• Home
  • »
  • News
  • »
  • lifestyle
  • »
  • Breakfast Recipe: ಬೆಳಗಿನ ತಿಂಡಿಗೆ ಮೊಳಕೆ ಕಾಳು ಸಲಾಡ್ ರೆಸಿಪಿ ತಯಾರಿಸಿ

Breakfast Recipe: ಬೆಳಗಿನ ತಿಂಡಿಗೆ ಮೊಳಕೆ ಕಾಳು ಸಲಾಡ್ ರೆಸಿಪಿ ತಯಾರಿಸಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಬೆಳಗಿನ ಉಪಹಾರ ಪೋಷಕಾಂಶಗಳಿಂದ ಸಮೃದ್ಧವಾಗಿದ್ದರೆ ಎಲ್ಲಾ ರೀತಿಯ ಪೋಷಕ ತತ್ವ ದೇಹಕ್ಕೆ ಸಿಗುತ್ತದೆ. ಮೊಳಕೆ ಕಾಳುಗಳು ಯಾವುದೇ ದ್ವಿದಳ ಧಾನ್ಯ ಅಥವಾ ಬೀಜದ ಪೌಷ್ಟಿಕಾಂಶದ ಮೌಲ್ಯ ಹೆಚ್ಚಿಸುತ್ತವೆ. ಹಾಗಾಗಿ ಮೊಳಕೆಯೊಡೆದ ಬೇಳೆ ಕಾಳುಗಳು ಮತ್ತು ಬೀಜಗಳನ್ನು ಆರೋಗ್ಯಕರ ಉಪಹಾರ ಎಂದು ಪರಿಗಣಿಸಲಾಗಿದೆ.

ಮುಂದೆ ಓದಿ ...
  • Share this:

    ಬೆಳಗಿನ ತಿಂಡಿಗೆ (Morning Breakfast) ಆರೋಗ್ಯಕರ ಮತ್ತು ರುಚಿಕರ ಪದಾರ್ಥ ಸೇವನೆ ತುಂಬಾ ಮುಖ್ಯ. ದಿನವಿಡೀ ನಿಮ್ಮನ್ನು ಶಕ್ತಿಯುತ ಮತ್ತು ಆರೋಗ್ಯವಾಗಿಡಲು (Energy And Healthy) ಇದು ಸಹಕಾರಿ ಆಗುತ್ತದೆ. ಆರೋಗ್ಯಕರ ಆಹಾರ ಪದಾರ್ಥ (Food Ingredients) ಸೇವನೆ ದೇಹಕ್ಕೆ ಉತ್ತಮ. ಬೆಳಗಿನ ಉಪಹಾರ ಪೋಷಕಾಂಶಗಳಿಂದ ಸಮೃದ್ಧವಾಗಿದ್ದರೆ ಎಲ್ಲಾ ರೀತಿಯ ಪೋಷಕ ತತ್ವ ದೇಹಕ್ಕೆ ಸಿಗುತ್ತದೆ. ಮೊಳಕೆ ಕಾಳುಗಳು ಯಾವುದೇ ದ್ವಿದಳ ಧಾನ್ಯ ಅಥವಾ ಬೀಜದ ಪೌಷ್ಟಿಕಾಂಶದ ಮೌಲ್ಯ ಹೆಚ್ಚಿಸುತ್ತವೆ. ಹಾಗಾಗಿ  ಮೊಳಕೆಯೊಡೆದ ಬೇಳೆ ಕಾಳುಗಳು ಮತ್ತು ಬೀಜಗಳನ್ನು ಆರೋಗ್ಯಕರ ಉಪಹಾರ ಎಂದು ಪರಿಗಣಿಸಲಾಗಿದೆ.


    ಪೌಷ್ಟಿಕಾಂಶ ಭರಿತ ಮೊಳಕೆ ಕಾಳು ಸಲಾಡ್ ರೆಸಿಪಿ


    ಫಿಟ್‌ನೆಸ್ ಪ್ರೀಕ್‌ ಇದನ್ನು ವ್ಯಾಯಾಮದ ನಂತರದ ಊಟವಾಗಿ ತಿನ್ನಲು ಬಯಸುತ್ತಾರೆ. ನೀವು ಮೊಳಕೆ ಕಾಳು ರೆಸಿಪಿ ಮಾಡಿ ಸೇವಿಸುವುದು ಹೆಚ್ಚು ಟೇಸ್ಟಿ. ಆರೋಗ್ಯಕರ ಮೊಳಕೆ ಕಾಳುಗಳ ಸಲಾಡ್ ರೆಸಿಪಿ ಹೇಗೆ ಎಂದು ನಾವು ಇಲ್ಲಿ ನೋಡೋಣ. ಇದರ ಪ್ರಯೋಜನಗಳು ಮತ್ತು ಅದನ್ನು ಹೇಗೆ ತಯಾರಿಸುವುದು ಎಂದು ನೋಡೋಣ.


    ಬೆಳಗಿನ ತಿಂಡಿಗೆ ಮೊಳಕೆ ಕಾಳು ಸಲಾಡ್ ರೆಸಿಪಿ


    ಬೇಕಾಗುವ ಸಾಮಗ್ರಿಗಳು


    ಒಂದು ಕಪ್ ಮೊಳಕೆ ಕಾಳು, ಒಂದು ಕಪ್ ಮೊಳಕೆಯೊಡೆದ ಹೆಸರು ಕಾಳು, ಒಂದು ಕಪ್ ಸಣ್ಣ ಧಾನ್ಯದ ಸೋಯಾ ಬೀನ್ ಮೊಳಕೆ ಕಾಳುಗಳು, ಒಂದು ಕಪ್ ನೆನೆಸಿದ ರಾಜ್ಮಾ, ಸಣ್ಣಗೆ ಕೊಚ್ಚಿದ ಎರಡು ಹಸಿ ಮೆಣಸಿನಕಾಯಿ, ಸಣ್ಣದಾಗಿ ಕೊಚ್ಚಿದ ಒಂದು ಕಪ್ ಪನೀರ್ ತುಂಡುಗಳು,


    ಇದನ್ನೂ ಓದಿ: ತ್ವಚೆಯ ಸಮಸ್ಯೆ ಇದ್ದಾಗ ಯಾವ ಪದಾರ್ಥಗಳ ಸೇವನೆ ತಪ್ಪಿಸಬೇಕು?


    ಸಣ್ಣಗೆ ಹೆಚ್ಚಿದ ಒಂದು ಕಪ್ ಈರುಳ್ಳಿ, ಸಣ್ಣದಾಗಿ ಕೊಚ್ಚಿದ ಕೊತ್ತಂಬರಿ ಸೊಪ್ಪು, ಸಣ್ಣದಾಗಿ ಕೊಚ್ಚಿದ ಒಂದು ಕಪ್ ಟೊಮೆಟೊ, ಎರಡು ಟೀ ಸ್ಪೂನ್ ನಿಂಬೆ ರಸ, ರುಚಿಗೆ ತಕ್ಕಷ್ಟು ಉಪ್ಪು, ಅರ್ಧ ಟೀ ಸ್ಪೂನ್ ಹುರಿದ ಜೀರಿಗೆ ಪುಡಿ, ಕಾಲು ಸ್ಪೂನ್ ಚಾಟ್ ಮಸಾಲಾ ರುಚಿಗೆ ತಕ್ಕಂತೆ.


    ಬೆಳಗಿನ ತಿಂಡಿಗೆ ಮೊಳಕೆ ಕಾಳು ಸಲಾಡ್ ರೆಸಿಪಿ ತಯಾರಿಸುವ ವಿಧಾನ


    ಒಂದು ಕಪ್ ಮೊಳಕೆ ಕಾಳು, ಒಂದು ಕಪ್ ಮೊಳಕೆಯೊಡೆದ ಹೆಸರು ಕಾಳು, ಒಂದು ಕಪ್ ಸಣ್ಣ ಧಾನ್ಯದ ಸೋಯಾ ಬೀನ್ ಮೊಳಕೆ ಕಾಳುಗಳು, ಒಂದು ಕಪ್ ನೆನೆಸಿದ ರಾಜ್ಮಾ, ಸಣ್ಣಗೆ ಕೊಚ್ಚಿದ ಎರಡು ಹಸಿ ಮೆಣಸಿನಕಾಯಿ, ಸಣ್ಣದಾಗಿ ಕೊಚ್ಚಿದ ಒಂದು ಕಪ್ ಪನೀರ್ ತುಂಡುಗಳು, ಸಣ್ಣಗೆ ಹೆಚ್ಚಿದ ಒಂದು ಕಪ್ ಈರುಳ್ಳಿ, ಸಣ್ಣದಾಗಿ ಕೊಚ್ಚಿದ ಕೊತ್ತಂಬರಿ ಸೊಪ್ಪು, ಸಣ್ಣದಾಗಿ ಕೊಚ್ಚಿದ ಒಂದು ಕಪ್ ಟೊಮೆಟೊ, ಎರಡು ಟೀ ಸ್ಪೂನ್ ನಿಂಬೆ ರಸ, ರುಚಿಗೆ ತಕ್ಕಷ್ಟು ಉಪ್ಪು,


    ಅರ್ಧ ಟೀ ಸ್ಪೂನ್ ಹುರಿದ ಜೀರಿಗೆ ಪುಡಿ, ಕಾಲು ಸ್ಪೂನ್ ಚಾಟ್ ಮಸಾಲಾ ರುಚಿಗೆ ತಕ್ಕಂತೆ. ಎಲ್ಲವನ್ನೂ ಒಂದು ಬಟ್ಟಲಿನಲ್ಲಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಅದಕ್ಕೆ ಮೊಸರು ಅಥವಾ ನಿಮ್ಮ ನೆಚ್ಚಿನ ಚಟ್ನಿ ಸೇರಿಸಿ. ರುಚಿಗೆ ಅನುಗುಣವಾಗಿ ನೀವು ಕೆಲವು ಇತರ ಆರೋಗ್ಯಕರ ಪದಾರ್ಥ ಸೇರಿಸಿ. ಈಗ ನಿಮ್ಮ ತಿಂಡಿ ರೆಡಿಯಾಗಿದೆ.


    ಮೊಳಕೆ ಕಾಳು ಸಲಾಡ್ ರೆಸಿಪಿ ಆರೋಗ್ಯಕರ ಪ್ರಯೋಜನಗಳು


    ಜೀರ್ಣಕ್ರಿಯೆಗೆ ಪ್ರಯೋಜನಕಾರಿ


    ಯಾವುದೇ ರೀತಿಯ ಮೊಳಕೆ ಕಾಳುಗಳು ಅವುಗಳನ್ನು ಜೀರ್ಣಿಸಿಕೊಳ್ಳಲು ಹೆಚ್ಚು ಸುಲಭ ಆಗುತ್ತದೆ. ಅವುಗಳಲ್ಲಿರುವ ಪೋಷಕಾಂಶಗಳು ದೇಹದಲ್ಲಿ ಸಂಪೂರ್ಣವಾಗಿ ಹೀರಲ್ಪಡುತ್ತವೆ. ಮೊಳಕೆ ಕಾಳುಗಳಲ್ಲಿ ಒಂದು ರೀತಿಯ ಕಿಣ್ವ ಇದೆ.


    ಇದು ಆಹಾರ ಸುಲಭವಾಗಿ ಜೀರ್ಣಿಸಿಕೊಳ್ಳಲು ಸಹಕಾರಿ ಆಗಿದೆ. ಅದರಲ್ಲಿರುವ ಫೈಬರ್ ಹೊಟ್ಟೆಗೆ ತುಂಬಾ ಪ್ರಯೋಜನಕಾರಿ ಆಗಿದೆ.


    ಇದನ್ನೂ ಓದಿ: ಮೂಳೆಗಳ ಕಾಯಿಲೆಗೆ ಕಾರಣವಾಗುವ ಲೂಬ್ರಿಕಂಟ್ ಎಂದರೇನು? ಇದನ್ನು ಪೂರೈಸುವ ಪದಾರ್ಥಗಳಿವು!


    ಕೊಲೆಸ್ಟ್ರಾಲ್ ಮಟ್ಟ ನಿಯಂತ್ರಿಸುತ್ತದೆ


    ಮೊಳಕೆ ಕಾಳುಗಳು ಒಮೆಗಾ 3 ಕೊಬ್ಬಿನಾಮ್ಲ ಹೊಂದಿದೆ. ದೇಹದಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಸರಿಯಾಗಿದ್ದರೆ ಹೃದಯ ಸಂಬಂಧಿ ಕಾಯಿಲೆ ಬರುವ ಸಾಧ್ಯತೆಯಿದೆ. ಇದನ್ನು ನಿಮ್ಮ ನಿತ್ಯದ ಆಹಾರದ ಭಾಗವನ್ನಾಗಿಸಿ.

    Published by:renukadariyannavar
    First published: