• Home
  • »
  • News
  • »
  • lifestyle
  • »
  • Morning Breakfast: ಬೆಳಗಿನ ತಿಂಡಿಗೆ ಟೇಸ್ಟಿ ಮತ್ತು ಹೆಲ್ದೀ ಗ್ರಾನೋಲಾ ರೆಸಿಪಿ ಮಾಡುವುದು ಹೇಗೆ?

Morning Breakfast: ಬೆಳಗಿನ ತಿಂಡಿಗೆ ಟೇಸ್ಟಿ ಮತ್ತು ಹೆಲ್ದೀ ಗ್ರಾನೋಲಾ ರೆಸಿಪಿ ಮಾಡುವುದು ಹೇಗೆ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ತಪ್ಪು ಜೀವನಶೈಲಿ ಮತ್ತು ಕಳಪೆ ಆಹಾರದಿಂದ ಮಧುಮೇಹ ಥೈರಾಯ್ಡ್ ಜೊತೆಗೆ ಹಲವಾರು ಸಮಸ್ಯೆ ಎದುರಿಸಬೇಕಾಗಬಹುದು. ಸರಿಯಾದ ಸಮಯದಲ್ಲಿ ಸರಿಯಾದ ಆಹಾರ ಆಯ್ಕೆ ಮಾಡುವುದು ಮುಖ್ಯ. ತಜ್ಞರು ಸೂಚಿಸಿದ ಆರೋಗ್ಯಕರ ಮತ್ತು ಟೇಸ್ಟಿ ಉಪಹಾರ ಪಾಕವಿಧಾನ ಇಲ್ಲಿದೆ.

  • Share this:

    ಇತ್ತೀಚಿನ ದಿನಗಳಲ್ಲಿ ಜನರು (People) ತಮ್ಮ ಆರೋಗ್ಯದ (Health) ಬಗ್ಗೆ ಹೆಚ್ಚು ಕಾಳಜಿ (Care) ವಹಿಸುತ್ತಿದ್ದಾರೆ. ಹೀಗಾಗಿ ಅವರು ಬೆಳಗಿನ ತಿಂಡಿಗೆ (Morning Breakfast) ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ. ತಾವು ಸೇವಿಸುವ ಬೆಳಗಿನ ಉಪಾಹಾರ ಪೌಷ್ಟಿಕ ಮತ್ತು ಪೋಷಕಾಂಶ (Nutrients) ಭರಿತವಾಗಿರುವಂತೆ ನೋಡಿಕೊಳ್ಳುತ್ತಾರೆ. ದಿನವೂ ವೆರೈಟಿ ಉಪಾಹಾರ ಸೇವನೆ ಮಾಡುತ್ತಾರೆ. ಮತ್ತು ದೇಹದ ಆರೋಗ್ಯಕ್ಕೆ ಮತ್ತು ದೀರ್ಘಕಾಲ ಹೊಟ್ಟೆ ತುಂಬಿಸಿಡುವ ಪದಾರ್ಥಗಳ ಸೇವನೆ ಮಾಡುತ್ತಾರೆ.  ಹೆಚ್ಚುತ್ತಿರುವ ಆರೋಗ್ಯ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಆಹಾರ ಆಯ್ಕೆ ಮಾಡಬೇಕಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಬಹಳ ಮುಖ್ಯ. ಇಲ್ಲದಿದ್ದರೆ ಹಲವು ಗಂಭೀರ ಕಾಯಿಲೆಗಳು ಬಾಧಿಸುತ್ತವೆ.  


    ಬೆಳಗಿನ ತಿಂಡಿಗೆ ಟೇಸ್ಟಿ ಮತ್ತು ಹೆಲ್ದೀ ಗ್ರಾನೋಲಾ ರೆಸಿಪಿ


    ತಪ್ಪು ಜೀವನಶೈಲಿ ಮತ್ತು ಕಳಪೆ ಆಹಾರದಿಂದ ಮಧುಮೇಹ, ಥೈರಾಯ್ಡ್ ಜೊತೆಗೆ ಹಲವಾರು ಸಮಸ್ಯೆ ಎದುರಿಸಬೇಕಾಗಬಹುದು. ಸರಿಯಾದ ಸಮಯದಲ್ಲಿ ಸರಿಯಾದ ಆಹಾರ ಆಯ್ಕೆ ಮಾಡುವುದು ಮುಖ್ಯ. ತಜ್ಞರು ಸೂಚಿಸಿದ ಆರೋಗ್ಯಕರ ಮತ್ತು ಟೇಸ್ಟಿ ಉಪಹಾರ ಪಾಕವಿಧಾನವನ್ನು ತಂದಿದ್ದೇವೆ. ರೆಸಿಪಿಯಲ್ಲಿ ಬಳಸಿರುವ ಪದಾರ್ಥಗಳು ಪೋಷಕಾಂಶಗಳ ಅತ್ಯುತ್ತಮ ಮೂಲವಾಗಿದೆ.


    ಫಿಟ್ನೆಸ್ ಮತ್ತು ಪೌಷ್ಟಿಕಾಂಶದ ಮಾರ್ಗದರ್ಶಿ ಮಾನ್ಸಿ ಪಡೆಚಿಯಾ, ಅರಿಶಿನ ಮತ್ತು ಟೇಸ್ಟಿ ಗ್ರಾನೋಲಾದ ಪಾಕವಿಧಾನ ಶೇರ್ ಮಾಡಿದ್ದಾರೆ. ಬೆಳಗಿನ ಉಪಾಹಾರಕ್ಕೆ ಇದು ಬೆಸ್ಟ್ ತಿಂಡಿ ಎಂದಿದ್ದಾರೆ. ಇದು ತುಂಬಾ ಪೌಷ್ಟಿಕವಾಗಿದೆ ಎಂದು ಬಣ್ಣಿಸಿದ್ದಾರೆ. ಹಾಗಾದರೆ ಗ್ರಾನೋಲಾ ರೆಸಿಪಿ ಹೇಗೆ ತಯಾರಿಸಬೇಕು ಅಂತಾ ತಿಳಿಯೋಣ.




    ಗ್ರಾನೋಲಾ ರೆಸಿಪಿ ತಯಾರಿಸಲು ಬೇಕಾಗುವ ಪದಾರ್ಥಗಳು


    ಓಟ್ಸ್ 1 ಕಪ್, ಕುಂಬಳಕಾಯಿ ಬೀಜ 1/4 ಕಪ್, ಸೂರ್ಯಕಾಂತಿ ಬೀಜ 1/4 ಕಪ್, ಅಗಸೆ ಬೀಜಗಳು 1/4 ಕಪ್, ಕತ್ತರಿಸಿದ ಬಾದಾಮಿ 1/4 ಕಪ್, ಕತ್ತರಿಸಿದ ಕ್ರ್ಯಾನ್ಬೆರಿಗಳು 1/4 ಕಪ್, ಬೆಲ್ಲ 1/4 ಕಪ್, ಕಿತ್ತಳೆ ರಸ 1/4 ಕಪ್, ದಾಲ್ಚಿನ್ನಿ ಪುಡಿ 2 ಟೀಸ್ಪೂನ್, ಜೇನುತುಪ್ಪ 2 ಟೀಸ್ಪೂನ್, ಮೊಸರು 2 ಚಮಚ ಬೇಕು.


    ಗ್ರಾನೋಲಾ ರೆಸಿಪಿ ತಯಾರಿಸುವ ವಿಧಾನ


    ಮೊದಲು ದೊಡ್ಡ ಬಟ್ಟಲಿನಲ್ಲಿ, ಓಟ್ಸ್, ಕುಂಬಳಕಾಯಿ ಬೀಜಗಳು, ಸೂರ್ಯಕಾಂತಿ ಬೀಜಗಳು, ಅಗಸೆ ಬೀಜಗಳು, ಬಾದಾಮಿ ಮತ್ತು ಕ್ರ್ಯಾನ್ಬೆರಿಗಳನ್ನು ಸೇರಿಸಿ. ನಂತರ ಅದಕ್ಕೆ ಬೆಲ್ಲ, ಕಿತ್ತಳೆ ರಸ, ದಾಲ್ಚಿನ್ನಿ ಪುಡಿ ಮತ್ತು ಮೊಸರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈಗ ಒಂದು ಟ್ರೇ ತೆಗೆದುಕೊಂಡು ಅದರ ಮೇಲೆ ಬಟರ್ ಪೇಪರ್ ಹಾಕಿ. ಅದರಲ್ಲಿ ತಯಾರಿಸಿದ ಮಿಶ್ರಣವನ್ನು ಹಾಕಿ ನಂತರ 40 ನಿಮಿಷಗಳ ಕಾಲ ಬೇಯಿಸಿ. ನಂತರ ಜೇನುತುಪ್ಪ ಸುರಿದು ತಿನ್ನಿರಿ.


    ಗ್ರಾನೋಲಾ ರೆಸಿಪಿ ಆರೋಗ್ಯಕ್ಕೆ ಹೇಗೆ ಪ್ರಯೋಜನಕಾರಿ?


    ಓಟ್ಸ್ ಉತ್ಕರ್ಷಣ ನಿರೋಧಕಗಳು ಮತ್ತು ಫೈಬರ್‌ನ ಅತ್ಯುತ್ತಮ ಮೂಲವಾಗಿದೆ. ಇದು ದಿನವಿಡೀ ಶಕ್ತಿ ನೀಡುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚಿತ್ತದೆ. ಕುಂಬಳಕಾಯಿ ಬೀಜಗಳು ಫೈಬರ್ ಇದೆ. ಟೈಪ್ 2 ಮಧುಮೇಹದ ಸ್ಥಿತಿಯಲ್ಲಿ ಪ್ರಯೋಜನಕಾರಿ. ಆರೋಗ್ಯವನ್ನು ದೀರ್ಘಕಾಲದವರೆಗೆ ಕಾಪಾಡುತ್ತದೆ.


    ಇದನ್ನೂ ಓದಿ: ದಿಢೀರ್ ತೂಕ ನಷ್ಟ ಕೂಡ ಡೇಂಜರ್; ಸಣ್ಣ ಆಗಲು ಈ 5 ಸಮಸ್ಯೆಗಳೇ ಕಾರಣ


    ಸೂರ್ಯಕಾಂತಿ ಬೀಜಗಳು ಮಿನ್ ಇ ನಲ್ಲಿ ಸಮೃದ್ಧವಾಗಿವೆ. ಮತ್ತು ಶೂನ್ಯ ಕೊಲೆಸ್ಟ್ರಾಲ್  ಹೊಂದಿವೆ. ರಕ್ತದೊತ್ತಡ ಸಂಪೂರ್ಣವಾಗಿ ನಿಯಂತ್ರಿಸುತ್ತದೆ. ಹೃದಯದ ಆರೋಗ್ಯ ಕಾಪಾಡುತ್ತದೆ. ಅಗಸೆ ಬೀಜಗಳು ಲಿಗ್ನಾನ್‌ಗಳಲ್ಲಿ ಸಮೃದ್ಧವಾಗಿವೆ. ಇದು ಶಕ್ತಿಯುತವಾದ ಉತ್ಕರ್ಷಣ ನಿರೋಧಕಗಳಾಗಿ ಕಾರ್ಯ ನಿರ್ವಹಿಸುತ್ತದೆ. ಬಾದಾಮಿ ಉತ್ಕರ್ಷಣ ನಿರೋಧಕವಾಗಿದೆ. ಒಟ್ಟಾರೆ ಆರೋಗ್ಯಕ್ಕೆ ಬಹಳ ಮುಖ್ಯ. ಮೆದುಳಿಗೆ ತುಂಬಾ ಪರಿಣಾಮಕಾರಿ.

    Published by:renukadariyannavar
    First published: