• Home
  • »
  • News
  • »
  • lifestyle
  • »
  • Morning Breakfast: ಬೆಳಗ್ಗಿನ ತಿಂಡಿಗೆ ರೆಡಿ ಮಾಡಿ ಆರೋಗ್ಯಕರ ಸ್ಪ್ರೌಟ್ಸ್ ದೋಸೆ, ಪಾಕವಿಧಾನ ಹೀಗಿದೆ!

Morning Breakfast: ಬೆಳಗ್ಗಿನ ತಿಂಡಿಗೆ ರೆಡಿ ಮಾಡಿ ಆರೋಗ್ಯಕರ ಸ್ಪ್ರೌಟ್ಸ್ ದೋಸೆ, ಪಾಕವಿಧಾನ ಹೀಗಿದೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಯಾವುದೇ ಕಾರಣಕ್ಕೂ ಬೆಳಗಿನ ತಿಂಡಿಯನ್ನು ಸ್ಕಿಪ್ ಮಾಡಬೇಡಿ. ಯಾಕಂದ್ರೆ ಇದು ಜೀರ್ಣಕಾರಿ ತೊಂದರೆ ಉಂಟು ಮಾಡುತ್ತದೆ. ಆದಷ್ಟು ಹೆಲ್ದೀ ಬ್ರೇಕ್ ಫಾಸ್ಟ್ ಮಾಡಿ. ಮಕ್ಕಳು ಮತ್ತು ಕಚೇರಿಗೆ ಹೋಗುವವರು ಎಲ್ಲರಿಗೂ ದೋಸೆ ಅಂದ್ರೆ ಇಷ್ಟ. ನೀವು ಬೆಳಗಿನ ತಿಂಡಿಗೆ ಅಕ್ಕಿ ದೋಸೆ ಮಾಡಿ ಬೇಸರಗೊಂಡಿದ್ರೆ ಹೆಸರುಕಾಳು ದೋಸೆ ಮಾಡಿ. ಇದು ದೀರ್ಘಕಾಲ ಹೊಟ್ಟೆ ತುಂಬಿಸಿಡುತ್ತದೆ. ಹಾಗೂ ಶಕ್ತಿ ನೀಡುತ್ತದೆ.

ಮುಂದೆ ಓದಿ ...
  • Share this:

    ಬೆಳಗ್ಗಿನ ತಿಂಡಿ (Morning Breakfast) ಆರೋಗ್ಯಕರ (Healthy) ಮತ್ತು ಉತ್ತಮ ಪೋಷಕಾಂಶ (Nutrients) ಹೊಂದಿದ್ದರೆ ಅದು ಸಾಕಷ್ಟು ಪ್ರಯೋಜನ (Benefits) ನೀಡುತ್ತದೆ. ಅದಾಗ್ಯೂ ಯಾರೆಲ್ಲಾ ತೂಕ ನಿಯಂತ್ರಣ ಮತ್ತು ತೂಕ ನಷ್ಟಕ್ಕೆ (Weight Loss) ಯತ್ನಿಸುತ್ತಿದ್ದಾರೋ ಅವರೆಲ್ಲಾ ಹೆಲ್ದೀ ಉಪಹಾರ ಸೇವನೆಗೆ ಹೆಚ್ಚು ಪ್ರಾಮುಖ್ಯತೆ ನೀಡ್ತಾರೆ. ಇಡೀ ದಿನದ ಉತ್ಪಾದಕತೆ ಮತ್ತು ಶಕ್ತಿ ನೀಡಲು ಬೆಳಗಿನ ತಿಂಡಿ ಪೋಷಕಾಂಶ ಸಮೃದ್ಧವಾಗಿರಬೇಕು. ನೀವು ತಿನ್ನುವ ಆಹಾರವು ತರಕಾರಿ, ಹಣ್ಣು, ಪ್ರೊಟೀನ್ ಮತ್ತು ಫೈಬರ್ ನಿಂದ ಹಾಗೂ ಕಡಿಮೆ ಕ್ಯಾಲೋರಿ ಹೊಂದಿರಬೇಕು. ಇದು ನಿಮ್ಮ ಹಸಿವನ್ನು ನಿಯಂತ್ರಿಸುತ್ತದೆ. ಜೊತೆಗೆ ಶಕ್ತಿ ಮತ್ತು ತೂಕ ನಷ್ಟಕ್ಕೂ ಪ್ರಯೋಜನ ನೀಡುತ್ತದೆ.


    ಬೆಳಗಿನ ತಿಂಡಿಗೆ ಸ್ಪ್ರೌಟ್ಸ್ ದೋಸೆ ಪಾಕವಿಧಾನ


    ನೀವು ಯಾವುದೇ ಕಾರಣಕ್ಕೂ ಬೆಳಗಿನ ತಿಂಡಿಯನ್ನು ಸ್ಕಿಪ್ ಮಾಡಬೇಡಿ. ಯಾಕಂದ್ರೆ ಇದು ಜೀರ್ಣಕಾರಿ ತೊಂದರೆ ಉಂಟು ಮಾಡುತ್ತದೆ. ಆದಷ್ಟು ಹೆಲ್ದೀ ಬ್ರೇಕ್ ಫಾಸ್ಟ್ ಮಾಡಿ. ಮಕ್ಕಳು ಮತ್ತು ಕಚೇರಿಗೆ ಹೋಗುವವರು ಎಲ್ಲರಿಗೂ ದೋಸೆ ಅಂದ್ರೆ ಇಷ್ಟ.


    ನೀವು ಬೆಳಗಿನ ತಿಂಡಿಗೆ ಅಕ್ಕಿ ದೋಸೆ ಮಾಡಿ ಬೇಸರಗೊಂಡಿದ್ರೆ ಹೆಸರುಕಾಳು ದೋಸೆ ಮಾಡಿ. ಇದು ದೀರ್ಘಕಾಲ ಹೊಟ್ಟೆ ತುಂಬಿಸಿಡುತ್ತದೆ. ಹಾಗೂ ಶಕ್ತಿ ನೀಡುತ್ತದೆ. ಆರೋಗ್ಯವೂ ಚೆನ್ನಾಗಿರುತ್ತದೆ.




    ದೇಹಕ್ಕೆ ಉತ್ತಮ ಪೋಷಕಾಂಶ ಸಹ ಸಿಗುತ್ತದೆ. ಮೊಳಕೆಯೊಡೆದ ಹೆಸರುಕಾಳು ಮತ್ತು ಬಾಳೆಹಣ್ಣು ಸೇವನೆ ಸಾಕಷ್ಟು ಪ್ರಯೋಜನಕಾರಿ. ಅದಕ್ಕಾಗಿ ನಾವು ಇಂದು ಸ್ಪ್ರೌಟ್ಸ್ ದೋಸೆ ಮಾಡುವುದು ಹೇಗೆ ಅಂತಾ ತಿಳಿಯೋಣ.


    ಸ್ಪ್ರೌಟ್ಸ್ ದೋಸೆ ಪೌಷ್ಟಿಕಾಂಶದ ಪ್ರಯೋಜನ ನೀಡುತ್ತದೆ. ಸ್ಪ್ರೌಟ್ಸ್ ದೋಸೆ ಆರೋಗ್ಯಕರ ಪಾಕವಿಧಾನ ನೋಡೋಣ.


    ಸ್ಪ್ರೌಟ್ಸ್ ದೋಸೆ ರೆಸಿಪಿ


    ಹೆಸರುಕಾಳಿನ ಮೊಳಕೆಯೊಡೆದ ಕಾಳು ಎರಡು ಕಪ್, ಸಣ್ಣದಾಗಿ ಹೆಚ್ಚಿದ ಒಂದು ಹಸಿರು ಮೆಣಸಿನಕಾಯಿ, ಅರ್ಧ ಕಪ್ ಕೊತ್ತಂಬರಿ ಸೊಪ್ಪು, ಒಂದು ತುಂಡು ತುರಿದ ಶುಂಠಿ, ಸಣ್ಣದಾಗಿ ಹೆಚ್ಚಿದ ಈರುಳ್ಳಿ, ಅರ್ಧ ಟೀಸ್ಪೂನ್ ಕರಿಮೆಣಸು, ಅರ್ಧ ಚಮಚ ಚಾಟ್ ಮಸಾಲಾ, ರುಚಿಗೆ ತಕ್ಕಷ್ಟು ಉಪ್ಪು, ಆಲಿವ್ ಎಣ್ಣೆ ಅಥವಾ ತುಪ್ಪ ಬೇಕು.


    ಸ್ಪ್ರೌಟ್ಸ್ ದೋಸೆ ಮಾಡುವ ವಿಧಾನ


    ಮೊದಲು ನೆನೆಸಿ ಮೊಳಕೆಯೊಡೆದ ಹೆಸರುಕಾಳನ್ನು ಜಾರ್ ನಲ್ಲಿ ಹಾಕಿ ನಯವಾದ ಪೇಸ್ಟ್ ಆಗುವಂತೆ ರುಬ್ಬಿರಿ. ನಂತರ ಅದನ್ನು ಒಂದು ಬಟ್ಟಲಿಗೆ ಹಾಕಿರಿ. ಈಗ ಅದಕ್ಕೆ ಈರುಳ್ಳಿ, ಶುಂಠಿ, ಹಸಿಮೆಣಸಿನಕಾಯಿ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.


    ಸಾಂದರ್ಭಿಕ ಚಿತ್ರ


    ನಂತರ ರುಚಿಗೆ ತಕ್ಕಂತೆ ಉಪ್ಪು, ಕರಿಮೆಣಸು ಮತ್ತು ಚಾಟ್ ಮಸಾಲಾ ಸೇರಿಸಿ. ಸ್ಥಿರತೆಗೆ ಅನುಗುಣವಾಗಿ ನೀರು ಸೇರಿಸಿ. ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ.


    ನಂತರ ಗ್ಯಾಸ್ ಮೇಲೆ ತವಾ ಇಟ್ಟು ಬಿಸಿ ಮಾಡಿ. ಅದಕ್ಕೆ ಆಲಿವ್ ಎಣ್ಣೆ ಅಥವಾ ತುಪ್ಪ ಅನ್ವಯಿಸಿ. ಈಗ ತಯಾರಾದ ಮಿಶ್ರಣವನ್ನು ಚಮಚದಲ್ಲಿ ತೆಗೆದುಕೊಂಡು ತವೆಗೆ ಹಾಕಿ ವೃತ್ತಾಕಾರವಾಗಿ ದೋಸೆ ಮಾಡಿ.


    ಎರಡೂ ಬದಿಯನ್ನು ಚೆನ್ನಾಗಿ ಬೇಯಿಸಿ. ಪ್ಲೇಟ್ ಗೆ ಸರ್ವ್ ಮಾಡಿ. ಸ್ಪ್ರೌಸ್ಟ್ ದೋಸೆಯನ್ನು ನಿಮ್ಮಿಷ್ಟದ ಚಟ್ನಿ, ಹಣ್ಣು ಜೊತೆ ಸೇವಿಸಿ. ಇದು ಪ್ರೋಟೀನ್ ಪ್ರಮುಖ ಪೌಷ್ಟಿಕಾಂಶದ ಉಪಹಾರ ಆಗಿದೆ.


    ಸ್ಪ್ರೌಟ್ಸ್ ದೋಸೆ ಹೇಗೆ ಆರೋಗ್ಯಕರ ಆಯ್ಕೆ?


    ಬೆಳಗಿನ ಉಪಾಹಾರಕ್ಕೆ ಸ್ಪ್ರೌಟ್ಸ್ ದೋಸೆ ಆರೋಗ್ಯಕರ ಆಯ್ಕೆ ಆಗಿದೆ. ಹೆಸರುಕಾಳು ಮೊಳೆಕೆಯೊಡೆದ ಕಾಳುಗಳು ಒಮೆಗಾ 3 ಕೊಬ್ಬಿನಾಮ್ಲಗಳಲ್ಲಿ ಸಮೃದ್ಧವಾಗಿದೆ. ಇದರ ಸೇವನೆಯು ದೇಹದಲ್ಲಿ ಉತ್ತಮ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಿಸುತ್ತದೆ. ಜೊತೆಗೆ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡುತ್ತದೆ.


    ಇದನ್ನೂ ಓದಿ: ಬೆಳಗ್ಗಿನ ತಿಂಡಿಗೆ ಆರೋಗ್ಯಕರ ಬಾಳೆಹಣ್ಣಿನ ಸ್ಮೂಥಿ, ಹೀಗಿದೆ ಹೀಗೆ ತಯಾರಿಸಿ 


    ಇದು ಫೈಬರ್‌ನ ಅತ್ಯುತ್ತಮ ಮೂಲ. ಇದು ನಿಮ್ಮನ್ನು ದೀರ್ಘಕಾಲದವರೆಗೆ ಹಸಿವಾಗದಂತೆ ನೋಡಿಕೊಳ್ಳುತ್ತದೆ. ಮತ್ತು ಜೀರ್ಣಕಾರಿ ಸಮಸ್ಯೆ ನಿವಾರಣೆಗೆ ಸಹಕಾರಿ. ಆದರೆ ಇದನ್ನು ಅತಿಯಾಗಿ ಸೇವಿಸಬೇಡಿ.

    Published by:renukadariyannavar
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು