆಗೆ ರುಚಿಕರ ಖಾದ್ಯವಾಗಿದೆ.


    ಆಲೂ ದಮ್ ಬಿರಿಯಾನಿ


    ಬೇಕಾಗುವ ಸಾಮಗ್ರಿಗಳು


    250 ಗ್ರಾಂ ಆಲೂಗಡ್ಡೆಗಳು ದಪ್ಪ ತುಂಡುಗಳಾಗಿ ಕತ್ತರಿಸಿದ್ದು, 300 ಗ್ರಾಂ ಅಕ್ಕಿ, 250 ಗ್ರಾಂ ಮೊಸರು, ಸಣ್ಣದಾಗಿ ಕತ್ತರಿಸಿದ 3 ಮಧ್ಯಮ ಗಾತ್ರದ ಈರುಳ್ಳಿ,  ಸಣ್ಣದಾಗಿ ಕತ್ತರಿಸಿದ 2 ಮಧ್ಯಮ ಗಾತ್ರದ ಟೊಮ್ಯಾಟೊ, ಸಣ್ಣದಾಗಿ ಕೊಚ್ಚಿದ, 3 ಹಸಿರು ಮೆಣಸಿನಕಾಯಿಗಳು, ಸಣ್ಣದಾಗಿ ಕತ್ತರಿಸಿದ ಒಂದು ಚಮಚ ಹಸಿರು ಕೊತ್ತಂಬರಿ ಸೊಪ್ಪು,




    1 ಚಮಚ ಪುದೀನ, 3 ಹಸಿರು ಏಲಕ್ಕಿ, 1 ದೊಡ್ಡ ಏಲಕ್ಕಿ, 8 ಕರಿಮೆಣಸು, 4 ಲವಂಗ, 1 ದಾಲ್ಚಿನ್ನಿ, 1 ಬೇ ಎಲೆ, 1 ಟೀಸ್ಪೂನ್ ಜೀರಿಗೆ, 1 ಟೀಸ್ಪೂನ್ ಗರಂ ಮಸಾಲ, 2 ಟೀಸ್ಪೂನ್ ಕೆಂಪು ಮೆಣಸಿನಕಾಯಿ,


    1/2 ಟೀಸ್ಪೂನ್ ರುಚಿಗೆ ತಕ್ಕಷ್ಟು ಅರಿಶಿನ, ಉಪ್ಪು, 2 ಟೀಸ್ಪೂನ್ ಕೊತ್ತಂಬರಿ ಪುಡಿ, 1 ಟೀಸ್ಪೂನ್ ಜೀರಿಗೆ ಪುಡಿ, 2 ಟೀಸ್ಪೂನ್ ಬಿರಿಯಾನಿ ಮಸಾಲಾ, ಕೇಸರಿ ಪುಡಿ, 2 ಟೀಸ್ಪೂನ್ ಬಿರಿಯಾನಿ ಮಸಾಲಾ, ಕೇಸರಿ ಎಳೆ, 1 ಚಮಚ ಹಾಲು


    ಆಲೂ ದಮ್ ಬಿರಿಯಾನಿ ತಯಾರಿಸುವ ವಿಧಾನ


    ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿರಿ. ಮತ್ತು ಅದನ್ನು ಬಿಸಿ ಮಾಡಿ. ನಂತರ ಕತ್ತರಿಸಿದ ಆಲೂಗಡ್ಡೆ ತುಂಡುಗಳನ್ನು ಎಣ್ಣೆಗೆ ಹಾಕಿ ಬೇಯಿಸಿ. ಅದರ ಮೇಲೆ ಉಪ್ಪು, ಕೆಂಪು ಮೆಣಸಿನಕಾಯಿ ಮತ್ತು ಅರಿಶಿನ ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ. ಒಂದು ಬಟ್ಟಲಿನಲ್ಲಿ ಮೊಸರು ತೆಗೆದುಕೊಳ್ಳಿ.


    ಕೆಂಪು ಮೆಣಸಿನಕಾಯಿ, ಕೊತ್ತಂಬರಿ ಪುಡಿ, ಅರಿಶಿನ, ಕರಿಮೆಣಸು, ಗರಂ ಮಸಾಲ ಮತ್ತು ಸ್ವಲ್ಪ ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಮತ್ತು ಆಲೂಗಡ್ಡೆಯನ್ನು ಚೆನ್ನಾಗಿ ಮಿಕ್ಸ್ ಮಾಡಿ. ಎಲ್ಲಾ ಪದಾರ್ಥಗಳು ಮ್ಯಾರಿನೇಟ್ ಆಗಲು ಬಿಡಿ.


    ಸಾಂದರ್ಭಿಕ ಚಿತ್ರ


    ನಂತರ ಅದಕ್ಕೆ ಒಂದು ಚಮಚ ಎಣ್ಣೆ ಸೇರಿಸಿ, ಬೇ ಎಲೆ, ಲವಂಗ, ಕರಿಮೆಣಸು, ಜೀರಿಗೆ, ಸಣ್ಣ ಮತ್ತು ದೊಡ್ಡ ಏಲಕ್ಕಿ ಸೇರಿಸಿ. ಫ್ರೈ ಮಾಡಿ. ನಂತರ ಕತ್ತರಿಸಿದ ಈರುಳ್ಳಿ ಹಾಕಿ ಫ್ರೈ ಮಾಡಿ, ಟೊಮ್ಯಾಟೊ ಸೇರಿಸಿ ಬೇಯಿಸಿ.


    ಈಗ ಕೆಂಪು ಮೆಣಸಿನಕಾಯಿ, ಉಪ್ಪು, ಕೊತ್ತಂಬರಿ ಪುಡಿ, ಜೀರಿಗೆ ಪುಡಿ, ಗರಂ ಮಸಾಲ ಮತ್ತು ಬಿರಿಯಾನಿ ಮಸಾಲಾ ಸೇರಿಸಿ ಮತ್ತು ಮಿಶ್ರಣ ಮಾಡುವಾಗ ಬೇಯಿಸಿ. ಇದಕ್ಕೆ ಮ್ಯಾರಿನೇಟ್ ಮಾಡಿದ ಆಲೂಗಡ್ಡೆ ಹಾಕಿ ಕಡಿಮೆ ಉರಿಯಲ್ಲಿ ಬೇಯಿಸಿ.


    6 ನಿಮಿಷದ ನಂತರ ಈ ಮಿಶ್ರಣಕ್ಕೆ ಸ್ವಲ್ಪ ನೀರು ಸೇರಿಸಿ ಅಕ್ಕಿ ಸೇರಿಸಿ. ಮೇಲೆ ಹಸಿರು ಕೊತ್ತಂಬರಿ ಸೊಪ್ಪು, ಪುದೀನಾ ಮತ್ತು ಬಿರಿಯಾನಿ ಮಸಾಲ ಹಾಕಿರಿ. ತುಪ್ಪ, ಹಾಲು, ನೆನೆಸಿದ ಕೇಸರಿ ಸಿಂಪಡಿಸಿ ಮತ್ತು ಮುಚ್ಚಳ ಮುಚ್ಚಿ.


    ಇದನ್ನೂ ಓದಿ: ಹೊಟ್ಟೆಯಲ್ಲಿ ಇಲಿ ಓಡಾಡಿದಂತೆ ಅನಿಸುತ್ತಾ? ಹಾಗಾದ್ರೆ ಈ ಹೆಲ್ದೀ ಡ್ರಿಂಕ್ ಕುಡಿಯಿರಿ


    ಗ್ಯಾಸ್ ಮೇಲೆ ಗ್ರಿಡಲ್ ಇರಿಸಿ. ಪ್ಯಾನ್ ಅದರ ಮೇಲೆ ಇರಿಸಿ. ಇದರಿಂದ ಬಿರಿಯಾನಿ ತಳ ಹಿಡಿಯಲ್ಲ. ಮಧ್ಯಮ ಉರಿಯಲ್ಲಿ 20 ನಿಮಿಷ ಬಿರಿಯಾನಿ ಬೇಯಿಸಿ. ಈಗ ಬಿರಿಯಾನಿ ಸಿದ್ಧವಾಗಿದೆ. ನಿಮ್ಮಿಷ್ಟದ ರೈತ ಅಥವಾ ಚಟ್ನಿ ಜೊತೆ ಸೇವಿಸಿ.

    Published by:renukadariyannavar
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು