Morning Breakfast: ಬೆಳಗ್ಗಿನ ತಿಂಡಿಗೆ ರುಚಿಕರ ಹಾಗೂ ಆರೋಗ್ಯಕರ ರಾಗಿ ಈರುಳ್ಳಿ ಪರೋಟಾ ಹೀಗೆ ತಯಾರಿಸಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ರಾಗಿಯ ಪ್ರಯೋಜನಗಳ ಹಿನ್ನೆಲೆ ಹಾಗೂ ಪೋಷಕಾಂಶ ಸಮೃದ್ಧವಾಗಿದ್ದು, ಇದನ್ನು ಸೂಪರ್‌ ಫುಡ್ ಎಂದು ಕರೆಯುತ್ತಾರೆ. ಇದು ಅನೇಕ ರೋಗಗಳಿಂದ ನಿಮ್ಮನ್ನು ರಕ್ಷಿಸಲು ಪರಿಣಾಮಕಾರಿ ಆಗಿದೆ. ಸಕ್ಕರೆ ಕಾಯಿಲೆ ರೋಗಿಗಳಿಗೆ ಮೆಗ್ನೀಸಿಯಮ್ ಮತ್ತು ನಾರಿನಂಶ ಸಮೃದ್ಧ ರಾಗಿ ಸೇವನೆ ಆರೋಗ್ಯಕ್ಕೆ ಪ್ರಯೋಜನ ನೀಡುತ್ತದೆ.

ಮುಂದೆ ಓದಿ ...
  • Share this:

    ಬೆಳಗ್ಗಿನ ತಿಂಡಿ (Morning Breakfast) ಇರಲಿ, ಮಧ್ಯಾಹ್ನದ ಊಟವಿರಲಿ, ರಾತ್ರಿಯ ಭೋಜನವೇ ಇರಲಿ ಎಲ್ಲದಕ್ಕೂ ನೀವು ರಾಗಿ (Ragi) ಖಾದ್ಯಗಳನ್ನು ಸೇವನೆ ಮಾಡಬಹುದು. ರಾಗಿ ದೋಸೆ, ರಾಗಿ ಖಿಡಿ, ರಾಗಿ ರೊಟ್ಟಿ, ರಾಗಿ ಗಂಜಿ, ರಾಗಿ ಸಿಹಿ ಪದಾರ್ಥ, ರಾಗಿ ಮುದ್ದೆ, ರಾಗಿ ಪಾಪಡ್, ರಾಗಿ ಇಡ್ಲಿ ಹೀಗೆ ರಾಗಿಯನ್ನು ಹಲವು ಖಾದ್ಯಗಳ ಮೂಲಕ ಸೇವನೆ ಮಾಡಲಾಗುತ್ತದೆ. ರಾಗಿ ರುಚಿ ಮತ್ತು ಆರೋಗ್ಯಕರ (Tasty And Healthy) ಪದಾರ್ಥವಾಗಿದೆ. ಇದನ್ನು ಬೆಳಗಿನ ತಿಂಡಿಗೆ ಸೇರಿಸಿದರೆ ಸಾಕಷ್ಟು ಪ್ರಯೋಜನ (Benefits) ಪಡೆಯಬಹುದು. ಇಂದು ನಾವು ಬೆಳಗಿನ ತಿಂಡಿಗೆ ರಾಗಿ ಹಿಟ್ಟಿನ ಕೆಲವು ರೆಸಿಪಿಗಳನ್ನು ನೋಡೋಣ.


     ರಾಗಿ ಒಂದು ಸೂಪರ್ ಫುಡ್


    ರಾಗಿಯ ಪ್ರಯೋಜನಗಳ ಹಿನ್ನೆಲೆ ಹಾಗೂ ಪೋಷಕಾಂಶ ಸಮೃದ್ಧವಾಗಿದ್ದು, ಇದನ್ನು ಸೂಪರ್‌ ಫುಡ್ ಎಂದು ಕರೆಯುತ್ತಾರೆ. ಇದು ಅನೇಕ ರೋಗಗಳಿಂದ ನಿಮ್ಮನ್ನು ರಕ್ಷಿಸಲು ಪರಿಣಾಮಕಾರಿ ಆಗಿದೆ.


    ಮಧುಮೇಹ, ಸ್ಥೂಲಕಾಯ ಹಾಗೂ ಅಧಿಕ ರಕ್ತದೊತ್ತಡ, ಹೃದ್ರೋಗ ಸೇರಿದಂತೆ ಹಲವು ಕಾಯಿಲೆಗಳ ನಿಯಂತ್ರಣಕ್ಕೆ ರಾಗಿ ಪದಾರ್ಥ ಸೇವನೆ ಪ್ರಯೋಜನ ನೀಡುತ್ತದೆ.


    ಸಕ್ಕರೆ ಕಾಯಿಲೆ ರೋಗಿಗಳಿಗೆ ಮೆಗ್ನೀಸಿಯಮ್ ಮತ್ತು ನಾರಿನಂಶ ಸಮೃದ್ಧ ರಾಗಿ ಸೇವನೆ ಆರೋಗ್ಯಕ್ಕೆ ಪ್ರಯೋಜನ ನೀಡುತ್ತದೆ. ಗೋಧಿ ಮತ್ತು ಅಕ್ಕಿಗೆ ಹೋಲಿಸಿದರೆ ರಾಗಿಯಲ್ಲಿ ಗ್ಲೈಸೆಮಿಕ್ ಇಂಡೆಕ್ಸ್ ತುಂಬಾ ಕಡಿಮೆ ಇದೆ. ಇದು ಸಕ್ಕರೆ ಮಟ್ಟ ಸಂಪೂರ್ಣವಾಗಿ ಏರುವುದನ್ನು ತಡೆಯುತ್ತದೆ. ರಾಗಿಯ ಕೆಲವು ಖಾದ್ಯಗಳು ಹೀಗಿವೆ.




    ರಾಗಿ ರೊಟ್ಟಿ ರೆಸಿಪಿ


    ಮೊದಲು ರಾಗಿ ಹಿಟ್ಟನ್ನು ತೆಗೆದುಕೊಳ್ಳಿ. ಅದಕ್ಕೆ ಸ್ವಲ್ಪ ಉಪ್ಪು ಸೇರಿಸಿ. ಈಗ ಸ್ವಲ್ಪ ಸ್ವಲ್ಪ ನೀರು ಹಾಕುತ್ತಾ ಹಿಟ್ಟನ್ನು ಗಟ್ಟಿಯಾಗಿ ನಾದಿಕೊಳ್ಳಿ. ನಂತರ ಒಲೆಯ ಮೇಲೆ ತವೆ ಬಿಸಿ ಮಾಡಿ. ಈಗ ಹಿಟ್ಟಿನ ಚಿಕ್ಕ ಚಿಕ್ಕ ಉಂಡೆ ಮಾಡಿ, ವೃತ್ತಾಕಾರದಲ್ಲಿ ರೊಟ್ಟಿ ಮಾಡಿ.


    ನಂತರ ತವೆಯ ಮೇಲೆ ಹಾಕಿ ಎರಡೂ ಬದಿಯನ್ನು ಚೆನ್ನಾಗಿ ಬೇಯಿಸಿ. ಈ ಆರೋಗ್ಯಕರ ರಾಗಿ ರೊಟ್ಟಿ ರೆಸಿಪಿಯು ನಿಮಗೆ ಆರೋಗ್ಯಕ್ಕೆ ಲಾಭ ತಂದು ಕೊಡುತ್ತದೆ. ಶಕ್ತಿ ನೀಡುತ್ತದೆ. ನಿಮ್ಮಿಷ್ಟದ ಪಲ್ಯ ಇಲ್ಲವೇ ಚಪಾತಿ ಜೊತೆ ಸವಿಯಿರಿ.


    ರಾಗಿ ಈರುಳ್ಳಿ ಪರೋಠಾ ರೆಸಿಪಿ


    ರಾಗಿ ಈರುಳ್ಳಿ ಪರೋಠಾ ಮಾಡಲು, ಮೊದಲು ಎರಡು ಕಪ್ ರಾಗಿ ಕಾಳುಗಳನ್ನು ತೆಗೆದುಕೊಳ್ಳಿ. ಅವುಗಳನ್ನು ಚೆನ್ನಾಗಿ ತೊಳೆದು, ರಾತ್ರಿಯಿಡೀ ನೆನೆಯಲು ಬಿಡಿ. ನಂತರ ಬೆಳಗ್ಗೆ ಮಿಕ್ಸರ್ ಗೆ ಹಾಕಿ ರುಬ್ಬಿಕೊಳ್ಳಿ.


    ಸಾಂದರ್ಭಿಕ ಚಿತ್ರ


    ಈಗ ರುಬ್ಬಿದ ರಾಗಿ ಹಿಟ್ಟಿಗೆ ಮಧ್ಯಮ ಗಾತ್ರದ ಒಂದು ಸಣ್ಣದಾಗಿ ಕೊಚ್ಚಿದ ಈರುಳ್ಳಿ, ಟೊಮೆಟೋ, ಸಣ್ಣದಾಗಿ ಕೊಚ್ಚಿದ ಮೆನಸಿಣಕಾಯಿ, ಸಣ್ಣದಾಗಿ ಕೊಚ್ಚಿದ ಕೊತ್ತಂಬರಿ ಸೊಪ್ಪು, ಕರಿಬೇವು, ಅರಿಶಿನ, ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.


    ನಂತರ ಗ್ಯಾಸ್ ಆನ್ ಮಾಡಿ. ತವೆ ಇಡಿ. ತವೆ ಬಿಸಿಯಾದ ಕೂಡಲೇ ಸ್ವಲ್ಪ ಎಣ್ಣೆ ಅನ್ವಯಿಸಿ. ಈಗ ತವೆ ಮೇಲೆ ಹಿಟ್ಟನ್ನು ಸುರಿದು ವೃತ್ತಾಕಾರಕ್ಕೆ ತನ್ನಿರಿ. ಎರಡೂ ಬದಿಯನ್ನು ಚೆನ್ನಾಗಿ ಬೇಯಿಸಿ. ಸರ್ವ್ ಮಾಡಿ. ನಿಮ್ಮಿಷ್ಟದ ಚಟ್ನಿ ಜೊತೆ ಸವಿಯಿರಿ.


    ಇನ್ನು ರಾಗಿಯು ಹೆಚ್ಚಿನ ಫೈಬರ್ ಮತ್ತು ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಹೊಂದಿದೆ. ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ. ದೇಹದಿಂದ ಸ್ಥೂಲಕಾಯದ ಸಮಸ್ಯೆ ಕಡಿಮೆ ಮಾಡುತ್ತದೆ.


    ಇದನ್ನೂ ಓದಿ: ನಿಮ್ಮ ಮನಸ್ಸಿನಲ್ಲಿ ಆಗೋ ಬದಲಾವಣೆ ಥೈರಾಯ್ಡ್‌ ಕಾಯಿಲೆಯ ಸೂಚನೆಯಂತೆ!


    ರಾಗಿಯಲ್ಲಿ ಪ್ರೊಟೀನ್ ಹೇರಳವಾಗಿದೆ. ರಾಗಿಯು ರಂಜಕ ಮತ್ತು ಕಬ್ಬಿಣ ಒದಗಿಸುತ್ತದೆ. ಜೀರ್ಣಾಂಗ ವ್ಯವಸ್ಥೆ ಬಲಪಡಿಸುತ್ತದೆ.

    Published by:renukadariyannavar
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು