ದೇಶದಲ್ಲಿ ಹಲವು ಭಾಗಗಳಲ್ಲಿ ಹಲವು ವಿಶಿಷ್ಟ ಖಾದ್ಯಗಳನ್ನು ತಯಾರಿಸಿ ಸೇವನೆ ಮಾಡಲಾಗುತ್ತದೆ. ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿಯ ತಿಂಡಿ (Breakfast) ಜನಪ್ರಿಯವಾಗಿದೆ (Famous). ಭಾರತದಲ್ಲಿ ಕಾಳುಗಳಿಗೆ ಹೆಚ್ಚು ಪ್ರಾಧಾನ್ಯತೆ ಇದೆ. ಕಾಳುಗಳು ದೈನಂದಿನ ಆಹಾರದ (Food) ಭಾಗವಾಗಿದೆ. ಅದರಲ್ಲಿ ರಾಗಿಗೆ (Ragi) ತುಂಬಾ ಪ್ರಮುಖ ಸ್ಥಾನವಿದೆ. ರಾಗಿಯು ಪೌಷ್ಟಿಕ ಧಾನ್ಯಗಳಲ್ಲಿ ಒಂದಾಗಿದೆ. ಇದು ದೇಹ ಮತ್ತು ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನ (Benefits) ನೀಡುತ್ತದೆ. ಪೋಷಕಾಂಶಗಳಿಂದ (Nutrients) ಸಮೃದ್ಧವಾಗಿರುವ ರಾಗಿಯು ಸದೃಢ ಆರೋಗ್ಯಕ್ಕೆ ಸಹಕಾರಿ. ರಾಗಿಯನ್ನು ಹಲವು ಖಾದ್ಯಗಳ ರೂಪದಲ್ಲಿ ಸೇವನೆ ಮಾಡಲಾಗುತ್ತದೆ. ಡಯಟ್ ಮಾಡುವವರು, ತೂಕ ನಷ್ಟಕ್ಕೆ ಪ್ರಯತ್ನಿಸುತ್ತಿರುವವರು ರಾಗಿಯನ್ನು ತಮ್ಮ ಆಹಾರದಲ್ಲಿ ಸೇರಿಸುವುದು ತುಂಬಾ ಮುಖ್ಯ.
ಬೆಳಗಿನ ತಿಂಡಿಗೆ ರಾಗಿಯ ವೆರೈಟಿ ಖಾದ್ಯಗಳು ರೆಸಿಪಿ
ದೇಹವನ್ನು ಅನೇಕ ರೋಗಗಳಿಂದ ರಕ್ಷಿಸಲು ರಾಗಿ ಪ್ರಯೋಜನಕಾರಿ ಆಗಿದೆ. ಅನಾರೋಗ್ಯದ ಸಮಯದಲ್ಲಿ ರಾಗಿ ಗಂಜಿ ಸೇವನೆ ತುಂಬಾ ಪ್ರಯೋಜನಕಾರಿ. ರಾಗಿ ಸೇವನೆಯು ದೇಹವನ್ನು ಆರೋಗ್ಯವಾಗಿಡುತ್ತದೆ.
ರಾಗಿಯ ಕೆಲವು ಪಾಕವಿಧಾನಗಳು ತುಂಬಾ ಟೇಸ್ಟಿ. ಹಾಗೂ ಪೋಷಕಾಂಶ ಭರಿತವಾಗಿವೆ. ಇವುಗಳನ್ನು ಬೆಳಗಿನ ತಿಂಡಿಗೆ ಸೇವಿಸಿದರೆ ಸಾಕಷ್ಟು ಶಕ್ತಿ ಸಿಗುತ್ತದೆ. ಆರೋಗ್ಯ ಚೆನ್ನಾಗಿರುತ್ತದೆ. ದೀರ್ಘಕಾಲ ಹಸಿವು ತಡೆಯುತ್ತದೆ. ಮಧುಮೇಹ ರೋಗಿಗಳು ಸಹ ಇದನ್ನು ತಮ್ಮ ಆಹಾರದಲ್ಲಿ ಸೇರಿಸಬಹುದು.
ಮಧುಮೇಹ ರೋಗಿಗಳು ರಾಗಿಯ ಈ ವೆರೈಟಿ ಖಾದ್ಯಗಳನ್ನು ಬೆಳಗಿನ ತಿಂಡಿಗೆ ಮಾಡಿ ಸೇವನೆ ಮಾಡಿದರೆ ಇದು ಕಾಯಿಲೆ ನಿಯಂತ್ರಿಸಲು ಸಹಾಯ ಮಾಡುತ್ತದೆ. ಇಲ್ಲಿ ನಾವು ರಾಗಿಯ ಆರೋಗ್ಯಕರ ಕೆಲವು ಪಾಕವಿಧಾನಗಳನ್ನು ನೋಡೋಣ.
ರಾಗಿ ಮಾಲ್ಟ್ ರೆಸಿಪಿ
ರಾಗಿ ಮಾಲ್ಟ್ ರೆಸಿಪಿಗೆ ಬೇಕಾಗುವ ಪದಾರ್ಥಗಳೆಂದರೆ: ಒಂದು ಕಪ್ ರಾಗಿ, 10 ಬಾದಾಮಿ, 10 ವಾಲ್ನಟ್ಸ್, 5 ಗೋಡಂಬಿ, ಅರ್ಧ ಕಪ್ ಮಖಾನಾ ಬೇಕು.
ರಾಗಿ ಮಾಲ್ಟ್ ಮಾಡಲು ಮೊದಲು ಯಾವುದೇ ರೀತಿಯ ಎಣ್ಣೆ ಮತ್ತು ತುಪ್ಪವಿಲ್ಲದೆ ಎಲ್ಲಾ ಪದಾರ್ಥಗಳನ್ನು ಬಾಣಲೆಯಲ್ಲಿ ಲಘುವಾಗಿ ಫ್ರೈ ಮಾಡಿ. ನಂತರ ಇದನ್ನು ಮಿಕ್ಸಿಗೆ ಹಾಕಿ ರುಬ್ಬಿರಿ. ನಂತರ ಬೆಚ್ಚಗಿನ ನೀರು ಅಥವಾ ಹಾಲಿನ ಜೊತೆ ಪುಡಿಯನ್ನು ಬೆರೆಸಿ ಸೇವನೆ ಮಾಡಿ.
ಈ ರಾಗಿ ಮಾಲ್ಟ್ ನ್ನು ಬೆಚ್ಚಗಿನ ನೀರಿನ ಜೊತೆ ಸೇವಿಸಲು ಬಯಸಿದರೆ ಅದಕ್ಕೆ ಉಪ್ಪು ಮತ್ತು ನಿಂಬೆ ರಸ ಸೇರಿಸಬಹುದು. ಇನ್ನು ಅದಕ್ಕೆ ಸಕ್ಕರೆ ಅಥವಾ ಬೆಲ್ಲ ಹಾಕಿ ಮಕ್ಕಳಿಗೂ ನೀಡಬಹುದು. ಇದು ಮಕ್ಕಳಿಗೆ ಜೀವಸತ್ವ, ಪೊಟ್ಯಾಸಿಯಮ್ ಮತ್ತು ಕ್ಯಾಲ್ಸಿಯಂ ಪೋಷಕಾಂಶ ಒದಗಿಸುತ್ತದೆ.
ರಾಗಿ ಪರಾಠ ರೆಸಿಪಿ
ರಾಗಿ ರೊಟ್ಟಿ ಮಾಡಲು ರಾಗಿ ಹಿಟ್ಟನ್ನು ತೆಗೆದುಕೊಳ್ಳಿ. ಇದನ್ನು ಬಿಸಿ ನೀರಿನಿಂದ ಚೆನ್ನಾಗಿ ನಾದಿಕೊಳ್ಳಿ. ನಂತರ ಹಿಟ್ಟಿಗೆ ಉಪ್ಪು, ಅಜ್ವೈನ್, ಕಲೋಂಜಿ ಸೇರಿಸಬಹುದು. ಈಗ ನಾದಿರುವ ಹಿಟ್ಟಿನಿಂದ ಚಿಕ್ಕ ಚಿಕ್ಕ ಉಂಡೆ ತಯಾರಿಸಿ.
ಈಗ ಹಿಟ್ಟಿನ ಉಂಡೆಗಳನ್ನು ವೃತ್ತಾಕಾರದಲ್ಲಿ ಲಟ್ಟಿಸಿ. ನಂತರ ತವೆ ಬಿಸಿ ಮಾಡಿ, ಸ್ವಲ್ಪ ತುಪ್ಪ ಅಥವಾ ಎಣ್ಣೆ ಅನ್ವಯಿಸಿ, ರಾಗಿ ಪರಾಠಾ ಹಾಕಿ ಎರಡೂ ಬದಿಯನ್ನು ಚೆನ್ನಾಗಿ ಬೇಯಿಸಿ. ನಿಮ್ಮಿಷ್ಟದ ಚಟ್ನಿ ಜೊತೆ ಸವಿಯಿರಿ.
ರಾಗಿ ಇಡ್ಲಿ ರೆಸಿಪಿ
ಮೊದಲು ಕ್ಯಾರೆಟ್, ಕ್ಯಾಪ್ಸಿಕಂ, ಎಲೆಕೋಸು, ಹೂಕೋಸು, ಈರುಳ್ಳಿ ಎಲ್ಲವನ್ನು ಸಣ್ಣದಾಗಿ ಕತ್ತರಿಸಿ ಇಟ್ಟುಕೊಳ್ಳಿ. ನಂತರ 1 ಇಂಚಿನ ಶುಂಠಿ, 5 ಎಸಳು ಬೆಳ್ಳುಳ್ಳಿ ತುರಿದು ಸೇರಿಸಿ. ತರಕಾರಿಗೆ ಸೇರಿಸಿ. ನಂತರದ ಅದಕ್ಕೆ ರಾಗಿ ಹಿಟ್ಟು ಸೇರಿಸಿ. ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಒಂದು ಲೋಟ ಮೊಸರು ಸೇರಿಸಿ.
ಇದನ್ನೂ ಓದಿ: ಈ ಪದಾರ್ಥಗಳ ಸೇವನೆಯಿಂದ ಆಸಿಡಿಟಿ ಸಮಸ್ಯೆ ಹೆಚ್ಚುತ್ತದೆ, ಹುಷಾರು!
ಚೆನ್ನಾಗಿ ಮಿಶ್ರಣ ಮಾಡಿ. ಸ್ಥಿರತೆಗೆ ತನ್ನಿರಿ. ನಂತರ ಇಡ್ಲಿ ಸ್ಟ್ಯಾಂಡ್ ತೆಗೆದುಕೊಳ್ಳಿ. ಅದರಲ್ಲಿ ಹಿಟ್ಟನ್ನು ಹಾಕಿ ಇಡ್ಲಿ ಮುಚ್ಚಳ ಕವರ್ ಮಾಡಿ, ಬೇಯಿಸಿ. ನಂತರ ನಿಮ್ಮಿಷ್ಟದ ಚಟ್ನಿ ಜೊತೆ ತಿನ್ನಿರಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ