ಬೆಳಗ್ಗಿನ ಉಪಹಾರಕ್ಕೆ (Morning Breakfast) ಯಾವಾಗಲೂ ಆರೋಗ್ಯಕರ (Healthy) ಆಯ್ಕೆಯನ್ನೇ ಜನರು ಬಯಸುತ್ತಾರೆ. ಬೆಳಗಿನ ತಿಂಡಿ ಆರೋಗ್ಯಕರ ಮತ್ತು ರುಚಿಕರ (Tasty) ಹಾಗೂ ಯಾವಾಗಲೂ ವೆರೈಟಿ (Verity) ಆಗಿದ್ದರೆ, ದೇಹಕ್ಕೆ ಬೇಕಾದ ಎಲ್ಲಾ ಪೋಷಕಾಂಶ ಸಿಗುತ್ತದೆ. ಮತ್ತು ದೇಹ ಸದೃಢವಾಗಿ ಹಾಗೂ ಶಕ್ತಿ ಸಿಗುತ್ತದೆ. ಬೆಳಗಿನ ತಿಂಡಿ ದೀರ್ಘಕಾಲ ಹೊಟ್ಟೆ ತುಂಬಿಸುವಂತಿರಬೇಕು. ಬೆಳಗಿನ ತಿಂಡಿಗೆ ನೀವು ಹಲವು ರೆಸಿಪಿ (Recipe) ಮಾಡಿ ತಿಂದಿರುತ್ತೀರಿ. ಇಂದು ನಾವು ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿರುವ ಪಾಸ್ತಾ ಮಾಡುವುದು ಹೇಗೆ ನೋಡೋಣ. ಪಾಸ್ತಾ ಆಹಾರವನ್ನು ತುಂಬಾ ಜನರು ಇಷ್ಟ ಪಟ್ಟು ತಿನ್ನುತ್ತಾರೆ.
ಬೆಳಗಿನ ತಿಂಡಿಗೆ ವೆಜಿಟೇಬಲ್ ಪಾಸ್ತಾ ರೆಸಿಪಿ
ಇತ್ತೀಚಿನ ದಿನಗಳಲ್ಲಿ ಪಾಸ್ತಾದ ಕ್ರೇಜ್ ಹೆಚ್ಚಿದೆ. ಇಟಲಿಯ ಪಾಸ್ತಾ ಖಾದ್ಯ ತನ್ನ ರುಚಿಯಿಂದ ಬುತೇಕರನ್ನು ಸೆಳೆದಿದೆ. ಇಂದಿನ ಮಕ್ಕಳು ಪಾಸ್ತಾ ಅಂದ್ರೆ ತುಂಬಾ ಇಷ್ಟ ಪಟ್ಟು ತಿಂತಾರೆ. ಮಕ್ಕಳು ಬೆಳಗಿನ ತಿಂಡಿ, ಸಾಯಂಕಾಲದ ಸ್ನ್ಯಾಕ್ಸ್ ನಲ್ಲೂ ಪಾಸ್ತಾ ಬೇಕು ಅಂತಾ ಕೇಳುತ್ತಾರೆ. ಅನೇಕರು ಪಾಸ್ತಾವನ್ನು ಅನಾರೋಗ್ಯಕರ ರೀತಿಯಲ್ಲಿ ತಯಾರಿಸುತ್ತಾರೆ.
ಪಾಸ್ತಾವನ್ನು ಹೆಚ್ಚಿನ ಕಡೆಗಳಲ್ಲಿ ಸಂಸ್ಕರಿಸಿದ ಹಿಟ್ಟು ಮತ್ತು ಭಾರೀ ಸಾಸೇಜ್ ನಿಂದ ತಯಾರಿಸಿ ಕೊಡಲಾಗುತ್ತದೆ. ಇದು ಅನಾರೋಗ್ಯಕರ ವಿಧಾನ ಮತ್ತು ಆರೋಗ್ಯಕರ ಆಯ್ಕೆಗಿಂತ ಹೆಚ್ಚಾಗಿ ಜಂಕ್ ಫುಡ್ ನ ಭಾಗ ಆಗಿದೆ. ಆದರೆ ಈ ಪಾಸ್ತಾವನ್ನು ನೀವು ಆರೋಗ್ಯಕರ ರೀತಿಯಲ್ಲಿ ತಯಾರಿಸಬಹುದು.
ತೂಕ ಇಳಿಸುವ ಪ್ರಯಾಣದಲ್ಲಿರುವವರಿಗೆ ಆರೋಗ್ಯಕರ ಪಾಸ್ತಾ ಪಾಕವಿಧಾನ ಬೇಗ ವೇಟ್ ಲಾಸ್ ಗೆ ಸಹಕಾರಿ ಆಗುತ್ತದೆ. ಮನೆಯಲ್ಲಿ ಆರೋಗ್ಯಕರ ರೀತಿಯಲ್ಲಿ ಪಾಸ್ತಾ ಮಾಡಿ ಸೇವಿಸುವ ಮೂಲಕ ವೇಗವಾಗಿ ತೂಕ ಇಳಿಸಬಹುದು. ಜೊತೆಗೆ ಇದು ನಿಮ್ಮ ಚಯಾಪಚಯ ಕ್ರಿಯೆ ಹೆಚ್ಚಿಸಲು ಸಹಕಾರಿ ಆಗಿದೆ.
ಮಿಕ್ಸ್ ವೆಜಿಟೇಬಲ್ ಪಾಸ್ತಾ ಮಾಡಲು ಬೇಕಾಗುವ ಸಾಮಗ್ರಿಗಳು
ಗೋಧಿ ಪಾಸ್ತಾ 3 ಕಪ್, ಕತ್ತರಿಸಿದ ಮೂರು ಟೊಮೆಟೊ, ಹೆಚ್ಚಿದ ಎರಡು ಈರುಳ್ಳಿ, ಒಂದು ಹೆಚ್ಚಿದ ಕ್ಯಾಪ್ಸಿಕಂ, ಕತ್ತರಿಸಿದ ಎರಡು ಅಣಬೆ, ಅರ್ಧ ಚಮಚ ಬೆಳ್ಳುಳ್ಳಿ ಪೇಸ್ಟ್, ಮಸಾಲೆ, ಕಪ್ಪು ಮೆಣಸು, ಕಪ್ಪು ಉಪ್ಪು, ಚಮಚ ಜೀರಿಗೆ, ಅರ್ಧ ಚಮಚ ಅರಿಶಿನ ಪುಡಿ ಬೇಕು.
ಮಿಕ್ಸ್ ವೆಜಿಟೇಬಲ್ ಪಾಸ್ತಾ ತಯಾರಿಸುವ ವಿಧಾನ
ಮೊದಲು ಪಾಸ್ತಾವನ್ನ ಪಾತ್ರೆಗೆ ಹಾಕಿ ಮತ್ತು ನಾಲ್ಕು ಕಪ್ ನೀರು ಸೇರಿಸಿ ಕುದಿಯಲು ಇಡಿ. ನಂತರ ಅದಕ್ಕೆ ಒಂದು ಚಮಚ ಆಲಿವ್ ಎಣ್ಣೆ ಮತ್ತು ಅರ್ಧ ಚಮಚ ಉಪ್ಪು ಹಾಕಿರಿ. ಕತ್ತರಿಸಿದ ಟೊಮೆಟೊಗಳನ್ನು ಗ್ರೈಂಡರ್ನಲ್ಲಿ ಪುಡಿ ಮಾಡಿ ಮತ್ತು ಅದರಿಂದ ದಪ್ಪ ಪೇಸ್ಟ್ ತಯಾರಿಸಿ. ಎಲ್ಲಾ ತರಕಾರಿಗಳನ್ನು ನುಣ್ಣಗೆ ಕತ್ತರಿಸಿ ಪ್ರತ್ಯೇಕವಾಗಿ ಪಕ್ಕಕ್ಕಿಡಿ.
ಪಾಸ್ತಾ ಸರಿಯಾಗಿ ಕುದಿಸಿ, ನೀರನ್ನು ಫಿಲ್ಟರ್ ಮಾಡಿ. ಮತ್ತು ಅದಕ್ಕೆ ಸ್ವಲ್ಪ ತಣ್ಣೀರು ಸೇರಿಸಿ ತಣ್ಣಗಾಗಿಸಿ. ಪಾಸ್ತಾ ಅಂಟಿಕೊಳ್ಳಲ್ಲ. ನಂತರ ಪ್ಯಾನ್ ಅನ್ನು ಬಿಸಿ ಮಾಡಿ. ಅದಕ್ಕೆ ಆಲಿವ್ ಎಣ್ಣೆ ಸೇರಿಸಿ. ಬೆಳ್ಳುಳ್ಳಿ ಪೇಸ್ಟ್ ಮತ್ತು ಜೀರಿಗೆ ಸೇರಿಸಿ ಫ್ರೈ ಮಾಡಿ. ಈರುಳ್ಳಿ ಹಾಕಿ ಫ್ರೈ ಮಾಡಿ. ನಂತರ ತರಕಾರಿ ಸೇರಿಸಿ ಬೇಯಿಸಿ.
ಇದನ್ನೂ ಓದಿ: ಬೆಳಗ್ಗಿನ ತಿಂಡಿಗೆ ಬೇಲ್ ಇಡ್ಲಿ ಮಾಡುವುದು ಹೇಗೆ?
ನಂತರ ಸಿದ್ಧಪಡಿಸಿದ ಟೊಮೇಟೊ ಪ್ಯೂರೀ ಹಾಕಿ. ಮಸಾಲೆ ಸೇರಿಸಿ, ಮಿಶ್ರಣ ಮಾಡಿ. ಪಾಸ್ತಾ ಬೆಂದ ನಂತರ ಬಿಸಿಯಾಗಿ ಬಡಿಸಿ. ರುಚಿಕರ ಮಿಕ್ಸ್ ವೆಜಿಟೇಬಲ್ ಪಾಸ್ತಾವನ್ನು ಎಲ್ಲರೂ ಸೇವಿಸಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ