ಇನ್ನೇನು ಚಳಿಗಾಲ ಮುಗಿದು ಬೇಸಿಗೆ ಆರಂಭದ ದಿನಗಳು ಹತ್ತಿರವಾಗುತ್ತಿವೆ. ಈ ದಿನಗಳಲ್ಲಿ ಬೆಳಗಿನ ತಿಂಡಿಗೆ (Morning Breakfast) ಭಾರವಾದ ಖಾದ್ಯ (Recipe) ಸೇವನೆಗೆ ಮನಸ್ಸಾಗಲ್ಲ. ಅದೂ ಅಲ್ಲದೇ ತುಂಬಾ ಜನರು (People) ತ್ವಚೆಯ ಆರೈಕೆಗೆ (Skin Care) ಹೆಚ್ಚು ಕಾಳಜಿ ವಹಿಸುತ್ತಿದ್ದಾರೆ. ಅವರೆಲ್ಲಾ ಬೆಳಗಿನ ತಿಂಡಿಗೆ ಆರೋಗ್ಯಕರ ಸ್ಮೂಥಿ (Healthy Smoothie) ಸೇವನೆಗೆ ಮನಸ್ಸು ಮಾಡ್ತಾರೆ. ಹಣ್ಣು ಮತ್ತು ತರಕಾರಿಗಳ ಸ್ಮೂಥಿ ಸೇವನೆಯು ಸುಂದರ, ನಿರ್ಮಲ ಮತ್ತು ಹೊಳೆಯುವ ಚರ್ಮ ಹೊಂದಲು ಸಹಕಾರಿ. ಇದು ತೂಕ ನಷ್ಟಕ್ಕೂ ಪ್ರಯೋಜನ ನೀಡುತ್ತದೆ. ನೀವು ದೇಹವನ್ನು ಅಗತ್ಯಕ್ಕೆ ತಕ್ಕಂತೆ ಪೋಷಿಸುವ ಮೂಲಕ ಹೊಳೆಯುವ ಮತ್ತು ಸುಂದರ ತ್ವಚೆ ಪಡೆಯಬಹುದು.
ಬೆಳಗಿನ ತಿಂಡಿಗೆ ಚರ್ಮದ ಕಾಳಜಿಗಾಗಿ ಬೀಟ್ರೂಟ್ ಮತ್ತು ಆವಕಾಡೋ ಸ್ಮೂಥಿ ರೆಸಿಪಿ
ಇತ್ತೀಚಿನ ದಿನಗಳಲ್ಲಿ ಪರಿಸರದಲ್ಲಿ ಹೆಚ್ಚುತ್ತಿರುವ ಮಾಲಿನ್ಯ, ತಪ್ಪು ಆಹಾರ ಪದ್ಧತಿ ಮತ್ತು ಕಳಪೆ ಜೀವನಶೈಲಿಯು 95 ಪ್ರತಿಶತ ಮಹಿಳೆಯರು ವಿವಿಧ ರೀತಿಯ ಚರ್ಮ ಸಂಬಂಧಿ ಸಮಸ್ಯೆಗೆ ತುತ್ತಾಗಲು ಕಾರಣವಾಗುತ್ತಿದೆ. ಹಾಗಾಗಿ ಚರ್ಮಕ್ಕೆ ಸರಿಯಾದ ಕಾಳಜಿ ವಹಿಸುವುದು ಮುಖ್ಯ.
ಚರ್ಮದ ಆರೈಕೆಗೆ ಎಲ್ಲರಿಗೂ ಸಮಯ ಇರಲ್ಲ. ಚರ್ಮದ ಮೇಲೆ ಅನ್ವಯಿಸುವ ಪದಾರ್ಥಕ್ಕಿಂತ ಸೇವನೆ ಮಾಡುವ ಪದಾರ್ಥಗಳು ಆರೋಗ್ಯಕ್ಕೆ ಹೆಚ್ಚು ಲಾಭಕಾರಿ. ಇವುಗಳು ಚರ್ಮದ ಆರೈಕೆಗೆ ಸಹಕಾರಿ. ದೇಹವು ಪೌಷ್ಟಿಕಾಂಶ ಕೊರತೆ ಹೊಂದಿದ್ದರೆ ಚರ್ಮವು ಹೊಳೆಯುವುದಿಲ್ಲ ಮತ್ತು ಸುಂದರವಾಗಿ ಕಾಣಲ್ಲ.
ಅದಕ್ಕಾಗಿ ದೇಹವನ್ನು ಒಳಗಿನಿಂದ ಸಿದ್ಧಪಡಿಸುವುದು ಬಹಳ ಮುಖ್ಯ. ಚರ್ಮದ ನೈಸರ್ಗಿಕ ಹೊಳಪನ್ನು ಕಾಪಾಡಿಕೊಳ್ಳಲು ಸೇಬು ಮತ್ತು ಬೀಟ್‌ರೂಟ್ ಸ್ಮೂಥಿ ಹಾಗೂ ಆವಕಾಡೋ ಸ್ಮೂಥಿ ಪಾಕವಿಧಾನ ಹೇಗೆ ಮಾಡುವುದು ನೋಡೋಣ.
ಬೀಟ್ರೂಟ್ ಮತ್ತು ಸೇಬು ಸ್ಮೂಥಿ ರೆಸಿಪಿ
ಬೇಕಾಗುವ ಪದಾರ್ಥಗಳು ಮತ್ತು ತಯಾರಿಸುವ ವಿಧಾನ ಹೀಗಿದೆ
ಸೇಬು 1, ಬೀಟ್ರೂಟ್ ½, ಮೊಸರು 1 ಕಪ್ ಬೇಕು. ಮೊದಲು ಬೀಟ್ರೂಟ್ ನ ಮೇಲಿನ ಸಿಪ್ಪೆ ತೆಗೆಯಿರಿ. ನಂತರ ಬೀಟ್ರೂಟ್ ನ್ನು ತೊಳೆದು, ಸಣ್ಣ ತುಂಡುಗಳಾಗಿ ಕತ್ತರಿಸಿ.
ನಂತರ ಸೇಬು ಹಣ್ಣನ್ನು ತೊಳೆದು ಸಣ್ಣ ತುಂಡುಗಳಾಗಿ ಕತ್ತರಿಸಿ. ನಂತರ ಸೇಬು ಮತ್ತು ಬೀಟ್ರೂಟ್ ತುಂಡುಗಳನ್ನು ಬ್ಲೆಂಡರ್ ನಲ್ಲಿ ಹಾಕಿ. ಇದಕ್ಕೆ ಸ್ವಲ್ಪ ನೀರು ಸೇರಿಸಿ ಮತ್ತು ಎರಡನ್ನು ಚೆನ್ನಾಗಿ ಮಿಶ್ರಣ ಮಾಡಿ. ನಯವಾದ ಪೇಸ್ಟ್ ತಯಾರಿಸಿ.
ನಂತರ ಮೇಲಿನಿಂದ ಮೊಸರು ಹಾಕಿ. ಮತ್ತೆ ಚೆನ್ನಾಗಿ ಮಿಶ್ರಣ ಮಾಡಿ. ಈಗ ನಿಮ್ಮ ರೆಸಿಪಿ ಸ್ಮೂಥಿ ಸಿದ್ಧವಾಗಿದೆ. ಗ್ಲಾಸ್ ಗೆ ಸುರಿದು ಸೇವಿಸಿ. ನಿಯಮಿತವಾಗಿ ಸೇವಿಸಿ ಪ್ರಯೋಜನ ಪಡೆಯಿರಿ.
ಆವಕಾಡೋ ಸ್ಮೂಥಿ ರೆಸಿಪಿ
ಬೇಕಾಗುವ ಪದಾರ್ಥಗಳು ಮತ್ತು ತಯಾರಿಸುವ ವಿಧಾನ ಹೀಗಿದೆ
1/2 ಕಪ್ ಸರಳ ತೆಂಗಿನ ನೀರು, 2 ಹಣ್ಣಾದ ಕತ್ತರಿಸಿದ ಬಾಳೆಹಣ್ಣುಗಳು, 1 ಕಪ್ ಕತ್ತರಿಸಿದ ಅನಾನಸ್, 1 ಕಪ್ ಕತ್ತರಿಸಿದ ಮಾವು, 2 ಕಪ್ ಪಾಲಕ, 1/2 ಆವಕಾಡೊ ತುಂಡುಗಳು ಬೇಕು. ನಂತರ ಅಗಸೆ ಅಥವಾ ಅಗಸೆ ಬೀಜದ ಎಣ್ಣೆ ಬೇಕು.
ಗಟ್ಟಿಯಾದ ಬ್ಲೆಂಡರ್ ತೆಗೆದುಕೊಳ್ಳಿ. ಅದಕ್ಕೆ ಎಲ್ಲಾ ಪದಾರ್ಥಗಳನ್ನು ಹಾಕಿ ಚೆನ್ನಾಗಿ ರುಬ್ಬಿರಿ. ನಯವಾದ ಪೇಸ್ಟ್ ಆದ ಬಳಿಕ ತೆಂಗಿನ ನೀರನ್ನು ಸೇರಿಸಿ. ಗ್ಲಾಸ್ ಗೆ ಸರ್ವ್ ಮಾಡಿ ಸೇವಿಸಿ.
ಇದನ್ನೂ ಓದಿ: ತೂಕ ಇಳಿಕೆಯಿಂದ ಸಂಧಿವಾತ ಸಮಸ್ಯೆಗೂ ಪರಿಹಾರ, ಹೇಗೆ ಅಂತೀರಾ? ಇಲ್ಲಿದೆ ವಿವರ
ಈ ಎರಡೂ ಆರೋಗ್ಯಕರ ಸ್ಮೂಥಿಗಳು ತ್ವಚೆಯ ಆರೈಕೆ ಮತ್ತು ಹಲವು ಆರೋಗ್ಯ ಪ್ರಯೋಜನ ನೀಡುತ್ತವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ