• Home
  • »
  • News
  • »
  • lifestyle
  • »
  • Morning Breakfast: ಬ್ರೇಕ್​ಫಾಸ್ಟ್​ಗೆ ರುಚಿಕರ ಟೊಮ್ಯಾಟೋ ಉಪ್ಪಿಟ್ಟು ಹೀಗೆ ಮಾಡಿ ತಿನ್ನಿರಿ!

Morning Breakfast: ಬ್ರೇಕ್​ಫಾಸ್ಟ್​ಗೆ ರುಚಿಕರ ಟೊಮ್ಯಾಟೋ ಉಪ್ಪಿಟ್ಟು ಹೀಗೆ ಮಾಡಿ ತಿನ್ನಿರಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಬೆಳಗಿನ ಉಪಹಾರಕ್ಕೆ ರುಚಿಕರ ದಕ್ಷಿಣ ಭಾರತೀಯ ಉಪಹಾರ ಟೊಮೆಟೋ ಉಪ್ಪಿಟ್ಟು. ಇದು ದಕ್ಷಿಣ ಭಾರತದಲ್ಲಿ ಪ್ರಧಾನ ಉಪಹಾರವಾಗಿದೆ. ಟೊಮೇಟೊ ಉಪ್ಪಿಟ್ಟು ತನ್ನದೇ ಆದ ರುಚಿ ಹೊಂದಿದೆ. ಟೊಮೆಟೊ ಉಪ್ಪಿಟ್ಟು ನೀವು ಸೂಜಿ ರವೆ ಅಥವಾ ದಪ್ಪ ರವೆಯಿಂದಲೂ ಮಾಡಬಹುದು. ಆದ್ರೆ ಸೂಜಿ ರವೆಯಿಂದ ಮಾಡಿದ್ರೆ ಹೆಚ್ಚು ಟೇಸ್ಟಿ ಆಗಿರುತ್ತದೆ.

ಮುಂದೆ ಓದಿ ...
  • Share this:

    ಬೆಳಗಿನ ತಿಂಡಿಗೆ (Morning Breakfast) ನೀವು ಸಾಮಾನ್ಯವಾಗಿ ವಾರದ ಒಂದು ದಿನ ಉಪ್ಪಿಟ್ಟು (Upma) ಮಾಡಿ ತಿಂದಿರಬಹುದು. ಕೆಲವರಿಗೆ ಉಪ್ಪಿಟ್ಟು ಅಂದ್ರೆ ಇಷ್ಟ ಪಟ್ಟು ತಿಂತಾರೆ. ಇನ್ನು ಕೆಲವರು ಉಪ್ಪಿಟ್ಟಾ.. ಅಂತಾ ಉದ್ಘಾರ ತೆಗೆದು ಮೂಗು ಮುರಿಯುತ್ತಾರೆ. ಇವತ್ತು ನಾವು ಎಲ್ಲರಿಗೂ ಇಷ್ಟವಾಗುವಂತೆ, ಮನೆಯಲ್ಲಿ (Home) ಮಕ್ಕಳು, ವೃದ್ಧರು ಎಲ್ಲರೂ ತಿನ್ನುವಂತೆ ಉಪ್ಪಿಟ್ಟು ಮಾಡೋದು ಹೇಗೆ ಅಂತಾ ನೋಡೋಣ. ನಾವು ಇವತ್ತು f ಉಪ್ಪಿಟ್ಟು ಮಾಡುವ ಪಾಕ ವಿಧಾನ (Recipe) ಕಲಿಯೋಣ. ರವೆ, ಮಸಾಲೆ, ಕರಿಬೇವಿನ ಎಲೆ, ಟೊಮ್ಯಾಟೋ ಹಾಕಿ ಮಾಡಿದ ರುಚಿಕರ ಉಪ್ಪಿಟ್ಟು ನಿಮ್ಮನ್ನು ಮತ್ತೆ ಮತ್ತೆ ತಿನ್ನುವಂತೆ ಮಾಡುತ್ತದೆ.


    ರುಚಿಕರ ದಕ್ಷಿಣ ಭಾರತೀಯ ಉಪಹಾರ ಟೊಮ್ಯಾಟೋ ಉಪ್ಪಿಟ್ಟು


    ಬೆಳಗಿನ ಉಪಹಾರಕ್ಕೆ ರುಚಿಕರ ದಕ್ಷಿಣ ಭಾರತೀಯ ಉಪಹಾರ ಟೊಮೆಟೋ ಉಪ್ಪಿಟ್ಟು. ಇದು ದಕ್ಷಿಣ ಭಾರತದಲ್ಲಿ ಪ್ರಧಾನ ಉಪಹಾರವಾಗಿದೆ. ಟೊಮೇಟೊ ಉಪ್ಪಿಟ್ಟು ತನ್ನದೇ ಆದ ರುಚಿ ಹೊಂದಿದೆ. ಟೊಮ್ಯಾಟೋ ಉಪ್ಪಿಟ್ಟು ನೀವು ಸೂಜಿ ರವೆ ಅಥವಾ ದಪ್ಪ ರವೆಯಿಂದಲೂ ಮಾಡಬಹುದು. ಆದ್ರೆ ಸೂಜಿ ರವೆಯಿಂದ ಮಾಡಿದ್ರೆ ಹೆಚ್ಚು ಟೇಸ್ಟಿ ಆಗಿರುತ್ತದೆ.


    ಬಾಂಬೆ ರವಾ ಕಡಿಮೆ ಫೈಬರ್ ಅನ್ನು ಹೊಂದಿರುತ್ತದೆ. ಇದನ್ನು ಸಂಸ್ಕರಿಸಿದ ಆಹಾರವೆಂದು ಪರಿಗಣಿಸಲಾಗಿದೆ. ಹಾಗಾಗಿ ಇದನ್ನು ತಪ್ಪಿಸುವವರು ಗೋಧಿ ರವಾ ಮತ್ತು ಬನ್ಸಿ ರವಾ ಬಳಸಬಹುದು. ಟೊಮ್ಯಾಟೋ ಉಪ್ಪಿಟ್ಟು ಮಾಡಲು ಜೊತೆಗೆ ಕ್ಯಾರೆಟ್, ಬಟಾಣಿ ಮತ್ತು ಹಸಿರು ಬೀನ್ಸ್ ನಂತಹ ಮಿಶ್ರ ತರಕಾರಿ ಬಳಕೆ ಮಾಡಬಹುದು. ಗಳು ಚೆನ್ನಾಗಿ ಹೋಗುತ್ತವೆ.




    ಟೊಮ್ಯಾಟೋ ಉಪ್ಪಿಟ್ಟು ರೆಸಿಪಿಗೆ ಬೇಕಾಗುವ ಪದಾರ್ಥಗಳು


    ಸಾಸಿವೆ, ಜೀರಿಗೆ, ಸಣ್ಣದಾಗಿ ಕತ್ತರಿಸಿದ ಟೊಮ್ಯಾಟೋ, ತುರಿದ ಶುಂಠಿ, ಸಣ್ಣದಾಗಿ ಕೊಚ್ಚಿದ ಹಸಿರು ಮೆಣಸಿನಕಾಯಿ, ರವೆ, ತುಪ್ಪ, ಗೋಡಂಬಿ, ಉದ್ದಿನಬೇಳೆ, ಸಣ್ಣದಾಗಿ ಕೊಚ್ಚಿದ ಈರುಳ್ಳಿ, ಕೊತ್ತಂಬರಿ ಸೊಪ್ಪು, ಕರಿಬೇವು ಬೀನ್ಸ್, ಕ್ಯಾರೆಟ್, ಹಸಿರು ಬಟಾಣಿ ಬೇಕಿದ್ದರೆ ಬಳಸಬಹುದು.


    ಟೊಮ್ಯಾಟೋ ಉಪ್ಪಿಟ್ಟು ಮಾಡುವ ವಿಧಾನ


    ಕಡಾಯಿ ಅಥವಾ ಪ್ಯಾನ್‌ಗೆ ಅರ್ಧ ಕಪ್ ರವಾ ಸೇರಿಸಿ. ಮಧ್ಯಮ ಉರಿಯಲ್ಲಿ ಆರೊಮ್ಯಾಟಿಕ್ ಆಗುವವರೆಗೆ ಹುರಿಯಿರಿ. ಈರುಳ್ಳಿ, ಟೊಮ್ಯಾಟೋ ಮತ್ತು ಹಸಿರು ಮೆಣಸಿನಕಾಯಿ ಕತ್ತರಿಸಿ. ರವಾವನ್ನು ಒಂದು ಬೌಲ್‌ ಗೆ ತೆಗೆದಿರಿಸಿ. ಒಂದೂವರೆ ಚಮಚ ಎಣ್ಣೆ ಅಥವಾ ತುಪ್ಪ ಬಿಸಿ ಮಾಡಿ. ಸಾಸಿವೆ, ಜೀರಿಗೆ, ಉಪ್ಪು, ಅರಿಶಿನ ಚಮಚ ಚನಾ ದಾಲ್, ಟೀ ಚಮಚ ಉದ್ದಿನ ಬೇಳೆ ಮತ್ತು ಹತ್ತು ಗೋಡಂಬಿ ಸೇರಿಸಿ. ಗೋಲ್ಡನ್ ಬಣ್ಣ ಬರುವವರೆಗೆ ಫ್ರೈ ಮಾಡಿ.


    ಕರಿಬೇವಿನ ಎಲೆ, ಹಸಿರು ಮೆಣಸಿನಕಾಯಿ, ಕತ್ತರಿಸಿದ ಈರುಳ್ಳಿ ಸೇರಿಸಿ. ಹುರಿಯಿರಿ. ನಂತರ ಮುಕ್ಕಾಲು ಕಪ್ ಟೊಮ್ಯಾಟೊ, ಅರಿಶಿನ ಮತ್ತು ಟೀಚಮಚ ಉಪ್ಪು ಸೇರಿಸಿ ಹುರಿಯಿರಿ. ಮೃದುವಾಗುವವರೆಗೆ ಬೇಯಿಸಿ. ನಂತರ ಒಂದೂವರೆ ಕಪ್ ನೀರು ಸೇರಿಸಿ. ಕುದಿಯುವಾಗ ರವೆ ಹಾಕಿ ಚೆನ್ನಾಗಿ ಮಿಶ್ರಣ ಮಾಡುತ್ತಾ ಇರಿ. ನೀರೆಲ್ಲಾ ಆವಿಯಾದ ನಂತರ ಕೊತ್ತಂಬರಿ ಸೊಪ್ಪು ಸೇರಿಸಿ. ಗ್ಯಾಸ್ ಆಫ್ ಮಾಡಿ. ನಂತರ ಉಪ್ಪಿಟ್ಟು ಮೇಲೆ ತುಪ್ಪ ಹಾಕಿ ತಿನ್ನಿರಿ.


    ಇದನ್ನೂ ಓದಿ: ಚರ್ಮ ಮತ್ತು ಮೂಳೆಗಳ ಆರೋಗ್ಯಕ್ಕೆ ಈ ಪದಾರ್ಥಗಳು ಸಹಕಾರಿ


    ನೀವು ಒಂದು ಚಮಚದೊಂದಿಗೆ ಸಮವಾಗಿ ಉಪ್ಪಿಟ್ಟು ಹಾಕಿಕೊಂಡು ತಿನ್ನಬಹುದು. ಟೊಮ್ಯಾಟೋ ಉಪ್ಪಿಟ್ಟಿಗೆ ಗೋಡಂಬಿ ಸೇರಿಸಿ ಮತ್ತು ಕೊತ್ತಂಬರಿ ಸೊಪ್ಪಿನಿಂದ ಅಲಂಕಾರ ಮಾಡಿ, ಬಿಸಿ ಇರುವಾಗ ತಿನ್ನುವ ಮಜವೇ ಬೇರೆ.

    Published by:renukadariyannavar
    First published: