ಫೈಬರ್ ಮತ್ತು ಪ್ರೋಟೀನ್ ಸಮೃದ್ಧ ಓಟ್ ಮೀಲ್ (Oat Meal) ಬೆಳಗಿನ ಉಪಹಾರಕ್ಕೆ (Morning Breakfast) ಬೆಸ್ಟ್ ಆಯ್ಕೆ ಅನ್ನೋದು ತಜ್ಞರ ಅಭಿಪ್ರಾಯ ಕೂಡ ಆಗಿದೆ. ರಾತ್ರಿ ಊಟಕ್ಕೂ ಆರೋಗ್ಯಕರ (Healthy) ಆಯ್ಕೆ ಆಗಿದೆ. ಓಟ್ ಮೀಲ್ ಎಲ್ಲರಿಗೂ ಪ್ರಯೋಜನಕಾರಿ (Beneficial). ಫಿಟ್ನೆಸ್ ಫ್ರೀಕ್ನಿಂದ ಮಧುಮೇಹ ರೋಗಿಗಳವರೆಗೆ ಎಲ್ಲರೂ ಸೇವನೆ ಮಾಡಬಹುದು. ಅದಾಗ್ಯೂ ಬೆಳಗಿನ ತಿಂಡಿಗೆ ಓಟ್ ಮೀಲ್ ತುಂಬಾ ಉತ್ತಮ. ಓಟ್ ಮೀಲ್ ವಿವಿಧ ಖನಿಜ ಮತ್ತು ಕ್ಯಾಲ್ಸಿಯಂ, ಮೆಗ್ನೀಸಿಯಮ್, ರಂಜಕ, ಫೋಲೇಟ್, ಸತು, ಪೊಟ್ಯಾಸಿಯಮ್, ಥಯಾಮಿನ್ ನಂತಹ ವಿಟಮಿನ್ ಹೊಂದಿದೆ. ಬೆಳಗಿನ ಉಪಾಹಾರದಲ್ಲಿ ಸೇವಿಸಿದರೆ ದಿನವಿಡೀ ಶಕ್ತಿಯ ಮಟ್ಟ ಕಾಪಾಡುತ್ತದೆ.
ಬೆಳಗಿನ ತಿಂಡಿಗೆ ಓಟ್ ಮೀಲ್ ಉಪ್ಪಿಟ್ಟು ರೆಸಿಪಿ
ರುಚಿಕರ ಮತ್ತು ಆರೋಗ್ಯಕರ ಓಟ್ ಮೀಲ್ ಉಪ್ಪಿಟ್ಟ ಪಾಕ ವಿಧಾನ ಇಲ್ಲಿ ನೋಡೋಣ.
ಓಟ್ ಮೀಲ್ ಉಪ್ಪಿಟ್ಟು ರೆಸಿಪಿಗೆ ಬೇಕಾದ ಪದಾರ್ಥಗಳು
ಓಟ್ಮೀಲ್ 2 ಕಪ್, ಶುಂಠಿ ತುರಿದ್ದು 1/2 ಟೀಸ್ಪೂನ್, ಸಣ್ಣದಾಗಿ ಕೊಚ್ಚಿದ 2 ಹಸಿರು ಮೆಣಸಿನಕಾಯಿ, ಜೀರಿಗೆ 1/4 ಟೀಸ್ಪೂನ್, ಸಾಸಿವೆ ಬೀಜಗಳು 1/4 ಟೀಸ್ಪೂನ್, ತುಪ್ಪ 4 ಟೀಸ್ಪೂನ್, ಸಣ್ಣದಾಗಿ ಕೊಚ್ಚಿದ ಬೀನ್ಸ್ 1/3 ಬೌಲ್, ಬಟಾಣಿ 1/3 ಬೌಲ್, ಸಣ್ಣದಾಗಿ ಕೊಚ್ಚಿದ ಕ್ಯಾರೆಟ್, ಸಣ್ಣದಾಗಿ ಕೊಚ್ಚಿದ ಈರುಳ್ಳಿ, ಸಣ್ಣದಾಗಿ ಕೊಚ್ಚಿದ ಟೊಮೆಟೊ, 8 ಗೋಡಂಬಿ, ಕರಿಬೇವು, ಉಪ್ಪು, ಅರಿಶಿನ 1/3 ಟೀಸ್ಪೂನ್ ಬೇಕು.
ಓಟ್ ಮೀಲ್ ಉಪ್ಪಿಟ್ಟು ರೆಸಿಪಿ ಮಾಡುವ ವಿಧಾನ
ಮೊದಲು ಮಧ್ಯಮ ಶಾಖದ ಮೇಲೆ ಪ್ಯಾನ್ ಇಡಿ. ಬಿಸಿಯಾದ ನಂತರ ನಾಲ್ಕು ಚಮಚ ತುಪ್ಪ ಹಾಕಿ. ತುಪ್ಪ ಬಿಸಿಯಾದಾಗ ಸಾಸಿವೆ, ಜೀರಿಗೆ, ಹಸಿಮೆಣಸಿನಕಾಯಿ, ಕರಿಬೇವು, ಗೋಡಂಬಿ, ಬಾದಾಮಿ ಹಾಕಿ. ಫ್ರೈ ಮಾಡಿ. ನಂತರ ಅದಕ್ಕೆ ಈರುಳ್ಳಿ ಮತ್ತು ಶುಂಠಿ, ಓಟ್ ಹಾಕಿ ಮಧ್ಯಮ ಉರಿಯಲ್ಲಿ ಫ್ರೈ ಮಾಡಿ.
ಈರುಳ್ಳಿ ತಿಳಿ ಕೆಂಪು ಬಣ್ಣಕ್ಕೆ ತಿರುಗಿದ ನಂತರ ಕ್ಯಾರೆಟ್, ಟೊಮ್ಯಾಟೊ, ಬಟಾಣಿ ಮತ್ತು ಬೀನ್ಸ್ ಸೇರಿಸಿ. ನಂತರ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಅರಿಶಿನ ಸೇರಿಸಿ ಫ್ರೈ ಮಾಡಿ. ನಂತರ ಸ್ವಲ್ಪ ನೀರು ಸೇರಿಸಿ. ಕಡಿಮೆ ಉರಿಯಲ್ಲಿ 5 ನಿಮಿಷ ಬೇಯಿಸಿ.
ಈಗ ಮತ್ತೊಂದು ಪಾತ್ರೆಗೆ 4 ನೀರು ಹಾಕಿ. ಕುದಿಸಿ, ತರಕಾರಿ ಮಿಶ್ರಣಕ್ಕೆ ಬಿಸಿ ನೀರು ಸೇರಿಸಿ. ಮಧ್ಯಮ ಉರಿಯಲ್ಲಿ ಬೇಯಿಸಿ. ನೀರು ಒಣಗಿದಾಗ ನಿಮ್ಮ ಉಪ್ಪಿಟ್ಟು ಸಿದ್ಧವಾಗಿದೆ ಅದಕ್ಕೆ ಕೊತ್ತಂಬರಿ ಸೊಪ್ಪು ಹಾಕಿ. ಬಿಸಿಯಾಗಿ ಸೇವಿಸಿ.
ಓಟ್ ಮೀಲ್ ಉಪ್ಪಿಟ್ಟಿನ ಪ್ರಯೋಜನಗಳು
ತೂಕ ಕಡಿಮೆ ಮಾಡಲು ಸಹಕಾರಿ
ತೂಕ ಕಳೆದುಕೊಳ್ಳುವವರಿಗೆ ಸಹಕಾರಿ. ಇದು ಫೈಬರ್ನಲ್ಲಿ ಸಮೃದ್ಧವಾಗಿದೆ ಮತ್ತು ಸಮತೋಲಿತ ತೂಕ ಕಾಪಾಡಿಕೊಳ್ಳಲು ಅಗತ್ಯವಾದ ಚಯಾಪಚಯ ಹೆಚ್ಚಿಸುತ್ತದೆ. ದೀರ್ಘಕಾಲದವರೆಗೆ ತೃಪ್ತಿಪಡಿಸುತ್ತದೆ.
ಸಮತೋಲನ ಜೀರ್ಣಕ್ರಿಯೆಗೆ ಸಹಕಾರಿ
ಓಟ್ ಮೀಲ್ನಲ್ಲಿರುವ ಫೈಬರ್ ಮಲಬದ್ಧತೆ ಮತ್ತು ಅಜೀರ್ಣದಂತಹ ಜೀರ್ಣಕಾರಿ ಸಮಸ್ಯೆಗಳಲ್ಲಿ ಪ್ರಯೋಜನಕಾರಿ. ನಿಯಮಿತ ಸೇವನೆಯು ಕರುಳನ್ನು ಸ್ವಚ್ಛವಾಗಿಡುತ್ತದೆ ಮತ್ತು ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ.
ಚರ್ಮಕ್ಕೆ ಪ್ರಯೋಜನಕಾರಿ
ಓಟ್ ಮೀಲ್ ನಿಮ್ಮ ದೈಹಿಕ ಆರೋಗ್ಯ ಮಾತ್ರವಲ್ಲದೆ ನಿಮ್ಮ ಚರ್ಮದ ಆರೋಗ್ಯ ಕಾಪಾಡುತ್ತದೆ. ಇದು ಉರಿಯೂತದ ಗುಣಲಕ್ಷಣ ಹೊಂದಿದೆ. ಮೊಡವೆ, ಬಿರುಕು ಮುಂತಾದ ಚರ್ಮದ ಸಮಸ್ಯೆ ತೊಡೆದು ಹಾಕುತ್ತದೆ.
ಇದನ್ನೂ ಓದಿ: ಉತ್ತಮ ಜೀರ್ಣಕ್ರಿಯೆಗಾಗಿ ಈ ಪದಾರ್ಥಗಳನ್ನು ತಪ್ಪದೇ ಸೇವನೆ ಮಾಡಿ !
ಕೊಲೆಸ್ಟ್ರಾಲ್ ಸಮಸ್ಯೆ ತಡೆಯುತ್ತದೆ
ಓಟ್ ಮೀಲ್ ನಲ್ಲಿ ಇರುವ ನಾರಿನಂಶವು ದೇಹದಲ್ಲಿ ಹೆಚ್ಚುತ್ತಿರುವ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಸಹಕಾರಿ. ಹೃದಯ ಸಂಬಂಧಿ ಸಮಸ್ಯೆ ತಡೆಯುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ