ಚಳಿಗಾಲದಲ್ಲಿ (Winter) ದೇಹವನ್ನು ಬೆಚ್ಚಗೆ ಇರಿಸುವುದು ತುಂಬಾ ಮುಖ್ಯ. ದೆಹಲಿ, ಪಂಜಾಬ್ ಭಾಗಗಳಲ್ಲಿ ಹೆಚ್ಚು ಚಳಿ (Cold) ಇರುತ್ತದೆ. ಅಲ್ಲದೇ ಸೀಸನ್ ಗೆ ತಕ್ಕಂತೆ ನಮ್ಮ ದಿನಚರಿ ಹಾಗೂ ಆಹಾರವು ಬದಲಾಗುತ್ತದೆ. ಚಳಿಗಾಲದಲ್ಲಿ ಜನರು ದೇಹವನ್ನು ಬೆಚ್ಚಗಿರಿಸುವ ಹಾಗೂ ದೀರ್ಘಕಾಲ ಹೊಟ್ಟೆ ತುಂಬಿಸಿಡುವ ಆಹಾರ (Winter Food) ಸೇವನೆಗೆ ಮುಂದಾಗುತ್ತಾರೆ. ಚಳಿಗಾಲದಲ್ಲಿ ಆಗಾಗ್ಗೆ ಹಸಿವಾಗುತ್ತಲೇ ಇರುತ್ತದೆ. ಹೀಗಾಗಿ ದೀರ್ಘಕಾಲ ಹೊಟ್ಟೆ ತುಂಬಿರುವ ಹಾಗೂ ಪೋಷಕಾಂಶ ನೀಡುವ ಪದಾರ್ಥಗಳನ್ನು ಮುಖ್ಯವಾಗಿ ಬೆಳಗಿನ ತಿಂಡಿಯಲ್ಲಿ(Breakfast) ಸೇರಿಸುವುದು ಮುಖ್ಯವಾಗುತ್ತದೆ. ಸಜ್ಜಿ ರೊಟ್ಟಿಯ ಹೆಸರು ನೀವು ಕೇಳಿರಬಹುದು. ಸಜ್ಜಿ ರೊಟ್ಟಿಯನ್ನು ಹೆಚ್ಚಾಗಿ ಚಳಿಗಾಲದಲ್ಲಿ ಅದರಲ್ಲೂ ಸಂಕ್ರಾಂತಿ ಹಬ್ಬದ ಸಮಯದಲ್ಲಿ ಮಾಡಲಾಗುತ್ತದೆ.
ಬೆಳಗಿನ ತಿಂಡಿಗೆ ಸಾಸಿವೆ ಸೊಪ್ಪಿನ ಸಾಗ್ ಮತ್ತು ಮಕ್ಕಿ ರೊಟ್ಟಿ
ಹಾಗೆಯೇ ಸರಸೋಂಕಾ ಸಾಗ್ (ಸಾಸಿವೆ ಸೊಪ್ಪಿನ ಸಾಗ್ ) ಮತ್ತು ಮಕ್ಕಿ ರೊಟ್ಟಿ ತುಂಬಾ ಜನಪ್ರಿಯ ಖಾದ್ಯವಾಗಿದೆ. ಇದನ್ನು ಬೆಳಗಿನ ತಿಂಡಿಗೆ ಯಾವ ರೀತಿ ತಯಾರಿಸಬೇಕು? ಯಾವೆಲ್ಲಾ ಪದಾರ್ಥಗಳನ್ನು ಬಳಸಬೇಕು ಎಂಬುದನ್ನು ಇಲ್ಲಿ ತಿಳಿಯೋಣ.
ಚಳಿಯ ದಿನಗಳಲ್ಲಿ ಹೆಚ್ಚಾಗಿ ಸಾಸಿವೆ ಸೊಪ್ಪಿನ ಸಾಗ್ ಮತ್ತು ಮಕ್ಕಿ ರೋಟಿ ತಿನ್ನುವುದು ರೂಢಿಯಲ್ಲಿದೆ. ಸಂಕ್ರಾಂತಿ ಹಬ್ಬದಲ್ಲಿ ವಿಶೇಷವಾಗಿ ತಯಾರಿಸಲಾಗುತ್ತದೆ. ಪಂಜಾಬ್ ನ ಈ ಸಾಂಪ್ರದಾಯಿಕ ಪಾಕವಿಧಾನ ಸಾಕಷ್ಟು ಜನಪ್ರಿಯತೆ ಪಡೆದಿದೆ. ರೆಸಿಪಿ ಇಲ್ಲಿ ನೋಡೋಣ.
ಸಾಸಿವೆ ಸೊಪ್ಪಿನ ಸಾಗ್ ಮತ್ತು ಮಕ್ಕಿ ರೊಟ್ಟಿ ಮಾಡಲು ಬೇಕಾಗುವ ಪದಾರ್ಥಗಳು
ಸಾಸಿವೆ ಸೊಪ್ಪು 1 ಕೆ.ಜಿ, ಬತುವಾ 250 ಗ್ರಾಂ, ಮೆಂತ್ಯ 250 ಗ್ರಾಂ, ಪಾಲಕ 500 ಗ್ರಾಂ, ಶುಂಠಿ ಪೇಸ್ಟ್ ಎರಡು ಚಮಚ, ಬೆಳ್ಳುಳ್ಳಿ ಪೇಸ್ಟ್ ಎರಡು ಚಮಚ, ಸಣ್ಣದಾಗಿ ಕೊಚ್ಚಿದ ಈರುಳ್ಳಿ, ಐದು ಸಣ್ಣದಾಗಿ ಕೊಚ್ಚಿದ ಟೊಮ್ಯಾಟೋ, ಒಂದು ಬಟ್ಟಲು ಜೋಳದ ಹಿಟ್ಟು, ರುಚಿಗೆ ಉಪ್ಪು ಬೇಕಾಗುತ್ತದೆ.
ಸಾಸಿವೆ ಸೊಪ್ಪಿನ ಸಾಗ್ ತಯಾರಿಸುವ ವಿಧಾನ
ಮೊದಲು ಗ್ರೀನ್ಸ್, ಬತುವಾ, ಮೆಂತ್ಯ ಮತ್ತು ಪಾಲಕ ಚೆನ್ನಾಗಿ ತೊಳೆದು ಕತ್ತರಿಸಿಡಿ. ಸಾಗ್ ಮಾಡಲು ಕುಕ್ಕರ್ ಬಳಸಿ. ಮೊದಲು ಕುಕ್ಕರ್ ನಲ್ಲಿ ಸಾಸಿವೆ, ಬಾತುವಾ, ಮೆಂತ್ಯ ಮತ್ತು ಪಾಲಕ್ ಮಿಶ್ರಣ ಮಾಡಿ. ನಂತರ ಶುಂಠಿ, ಬೆಳ್ಳುಳ್ಳಿ ಮತ್ತು ಹಸಿರು ಮೆಣಸಿನಕಾಯಿಯನ್ನು ಚೆನ್ನಾಗಿ ರುಬ್ಬಿ, ಈ ಪೇಸ್ಟ್ ನ್ನು ಕುಕ್ಕರ್ ಗೆ ಹಾಕಿರಿ.
ಈಗ ಅರಿಶಿನ ಸೇರಿಸಿ, ಸ್ವಲ್ಪ ಹೊತ್ತು 45 ನಿಮಿಷ ಬೇಯಿಸಿ. ಸೊಪ್ಪು ಸಂಪೂರ್ಣವಾಗಿ ಕರಗಿದಾಗ, ಅದಕ್ಕೆ ಎರಡು ಹಿಡಿ ಜೋಳದ ಹಿಟ್ಟು ಸೇರಿಸಿ. ಇದು ಸಾಗ್ ನ ಸ್ಥಿರತೆ ಮತ್ತು ರುಚಿ ಎರಡನ್ನೂ ಸುಧಾರಿಸುತ್ತದೆ.
ಈಗ ಬಾಣಲೆಗೆ ಎರಡು ಚಮಚ ತುಪ್ಪ ಹಾಕಿ, ನಂತರ ಅದಕ್ಕೆ ಕೊಚ್ಚಿದ ಈರುಳ್ಳಿ ಬೇಯಿಸಿ. ನಂತರ ಟೊಮೆಟೊ ಹಾಕಿರಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಈಗ ನಿಮ್ಮ ನೆಚ್ಚಿನ ಸಾಗ್ ರೆಡಿಯಾಗಿದೆ.
ಮಕ್ಕಿ ರೊಟ್ಟಿ ಮಾಡುವ ವಿಧಾನ
ಮಕ್ಕಿ ರೊಟ್ಟಿಯ ಜೊತೆ ಸಾಗ್ ಸೂಪರ್ ಆಗಿರುತ್ತದೆ. ಜೋಳದ ಹಿಟ್ಟು ಒಂದು ಕಪ್, ಒಂದು ಬಟ್ಟಲು ಉಗುರುಬೆಚ್ಚಗಿನ ನೀರು, ರುಚಿಗೆ ಉಪ್ಪು ತೆಗೆದುಕೊಳ್ಳಿ. ಒಂದು ಬಟ್ಟಲಲ್ಲಿ ಜೋಳದ ಹಿಟ್ಟು ಹಾಕಿರಿ. ಸ್ವಲ್ಪ ಉಪ್ಪು ಹಾಕಿ. ಬಿಸಿ ನೀರನ್ನು ಸೇರಿಸುತ್ತಾ ಹಿಟ್ಟನ್ನು ಚೆನ್ನಾಗಿ ನಾದಿಕೊಳ್ಳಿ.
ಹಿಟ್ಟು ತುಂಬಾ ತೆಳುವಾಗದಂತೆ ನೋಡಿಕೊಳ್ಳಿ. ಈಗ ಮಣೆಯ ಮೇಲೆ ತೆಳುವಾಗಿ ರೊಟ್ಟಿ ತಟ್ಟಿರಿ, ಇಲ್ಲವೇ ಲಟ್ಟಿಸಿ. ತವೆ ಬಿಸಿ ಮಾಡಿ, ರೊಟ್ಟಿ ಹಾಕಿ, ಎರಡೂ ಬದಿ ಚೆನ್ನಾಗಿ ಬೇಯಿಸಿ, ನಂತರ ತಟ್ಟೆಗೆ ತೆಗೆಯಿರಿ.
ಇದನ್ನೂ ಓದಿ: ಚಳಿಗಾಲದಲ್ಲಿ ಮೂಲಂಗಿಯನ್ನು ಈ ರೀತಿ ಸಂಗ್ರಹಿಸಿಡಿ, ಇಲ್ಲವಾದರೆ ರುಚಿ ಕೆಡುತ್ತೆ
ರೊಟ್ಟಿಗೆ ನೀವು ತುಪ್ಪ ಹಚ್ಚಿ ಬೇಯಿಸಬಹುದು. ಈಗ ಮಕ್ಕಿ ರೋಟಿ ಸಿದ್ಧವಾಗಿದೆ. ಸಾಗ್ ಜೊತೆ ಸೇವಿಸಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ