• Home
  • »
  • News
  • »
  • lifestyle
  • »
  • Morning Breakfast: ಬೆಳಗಿನ ತಿಂಡಿಗೆ ತಯಾರಿಸಿ ಮೊಳೆಕೆಯೊಡೆದ ಹೆಸರು ಕಾಳಿನ ದೋಸೆ, ಇಲ್ಲಿದೆ ರೆಸಿಪಿ

Morning Breakfast: ಬೆಳಗಿನ ತಿಂಡಿಗೆ ತಯಾರಿಸಿ ಮೊಳೆಕೆಯೊಡೆದ ಹೆಸರು ಕಾಳಿನ ದೋಸೆ, ಇಲ್ಲಿದೆ ರೆಸಿಪಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮೊಳೆಕೆಯೊಡೆದ ಹೆಸರು ಕಾಳಿನ ದೋಸೆ ಆರೋಗ್ಯಕರ ದೋಸೆ ಪಾಕವಿಧಾನ ಆಗಿದೆ. ಇದರಲ್ಲಿ ಸಣ್ಣದಾಗಿ ಕೊಚ್ಚಿದ ಈರುಳ್ಳಿ ಹಾಕಿ ಮಾಡಲಾಗುತ್ತದೆ. ಮಸಾಲೆಯುಕ್ತ ಚಟ್ನಿ ಪಾಕವಿಧಾನಗಳ ಆಯ್ಕೆ ಮಾಡಬಹುದು. ಇದು ಸಾಂಪ್ರದಾಯಿಕ ದಕ್ಷಿಣ ಭಾರತೀಯ ಉಪಹಾರ ಪಾಕವಿಧಾನಗಳಲ್ಲಿ ಒಂದಾಗಿದೆ.

  • Share this:

    ನೀವು ದೋಸೆ (Dosa) ಪ್ರಿಯರಾಗಿದ್ದರೆ, ಇವತ್ತಿನ ದೋಸಾ ರೆಸಿಪಿ ನಿಮಗೆ ಸಖತ್ ಲೈಕ್ ಆಗುತ್ತೆ. ಯಾವಾಗಲೂ ಅಕ್ಕಿ ಹಿಟ್ಟಿನ ದೋಸೆ ತಿಂದು ಬೋರ್ ಆಗಿದ್ರೆ, ಸ್ಪ್ರೌಟ್ಸ್ ದೋಸೆ (Sprouts Dosa) ಟ್ರೈ ಮಾಡಿ. ಅಂದ ಹಾಗೇ ಸ್ಪ್ರೌಟ್ಸ್ ದೋಸೆ ಸಾಕಷ್ಟು ಆರೋಗ್ಯಕರ (Healthy). ಇದು ವೇಟ್ ಲಾಸ್ (Weight Loss) ಮಾಡುವವರಿಗೆ ಬೆಳಗಿನ ತಿಂಡಿಗೆ ಬೆಸ್ಟ್ ಆಯ್ಕೆ. ಮೊಳೆಕೆಯೊಡೆದ ಹೆಸರು ಕಾಳಿನ ದೋಸೆ ಮಾಡುವುದು ತುಂಬಾ ಸುಲಭ. ಟೇಸ್ಟಿ ಆರೋಗ್ಯಕರ ಉಪಹಾರ ದೋಸೆ ಪಾಕವಿಧಾನ ಆಗಿದೆ. ಮೊಳೆಕೆ ಕಾಳು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಇದು ಸಾಕಷ್ಟು ಪ್ರೋಟೀನ್ ಹೊಂದಿದೆ.


    ಮೊಳೆಕೆಯೊಡೆದ ಹೆಸರು ಕಾಳಿನ ದೋಸೆ


    ಮೊಳೆಕೆಯೊಡೆದ ಹೆಸರು ಕಾಳಿನ ದೋಸೆ, ಆರೋಗ್ಯಕರ ದೋಸೆ ಪಾಕವಿಧಾನ ಆಗಿದೆ. ಇದರಲ್ಲಿ ಸಣ್ಣದಾಗಿ ಕೊಚ್ಚಿದ ಈರುಳ್ಳಿ ಹಾಕಿ ಮಾಡಲಾಗುತ್ತದೆ. ಮಸಾಲೆಯುಕ್ತ ಚಟ್ನಿ ಪಾಕವಿಧಾನಗಳ ಆಯ್ಕೆ ಮಾಡಬಹುದು. ಇದು ಸಾಂಪ್ರದಾಯಿಕ ದಕ್ಷಿಣ ಭಾರತೀಯ ಉಪಹಾರ ಪಾಕವಿಧಾನಗಳಲ್ಲಿ ಒಂದಾಗಿದೆ.


    ಅತ್ಯಂತ ಸರಳವಾದ ಮತ್ತು ಆರೋಗ್ಯಕರವಾದ ದೋಸೆ ರೆಸಿಪಿ ಎಂದರೆ ಸ್ಪ್ರೌಟ್ಸ್ ದೋಸೆ. ಪ್ರೋಟೀನ್ ಹೇರಳವಾಗಿದೆ. ಈ ಪಾಕವಿಧಾನವು ಜನಪ್ರಿಯ ಆಂಧ್ರದ ವಿಶೇಷ ಪೆಸರಟ್ಟು ಪಾಕವಿಧಾನ ಹೋಲುತ್ತದೆ. ಈ ಪಾಕವಿಧಾನಕ್ಕೆ ಮೊದಲೇ ಹೆಸರು ಕಾಳನ್ನು ರಾತ್ರಿಯಿಡೀ ನೆನೆಸಿ, ಮಾರನೇ ದಿನ ನೀರನ್ನು ಸೋಸಿ ತೆಗೆದು, ಕಾಳುಗಳನ್ನು ಮೊಳಕೆ ಬರಿಸಲು ಒಂದು ಕಾಟನ್ ಶುಭ್ರ ಬಟ್ಟೆಯಲ್ಲಿ ಕಟ್ಟಿ ಇಡಲಾಗುತ್ತದೆ.




    ಒಂದು ಎರಡು ದಿನದ ನಂತರ ಮೊಳಕೆ ಕಾಳು ಬಂದಿರುತ್ತದೆ. ನಂತರ ಅದನ್ನು ಚೆನ್ನಾಗಿ ರುಬ್ಬಿ ಪೇಸ್ಟ್ ಮಾಡಿ. ಬೇಕಾದ ಪದಾರ್ಥ ಸೇರಿಸಿ, ದೋಸೆ ಮಾಡಿ ತಿನ್ನುತ್ತಾರೆ. ಇದಕ್ಕೆ ನಿಮ್ಮಿಷ್ಟದ ಚಟ್ನಿ ಆಯ್ಕೆ ಮಾಡಬಹುದು.


    ಮೊಳೆಕೆಯೊಡೆದ ಹೆಸರು ಕಾಳಿನ ದೋಸೆ


    ಬೇಕಾಗುವ ಪದಾರ್ಥಗಳು


    ಒಂದು ಕಪ್ ಮೊಳಕೆಯೊಡೆದ ಹೆಸರು ಕಾಳು, ಒಂದು ಬಟ್ಟಲು ಹೆಚ್ಚಿದ ಕೊತ್ತಂಬರಿ, ಒಂದು ಇಂಚಿನ ಕತ್ತರಿಸಿದ ಶುಂಠಿ, ಮೂರು ಹಸಿರು ಮೆಣಸಿನಕಾಯಿ, ಒಂದು ಟೀ ಸ್ಪೂನ್ ಜೀರಿಗೆ, ಅರ್ಧ ಕಪ್ ನೀರು, ಅರ್ಧ ಟೀ ಸ್ಪೂನ್ ಉಪ್ಪು, ದೋಸೆ ಬೇಯಿಸಲು ಆಲಿವ್ ಎಣ್ಣೆ ಈ ಎಲ್ಲಾ ಪದಾರ್ಥಗಳು ಬೇಕಾಗುತ್ತವೆ.


    ಮೊಳೆಕೆಯೊಡೆದ ಹೆಸರು ಕಾಳಿನ ದೋಸೆ ಮಾಡುವುದು ಹೇಗೆ?


    ಮೊದಲು ಮೇಲೆ ಹೇಳಿದಂತೆ ಒಂದು ಕಪ್ ಹೆಸರು ಕಾಳನ್ನು ನೆನೆಸಿ, ಮಾರನೇ ದಿನ ಬೆಳಗ್ಗೆ ನೀರನ್ನು ಸೋಸಿ ತೆಗೆದು, ಕಾಳುಗಳನ್ನು ಮಾತ್ರ ಒಂದು ಶುಚಿಯಾದ ಬಟ್ಟೆಯಲ್ಲಿ ಕಟ್ಟಿ ಮೊಳಕೆ ಬರಿಸಬೇಕು. ಈ ಮೊಳಕೆಯೊಡೆದ ಹೆಸರು ಕಾಳನ್ನು ಮಿಕ್ಸರ್ ಗೆ ಹಾಕಿರಿ.


    ನಂತರ ಅದಕ್ಕೆ ಒಂದು ಬಟ್ಟಲು ಹೆಚ್ಚಿದ ಕೊತ್ತಂಬರಿ, ಒಂದು ಇಂಚಿನ ಕತ್ತರಿಸಿದ ಶುಂಠಿ, ಮೂರು ಹಸಿರು ಮೆಣಸಿನಕಾಯಿ, ಒಂದು ಟೀ ಸ್ಪೂನ್ ಜೀರಿಗೆ, ಅರ್ಧ ಕಪ್ ನೀರು, ಅರ್ಧ ಟೀ ಸ್ಪೂನ್ ಉಪ್ಪು ಹಾಕಿ ಚೆನ್ನಾಗಿ ರುಬ್ಬಿರಿ. ನಂತರ ದೊಡ್ಡ ಬಟ್ಟಲಿಗೆ ವರ್ಗಾಯಿಸಿ.ಅರ್ಧ ಟೀಚಮಚ ಉಪ್ಪು ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ.


    ಇದನ್ನೂ ಓದಿ: ಸಂಜೆ ಸ್ನ್ಯಾಕ್ಸ್​ಗೆ ಆರೋಗ್ಯಕರ ಕಡಲೆಕಾಯಿ ಸಲಾಡ್ ಮಾಡಿ ಸೇವಿಸಿ!


    ತವಾವನ್ನು ಬಿಸಿ ಮಾಡಿ ಮತ್ತು ದೋಸೆ ಮಾಡಿ. ಕತ್ತರಿಸಿದ ಈರುಳ್ಳಿ ಹಾಕಿರಿ, ಬೇಯಿಸಿರಿ. ದೋಸೆ ಸಿದ್ಧ ತಿನ್ನಿರಿ. ಮಸಾಲೆಯುಕ್ತ ಚಟ್ನಿಯೊಂದಿಗೆ ಮೊಳಕೆ ದೋಸೆಯನ್ನು ತಿನ್ನಿರಿ.

    Published by:renukadariyannavar
    First published: