ಬೆಳಗಿನ ತಿಂಡಿಗೆ (Morning Breakfast) ನೀವು ಹಲವು ಪದಾರ್ಥಗಳನ್ನು (Ingredients) ಮಾಡಿ ತಿಂದಿರಬಹುದು. ಯಾವತ್ತಾದ್ರೂ ಸೋರೆಕಾಯಿ (Bottle Gourd) ರೆಸಿಪಿ (Recipe) ಟ್ರೈ ಮಾಡಿದ್ದೀರಾ? ಅಂದ ಹಾಗೇ ಸೋರೆಕಾಯಿ ಸಾಕಷ್ಟು ಪೋಷಕಾಂಶಗಳಿಂದ ಕೂಡಿದೆ. ಮುಖ್ಯವಾಗಿ ಸೋರೆಕಾಯಿ ವೇಟ್ ಲಾಸ್ ಮಾಡುವವರು ಮುಖ್ಯ ಆಹಾರವಾಗಿ ಸೇವನೆ ಮಾಡ್ತಾರೆ. ಆರೋಗ್ಯಕರ ಭಕ್ಷ್ಯಗಳಲ್ಲಿ ಸೋರೆಕಾಯಿ ಕೂಡ ಒಂದಾಗಿದೆ. ಸೋರೆಕಾಯಿಯನ್ನು ಪ್ರತಿ ಋತುವಿನಲ್ಲೂ ತಿನ್ನಬಹುದು. ಇದು ಜೀರ್ಣವಾಗುತ್ತದೆ. ಹಾಗಾಗಿ ಆಯುರ್ವೇದದಲ್ಲಿ ಸೋರೆಕಾಯಿಯನ್ನು ಆರೋಗ್ಯಕರ ತರಕಾರಿ ಎಂದೂ ಕರೆಯುತ್ತಾರೆ. ಧಾರ್ಮಿಕ ದೃಷ್ಟಿಯಿಂದಲೂ ಸೋರೆಕಾಯಿಗೆ ಹೆಚ್ಚಿನ ಮಹತ್ವವಿದೆ. ಸೋರೆಕಾಯಿ ಎಲ್ಲಾ ರೀತಿಯ ಮಣ್ಣು ಮತ್ತು ಹವಾಮಾನದಲ್ಲಿ ಬೆಳೆಯುತ್ತದೆ. ಉತ್ತರ ಭಾರತದಲ್ಲಿ ಛತ್ ಹಬ್ಬದಂದು ಸೋರೆಕಾಯಿ ವಿಶೇಷತೆ ಪಡೆದುಕೊಂಡಿದೆ.
ಸೋರೆಕಾಯಿ ತೂಕ ಇಳಿಸಲು ಪ್ರಯೋಜನಕಾರಿ
ಸೋರೆಕಾಯಿ ಹಲವು ಪೋಷಕಾಂಶಳಿಂದ ಸಮೃದ್ಧವಾಗಿದೆ. ಉದಾ: ವಿಟಮಿನ್ ಎ, ವಿಟಮಿನ್ ಕೆ, ಕಬ್ಬಿಣ, ಫೋಲೇಟ್, ಮೆಗ್ನೀಸಿಯಮ್, ಸತು ಮತ್ತು ಪೊಟ್ಯಾಸಿಯಮ್ ಇನ್ನು ಹಲವು ಪೋಷಕಾಂಶಗಳು ಸೋರೆಕಾಯಿಯಲ್ಲಿ ಹೇರಳವಾಗಿವೆ.
ಸೋರೆಕಾಯಿ ಮಧುಮೇಹ, ಅಧಿಕ ರಕ್ತದೊತ್ತಡ, ಯಕೃತ್ತಿನ ಕಾಯಿಲೆ, ತೂಕ ನಷ್ಟ ಮತ್ತು ಇತರ ಕಾಯಿಲೆ ತಡೆಯುತ್ತದೆ ಎನ್ನಲಾಗಿದೆ. ಸೋರೆಕಾಯಿಯನ್ನು ಹಲವು ಆರೋಗ್ಯ ಸಮಸ್ಯೆಗೆ ಔಷಧಿಯಾಗಿ ಸೇವನೆ ಮಾಡ್ತಾರೆ. ಮಲಬದ್ಧತೆ, ಅಕಾಲಿಕ ಬೂದುಬಣ್ಣ, ಮೂತ್ರದ ಅಸ್ವಸ್ಥತೆ ಮತ್ತು ನಿದ್ರಾಹೀನತೆ ತಡೆಯಲು ಬಾಟಲ್ ಸೋರೆಕಾಯಿ ಸಹಕಾರಿ ಆಗಿದೆ ಅಂತಾರೆ ತಜ್ಞರು.
ಇದನ್ನೂ ಓದಿ: ವಿಭಿನ್ನ ರುಚಿ ಹಾಗೂ ಆರೋಗ್ಯಕರ ಸೀತಾಫಲ ಹಣ್ಣು ಯಾವೆಲ್ಲಾ ಆರೋಗ್ಯ ಪ್ರಯೋಜನ ನೀಡುತ್ತದೆ?
ಬೆಳಗಿನ ತಿಂಡಿಗೆ ಸೋರೆಕಾಯಿ ಕೆಲ ಪಾಕವಿಧಾನ ಹೀಗಿದೆ
ಸೋರೆಕಾಯಿ ತರಕಾರಿ ಸಲಾಡ್ ರೆಸಿಪಿ
ಕುಕ್ಕರ್‌ನಲ್ಲಿ ಎಣ್ಣೆ ಬಿಸಿ ಮಾಡಿ, ಒಂದು ಇಂಚಿನ ದಾಲ್ಚಿನ್ನಿ, ಒಂದು ಟೀಸ್ಪೂನ್ ಜೀರಿಗೆ, ಮೂರು ಬೇ ಎಲೆಗಳು, ಒಂದು ಲವಂಗ, ಒಂದು ಒಣ ಮೆಣಸಿನಕಾಯಿ ಸೇರಿಸಿ. ಕಡಿಮೆ ಉರಿಯಲ್ಲಿ ಅದು ಸಿಡಿಯುವಾಗ, ಒಂದು ಇಂಚು ತುರಿದ ಶುಂಠಿ ಸೇರಿಸಿ. ನಂತರ ಕತ್ತರಿಸಿದ ಸೋರೆಕಾಯಿ ಹಾಕಿ. ಅರಿಶಿನ ಉಪ್ಪು ಕೂಡ ಸೇರಿಸಿ. ಚೆನ್ನಾಗಿ ಬೆಂದ ನಂತರ ಗ್ಯಾಸ್ ಆಫ್ ಮಾಡಿ. ಕೊನೆಗೆ ನುಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು ಸೇರಿಸಿ ತಿನ್ನಿರಿ.
ಕಡಲೆಕಾಳು ಮತ್ತು ಸೋರೆಕಾಯಿ ರೆಸಿಪಿ
ಒಂದು ಟೀಸ್ಪೂನ್ ಸಂಪೂರ್ಣ ಕೊತ್ತಂಬರಿ, ಒಂದು ಇಂಚು ದಾಲ್ಚಿನ್ನಿ, ಒಂದು ಟೀಸ್ಪೂನ್ ಜೀರಿಗೆ, ಒಂದು ಲವಂಗ, ಒಂದು ಒಣ ಕೆಂಪು ಮೆಣಸಿನಕಾಯಿ, ಒಂದು ದೊಡ್ಡ ಏಲಕ್ಕಿ ಮತ್ತು ಟೊಮೆಟೊ ಪೇಸ್ಟ್ ತಯಾರಿಸಿ.
ಕುಕ್ಕರ್‌ನಲ್ಲಿ ಎಣ್ಣೆ ಬಿಸಿ ಮಾಡಿ, ಎರಡು ಬೇ ಎಲೆಗಳು, ಜೀರಿಗೆ ಮತ್ತು ಇಂಗು ಸೇರಿಸಿ ಮತ್ತು ಈ ಪೇಸ್ಟ್ ಅನ್ನು ಕಡಿಮೆ ಉರಿಯಲ್ಲಿ ಫ್ರೈ ಮಾಡಿ. ನಂತರ ಎರಡು ಗಂಟೆಗಳ ಮೊದಲು ನೆನೆಸಿದ ಮತ್ತು ತೊಳೆದ 1 ಸಣ್ಣ ಬಟ್ಟಲು ಕಡಲೆಕಾಳು ಸೇರಿಸಿ.
ಜೊತೆಗೆ ಅರಿಶಿನ ಉಪ್ಪು ಹಾಕಿರಿ. ನಂತರ ಬಾಟಲ್ ಸೋರೆಕಾಯಿಯನ್ನು ಸೇರಿಸಿ. ಕಡಿಮೆ ಉರಿಯಲ್ಲಿ 4-5 ಸೀಟಿ ಕೂಗಿಸಿ ಈಗ ಕಡಲೆಕಾಳು ಮತ್ತು ಸೋರೆಕಾಯಿ ರೆಸಿಪಿ ಸಿದ್ಧವಾಗಿದೆ ಆನಂದಿಸಿ.
ಸೋರೆಕಾಯಿ ಡಂಪ್ಲಿಂಗ್ಸ್
ಸೋರೆಕಾಯಿಯನ್ನು ನುಣ್ಣಗೆ ಕತ್ತರಿಸಿ. ತುರಿದ ಶುಂಠಿ, ಗರಂ ಮಸಾಲಾ ಪುಡಿ, ಅರಿಶಿನ, ಉಪ್ಪು, ಸಣ್ಣದಾಗಿ ಕೊಚ್ಚಿದ ಕೊತ್ತಂಬರಿ ಸೊಪ್ಪು, ಇಂಗು, ಹಸಿರು ಮೆಣಸಿನಕಾಯಿನ್ನು ಬೇಳೆ ಹಿಟ್ಟಿನಲ್ಲಿ ಮಿಶ್ರಣ ಮಾಡಿ. ಎಣ್ಣೆಯಲ್ಲಿ ಹುರಿಯುವ ಬದಲು ಬಾಣಲೆಯಲ್ಲಿ ಬೇಯಿಸಿ. ಈಗ ನಿಮ್ಮ ಸೋರೆಕಾಯಿ ಡಂಪ್ಲಿಂಗ್ಸ್ ಸಿದ್ಧ.
ಸೋರೆಕಾಯಿ ಕೋಫ್ತಾ
ತುರಿದ ಬಾಟಲ್ ಸೋರೆಕಾಯಿಯಲ್ಲಿ ಬೇಳೆ ಹಿಟ್ಟು, ಶುಂಠಿ, ಗರಂ ಮಸಾಲಾ ಪುಡಿ, ಅರಿಶಿನ, ಉಪ್ಪು, ಮೆಣಸಿನ ಪುಡಿ, ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
ಇದನ್ನೂ ಓದಿ: ಮೂಳೆಗಳ ಸಮಸ್ಯೆ ಹಾಗೂ ಶೀತ ತಡೆಯಲು ಈ ಪದಾರ್ಥಗಳ ಸೇವನೆ ಪ್ರಯೋಜನಕಾರಿ!
ಬೇಳೆ ಹಿಟ್ಟಿನಲ್ಲಿ ಮೊಸರು, ಗರಂ ಮಸಾಲಾ ಪುಡಿ, ಇಂಗು ಮಿಶ್ರಣ ಮಾಡಿ ಮತ್ತು ಉರಿಯಲ್ಲಿ ಕುದಿಯಲು ಬಿಡಿ. ಅದರಲ್ಲಿ ಸೋರೆಕಾಯಿ ಚೌಕ ಹಾಕಿ ಕುದಿಯಲು ಬಿಡಿ. ನುಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು ಸೇರಿಸಿದ ನಂತರ ಬಿಸಿಯಾಗಿ ತಿನ್ನಿರಿ .
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ