ಬೆಳಗ್ಗಿನ ತಿಂಡಿಗೆ (Morning Breakfast) ನೀವು ಲಘು ಉಪಹಾರ ಸೇವನೆ ಮಾಡುತ್ತೀರಾ? ಯಾವಾಗಲೂ ಟೊಮೆಟೋ (Tomato) ಪದಾರ್ಥ ಇಷ್ಟ ಆಗುತ್ತಾ? ಸಲಾಡ್, ಸ್ಯಾಂಡ್ ವಿಚ್ ಸಖತ್ ಇಷ್ಟಾನಾ? ಹಾಗಿದ್ರೆ ಇವತ್ತು ನಿಮಗಾಗಿ ನಾವು ಸ್ಟಫ್ಡ್ ಟೊಮೆಟೋ ರೆಸಿಪಿ (Stuffed Tomato Recipe) ತಂದಿದ್ದೇವೆ. ಪೋಷಕಾಂಶ ಸಮೃದ್ಧ ಟೊಮೆಟೋ ಬೆಳಗಿನ ತಿಂಡಿಗೆ ಆರೋಗ್ಯಕ್ಕೆ ಉತ್ತಮವಾಗಿದೆ. ಸ್ಟಫ್ಡ್ ಟೊಮೇಟೊವನ್ನು ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ಇಷ್ಟ ಪಟ್ಟು ತಿನ್ನಬಹುದು. ಟೊಮೇಟೊ ಪೌಷ್ಟಿಕಾಂಶದಿಂದ ತುಂಬಿದೆ. ಇದನ್ನು ನಮ್ಮ ದೈನಂದಿನ ಆಹಾರದಲ್ಲಿ ಸೇರಿಸಿದ್ರೆ ದೇಹಕ್ಕೆ ವಿವಿಧ ಪೌಷ್ಟಿಕಾಂಶ ಸಿಗುತ್ತದೆ. ಟೊಮ್ಯಾಟೋಸ್ ವಿಟಮಿನ್ ಎ, ಸಿ ಮತ್ತು ಕೆ ಯಲ್ಲಿ ಸಮೃದ್ಧ ಆಗಿದೆ.
ಬೆಳಗಿನ ತಿಂಡಿಗೆ ಸ್ಟಫ್ಡ್ ಟೊಮೆಟೋ ರೆಸಿಪಿ
ಟೊಮೆಟೋ ಫೋಲೇಟ್ ಮತ್ತು ಪೊಟ್ಯಾಸಿಯಮ್, ನಿಯಾಸಿನ್, ವಿಟಮಿನ್ ಬಿ 6, ಮೆಗ್ನೀಸಿಯಮ್, ರಂಜಕ ಮತ್ತು ತಾಮ್ರ ಸೇರಿದಂತೆ ಹಲವು ಅತ್ಯುತ್ತಮ ಆರೋಗ್ಯಕ್ಕೆ ಅಗತ್ಯವಾದ ಅಂಶಗಳನ್ನು ಒಳಗೊಂಡಿದೆ.
ಇಲ್ಲಿಯವರೆಗೆ ನೀವು ಹಾಗಲಕಾಯಿ, ಬೆಂಡೆಕಾಯಿ, ಬದನೆಕಾಯಿ ಮತ್ತು ಕ್ಯಾಪ್ಸಿಕಂ ಸೇರಿದಂತೆ ಅನೇಕ ಸ್ಟಫ್ಡ್ ತರಕಾರಿ ತಯಾರಿಸಿ ತಿಂದು ರುಚಿ ಸವಿದಿರಬಹುದು.
ಇವತ್ತು ನಾವು ಟೊಮೇಟೋ ಸ್ಟಫ್ಡ್ ರೆಸಿಪಿ ಮಾಡುವುದು ಹೇಗೆ ಅಂತಾ ನೋಡೋಣ. ಸ್ಟಫ್ಡ್ ಟೊಮೆಟೊ ಪಾಕವಿಧಾನ ತಿನ್ನಲು ಅದ್ಭುತವಾಗಿರುತ್ತದೆ. ಟೊಮೆಟೊಗಳು ನಮಗೆ ಸಾಕಷ್ಟು ಪೋಷಕಾಂಶ ಒದಗಿಸುತ್ತವೆ.
ಟೊಮೇಟೋ ಸ್ಟಫ್ಡ್ ರೆಸಿಪಿ ಮಾಡಲು ಬೇಕಾಗುವ ಸಾಮಗ್ರಿಗಳು
ಆರು ಟೊಮ್ಯಾಟೋ, ಒಂದು ಇಂಚು ತುರಿದ ಶುಂಠಿ, ಒಂದು ಟೀ ಚಮಚ ಸಣ್ಣದಾಗಿ ಕೊಚ್ಚಿದ ಬೆಳ್ಳುಳ್ಳಿ, ಮೂರು ಬೇಯಿಸಿದ ಆಲೂಗಡ್ಡೆ, ಒಂದು ಕಪ್ ತುರಿದ ಪನೀರ್, ಎರಡು ಟೀಸ್ಪೂನ್ ಎಣ್ಣೆ, ಒಂದು ಚಿಟಿಕೆ ಇಂಗು, ಒಂದು ಟೀಸ್ಪೂನ್ ಜೀರಿಗೆ,
ಅರ್ಧ ಚಮಚ ಗರಂ ಮಸಾಲಾ, ಅರ್ಧ ಟೀಚಮಚ ಕೆಂಪು ಮೆಣಸಿನಕಾಯಿ, ಎರಡು ಸಣ್ಣದಾಗಿ ಕತ್ತರಿಸಿದ ಹಸಿರು ಮೆಣಸಿನಕಾಯಿ, ಅರ್ದ ಚಮಚ ಅರಿಶಿನ ಪುಡಿ, ರುಚಿಗೆ ತಕ್ಕಂತೆ ಉಪ್ಪು ಬೇಕು.
ಸ್ಟಫ್ಡ್ ಟೊಮ್ಯಾಟೋ ರೆಸಿಪಿ ತಯಾರಿಸುವ ವಿಧಾನ ಹೀಗಿದೆ
ಮೊದಲು ಟೊಮೆಟೊ ಚೆನ್ನಾಗಿ ತೊಳೆದು ನಂತರ ಅದರ ಮೇಲಿನ ಭಾಗವನ್ನು ಕಾಲು ಭಾಗ ದುಂಡಗಿನ ಆಕಾರದಲ್ಲಿ ಕತ್ತರಿಸಿ. ಈಗ ಟೊಮೆಟೊದ ಒಳಗಿನ ಬೀಜಗಳನ್ನು ಹೊರಕ್ಕೆ ತೆಗೆಯಿರಿ. ಎಲ್ಲಾ ತೆಗೆದ ಬೀಜದ ತಿರುಳನ್ನು ಜಗ್ನಲ್ಲಿ ಹಾಕಿಡಿ. ನಂತರ ತಿರುಳನ್ನು ಚೆನ್ನಾಗಿ ಮಿಶ್ರಣ ಮಾಡಿ.
ಈಗ ಒಲೆ ಮೇಲೆ ಬಾಣಲೆ ಇಟ್ಟು ಅದಕ್ಕೆ ಎರಡು ಚಮಚ ಎಣ್ಣೆ ಹಾಕಿರಿ. ಕಾದ ಎಣ್ಣೆಗೆ ಜೀರಿಗೆ ಹಾಕಿ ಚಟ್ ಪಟ್ ಅಂತಾ ಸಿಡಿಯಲು ಬಿಡಿ. ನಂತರ ಅದಕ್ಕೆ ಕತ್ತರಿಸಿದ ಶುಂಠಿ, ಹಸಿರು ಮೆಣಸಿನಕಾಯಿ ಮತ್ತು ಬೆಳ್ಳುಳ್ಳಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ, ಬೇಯಿಸಿ.
ತಿರುಳು ಸ್ವಲ್ಪ ಸಮಯ ಬೆಂದ ನಂತರ ದಪ್ಪವಾಗುತ್ತದೆ. ಈಗ ಅದಕ್ಕೆ ಹಿಸುಕಿದ ಬೇಯಿಸಿದ ಆಲೂಗಡ್ಡೆ ಸೇರಿಸಿ. ಅದಕ್ಕೆ ತುರಿದ ಪನೀರ್ ಸೇರಿಸಿ. ಈಗ ನಿಮ್ಮ ಮಿಶ್ರಣ ಸಂಪೂರ್ಣವಾಗಿ ಸಿದ್ಧವಾಗಿದೆ. ಅದನ್ನು ಟೊಳ್ಳಾದ ಟೊಮೆಟೊಗಳಲ್ಲಿ ತುಂಬಿಸಿ.
ನಂತರ ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ. ಟೊಮೆಟೊವನ್ನು ಕಡಿಮೆ ಉರಿಯಲ್ಲಿ ಐದು ನಿಮಿಷ ಬೇಯಿಸಿ. ಟೊಮೆಟೊ ಮೇಲ್ಮೈ ಪ್ಯಾನ್ಗೆ ಅಂಟಿಕೊಳ್ಳದಂತೆ ನೋಡಿಕೊಳ್ಳಿ.
ಇದನ್ನೂ ಓದಿ: ಸ್ಥೂಲಕಾಯ ಸಮಸ್ಯೆ ತೊಡೆದು ಹಾಕಲು ಆಯುರ್ವೇದ ಪರಿಹಾರ ಹೀಗಿದೆ!
ಟೊಮೆಟೊಗಳನ್ನು ಕೈಯಿಂದ ಮೇಲಕ್ಕೆತ್ತಿ ಅವುಗಳನ್ನು ಫ್ಲಿಪ್ ಮಾಡಿ. ನಂತರ ನಿಂಬೆ ಮತ್ತು ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ಬಿಸಿಯಾಗಿ ಸೇವಿಸಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ