• Home
  • »
  • News
  • »
  • lifestyle
  • »
  • Morning Breakfast: ಬೆಳಗಿನ ತಿಂಡಿಗೆ ಆರೋಗ್ಯಕರ ಬಾಳೆಹಣ್ಣು ಬಾದಾಮಿ ಹಲ್ವಾ ರೆಸಿಪಿ

Morning Breakfast: ಬೆಳಗಿನ ತಿಂಡಿಗೆ ಆರೋಗ್ಯಕರ ಬಾಳೆಹಣ್ಣು ಬಾದಾಮಿ ಹಲ್ವಾ ರೆಸಿಪಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಇಂದು ನಾವು ಎರಡು ಬೆಳಗಿನ ತಿಂಡಿಗೆ ಆರೋಗ್ಯಕರ ರೆಸಿಪಿ ತಂದಿದ್ದೇವೆ. ಆರೋಗ್ಯಕರ ಮತ್ತು ಟೇಸ್ಟಿ ಓಟ್ಸ್ ಮತ್ತು ಬಾಳೆಹಣ್ಣಿನ ಸ್ವೀಟ್ ರೆಸಿಪಿ ಬಗ್ಗೆ ನೋಡೋಣ.

  • Share this:

    ಆರೋಗ್ಯದ ಬಗ್ಗೆ ಕಾಳಜಿ (Care) ವಹಿಸುವುದು ತುಂಬಾ ಮುಖ್ಯ. ಜೊತೆಗೆ ಬೆಳಗಿನ ತಿಂಡಿ ((Morning Breakfast) ಟೇಸ್ಟಿ ಮತ್ತು ಆರೋಗ್ಯಕರ (Tasty And Healthy) ಆಗಿರುವುದು ಮುಖ್ಯ. ವಾರದಲ್ಲಿ ಒಂದು ದಿನ ಬೆಳಗ್ಗೆ ತಿಂಡಿಗೆ ಸಿಹಿ (Sweet) ಮಾಡಿ ಸೇವಿಸುವುದು ಉತ್ತಮ ಆಯ್ಕೆ ಆಗಲಿದೆ. ಹಾಗೆಯೇ ಓಟ್ಸ್ ರೆಸಿಪಿ (Oats Recipe) ಸೇವನೆ ಕೂಡ ಹೆಲ್ದೀ ಆಗಿರಲಿದೆ. ಆರೋಗ್ಯದ ಬಗ್ಗೆ ಸ್ವಲ್ಪ ಜಾಗೃತೆ ವಹಿಸುತ್ತಿದ್ದರೆ ಆಹಾರದಲ್ಲಿ ಸಕ್ಕರೆ ಬಳಸಬೇಡಿ. ಇಂದು ನಾವು ಎರಡು ಬೆಳಗಿನ ತಿಂಡಿಗೆ ಹೆಲ್ದೀ ರೆಸಿಪಿ ತಂದಿದ್ದೇವೆ. ಇದಕ್ಕೆ ಆರೋಗ್ಯಕರ ಮತ್ತು ನೈಸರ್ಗಿಕ ಸಕ್ಕರೆ ಸಹ ಬಳಸಬಹುದು. ಆರೋಗ್ಯಕರ ಮತ್ತು ಟೇಸ್ಟಿ ಓಟ್ಸ್ ಮತ್ತು ಬಾಳೆಹಣ್ಣಿನ ಸ್ವೀಟ್ ರೆಸಿಪಿ ಬಗ್ಗೆ ನೋಡೋಣ.


    ದೇಹದ ಆರೋಗ್ಯ ಕಾಪಾಡಲು ಆರೋಗ್ಯಕರ ಆಹಾರ


    ಒಟ್ಟಾರೆ ದೇಹದ ಆರೋಗ್ಯ ಕಾಪಾಡಲು ಆರೋಗ್ಯಕರ ಆಹಾರ ಸೇವನೆ ಮುಖ್ಯ. ಪೋಷಕ ಪದಾರ್ಥಗಳು ಆರೋಗ್ಯ ಸಮಸ್ಯೆ ದೂರ ಮಾಡುತ್ತವೆ. ದೇಹದಲ್ಲಿ ಕಬ್ಬಿಣದ ಕೊರತೆ, ಜೀರ್ಣಾಂಗ ವ್ಯವಸ್ಥೆ ಸಮಸ್ಯೆ ಅಥವಾ ಅಧಿಕ ರಕ್ತದೊತ್ತಡ ಅಥವಾ ಹೆಚ್ಚಿದ ಕೊಲೆಸ್ಟ್ರಾಲ್ ಸಮಸ್ಯೆ ತೆಗೆದು ಹಾಕುವುದು ಮುಖ್ಯ.


    ತಾಲೀಮು ಪೂರ್ವ ಮತ್ತು ನಂತರ ಬೆಳಗಿನ ತಿಂಡಿ ಮುಖ್ಯ. ವ್ಯಾಯಾಮ ಪ್ರಾರಂಭಿಸುವ ಮೊದಲು ದೇಹದಲ್ಲಿ ಸಾಕಷ್ಟು ಶಕ್ತಿ ಹೊಂದಿರುವುದು ಮುಖ್ಯ. ವ್ಯಾಯಾಮದ ಸಮಯದಲ್ಲಿ ನೀವು ಹೆಚ್ಚು ಕಾಲ ಸಕ್ರಿಯವಾಗಿರಲು ಸಾಧ್ಯ ಆಗಲ್ಲ. ವ್ಯಾಯಾಮದ ನಂತರ ದೇಹಕ್ಕೆ ಸಾಕಷ್ಟು ಶಕ್ತಿ ಅಗತ್ಯವಿದೆ.


    ಇದನ್ನೂ ಓದಿ: ಅಜೀರ್ಣ ಸಮಸ್ಯೆಗೆ ಈ ಕಾಳು ಪರಿಹಾರ ಅನ್ನುತ್ತೆ ಆಯುರ್ವೇದ!


    ಬಾಳೆ ಬಾದಾಮಿ ಹಲ್ವಾ ರೆಸಿಪಿ


    ತಯಾರಿಸಲು ಬೇಕಾಗುವ ಪದಾರ್ಥಗಳು


    ಇದನ್ನು ತಯಾರಿಸಲು ಬಳಸುವ ಪದಾರ್ಥಗಳಾದ ಬಾಳೆಹಣ್ಣು, ಓಟ್ಸ್ ಮತ್ತು ಬಾದಾಮಿ ಎಲ್ಲಾ ಅಗತ್ಯ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. ಬಾಳೆಹಣ್ಣಿನಲ್ಲಿರುವ ಕಾರ್ಬೋಹೈಡ್ರೇಟ್‌ಗಳು ಸುಲಭವಾಗಿ ಜೀರ್ಣ ಆಗುತ್ತವೆ. ಅಲ್ಲದೆ ಇದರಲ್ಲಿ ಪೊಟ್ಯಾಶಿಯಂ ಸಮೃದ್ಧ ಆಗಿದೆ.


    ಅದೇ ವೇಳೆ ಓಟ್ಸ್ ಕೂಡ ತುಂಬಾ ಪ್ರಯೋಜನಕಾರಿ ಆಗಿದೆ. ಮತ್ತು ದೇಹದಲ್ಲಿ ಶಕ್ತಿಯ ಮಟ್ಟ ಕಾಪಾಡುತ್ತದೆ. ಬಾದಾಮಿಯಲ್ಲಿ ಮೆಗ್ನೀಷಿಯಮ್ ಸಮೃದ್ಧ ಆಗಿದೆ. ಇದು ನಿಮ್ಮ ಸ್ನಾಯುವಿನ ಆರೋಗ್ಯ ಉತ್ತೇಜಿಸುತ್ತದೆ. ಮತ್ತು ಶಕ್ತಿ ಉತ್ಪಾದಿಸುವಾಗ ದೇಹದಲ್ಲಿ ಎಲೆಕ್ಟ್ರೋಲೈಟ್ ಸಮತೋಲನ ನಿರ್ವಹಿಸುತ್ತದೆ.


    ಬೇಕಾಗುವ ಪದಾರ್ಥಗಳು


    ಸಣ್ಣ ತುಂಡುಗಳಾಗಿ ಕತ್ತರಿಸಿರುವ ಎರಡು ಬಾಳೆಹಣ್ಣು, ಒಂದು ಕಪ್ ಓಟ್ಸ್, ಅರ್ಧ ಕಪ್ ಚಿಯಾ ಬೀಜಗಳು, ಒಂದು ಕಪ್ ಹಾಲು, ಸಣ್ಣ ತುಂಡುಗಳಾಗಿ ಕತ್ತರಿಸಿದ ಆರು ಬಾದಾಮಿ, ಒಂದು ಟೀ ಸ್ಪೂನ್ ಜೇನುತುಪ್ಪ, ಸಣ್ಣ ತುಂಡುಗಳಾಗಿ ಕತ್ತರಿಸಿದ ಎರಡು ಖರ್ಜೂರ.


    ಬಾಳೆಹಣ್ಣು ಮತ್ತು ಬಾದಾಮಿ ಹಲ್ವಾ ಹೇಗೆ ತಯಾರಿಸುವುದು


    ಮೊದಲು ಓಟ್ಸ್ ಮತ್ತು ಚಿಯಾ ಬೀಜಗಳನ್ನು ಅರ್ಧ ಕಪ್ ಹಾಲಿಗೆ ಹಾಕಿ ಮತ್ತು 10 ನಿಮಿಷಗಳ ಕಾಲ ಬಿಡಿ. ಈಗ ಪ್ಯಾನ್ ಅನ್ನು ಇನ್ನೊಂದು ಬದಿಯಲ್ಲಿ ಮಧ್ಯಮ ಉರಿಯಲ್ಲಿ ಬಿಸಿ ಮಾಡಿ, ಉಳಿದ ಹಾಲನ್ನು ಹಾಕಿ. ಹಾಲು ಸ್ವಲ್ಪ ಬಿಸಿಯಾದಾಗ, ಬಾಳೆಹಣ್ಣು, ಖರ್ಜೂರ ಮತ್ತು ಬಾದಾಮಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ನಂತರ 30 ಸೆಕೆಂಡುಗಳ ಕಾಲ ಬೇಯಿಸಿ.


    ಈಗ ಹಾಲಿನೊಂದಿಗೆ ಓಟ್ಸ್ ಮತ್ತು ಚಿಯಾ ಬೀಜ ಸೇರಿಸಿ. ಮತ್ತು 1 ನಿಮಿಷ ಬೇಯಿಸಿ. ನೀವು ಸ್ಥಿರತೆ ದಪ್ಪ ಅಥವಾ ತೆಳ್ಳಗೆ ಮಾಡಬಹುದು. ನಿಮಿಷ ನಂತರ, ಗ್ಯಾಸ್ ಆಫ್ ಮಾಡಿ. ಮತ್ತು ಒಂದು ಚಮಚ ಜೇನುತುಪ್ಪ ಸೇರಿಸಿ ಮತ್ತು ಮಿಶ್ರಣ ಮಾಡಿ. ಈಗ ಚಿಯಾ ಬೀಜಗಳಿಂದ ಅಲಂಕರಿಸಿ ಸೇವಿಸಿ.


    ಆಪಲ್ ವಾಲ್ನಟ್ ಸಲಾಡ್ ರೆಸಿಪಿ


    ಸೇಬು ಅಥವಾ ವಾಲ್​​ನಟ್ಸ್ ಆಗಿರಲಿ, ಎರಡೂ ಪೋಷಕಾಂಶಗಳ ಅತ್ಯುತ್ತಮ ಮೂಲವಾಗಿದೆ. ಹೃದಯದ ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ.


    ಬೇಕಾಗುವ ಪದಾರ್ಥಗಳು


    ಸಣ್ಣ ತುಂಡುಗಳಾಗಿ ಕತ್ತರಿಸಿದ ಎರಡು ಸೇಬು, ಅರ್ಧ ಕಪ್ ವಾಲ್ನಟ್ಸ್, ಎರಡು ಟೀ ಸ್ಪೂನ್ ಜೇನುತುಪ್ಪ, ಅರ್ಧ ಕಪ್ ಮೊಸರು, ಅರ್ಧ ಕಪ್ ಒಣದ್ರಾಕ್ಷಿ,.


    ಇದನ್ನೂ ಓದಿ: ಹಸಿ ಹಾಲನ್ನು ಚರ್ಮ ಮತ್ತು ಕೂದಲಿನ ಆರೈಕೆಗೆ ಹೀಗೂ ಬಳಸಬಹುದು


    ಆಪಲ್ ವಾಲ್​​ನಟ್ ಸಲಾಡ್ ರೆಸಿಪಿ ಹೀಗೆ ತಯಾರಿಸಿ


    ಒಂದು ಬೌಲ್ ತೆಗೆದುಕೊಂಡು ಅದರಲ್ಲಿ ಕತ್ತರಿಸಿದ ಸೇಬು, ಒಣದ್ರಾಕ್ಷಿ ಮತ್ತು ವಾಲ್ನಟ್ಸ್ ಹಾಕಿ. ಈಗ ಅದಕ್ಕೆ ಮೊಸರು ಮತ್ತು ಜೇನುತುಪ್ಪ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ನಂತರ ಸೇವಿಸಿ.

    Published by:renukadariyannavar
    First published: