ಬೆಳಗಿನ ತಿಂಡಿಗೆ (Morning Breakfast) ಹಲವು ಖಾದ್ಯಗಳನ್ನು (Recipes) ಮಾಡಿ ನೀವು ಸೇವಿಸಿರಬಹುದು. ಮೆಕ್ಕೆಜೋಳ, ಗೋವಿನ ಜೋಳ (Sweet Corn) ಎಂದು ಕರೆಯಲ್ಪಡುವ, ನೀವು ಇಷ್ಟ ಪಟ್ಟು ತಿನ್ನುವ ಸ್ವೀಟ್ ಕಾರ್ನ್ ನ್ನು ರೊಟ್ಟಿ ರೂಪದಲ್ಲಿ ತಿಂದಿದ್ದೀರಾ? ಮೆಕ್ಕೆಜೋಳವನ್ನು ಸ್ವೀಟ್ ಕಾರ್ನ್ ಎಂದು ಕರೆಯುತ್ತಾರೆ. ಇದು ಜನಪ್ರಿಯ (Famous) ಆಯ್ಕೆ ಆಗಿದೆ. ಸಂಜೆ ಹೊತ್ತು ತಿರುಗಾಡಲು ಹೋದಾಗ ಒಂದು ಕಪ್ ಸ್ವೀಟ್ ಮಸಾಲಾ ಕಾರ್ನ್ ತಿನ್ನುತ್ತಾ ಹೆಜ್ಜೆ ಹಾಕುವುದು ಎಷ್ಟೋ ಜನರಿಗೆ (People) ರೂಢಿ. ಸ್ವೀಟ್ ಕಾರ್ನ್ ರುಚಿ ಹೆಚ್ಚಿಸುತ್ತದೆ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರ ಫೇವರೆಟ್ ಫುಡ್ ಆಗಿರುವ ಸ್ವೀಟ್ ಕಾರ್ನ್ ಪರಾಠಾ ಮಾಡುವುದು ಹೇಗೆ ಅಂತಾ ನೋಡೋಣ.
ಬೆಳಗಿನ ತಿಂಡಿಗೆ ಸ್ವೀಟ್ ಕಾರ್ನ್ ಪರಾಠಾ ರೆಸಿಪಿ
ನೀವು ಬೆಳಗಿನ ತಿಂಡಿಗೆ ಸ್ವೀಟ್ ಕಾರ್ನ್ ಪರಾಠಾ ಮಾಡಿ ಸೇವನೆ ಮಾಡಿದರೆ ಆರೋಗ್ಯ ಮತ್ತು ಹಲವು ಪೋಷಕಾಂಶ ನೀಡುತ್ತದೆ. ಮೆಕ್ಕೆ ಜೋಳವನ್ನು ಸೂಪರ್ಫುಡ್ ಎಂದು ಪರಿಗಣಿಸಲಾಗಿದೆ. ಇದು ಅನೇಕ ಪೋಷಕಾಂಶ ಹೊಂದಿದೆ.
ಕಾರ್ನ್ ಕುದಿಸಿ, ಉಪ್ಪು, ಖಾರ, ಮಸಾಲೆ, ಬೆಣ್ಣೆ ಹಾಕಿ ಸೇವನೆ ಮಾಡಲಾಗುತ್ತದೆ. ಸೂಪ್ ಕೂಡ ಮಾಡಿ ಸೇವನೆ ಮಾಡಬಹುದು. ಮೆಕ್ಕೆಜೋಳದ ಹಿಟ್ಟಿಗೆ ಮೆಂತ್ಯ ಸೊಪ್ಪನ್ನು ಹಾಕಿ ಅದನ್ನು ಚೆನ್ನಾಗಿ ಮಿಶ್ರಣ ಮಾಡಿ, ಪರಾಠಾ ತಯಾರಿಸಿ ತಿಂದರೆ ರುಚಿ ಹಾಗೂ ಆರೋಗ್ಯ ಎರಡಕ್ಕೂ ಉತ್ತಮವಾಗಿದೆ.
ಜೋಳದ ಹಿಟ್ಟಿನಲ್ಲಿ ಕತ್ತರಿಸಿದ ಮೆಂತ್ಯ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಉಂಡೆ ತಯಾರಿಸಿ ಕೈಗಳಿಂದ ರೊಟ್ಟಿ ಆಕಾರ ಮಾಡಿ ಬೇಯಿಸಿ ತಿನ್ನುವುದು ಆಗಿದೆ. ನೀವು ಇದನ್ನು ನಿಮ್ಮಿಷ್ಟದ ಚಟ್ನಿ, ಚಹಾ, ಮೊಸರು, ಮಜ್ಜಿಗೆ, ಪಲ್ಯದ ಜೊತೆ ಸೇವನೆ ಮಾಡಬಹುದು.
ಹಾಗಿದ್ರೆ ಇಲ್ಲಿ ನಾವು ಬೆಳಗಿನ ತಿಂಡಿಗೆ ಮೆಕ್ಕೆಜೋಳ ಪರಾಠಾ ರೆಸಿಪಿ ಮಾಡುವುದು ಹೇಗೆ ಅಂತಾ ತಿಳಿಯೋಣ.
ಮೆಕ್ಕೆಜೋಳ ಪರಾಠಾ ರೆಸಿಪಿಗೆ ಬೇಕಾಗುವ ಪದಾರ್ಥಗಳು
ಒಂದು ಬೌಲ್ ಕತ್ತರಿಸಿದ ಮೆಂತ್ಯ, ಎರಡು ಬಟ್ಟಲು ಮೆಕ್ಕೆಜೋಳದ ಹಿಟ್ಟು, ಒಂದು ಲೋಟ ಉಗುರುಬೆಚ್ಚಗಿನ ನೀರು, ಅರ್ಧ ಟೀಚಮಚ ಕೆಂಪು ಮೆಣಸಿನಕಾಯಿ, ಅರ್ಧ ಟೀಚಮಚ ಕೊತ್ತಂಬರಿ ಪುಡಿ, ಅರ್ಧ ಟೀಚಮಚ ಗರಂ ಮಸಾಲಾ, ಒಂದು ಟೀಚಮಚ ಅಜ್ವೈನ್, ಒಂದು ಚಮಚ ಜೀರಿಗೆ, ರುಚಿಗೆ ಉಪ್ಪು ಬೇಕು.
ಆರೋಗ್ಯಕರ ಮೆಕ್ಕೆಜೋಳ ಪರಾಠಾ ರೆಸಿಪಿ ತಯಾರಿಸುವ ವಿಧಾನ
ಮೊದಲು ಒಂದು ಪಾತ್ರೆಗೆ ಎರಡು ಬಟ್ಟಲು ಮೆಕ್ಕೆಜೋಳದ ಹಿಟ್ಟು ಹಾಕಿ. ನಂತರ ಅದಕ್ಕೆ ಕತ್ತರಿಸಿದ ಮೆಂತ್ಯ ಸೇರಿಸಿ. ಈಗ ಅದಕ್ಕೆ ಉಪ್ಪು, ಮೆಣಸಿನಕಾಯಿ, ಗರಂ ಮಸಾಲಾ ಮತ್ತು ಕೊತ್ತಂಬರಿ ಪುಡಿ ಸೇರಿಸಿ ಮತ್ತು ಮಿಶ್ರಣ ಮಾಡಿ.
ಎಲ್ಲಾ ಪದಾರ್ಥಗಳನ್ನು ಸೇರಿಸಿದ ನಂತರ ಉಗುರು ಬೆಚ್ಚಗಿನ ನೀರು ಹಾಕುತ್ತಾ ಹಿಟ್ಟನ್ನು ಚೆನ್ನಾಗಿ ನಾದಿಕೊಳ್ಳಿ. ನಂತರ ತುಪ್ಪ ಅಥವಾ ಎಣ್ಣೆ ಹಚ್ಚಿ ಮತ್ತೆ ಹಿಟ್ಟನ್ನು ನಾದಿರಿ. ನಂತರ ಸ್ವಲ್ಪ ಎಣ್ಣೆ ಸವರಿ 20 ನಿಮಿಷ ನೆನೆಯಲು ಇಡಿ.
ಇದನ್ನೂ ಓದಿ: 30 ವಯಸ್ಸಿನ ನಂತರ ಈ ಆಹಾರಗಳನ್ನು ಸೇವಿಸುವುದರಿಂದ ಜ್ಞಾಪಕ ಶಕ್ತಿ ವೃದ್ಧಿಸುತ್ತದೆ!
ನಂತರ ತವೆ ಬಿಸಿ ಮಾಡಲು ಇಡಿ. ಇತ್ತ ಹಿಟ್ಟಿನ ಉಂಡೆ ಮಾಡಿ ಪರಾಠಾ ಮಾಡಿ, ಬಿಸಿಯಾದ ತವೆಗೆ ಎಣ್ಣೆ ಅಥವಾ ತುಪ್ಪ ಸವರಿ, ಪರಾಠಾ ಹಾಕಿ ಎರಡೂ ಬದಿಯನ್ನು ಚೆನ್ನಾಗಿ ಬೇಯಿಸಿ ತೆಗೆಯಿರಿ. ಇದನ್ನು ನಿಮ್ಮಿಷ್ಟದ ಚಟ್ನಿ, ಚಹಾ ಹಾಗೂ ಪಲ್ಯದ ಜೊತೆ ಸವಿಯಿರಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ