• Home
  • »
  • News
  • »
  • lifestyle
  • »
  • Morning Breakfast: ಬೆಳಗಿನ ತಿಂಡಿಗೆ ತಿನ್ನಿ ಮಸಾಲಾ ಸ್ಪ್ರೌಟ್ಸ್, ಇಲ್ಲಿದೆ ಮಾಡೋ ವಿಧಾನ, ಇದು ತೂಕ ನಷ್ಟಕ್ಕೂ ಸಹಕಾರಿ!

Morning Breakfast: ಬೆಳಗಿನ ತಿಂಡಿಗೆ ತಿನ್ನಿ ಮಸಾಲಾ ಸ್ಪ್ರೌಟ್ಸ್, ಇಲ್ಲಿದೆ ಮಾಡೋ ವಿಧಾನ, ಇದು ತೂಕ ನಷ್ಟಕ್ಕೂ ಸಹಕಾರಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಆರೋಗ್ಯಕರ ಆಹಾರದ ವಿಷಯಕ್ಕೆ ಬಂದಾಗ ಬೆಳಗಿನ ಉಪಾಹಾರಕ್ಕಾಗಿ ಟೇಸ್ಟಿ ಮತ್ತು ಪೌಷ್ಟಿಕಾಂಶಭರಿತ ಉಪಹಾರ ಸೇವನೆ ಮಾಡಬೇಕು. ಇದು ತುಂಬಾ ಪ್ರಯೋಜನಕಾರಿ. ಇಂದು ನಾವು ಮಸಾಲೆಯುಕ್ತ ಮೊಳಕೆ ಕಾಳು ರೆಸಿಪಿ ಮಾಡುವುದು ಹೇಗೆ ಅಂತಾ ನೋಡೋಣ.

  • Share this:

    ಬೆಳಗಿನ ತಿಂಡಿಗೆ (Morning Breakfast) ನೀವು ಕಡಿಮೆ ಸಮಯದಲ್ಲಿ ಮಾಡಿ ಸೇವನೆ ಮಾಡಬಹುದಾದ ತಿಂಡಿ ಅಂದ್ರೆ ಮಸಾಲಾ ಸ್ಪ್ರೌಟ್ಸ್ ರೆಸಿಪಿ (Masala Sprouts Recipe). ಅಂದ ಹಾಗೆ ಮಸಾಲಾ ಸ್ಪ್ರೌಟ್ಸ್ ರೆಸಿಪಿ ನಿಮ್ಮ ಕಡುಬಯಕೆಗಳನ್ನು ನಿವಾರಿಸುತ್ತದೆ. ಹಾಗೂ ರುಚಿ ಹಾಗೂ ಆರೋಗ್ಯ (Tasty And Healthy) ಹೆಚ್ಚಿಸುತ್ತದೆ. ಇನ್ನು ಮಸಾಲಾ ಸ್ಪ್ರೌಟ್ಸ್ ರೆಸಿಪಿಯನ್ನು ಸಂಜೆಯ ಉಪಹಾರವಾಗಿಯೂ ಸೇವನೆ ಮಾಡಬಹುದು. ಇದು ನಿಮಗೆ ಶಕ್ತಿ ನೀಡುತ್ತದೆ. ನೀವು ಪೂರ್ಣ ಶಕ್ತಿ ಮತ್ತು ಆರೋಗ್ಯ ಹಾಗೂ ತೂಕ ಇಳಿಕೆಗೂ ಮಸಾಲಾ ಸ್ಪ್ರೌಟ್ಸ್ ರೆಸಿಪಿ ಸೇವನೆ ಮಾಡುವುದು ಬೆಸ್ಟ್. ಆದಷ್ಟು ಆಹಾರ ಕ್ರಮದಲ್ಲಿ ಆರೋಗ್ಯಕರ ಪದಾರ್ಥ ಸೇರಿಸುವುದು ಮುಖ್ಯ.


    ಬೆಳಗಿನ ತಿಂಡಿಗೆ ಮಸಾಲಾ ಸ್ಪ್ರೌಟ್ಸ್ ರೆಸಿಪಿ


    ಆರೋಗ್ಯಕರ ಆಹಾರದ ವಿಷಯಕ್ಕೆ ಬಂದಾಗ ಬೆಳಗಿನ ಉಪಾಹಾರಕ್ಕಾಗಿ ಟೇಸ್ಟಿ ಮತ್ತು ಪೌಷ್ಟಿಕಾಂಶಭರಿತ ಉಪಹಾರ ಸೇವನೆ ಮಾಡಬೇಕು. ಇದು ತುಂಬಾ ಪ್ರಯೋಜನಕಾರಿ. ಇಂದು ನಾವು ಮಸಾಲೆಯುಕ್ತ ಮೊಳಕೆ ಕಾಳು ರೆಸಿಪಿ ಮಾಡುವುದು ಹೇಗೆ ಅಂತಾ ನೋಡೋಣ.


    ಮಸಾಲಾ ಸ್ಪ್ರೌಟ್ಸ್ ರೆಸಿಪಿ ಪ್ರಯೋಜನಗಳು


    ಪೋಷಕಾಂಶಗಳಿಂದ ಸಮೃದ್ಧವಾಗಿವೆ


    ಮೊಳಕೆ ಕಾಳುಗಳಲ್ಲಿ ಜೀವಸತ್ವಗಳು ಸಮೃದ್ಧವಾಗಿವೆ. ಜೊತೆಗೆ ಫೈಬರ್, ರಂಜಕ, ಮೆಗ್ನೀಸಿಯಮ್, ಪ್ರೋಟೀನ್, ವಿಟಮಿನ್, ಖನಿಜಗಳು, ಮೆಗ್ನೀಸಿಯಮ್ ಮತ್ತು ಕಬ್ಬಿಣ ಗುಣ ಒಳಗೊಂಡಿದೆ. ಇದು ಅನೇಕ ರೋಗಗಳಿಂದ ದೂರವಿರಿಸುತ್ತದೆ ಮತ್ತು ತೂಕ ಕಡಿಮೆ ಮಾಡುತ್ತದೆ.




    ತೂಕ ನಿಯಂತ್ರಿಸುತ್ತದೆ


    ತೂಕ ಹೆಚ್ಚಾಗುವ ಸಮಸ್ಯೆ ನಿಯಂತ್ರಣಕ್ಕೆ ಮೊಳಕೆ ಕಾಳುಗಳನ್ನು ಸೇವಿಸುವುದು ಉತ್ತಮ ಆಯ್ಕೆಯಾಗಿದೆ. ಇದು ದೀರ್ಘಕಾಲದವರೆಗೆ ಹೊಟ್ಟೆ ತುಂಬಿದ ಭಾವನೆ ನೀಡುತ್ತದೆ. ಆಗಾಗ್ಗೆ ತಿನ್ನುವುದನ್ನು ತಪ್ಪಿಸಬಹುದು.


    ಮಧುಮೇಹ ನಿಯಂತ್ರಿಸುತ್ತದೆ


    ಮಧುಮೇಹ ರೋಗಿಗಳಿಗೆ ಮೊಳಕೆ ಕಾಳು ಉತ್ತಮ ಆಹಾರ. ಧಾನ್ಯಗಳ ಸೇವನೆಯು ಪ್ರಯೋಜನಕಾರಿಯಾಗಿದೆ. ರಕ್ತದ ಸಕ್ಕರೆ ಮಟ್ಟವು ಸಹ ನಿಯಂತ್ರಿಸಲ್ಪಡುತ್ತದೆ.


    ಕ್ಯಾನ್ಸರ್ ಅಪಾಯ ಕಡಿಮೆ ಮಾಡುತ್ತದೆ


    ಮೊಳಕೆ ಕಾಳುಗಳನ್ನು ದಿನನಿತ್ಯ ಸೇವಿಸಿದರೆ ಕ್ಯಾನ್ಸರ್ ನಂತಹ ಮಾರಣಾಂತಿಕ ಕಾಯಿಲೆಗಳ ವಿರುದ್ಧವೂ ರಕ್ಷಣೆ ಸಿಗುತ್ತದೆ. ಉತ್ಕರ್ಷಣ ನಿರೋಧಕ ಗುಣಗಳು ಗೆಡ್ಡೆಗಳ ಅಪಾಯ ಸಹ ಕಡಿಮೆ ಮಾಡುತ್ತದೆ.


    ಆರೋಗ್ಯಕರ ಹೃದಯ


    ಬೆಳಗಿನ ಉಪಾಹಾರದಲ್ಲಿ ಮೊಳಕೆ ಕಾಳು ಸೇವನೆ ಹೃದಯದ ಆರೋಗ್ಯ ಕಾಪಾಡುತ್ತದೆ. ಇದು ಒಮೆಗಾ 3 ಕೊಬ್ಬಿನಾಮ್ಲಗಳ ಉತ್ತಮ ಮೂಲ. ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿ. ಅಧಿಕ ರಕ್ತದೊತ್ತಡ ಅಪಾಯ ಕಡಿಮೆ ಮಾಡುತ್ತದೆ. ಕೊಲೆಸ್ಟ್ರಾಲ್ ಮಟ್ಟ ನಿಯಂತ್ರಿಸುತ್ತದೆ.


    ಮಸಾಲಾ ಸ್ಪ್ರೌಟ್ಸ್ ರೆಸಿಪಿ


    ಬೇಕಾಗುವ ಪದಾರ್ಥಗಳು


    ಮೊಳಕೆಯೊಡೆದ ಹೆಸರು ಕಾಳು ಒಂದು ಕಪ್, ಸಣ್ಣದಾಗಿ ಕೊಚ್ಚಿದ ಟೊಮೆಟೊ ಅರ್ಧ ಕಪ್, ಸಣ್ಣದಾಗಿ ಕೊಚ್ಚಿದ ಕೆಂಪು ಕ್ಯಾಪ್ಸಿಕಂ ಕಾಲು ಕಪ್, ಸಣ್ಣದಾಗಿ ಕೊಚ್ಚಿದ ಹಳದಿ ಕ್ಯಾಪ್ಸಿಕಂ ಕಾಲು ಕಪ್, ಸಣ್ಣದಾಗಿ ಕೊಚ್ಚಿದ ಕೊತ್ತಂಬರಿ ಕಾಲು ಕಪ್, ನುಣ್ಣಗೆ ಕತ್ತರಿಸಿದ ಹಸಿರು ಮೆಣಸಿನಕಾಯಿ ಒಂದು ಟೀಸ್ಪೂನ್, ತುರಿದ ತಾಜಾ ತೆಂಗಿನಕಾಯಿ ಕಾಲು ಕಪ್,


    ತಾಜಾ ನಿಂಬೆ ರಸ ಒಂದು ಟೀಸ್ಪೂನ್, ಹುರಿದ ಜೀರಿಗೆ ಪುಡಿ ಒಂದು ಟೀಸ್ಪೂನ್, ಕಪ್ಪು ಉಪ್ಪು ಅಗತ್ಯಕ್ಕೆ ತಕ್ಕಷ್ಟು, ಕಲ್ಲು ಉಪ್ಪು ಅಗತ್ಯಕ್ಕೆ ತಕ್ಕಷ್ಟು, ಹುರಿದ ಶೇಂಗಾ ಕಾಲು ಕಪ್, ಕೊತ್ತಂಬರಿ ಸೊಪ್ಪು ಮತ್ತು ನಿಂಬೆ ರಸ ಬೇಕು.


    ಇದನ್ನೂ ಓದಿ: ಮಹಿಳೆಯರು ಯೋನಿಯ ಆರೋಗ್ಯ ಕಾಪಾಡಲು ಸಸ್ಯಾಹಾರ ಡಯಟ್ ಬೆಸ್ಟ್ ಅಂತಾರೆ ತಜ್ಞರು!


    ಮಸಾಲಾ ಸ್ಪ್ರೌಟ್ಸ್ ರೆಸಿಪಿ ಹೇಗೆ ತಯಾರಿಸುವುದು


    ಮೊದಲು ದೊಡ್ಡ ಬಟ್ಟಲನ್ನು ತೆಗೆದುಕೊಳ್ಳಿ. ಈಗ ಅದಕ್ಕೆ ಮೊಳಕೆ ಕಾಳು ಮತ್ತು ಎಲ್ಲಾ ತರಕಾರಿ ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣಕ್ಕೆ ಎಲ್ಲಾ ಮಸಾಲೆ ಪದಾರ್ಥ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಮಸಾಲೆಗಳು ಮಿಶ್ರಣವಾದ ನಂತರ ನಿಂಬೆ ರಸ ಮತ್ತು ಕೊತ್ತಂಬರಿ ಸೊಪ್ಪನ್ನು ಸೇರಿಸಿ. ಖಾದ್ಯ ಸಿದ್ಧವಾಗಿದೆ. ಹಾಯಾಗಿ ಸೇವಿಸಿ.

    Published by:renukadariyannavar
    First published: