ಬೆಳಗಿನ ತಿಂಡಿಗೆ ( Morning Breakfast ) ನೀವು ಒಂದೇ ರೀತಿಯ ದೋಸೆ (Dosa) ಮಾಡಿ ತಿಂದು ಬೇಸರವಾಗಿದ್ರೆ ಇವತ್ತು ಹೊಸ ರೆಸಿಪಿ (Recipe) ಬಗ್ಗೆ ಹೇಳಲಿದ್ದೇವೆ. ನೀವು ಜೋಳದ ರೊಟ್ಟಿ (Jowar Roti) ಮಾಡಿ ತಿಂದಿರಬಹುದು. ಯಾವತ್ತಾದ್ರೂ ಒಂದು ದಿನ ಜೋಳದ ಹಿಟ್ಟಿನ ದೋಸೆ ಮಾಡಿ ತಿಂದಿದ್ದೀರಾ? ಜೋಳದ ಹಿಟ್ಟಿನ ದೋಸೆ ವಿಭಿನ್ನ ರುಚಿ (Taste) ನೀಡುತ್ತದೆ. ಜೋಳದ ಹಿಟ್ಟು ಬೆಳಗಿನ ತಿಂಡಿಗೆ ಬಳಕೆ ಮಾಡುವುದು ಸಾಕಷ್ಟು ಆರೋಗ್ಯಕರ ಆಯ್ಕೆ (Healthy Choice) ಆಗಿದೆ. ಜೋಳದ ಹಿಟ್ಟು ಮಧುಮೇಹಿಗಳ (Diabetics) ಆರೋಗ್ಯಕ್ಕೂ ಉತ್ತಮ ಪದಾರ್ಥವಾಗಿದೆ.
ಬೆಳಗಿನ ತಿಂಡಿಗೆ ಜೋಳದ ಹಿಟ್ಟಿನ ದೋಸೆ ರೆಸಿಪಿ
ಇಂದು ನಾವು ಬೆಳಗಿನ ತಿಂಡಿಗೆ ಜೋಳದ ಹಿಟ್ಟಿನ ದೋಸೆ ಮಾಡುವುದು ಹೇಗೆ ಅಂತಾ ನೋಡೋಣ. ಈ ಪಾಕವಿಧಾನ ತುಂಬಾ ಸರಳ ಮತ್ತು ಸುಲಭವಾಗಿದೆ. ಜೋಳದ ಹಿಟ್ಟಿನ ದೋಸೆ ಬೆಳಗಿನ ತಿಂಡಿ ಆಯ್ಕೆಗೆ ತುಂಬಾ ಹೆಲ್ದೀ ಆಗಿದೆ.
ಜೋಳದ ಕಾಳಿನಲ್ಲಿ ಸಾಕಷ್ಟು ಪೋಷಕಾಂಶವಿದೆ. ಮುಖ್ಯವಾಗಿ ಜೋಳದ ಕಾಳು ಪ್ರೋಟೀನ್ ಮತ್ತು ಫೈಬರ್ ಹೊಂದಿದೆ. ಇದು ಪೋಷಕಾಂಶಗಳ ಅತ್ಯುತ್ತಮ ಮೂಲವಾಗಿದೆ. ಜೋಳದ ಹಿಟ್ಟು ಮತ್ತು ವಿವಿಧ ಮಸಾಲೆಗಳು ಮತ್ತು ಗಿಡಮೂಲಿಕೆಯಿಂದ ಮಾಡಿದ ಅತ್ಯಂತ ಸರಳ ಮತ್ತು ಆರೋಗ್ಯಕರ ದೋಸೆ ಪಾಕ ವಿಧಾನ ನಿಮ್ಮನ್ನು ತೃಪ್ತಿ ಪಡಿಸದೇ ಇರದು. ಇದು ಮೂಲತಃ ಜನಪ್ರಿಯ ದೋಸೆ ಪಾಕವಿಧಾನವಾಗಿದೆ.
ಇಲ್ಲಿ ರವೆ ಹಿಟ್ಟಿನ ಬದಲು ಜೋಳದ ಹಿಟ್ಟು ಬಳಸಲಾಗುತ್ತದೆ. ಎಲ್ಲಾ ಇತರ ಪದಾರ್ಥಗಳು ಒಂದೇ ಆಗಿವೆ. ದೋಸೆಗೆ ನೀವು ಮಸಾಲೆಯುಕ್ತ ಕೆಂಪು ಚಟ್ನಿ ಮಾಡಿ ಸೇವನೆ ಮಾಡಬಹುದು. ಇದು ನಿಮಗೆ ಅದ್ಭುತ ರುಚಿ ನೀಡುತ್ತದೆ.
ವಿಶೇಷವಾಗಿ ತ್ವರಿತ ದೋಸೆ ಪಾಕವಿಧಾನವು ಬಹುತೇಕರಿಗೆ ಇಷ್ಟವಾಗುತ್ತವೆ. ಹೆಚ್ಚಿನವರಿಗೆ ಬಹಳ ಜನಪ್ರಿಯ ಆಯ್ಕೆ ಇದಾಗಿದೆ. ಇದನ್ನು ಮಾಡುವುದು ತುಂಬಾ ಸುಲಭ. ಹಾಗೂ ತ್ವರಿತವಾಗಿ ಮಾಡಬಹುದು. ಹಾಗಾದ್ರೆ ಜೋಳದ ಹಿಟ್ಟಿನ ದೋಸೆ ಮಾಡುವುದು ಹೇಗೆ ಅಂತಾ ನೋಡೋಣ.
ಜೋಳದ ಹಿಟ್ಟಿನ ದೋಸೆ ರೆಸಿಪಿ
ಬೇಕಾಗುವ ಪದಾರ್ಥಗಳು
ಒಂದೂವರೆ ಕಪ್ ಜೋಳದ ಹಿಟ್ಟು, ಅರ್ಧ ಟೀಸ್ಪೂನ್ ಉಪ್ಪು, ನೀರು, ಸಣ್ಣದಾಗಿ ಕೊಚ್ಚಿದ ಒಂದು ಈರುಳ್ಳಿ, ಸಣ್ಣದಾಗಿ ಕೊಚ್ಚಿದ ಎರಡು ಚಮಚ ಕೊತ್ತಂಬರಿ ಸೊಪ್ಪು, ಸಣ್ಣದಾಗಿ ಕೊಚ್ಚಿದ ಕೆಲವು ಕರಿಬೇವಿನ ಎಲೆಗಳು, ಸಣ್ಣದಾಗಿ ಕೊಚ್ಚಿದ ಎರಡು ಮೆಣಸಿನಕಾಯಿ, ಒಂದು ಟೀಸ್ಪೂನ್ ಜೀರಿಗೆ, ಅರ್ಧ ಟೀಸ್ಪೂನ್ ಪುಡಿ ಮಾಡಿದ ಮೆಣಸು, ಎಣ್ಣೆ ಬೇಕು.
ಜೋಳದ ಹಿಟ್ಟಿನ ದೋಸೆ ರೆಸಿಪಿ ಮಾಡುವ ವಿಧಾನ ಹೀಗಿದೆ
ಮೊದಲು ದೊಡ್ಡ ಬಟ್ಟಲಿಗೆ ಒಂದೂವರೆ ಕಪ್ ಜೋಳದ ಹಿಟ್ಟು ಹಾಕಿರಿ. ಹಿಟ್ಟು ತಾಜಾ ಇರಲಿ. ಅಂದಾಗ ಮಾತ್ರ ದೋಸೆ ಗರಿಗರಿಯಾಗುತ್ತದೆ. ಮತ್ತು ರುಚಿ ನೀಡುತ್ತದೆ. ನಂತರ ಅದಕ್ಕೆ ಅರ್ಧ ಟೀ ಸ್ಪೂನ್ ಉಪ್ಪು ಮತ್ತು ನಾಲ್ಕು ಕಪ್ ನೀರು ಸೇರಿಸಿ. ಅದನ್ನು ನಿಮ್ಮಗೆ ಹೇಗೆ ಬೇಕೋ ಹಾಗೇ ಸ್ಥಿರತೆ ತಯಾರಿಸಿ.
ಹಿಟ್ಟು ತೆಳು ಮತ್ತು ಗಟ್ಟಿಯಾಗಿ ಇರಬಾರದು. ನಂತರ ಯಾವುದೇ ಉಂಡೆಗಳಿಲ್ಲ ಎಂದು ಖಚಿತಪಡಿಸಿಕೊಳ್ಳಿ. ಹಿಟ್ಟನ್ನು ಚೆನ್ನಾಗಿ ಮಿಶ್ರಣ ಮಾಡಿ. ನಂತರ ಸಣ್ಣದಾಗಿ ಕೊಚ್ಚಿದ ಒಂದು ಈರುಳ್ಳಿ, ಸಣ್ಣದಾಗಿ ಕೊಚ್ಚಿದ ಎರಡು ಚಮಚ ಕೊತ್ತಂಬರಿ ಸೊಪ್ಪು,
ಸಣ್ಣದಾಗಿ ಕೊಚ್ಚಿದ ಕೆಲವು ಕರಿಬೇವಿನ ಎಲೆಗಳು, ಸಣ್ಣದಾಗಿ ಕೊಚ್ಚಿದ ಎರಡು ಮೆಣಸಿನಕಾಯಿ, ಒಂದು ಟೀಸ್ಪೂನ್ ಜೀರಿಗೆ, ಅರ್ಧ ಟೀಸ್ಪೂನ್ ಪುಡಿ ಮಾಡಿದ ಮೆಣಸುಚೆನ್ನಾಗಿ ಮಿಶ್ರಣ ಮಾಡಿ ಮತ್ತು ಹಿಟ್ಟನ್ನು 10 ನಿಮಿಷಗಳ ಕಾಲ ವಿಶ್ರಾಂತಿ ಮಾಡಿ ಹಿಟ್ಟನ್ನು ಚೆನ್ನಾಗಿ ಮಿಶ್ರಣ ಮಾಡಿ.
ಇದನ್ನೂ ಓದಿ: ಬೆಳಗಿನ ತಿಂಡಿಗೆ ಕಪ್ಪು ಕಡಲೆ ಕಾಳಿನ ದೋಸೆ ರೆಸಿಪಿ ಮಾಡಿ ಸೇವಿಸಿ!
ಹತ್ತು ನಿಮಿಷ ಹಿಟ್ಟನ್ನು ವಿಶ್ರಾಂತಿಗೆ ಇಡಿ. ನಂತರ ಅಗತ್ಯವಿದ್ದರೆ ನೀರನ್ನು ಸೇರಿಸಿ, ಸ್ಥಿರತೆ ಸರಿ ಹೊಂದಿಸಿ. ಈಗ ಬಿಸಿಯಾದ ಪ್ಯಾನ್ ಗೆ ಹಿಟ್ಟನ್ನು ಸುರಿದು, ದುಂಡನೆಯ ಆಕಾರಕ್ಕೆ ತನ್ನಿ. ಎರಡೂ ಬದಿ ಚೆನ್ನಾಗಿ ಬೆಂದ ನಂತರ ನಿಮ್ಮಿಷ್ಟದ ಚೆಟ್ನಿ ಜೊತೆ ಸೇವಿಸಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ