Morning Breakfast: ಬೆಳಗಿನ ಉಪಹಾರಕ್ಕೆ ಎಗ್ ಲೆಸ್ ಬ್ರೆಡ್ ಆಮ್ಲೆಟ್ ಮಾಡಿ ತಿನ್ನಿ!

ಕಡಲೆ ಹಿಟ್ಟು ಭಾರತೀಯ ಪಾಕಪದ್ಧತಿಯ ಅವಿಭಾಜ್ಯ ಅಂಗವಾಗಿದೆ. ಹಿಟ್ಟನ್ನು ಬೇಕಿಂಗ್ ಪೌಡರ್ನೊಂದಿಗೆ ಬೆರೆಸಲಾಗುತ್ತದೆ. ಇದು ಮೊಟ್ಟೆಯಿಂದ ಮಾಡಿದ ಆಮ್ಲೆಟ್ ನಂತೆಯೇ ಕಾಣುತ್ತದೆ. ಮೊಟ್ಟೆ ರಹಿತ ಬ್ರೆಡ್ ಆಮ್ಲೆಟ್ ಅಥವಾ ಎಗ್ ಲೆಸ್ ಬ್ರೆಡ್ ಆಮ್ಲೆಟ್ ನ್ನು ಸಸ್ಯಹಾರಿಗಳು ಮತ್ತು ಮಾಂಸಹಾರಿಗಳು ಮಾಡಿ ಸೇವಿಸಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಬ್ರೆಡ್ ಆಮ್ಲೆಟ್ (Bread Omelet) ಅಂದ ಕೂಡಲೇ ಬಾಯಲ್ಲಿ (Mouth) ನೀರೂರುತ್ತೆ. ಬೆಳಗಿನ ತಿಂಡಿಗೆ (Morning Breakfast) ತುಂಬಾ ಜನರು ಬ್ರೆಡ್ ಆಮ್ಲೆಟ್ ಮಾಡಿ ಸವಿಯುತ್ತಾರೆ. ಆದರೆ ಸಸ್ಯಹಾರಿಗಳು ಮತ್ತು ಕೆಲವರು ಕೋಳಿ ಮೊಟ್ಟೆ ತಿನ್ನಲ್ಲ. ಅಂತಹವರು ಮೊಟ್ಟೆ ರಹಿತ ಬ್ರೆಡ್ ಆಮ್ಲೆಟ್ (Eggless Bread Omelet) ನ್ನು ಬೆಳಗಿನ ತಿಂಡಿಗೆ ಮಾಡಿ ತಿನ್ನಬಹುದು. ಮೊಟ್ಟೆ ರಹಿತ ಬ್ರೆಡ್ ಆಮ್ಲೆಟ್ ನಿಮ್ಮ ಹೊಟ್ಟೆ ತುಂಬಿಸುವುದು ಮಾತ್ರವಲ್ಲದೇ ನಿಮ್ಮ ಡಯಟ್ ಗೂ ಉತ್ತಮ ಕಾಂಬೀನೇಷನ್. ಕಡಲೆ ಹಿಟ್ಟು ಸೇರಿಸಿ ತಯಾರಿಸುವ ಮೊಟ್ಟೆ ರಹಿತ ಬ್ರೆಡ್ ಆಮ್ಲೆಟ್ ನಿಮ್ಮ ಕ್ರೇವಿಂಗ್ ನ್ನು ತಣಿಸುತ್ತದೆ. ಸಾಂಪ್ರದಾಯಿಕ ವಿನ್ಯಾಸ ಮತ್ತು ರುಚಿ ನೀಡುತ್ತದೆ.

    ಮೊಟ್ಟೆ ರಹಿತ ಬ್ರೆಡ್ ಆಮ್ಲೆಟ್ ಅಥವಾ ಎಗ್ ಲೆಸ್ ಬ್ರೆಡ್ ಆಮ್ಲೆಟ್

    ಕಡಲೆ ಹಿಟ್ಟು ಭಾರತೀಯ ಪಾಕಪದ್ಧತಿಯ ಅವಿಭಾಜ್ಯ ಅಂಗವಾಗಿದೆ. ಹಿಟ್ಟನ್ನು ಬೇಕಿಂಗ್ ಪೌಡರ್ನೊಂದಿಗೆ ಬೆರೆಸಲಾಗುತ್ತದೆ. ಇದು ಮೊಟ್ಟೆ ಆಧಾರಿತ ಆಮ್ಲೆಟ್ ನಂತೆಯೇ ಕಾಣುತ್ತದೆ. ಮೊಟ್ಟೆ ರಹಿತ ಬ್ರೆಡ್ ಆಮ್ಲೆಟ್ ಅಥವಾ ಎಗ್ ಲೆಸ್ ಬ್ರೆಡ್ ಆಮ್ಲೆಟ್ ನ್ನು ಸಸ್ಯಹಾರಿಗಳು ಮತ್ತು ಮಾಂಸಹಾರಿಗಳು ಮಾಡಿ ಸೇವಿಸಬಹುದು.

    ಮೊಟ್ಟೆ ರಹಿತ ಬ್ರೆಡ್ ಆಮ್ಲೆಟ್ / ಎಗ್ ಲೆಸ್ ಬ್ರೆಡ್ ಆಮ್ಲೆಟ್ ಮಾಡಲು ಬೇಕಾಗುವ ಪದಾರ್ಥಗಳು

    ಒಂದು ಕಪ್ ಬೇಸನ್, ಕಾಲು ಕಪ್ ಮೈದಾ, ಮುಕ್ಕಾಲು ಟೀಸ್ಪೂನ್ ಬೇಕಿಂಗ್ ಪೌಡರ್, ಅರ್ಧ ಟೀಸ್ಪೂನ್ ಉಪ್ಪು, ಕಾಲು ಟೀಸ್ಪೂನ್ ಅರಿಶಿನ, ಅರ್ಧ ಟೀಸ್ಪೂನ್ ಮೆಣಸಿನ ಪುಡಿ, ಒಂದೂವರೆ ಕಪ್ ನೀರು, ಎರಡು ಸಣ್ಣಗೆ ಕತ್ತರಿಸಿದ ಈರುಳ್ಳಿ,

    ಇದನ್ನೂ ಓದಿ: ರಾತ್ರಿ ಊಟದಲ್ಲಿ ಈ ಆಹಾರ ಪದಾರ್ಥಗಳ ಸೇವನೆ ಬೇಡ ಎನ್ನುತ್ತೆ ಆಯುರ್ವೇದ; ಕಾರಣ ಇದು

    ಎರಡು ಸಣ್ಣಗೆ ಕತ್ತರಿಸಿದ ಟೊಮೆಟೊ, ಎರಡು ಸಣ್ಣಗೆ ಕತ್ತರಿಸಿದ ಕ್ಯಾಪ್ಸಿಕಂ, ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು, ಎರಡು ಸಣ್ಣಗೆ ಕತ್ತರಿಸಿದ ಮೆಣಸಿನಕಾಯಿ, ಬ್ರೆಡ್ (ಕಂದು ಅಥವಾ ಬಿಳಿ), ಹುರಿಯಲು ಬೆಣ್ಣೆ.

    ಮೊಟ್ಟೆ ರಹಿತ ಬ್ರೆಡ್ ಆಮ್ಲೆಟ್ / ಎಗ್ ಲೆಸ್ ಬ್ರೆಡ್ ಆಮ್ಲೆಟ್ ಮಾಡುವ ವಿಧಾನ

    ಮೊದಲು ಒಂದು ಬಟ್ಟಲಿನಲ್ಲಿ ಒಂದು ಕಪ್ ಬೇಸನ್, ಕಾಲು ಕಪ್ ಮೈದಾ ಮತ್ತು ಮುಕ್ಕಾಲು ಟೀಸ್ಪೂನ್ ಬೇಕಿಂಗ್ ಪೌಡರ್ ತೆಗೆದುಕೊಳ್ಳಿ. ಅದಕ್ಕೆ ಅರ್ಧ ಟೀಸ್ಪೂನ್ ಉಪ್ಪು, ಕಾಲು ಟೀಸ್ಪೂನ್ ಅರಿಶಿನ, ಅರ್ಧ ಟೀಸ್ಪೂನ್ ಮೆಣಸಿನ ಪುಡಿ ಸೇರಿಸಿ. ಚೆನ್ನಾಗಿ ಬೆರೆಸಿ.

    ನಂತರ ಒಂದೂವರೆ ಕಪ್ ನೀರು ಸೇರಿಸಿ. ಮತ್ತು ಉಂಡೆಗಳಿಲ್ಲದಂತೆ ಬ್ಯಾಟರ್ ಮಾಡಿ, ಚೆನ್ನಾಗಿ ಮಿಶ್ರಣ ಮಾಡಿ. ನಂತರ ಇದಕ್ಕೆ ಎರಡು ಸಣ್ಣಗೆ ಕತ್ತರಿಸಿದ ಈರುಳ್ಳಿ, ಎರಡು ಸಣ್ಣಗೆ ಕತ್ತರಿಸಿದ ಟೊಮೆಟೊ, ಎರಡು ಸಣ್ಣಗೆ ಕತ್ತರಿಸಿದ ಕ್ಯಾಪ್ಸಿಕಂ, ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು, ಎರಡು ಸಣ್ಣಗೆ ಕತ್ತರಿಸಿದ ಮೆಣಸಿನಕಾಯಿ ಸೇರಿಸಿ.

    ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ಈಗ ಮೊಟ್ಟೆ ರಹಿತ ಆಮ್ಲೆಟ್ ಬ್ಯಾಟರ್ ಸಿದ್ಧವಾಗಿದೆ. ಈಗ ಮೊಟ್ಟೆ ರಹಿತ ಬ್ರೆಡ್ ಟೋಸ್ಟ್ ಮಾಡಿಕೊಳ್ಳಿ.

    ಮೊಟ್ಟೆ ರಹಿತ ಬ್ರೆಡ್ ಟೋಸ್ಟ್ ಮಾಡುವುದು ಹೇಗೆ?

    ಮೊದಲು ಪ್ಯಾನ್ ಬಿಸಿ ಮಾಡಿ. ನಂತರ ಮೊಟ್ಟೆ ರಹಿತ ಆಮ್ಲೆಟ್ ಬ್ಯಾಟರ್ ಮಿಶ್ರಣದಲ್ಲಿ ಬ್ರೆಡ್ ಸ್ಲೈಸ್ ಅನ್ನು ಅದ್ದಿ. ತಕ್ಷಣ ಬಿಸಿ ಪ್ಯಾನ್ ಮೇಲೆ ಹಾಕಿ ಮಧ್ಯಮ ಉರಿಯಲ್ಲಿ ಬೇಯಿಸಿ. ಬ್ರೆಡ್ ಸುತ್ತಲೂ ಅಥವಾ ಅದರ ಮೇಲೆ ಮೊಟ್ಟೆ ರಹಿತ ಆಮ್ಲೆಟ್ ಬ್ಯಾಟರ್ ನ್ನು ಹಾಕಿ ದೋಸೆಯಂತೆ ಅಗಲ ಮಾಡಬಹುದು.

    ನಂತರ ಒಂದು ಬದಿ ಬೆಂದ ನಂತರ ಮತ್ತೊಂದು ಬದಿಗೆ ತಿರುಗಿಸಿ ಬೆಣ್ಣೆ ಹಚ್ಚಿ, ಮತ್ತೆ ಎರಡೂ ಬದಿಯನ್ನು ಚೆನ್ನಾಗಿ ಬೇಯಿಸಿ, ತಟ್ಟೆಗೆ ಹಾಕಿ. ಈಗ ನಿಮ್ಮ ಮೊಟ್ಟೆ ರಹಿತ ಬ್ರೆಡ್ ಆಮ್ಲೆಟ್ ಅಥವಾ ಎಗ್ ಲೆಸ್ ಬ್ರೆಡ್ ಆಮ್ಲೆಟ್ ಸವಿಯಲು ಸಿದ್ಧವಾಗಿದೆ.

    ಇದನ್ನೂ ಓದಿ: ತಲೆಹೊಟ್ಟು ಹೆಚ್ಚಾಗೋಕೆ ನೀವ್ ಮಾಡೋ ಈ ತಪ್ಪೇ ಕಾರಣವಂತೆ

    ಮೊಟ್ಟೆ ರಹಿತ ಆಮ್ಲೆಟ್ ಮಾಡುವ ವಿಧಾನ

    ಬಿಸಿ ಪ್ಯಾನ್ ಮೇಲೆ ಅರ್ಧ ಕಪ್ ಮೊಟ್ಟೆ ರಹಿತ ಆಮ್ಲೆಟ್ ಬ್ಯಾಟರ್ ಅನ್ನು ಸುರಿಯಿರಿ. ಅದನ್ನು ದೋಸೆಯಂತೆ ರೌಂಡ್ ಶೇಪ್ ಗೆ ತನ್ನಿ. ಎರಡೂ ಬದಿ ಚೆನ್ನಾಗಿ ಬೇಯಿಸಿ. ಅದಕ್ಕೆ ಸ್ವಲ್ಪ ಬೆಣ್ಣೆ ಹಚ್ಚಿ ಬೇಯಿಸಿ, ತಟ್ಟೆಗೆ ಹಾಕಿ ಸವಿಯಿರಿ.
    Published by:renukadariyannavar
    First published: