• Home
  • »
  • News
  • »
  • lifestyle
  • »
  • Morning Breakfast: ಬೆಳಗ್ಗಿನ ತಿಂಡಿಗೆ ಮೆಡಿಟರೇನಿಯನ್ ಟ್ಯೂನ ಸಲಾಡ್‌ ಮಾಡುವ ವಿಧಾನ ಹೀಗಿದೆ!

Morning Breakfast: ಬೆಳಗ್ಗಿನ ತಿಂಡಿಗೆ ಮೆಡಿಟರೇನಿಯನ್ ಟ್ಯೂನ ಸಲಾಡ್‌ ಮಾಡುವ ವಿಧಾನ ಹೀಗಿದೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಡಯಟ್ ಮಾಡುವವರಿಗಾಗಿ ಬೆಳಗಿನ ತಿಂಡಿಯು ಆರೋಗ್ಯಕರವಾಗಿರಬೇಕು. ಒಂದು ವೇಳೆ ನೀವು ಮೆಡಿಟರೇನಿಯನ್ ಡಯಟ್ ಮಾಡುತ್ತಿದ್ದರೆ, ನಿಮ್ಮ ಆಹಾರದಲ್ಲಿ ಸಲಾಡ್ ಸೇರಿಸಿ. ಇದನ್ನು ತುಂಬಾ ತ್ವರಿತ ಮತ್ತು ವಿವಿಧ ರೀತಿಯಲ್ಲಿ ಮಾಡಿ ಸೇವನೆ ಮಾಡಬಹುದು. ಆ ರೆಸಿಪಿ ಬಗ್ಗೆ ಇಲ್ಲಿ ತಿಳಿಯೋಣ.

  • Share this:

    ಬೆಳಗ್ಗಿನ ತಿಂಡಿಗೆ (Morning Breakfast) ನೀವು ಯಾವಾಗಲೂ ಪರಾಠಾ, ರೋಟಿ, ರೈಸ್, ದೋಸಾ, ಇಡ್ಲಿ ಇದನ್ನೇ ತಿನ್ನಬೇಕು ಅಂತೇನೀಲ್ಲ. ನೀವು ನಿಮಗಿಷ್ಟದ ಬ್ರೇಕ್ ಫಾಸ್ಟ್ ತಿನ್ನಬಹುದು. ಯಾರೆಲ್ಲಾ ತೂಕ ಇಳಿಕೆಗೆ ಡಯಟ್ (Weight Loss Diet) ಮಾಡ್ತಿದ್ದೀರೋ ಅವರೆಲ್ಲಾ ನಿಮ್ಮ ತೂಕ ನಷ್ಟದ ಬಗ್ಗೆ ಹೆಚ್ಚು ಕಾಳಜಿ ವಹಿಸುವುದರ ಜೊತೆಗೆ ತಿಂಡಿಯ ಬಗ್ಗೆ ಆಹಾರದ (Food) ಬಗ್ಗೆಯೂ ಕಾಳಜಿ (Care) ವಹಿಸಿ. ಯಾಕಂದ್ರೆ ಇದು ನಿಮ್ಮನ್ನು ಫಿಟ್ ಆಗಿರಲು ಸಹಾಯ ಮಾಡುತ್ತದೆ. ಡಯಟ್ ಮಾಡುವವರಿಗಾಗಿ ಬೆಳಗಿನ ತಿಂಡಿಯು ಆರೋಗ್ಯಕರವಾಗಿರಬೇಕು. ಒಂದು ವೇಳೆ ನೀವು ಮೆಡಿಟರೇನಿಯನ್ ಡಯಟ್ ಮಾಡುತ್ತಿದ್ದರೆ, ನಿಮ್ಮ ಆಹಾರದಲ್ಲಿ ಸಲಾಡ್ ಸೇರಿಸಿ. ಆ ರೆಸಿಪಿ ಬಗ್ಗೆ ಇಲ್ಲಿ ತಿಳಿಯೋಣ.


    ಬೆಳಗಿನ ತಿಂಡಿಗೆ ಮೆಡಿಟರೇನಿಯನ್ ಟ್ಯೂನ ಸಲಾಡ್ ರೆಸಿಪಿ


    ಅತ್ಯಂತ ಸುಲಭವಾಗಿ, ಕಡಿಮೆ ಸಮಯದಲ್ಲಿ ಹಾಗೂ ದೀರ್ಘಕಾಲ ಹೊಟ್ಟೆ ತುಂಬಿಸಿಡುವ ಖಾದ್ಯದ ಬಗ್ಗೆ ಯೋಚಿಸುತ್ತಿದ್ದರೆ ನೀವು ಸಲಾಡ್ ಮಾಡಿ ಸೇವಿಸಿ. ಅದರಲ್ಲೂ ಮೆಡಿಟರೇನಿಯನ್ ಟ್ಯೂನ ಸಲಾಡ್ ನ್ನು ನೀವು ತ್ವರಿತವಾಗಿ ತಯಾರಿಸಿ ಸೇವನೆ ಮಾಡಬಹುದು.


    ಜಂಕ್ ಫುಡ್ ಮತ್ತು ಇತರೆ ಯಾವುದೋ ತಿಂಡಿ ಸೇವನೆಯ ಬದಲು ಮೆಡಿಟರೇನಿಯನ್ ಟ್ಯೂನ ಸಲಾಡ್ ಮಾಡಿ ಸೇವನೆ ಮಾಡಿ. ಇದರಲ್ಲಿ ನೀವು ಕುರುಕಲು ತರಕಾರಿ, ಫೆಟಾ ಚೀಸ್, ಆಲಿವ್ ಎಣ್ಣೆ ಮತ್ತು ಡಿಜಾನ್ ಸಾಸಿವೆ ಹಾಗೂ ಪೂರ್ವಸಿದ್ಧ ಟ್ಯೂನ ಮೀನು ಹಾಕಿ ಸಂಯೋಜಿಸಿ ತಿನ್ನಬಹುದು.




    ಮೆಡಿಟರೇನಿಯನ್ ಟ್ಯೂನ ಸಲಾಡ್ ಇದನ್ನು ತುಂಬಾ ತ್ವರಿತ ಮತ್ತು ವಿವಿಧ ರೀತಿಯಲ್ಲಿ ಮಾಡಿ ಸೇವನೆ ಮಾಡಬಹುದು. ಹಾಗಿದ್ರೆ ತಡ ಯಾಕೆ, ಬನ್ನಿ ಈ ಟೇಸ್ಟಿ ಮೆಡಿಟರೇನಿಯನ್ ಟ್ಯೂನ್ ಸಲಾಡ್ ಡಯಟ್ ರೆಸಿಪಿ ಮಾಡುವುದು ಹೇಗೆ ಅಂತಾ ತಿಳಿಯೋಣ.


    ಮೆಡಿಟರೇನಿಯನ್ ಟ್ಯೂನ ಸಲಾಡ್‌ ಗೆ ಬೇಕಾಗುವ ಪದಾರ್ಥಗಳು


    ಸೌತೆಕಾಯಿ, ಬ್ರೈನಿ ಕೇಪರ್, ಉಪ್ಪು, ಫೆಟಾ, ಡಿಜಾನ್ ಸಾಸಿವೆ. ಪೂರ್ವಸಿದ್ಧ ಟ್ಯೂನ ಮೀನು, ನೀರು, ಎಣ್ಣೆ, ಕತ್ತರಿಸಿದ ಕೆಂಪು ಈರುಳ್ಳಿ, ಕೆಂಪು ಬೆಲ್ ಪೆಪರ್, ಸೌತೆಕಾಯಿ, ವಿವಿಧ ತರಕಾರಿಗಳು, ಬೀಜಗಳು, ಡ್ರೈ ಫ್ರೂಟ್ಸ್, ಬಿಳಿ ವೈನ್ ವಿನೆಗರ್, ಕೋಷರ್ ಉಪ್ಪು, ಫೆಟಾ ಚೀಸ್ ಬೇಕು.


    ಮೆಡಿಟರೇನಿಯನ್ ಟ್ಯೂನ ಸಲಾಡ್‌ ಮಾಡುವ ವಿಧಾನ


    ಮೊದಲು ಟ್ಯೂನ ಮೀನುಗಳನ್ನು ಫ್ಲೇಕ್ ಮಾಡಿ. ನಂತರ ತರಕಾರಿಗಳನ್ನು ಕತ್ತರಿಸಿ ಮತ್ತು ಒಟ್ಟಿಗೆ ಮಿಶ್ರಣ ಮಾಡಿ. ಒಂದು ಪ್ಯಾನ್ ಬಿಸಿ ಮಾಡಿ. ಈಗ ಕತ್ತರಿಸಿದ ಟೊಮ್ಯಾಟೊ ಮತ್ತು ಬೇಯಿಸಿದ ಮೊಟ್ಟೆ ಸೇರಿಸಿ.


    ಸಾಂದರ್ಭಿಕ ಚಿತ್ರ


    ಸ್ಯಾಂಡ್‌ವಿಚ್ ಬ್ರೆಡ್ ಸಣ್ಣ ಸ್ಲೈಸ್ ಮಾಡಿ ಹಾಕಿರಿ. ಲೆಟಿಸ್ ಎಲೆ ಹಾಕಿರಿ. ಗ್ಲುಟನ್ ಫ್ರೀ ನಟ್ ಕ್ರ್ಯಾಕರ್ಸ್, ಆವಕಾಡೋ ಹಾಕಿರಿ. ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿ. ಖಾರ, ಉಪ್ಪು, ಮಸಾಲೆ , ಎಣ್ಣೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ, ಬಿಸಿಯಾಗಿದ್ದಾಗ ಬಡಿಸಿ.


    ಮೆಡಿಟರೇನಿಯನ್ ಆಹಾರ ಕ್ರಮವು ಗ್ರೀಸ್, ಇಟಲಿ ಮತ್ತು ಮೆಡಿಟರೇನಿಯನ್ ಸಮುದ್ರದ ಗಡಿಯಲ್ಲಿರುವ ದೇಶಗಳ ಸಾಂಪ್ರದಾಯಿಕ ಪಾಕಪದ್ಧತಿಯಾಗಿದೆ. ವಿವಿಧ ತರಕಾರಿ ಸೇರಿಸಲಾಗುತ್ತದೆ.


    ಇದನ್ನೂ ಓದಿ: ದೇಹಕ್ಕೆ ಕ್ಯಾಲ್ಸಿಯಂ ಒದಗಿಸಲು ಈ ಸೂಪರ್ ಫುಡ್ ಸೇವಿಸಿ 


    ಆಹಾರವು ಬೀಜಗಳು, ಮೀನು, ಆಲಿವ್ ಎಣ್ಣೆ, ಸಾಂದರ್ಭಿಕವಾಗಿ ಕೆಂಪು ಮಾಂಸ ಮತ್ತು ಸಣ್ಣ ಪ್ರಮಾಣದ ಚೀಸ್ ಮತ್ತು ವೈನ್ ಹೊಂದಿರುತ್ತದೆ. ಹೀಗಾಗಿ ಇದು ಡಯಟ್ ಮತ್ತು ವಯಸ್ಸಾಗುವಿಕೆ ವಿರೋಧಿ ಪ್ರಕ್ರಿಯೆಗೆ ಸಹಾಯ ಮಾಡುತ್ತದೆ ಅಂತಾರೆ ತಜ್ಞರು.

    Published by:renukadariyannavar
    First published: