ಬೆಳಗಿನ ತಿಂಡಿಗೆ (Morning Breakfast) ತುಂಬಾ ಜನರು (People) ಇಡ್ಲಿ ತಿನ್ನಲು ತುಂಬಾ ಇಷ್ಟ ಪಡ್ತಾರೆ. ಮೃದುವಾದ ಇಡ್ಲಿ (Idli) ತಿನ್ನುವ ಮನಸ್ಸು ಯಾರಿಗೇ ತಾನೇ ಆಗಲ್ಲ. ಈಗೆಲ್ಲಾ ಹೋಟೆಲುಗಳಲ್ಲಿ (Hotel), ಬೀದಿ ಬದಿಯ ಅಂಗಡಿಗಳಲ್ಲಿ ವಿಭಿನ್ನ ರೀತಿಯ ಇಡ್ಲಿಗಳನ್ನು ಮಾಡಿ ಕೊಡುವುದನ್ನು ನೀವು ನೋಡಿರಬಹುದು. ಇತ್ತೀಚಿನ ದಿನಗಳಲ್ಲಿ ತಿಂಡಿ ಪ್ರಿಯರು ಬೆಳಗ್ಗೆ ಮಾತ್ರವಲ್ಲದೇ, ರಾತ್ರಿ ಕೂಡ ತಿಂಡಿ ತಿನ್ನಲು ಇಷ್ಟ ಪಡ್ತಾರೆ. ರಾತ್ರಿಗೆ ಲಘುವಾದ ಉಪಹಾರ ತಿನ್ನುವುದು ಆರೋಗ್ಯಕ್ಕೆ (Health) ಉತ್ತಮ ಎಂದು ಭಾವಿಸುತ್ತಾರೆ. ಡಯಟ್ ಫಾಲೋ ಮಾಡುವವರು ತಪ್ಪದೇ ಅವರ ಆಹಾರ ಕ್ರಮದಲ್ಲಿ ಇಡ್ಲಿ ಸೇರಿಸುತ್ತಾರೆ. ಅದರಲ್ಲೂ ಕರ್ನಾಟಕದಲ್ಲಿ ಇಡ್ಲಿ ರೆಸಿಪಿ ತುಂಬಾ ಜನಪ್ರಿಯ ತಿಂಡಿಯಾಗಿದೆ.
ಬೆಳಗಿನ ತಿಂಡಿಗೆ ಸ್ಪೆಷಲ್ ತಟ್ಟೆ ಇಡ್ಲಿ ರೆಸಿಪಿ
ಜನಪ್ರಿಯ ಇಡ್ಲಿಯ ರೂಪಾಂತರದ ಪಾಕವಿಧಾನವೇ ಈ ತಟ್ಟೆ ಇಡ್ಲಿ. ಸಾಂಪ್ರದಾಯಿಕವಾಗಿ ಮಾಡುವ ಇಡ್ಲಿ ಸೆಟ್ ಗಳು ಗ್ಲಾಸ್ ರೂಪದಲ್ಲಿ ಹಾಗೂ ಚಿಕ್ಕ ಪ್ಲೇಟ್ ಸೈಜ್ ನಲ್ಲಿ ಸಿಗುತ್ತವೆ. ಈ ಇಡ್ಲಿಗಳಿಗೆ ಹೋಲಿಸಿದರೆ ತಟ್ಟೆ ಇಡ್ಲಿಗಳು ತೆಳುವಾಗಿ, ದಪ್ಪ ಮತ್ತು ಗಾತ್ರದಲ್ಲಿ ಅಗಲವಾಗಿ ದೊಡ್ಡದಾಗಿರುತ್ತವೆ.
ಎರಡು ಇಡ್ಲಿ ತಿಂದರೆ ಹೊಟ್ಟೆ ಫುಲ್ ಆಗುತ್ತದೆ. ಅದಾಗ್ಯೂ ತಟ್ಟೆ ಇಡ್ಲಿಗಳನ್ನು ನೀವು ಕರ್ನಾಟಕದ ಬಹುತೇಕ ಭಾಗಗಳಲ್ಲಿ ಕಾಣಬಹುದು. ಬೆಂಗಳೂರು, ಮೈಸೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ತಟ್ಟೆ ಇಡ್ಲಿ ಫೇಮಸ್ ಆಗಿದೆ. ದೆಹಲಿ ಭಾಗಗಳಲ್ಲಿ ಹಾಗೂ ಮುಂಬೈ ಭಾಗಗಳಲ್ಲಿ ವಿವಿಧ ರೀತಿಯ ಇಡ್ಲಿಗಳು ಫೇಮಸ್ ಆಗಿವೆ.
ವಿವಿಧ ಇಡ್ಲಿಗಳು ರುಚಿ ಹಾಗೂ ಆಕಾರ ಸಖತ್ ತಿನ್ನೋಕೆ ಮಜಾ ಕೊಡುತ್ತದೆ. ಕೋನ ಇಡ್ಲಿ, ಬಟ್ಟಲು ಸೈಜ್ ಇಡ್ಲಿ, ಪ್ಲೇಟ್ ಆಕಾರದ ಇಡ್ಲಿ, ಬಟ್ಟೆಯಲ್ಲಿ ಹಾಗೂ ಬಾಳೆ ಎಲೆಯಲ್ಲಿ ತಯಾರಿಸಿದ ಇಡ್ಲಿ ಫೇಮಸ್ ಆಗಿದೆ. ಬೆಳಗಿನ ತಿಂಡಿಗೆ ಇಡ್ಲಿ ಸಖತ್ ಆಗಿರುತ್ತದೆ. ಹಾಗಾದ್ರೆ ನಾವಿಂದು ತಟ್ಟೆ ಇಡ್ಲಿ ಮಾಡುವುದು ಹೇಗೆ ಅಂತಾ ತಿಳಿಯೋಣ.
ತಟ್ಟೆ ಇಡ್ಲಿ ರೆಸಿಪಿಗೆ ಬೇಕಾಗುವ ಪದಾರ್ಥಗಳು
ಎರಡು ಕಪ್ ಇಡ್ಲಿ ಅಕ್ಕಿ ಅಥವಾ ದೋಸೆ ಅಕ್ಕಿ ಅಥವಾ ಸೋನಾ ಮಸೂರಿ ಅಕ್ಕಿ, ಅಥವಾ ರವೆ, ಒಂದು ಕಪ್ ಉದ್ದಿನ ಬೇಳೆ, ಮುಕ್ಕಾಲು ಕಪ್ ತೆಳುವಾದ ಅವಲಕ್ಕಿ, ತುಪ್ಪ ಅಥವಾ ಎಣ್ಣೆ ಬೇಕು.
ತಟ್ಟೆ ಇಡ್ಲಿ ರೆಸಿಪಿ ಮಾಡುವ ವಿಧಾನ ಹೀಗಿದೆ
ಮೊದಲು ದೊಡ್ಡ ಬಟ್ಟಲಿನಲ್ಲಿ ಎರಡು ಕಪ್ ಇಡ್ಲಿ ಅಕ್ಕಿ ಅಥವಾ ರವೆ ಐದು ತಾಸು ನೆನೆಸಿಡಿ. ಇನ್ನೊಂದು ಬಟ್ಟಲಿನಲ್ಲಿ ಒಂದು ಕಪ್ ಉದ್ದಿನ ಬೇಳೆ ಮೂರು ತಾಸು ನೆನೆಸಿಡಿ. ಉದ್ದಿನ ಬೇಳೆಯಿಂದ ನೀರನ್ನು ಫಿಲ್ಟರ್ ಮಾಡಿ, ಎಷ್ಟು ಬೇಕೋ ಅಷ್ಟು ನೀರು ಸೇರಿಸಿ ನಯವಾದ ಪೇಸ್ಟ್ ರುಬ್ಬಿರಿ. ಇದನ್ನು ದೊಡ್ಡ ಬಟ್ಟಲಿಗೆ ವರ್ಗಾಯಿಸಿ.
ಬ್ಲೆಂಡರ್ ನಲ್ಲಿ ನೆನೆಸಿದ ಅಕ್ಕಿಗೆ ಮುಕ್ಕಾಲು ಕಪ್ ತೊಳೆದ ತೆಳುವಾದ ಅವಲಕ್ಕಿ ಸೇರಿಸಿ ಸ್ವಲ್ಪ ಒರಟಾದ ಪೇಸ್ಟ್ ತಯಾರಿಸಿ. ಅಕ್ಕಿ ಹಿಟ್ಟನ್ನು ಉದ್ದಿನಬೇಳೆ ಜೊತೆ ಮಿಕ್ಸ್ ಮಾಡಿ. ಚೆನ್ನಾಗಿ ಬೆರೆಸಿ. ಹತ್ತು ತಾಸು ಬೆಚ್ಚಗಿನ ಸ್ಥಳದಲ್ಲಿ ಮುಚ್ಚಿಡಿ. ಹಿಟ್ಟು ಹುದುಗಿ ಹದಕ್ಕೆ ಬಂದ ನಂತರ ಚೆನ್ನಾಗಿ ಮಿಕ್ಸ್ ಮಾಡಿ.
ಹಿಟ್ಟಿಗೆ ಒಂದೂವರೆ ಟೀಸ್ಪೂನ್ ಉಪ್ಪು ಸೇರಿಸಿ. ಮತ್ತು ಚೆನ್ನಾಗಿ ಮಿಶ್ರಣ ಮಾಡಿ. ನಿಧಾನವಾಗಿ ಮಿಶ್ರಣ ಮಾಡಿ. ಈಗ ತಟ್ಟೆ ಇಡ್ಲಿ ಸೆಟ್ ತೆಗೆದುಕೊಂಡು ತಟ್ಟೆಗೆ ಎಣ್ಣೆ ಹಚ್ಚಿರಿ. ಇಡ್ಲಿ ಪ್ಲೇಟ್ ಗೆ ಹಿಟ್ಟನ್ನು ಸುರಿಯಿರಿ. ನಂತರ ಇಡ್ಲಿ ತಟ್ಟೆಯನ್ನು ಸ್ಟ್ಯಾಂಡ್ ಗೆ ಜೋಡಿಸಿ.
ಇದನ್ನೂ ಓದಿ: ಯೀಸ್ಟ್ ಸೋಂಕು ಹೇಗೆ ಉಂಟಾಗುತ್ತದೆ? ತಡೆಯಲು ಏನು ಮಾಡ್ಬೇಕು?
ಮಧ್ಯಮ ಉರಿಯಲ್ಲಿ ಇಪ್ಪತ್ತು ನಿಮಿಷ ಬೇಯಿಸಿ. ಚೆನ್ನಾಗಿ ಇಡ್ಲಿ ಬೆಂದ ನಂತರ ತೆಗೆದು ನಿಮ್ಮಿಷ್ಟದ ಚಟ್ನಿ ಮತ್ತು ಸಾಂಬಾರ್ ಜೊತೆ ಸೇವಿಸಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ