• Home
  • »
  • News
  • »
  • lifestyle
  • »
  • Morning Breakfast: ಬೆಳಗಿನ ತಿಂಡಿಗೆ ಟೇಸ್ಟಿ ಸಿಹಿ ಗೆಣಸು ಕಟ್ಲೆಟ್ ರೆಸಿಪಿ ಮಾಡುವುದು ಹೇಗೆ?

Morning Breakfast: ಬೆಳಗಿನ ತಿಂಡಿಗೆ ಟೇಸ್ಟಿ ಸಿಹಿ ಗೆಣಸು ಕಟ್ಲೆಟ್ ರೆಸಿಪಿ ಮಾಡುವುದು ಹೇಗೆ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಸಿಹಿ ಗೆಣಸನ್ನು ನೀವು ಬೆಳಗಿನ ತಿಂಡಿಯಾಗಿ ಸಹ ಸೇವನೆ ಮಾಡಬಹುದು. ಸಿಹಿ ಗೆಣಸು ದೀರ್ಘಕಾಲ ಹೊಟ್ಟೆ ತುಂಬಿಸಿಡುತ್ತದೆ. ಅಲ್ಲದೇ ಪೌಷ್ಟಿಕಾಂಶ ನೀಡುತ್ತದೆ. ಸಿಹಿ ಗೆಣಸಿನ ರುಚಿ ತುಂಬಾ ಚೆನ್ನಾಗಿರುತ್ತದೆ.

  • Share this:

    ಬೆಳಗಿನ ತಿಂಡಿಗೆ (Morning Breakfast) ಒಂದೇ ರೀತಿಯ ಆಹಾರ (Food) ಸೇವನೆ ಮಾಡುವುದು ಸರಿಯಲ್ಲ. ಪೋಷಕತತ್ವಗಳನ್ನು (Nutrients) ಪಡೆಯಬೇಕಾದ್ರೆ ವೆರೈಟಿ ಖಾದ್ಯಗಳನ್ನು (Verity Recipes) ತಿನ್ನಬೇಕು. ಅದರಲ್ಲೂ ಕಾಲೋಚಿತ ತರಕಾರಿ ಪದಾರ್ಥಗಳನ್ನು ಬೆಳಗಿನ ತಿಂಡಿಗೆ ಸೇರಿಸುವಂತೆ ತಜ್ಞರು ಸಲಹೆ ನೀಡುತ್ತಾರೆ. ಚಳಿಗಾಲ ಬರುತ್ತಿದ್ದಂತೆ ಸಾಕಷ್ಟು ವಿಭಿನ್ನ ತರಕಾರಿಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತವೆ. ಕ್ಯಾರೆಟ್, ಬಟಾಣಿ, ಕಡಲೆ ಕಾಳು, ಹಣ್ಣುಗಳು, ಸಿಹಿ ಗೆಣಸು ಹೀಗೆ ಹಲವು ರೀತಿಯ ತರಕಾರಿಗಳನ್ನು ಮಾರುಕಟ್ಟೆಯಲ್ಲಿ ಕಾಣಬಹುದು. ಅದರಲ್ಲಿ ಸಿಹಿ ಗೆಣಸು ವಿಶೇಷವಾಗಿದೆ. ಸಿಹಿ ಗೆಣಸನ್ನು ಹಲವು ಖಾದ್ಯಗಳಾಗಿ ತಯಾರಿಸಿ ಸೇವನೆ ಮಾಡಲಾಗುತ್ತದೆ. ಸಿಹಿ ಗೆಣಸು ಸಾಕಷ್ಟು ಪೋಷಕತತ್ವ ಹೊಂದಿದೆ.


    ಸಿಹಿ ಗೆಣಸನ್ನು ನೀವು ಬೆಳಗಿನ ತಿಂಡಿಯಾಗಿ ಸಹ ಸೇವನೆ ಮಾಡಬಹುದು. ಸಿಹಿ ಗೆಣಸು ದೀರ್ಘಕಾಲ ಹೊಟ್ಟೆ ತುಂಬಿಸಿಡುತ್ತದೆ. ಅಲ್ಲದೇ ಪೌಷ್ಟಿಕಾಂಶ ನೀಡುತ್ತದೆ. ಸಿಹಿ ಗೆಣಸಿನ ರುಚಿ ತುಂಬಾ ಚೆನ್ನಾಗಿರುತ್ತದೆ. ಸಿಹಿ ಗೆಣಸನ್ನು ಹೆಚ್ಚಾಗಿ ಕುದಿಸಿ, ಸಿಪ್ಪೆ ತೆಗೆದು, ಹಾಲು ಮತ್ತು ಬೆಲ್ಲ ಹಾಕಿ ಕಲೆಸಿಕೊಂಡು ತಿನ್ನುವ ರೂಢಿ ಇದೆ.


    ಬೆಳಗಿನ ತಿಂಡಿಗೆ ಸಿಹಿ ಗೆಣಸು ಕಟ್ಲೆಟ್ ರೆಸಿಪಿ


    ಚಳಿಗಾಲದಲ್ಲಿ ಆರೋಗ್ಯ ಚೆನ್ನಾಗಿಡಲು ಸಿಹಿ ಗೆಣಸಿನ ಟೇಸ್ಟಿ ಮತ್ತು ಆರೋಗ್ಯಕರ ಕಟ್ಲೆಟ್‌ ಮಾಡುವ ರೆಸಿಪಿ ಇಲ್ಲಿದೆ. ಹಾಗಿದ್ರೆ ಬೆಳಗಿನ ತಿಂಡಿಗೆ ಪೋಷಕಾಂಶ ಭರಿತ ಸಿಹಿ ಗೆಣಸು ಕಟ್ಲೆಟ್ ಮಾಡುವುದು ಹೇಗೆ ಅಂತಾ ನೋಡೋಣ.




    ಸಿಹಿ ಗೆಣಸು ಕಟ್ಲೆಟ್ ರೆಸಿಪಿಗೆ ಬೇಕಾಗುವ ಪದಾರ್ಥಗಳು


    ನಾಲ್ಕು ಸಿಹಿ ಗೆಣಸು, ಒಂದು ಚಮಚ ಶುಂಠಿ ಮತ್ತು ಹಸಿರು ಮೆಣಸಿನಕಾಯಿ ಪೇಸ್ಟ್, ಮೂರು ಚಮಚ ಕಡಲೆಬೇಳೆ ಹಿಟ್ಟು, ಒಂದು ಚಮಚ ಚಾಟ್ ಮಸಾಲಾ, ಅರ್ಧ ಒಣ ಮಾವಿನ ಪುಡಿ,


    ಒಂದು ಚಮಚ ನಿಂಬೆ ರಸ, ಒಂದು ಚಮಚ ಜೀರಿಗೆ ಪುಡಿ, ಕಾಲು ಚಮಚ ಗರಂ ಮಸಾಲಾ, ರುಚಿಗೆ ತಕ್ಕಷ್ಟು ಉಪ್ಪು, ಮೂರು ಚಮಚ ಎಣ್ಣೆ ಬೇಕು.


    ಸಿಹಿ ಗೆಣಸು ಕಟ್ಲೆಟ್ ರೆಸಿಪಿ ಮಾಡುವ ವಿಧಾನ


    ಸಿಹಿ ಗೆಣಸನ್ನು ಒಂದು ಪಾತ್ರೆಗೆ ನೀರು ಹಾಕಿ, ಒಲೆಯಲ್ಲಿ ಮೇಲಿಟ್ಟು ಲಘುವಾಗಿ ಬೇಯಿಸಿ. ನಂತರ ಮಾಗಿದ ಸಿಹಿ ಗೆಣಸನ್ನು ಚೆನ್ನಾಗಿ ಮ್ಯಾಶ್ ಮಾಡಿ. ನಂತರ ಈಗ ಚಾಟ್ ಮಸಾಲಾ, ಒಣಗಿದ ಮಾವಿನಕಾಯಿ ಪುಡಿ,


    ನಿಂಬೆ ರಸ, ಜೀರಿಗೆ ಪುಡಿ, ಗರಂ ಮಸಾಲಾ, ಹಸಿರು ಮೆಣಸಿನಕಾಯಿ ಶುಂಠಿ ಪೇಸ್ಟ್ ಮತ್ತು ರವೆ ಹಿಟ್ಟು ಹಿಸುಕಿದ ಸಿಹಿ ಗೆಣಸಿಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.


    ಈ ಮಿಶ್ರಣದಿಂದ ಈಗ ಚಿಕ್ಕ ಚಿಕ್ಕ ಟಿಕ್ಕಿ ತಯಾರಿಸಿ. ಒಲೆಯ ಮೇಲೆ ತವಾ ಬಿಸಿ ಮಾಡಿ. ಸ್ವಲ್ಪ ಎಣ್ಣೆ ಹಾಕಿ. ನಂತರ ಆಳವಾಗಿ ಫ್ರೈ ಮಾಡಿ. ಎರಡೂ ಬದಿ ಚೆನ್ನಾಗಿ ಬೆಂದ ನಂತರ ಪ್ಲೇಟ್ ಗೆ ಹಾಕಿ ನಿಮ್ಮ ಇಷ್ಟದ ಚಟ್ನಿ ಅಥವಾ ಸಾಸ್ ಜೊತೆ ಸವಿಯಿರಿ.


    ಸಾಂದರ್ಭಿಕ ಚಿತ್ರ


    ಟೇಸ್ಟಿ ಮತ್ತು ಆರೋಗ್ಯಕರ ಸಿಹಿ ಗೆಣಸು ಹಲವು ಆರೋಗ್ಯ ಪ್ರಯೋಜನ ನೀಡುತ್ತದೆ. ಸಿಹಿ ಗೆಣಸು ರೆಸಿಪಿ ಜೀರ್ಣಾಂಗ ವ್ಯವಸ್ಥೆಯನ್ನು ಚೆನ್ನಾಗಿಡುತ್ತದೆ. ಚಳಿಗಾಲದಲ್ಲಿ ಡೀಪ್ ಫ್ರೈ ಅಥವಾ ಬೇರೆ ಪದಾರ್ಥ ಸೇವನೆಯಿಂದ ಅಜೀರ್ಣ ಅಥವಾ ಹೊಟ್ಟೆಯುಬ್ಬರ, ಭಾರವಾದ ಸಮಸ್ಯೆ ಮತ್ತು ಹೊಟ್ಟೆ ಅಸ್ವಸ್ಥತೆ ಕಾಡುತ್ತದೆ.


    ಸಿಹಿ ಗೆಣಸು ತಿಂದ ನಂತರ ಜೀರ್ಣಾಂಗ ವ್ಯವಸ್ಥೆಯು ಚೆನ್ನಾಗಿರುತ್ತದೆ. ಹಾಗೂ ಚೆನ್ನಾಗಿ ಕೆಲಸ ಮಾಡುತ್ತದೆ. ಅಜೀರ್ಣ ಯಾವುದೇ ಸಮಸ್ಯೆ ಇರಲ್ಲ.


    ಇದನ್ನೂ ಓದಿ: ಬಾಯಿಗೆ ರುಚಿ ಅಂತ ತುಂಬಾ ಮೇಯನೀಸ್ ತಿಂದ್ರೆ ಏನಾಗುತ್ತೆ ನೋಡಿ


    ರೋಗ ನಿರೋಧಕ ಶಕ್ತಿ ಬಲಪಡಿಸುತ್ತದೆ


    ಸಿಹಿ ಗೆಣಸು ನಿಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿ ಆಗಿದೆ. ಉತ್ತಮ ಪ್ರಮಾಣದ ವಿಟಮಿನ್ ಎ ಹೊಂದಿದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.

    Published by:renukadariyannavar
    First published: