• Home
  • »
  • News
  • »
  • lifestyle
  • »
  • Morning Breakfast: ಸಬ್ಬಕ್ಕಿ ದೋಸೆ ಜೊತೆ ಚಟ್ನಿ, ಬೆಳಗ್ಗಿನ ತಿಂಡಿಗೆ ಇದೇ ಬೆಸ್ಟ್​, ಇಲ್ಲಿದೆ ತಯಾರಿಸೋ ವಿಧಾನ

Morning Breakfast: ಸಬ್ಬಕ್ಕಿ ದೋಸೆ ಜೊತೆ ಚಟ್ನಿ, ಬೆಳಗ್ಗಿನ ತಿಂಡಿಗೆ ಇದೇ ಬೆಸ್ಟ್​, ಇಲ್ಲಿದೆ ತಯಾರಿಸೋ ವಿಧಾನ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಸಬ್ಬಕ್ಕಿಯು ಕಾರ್ಬೋಹೈಡ್ರೇಟ್‌ಗಳು ಮತ್ತು ಫೈಬರ್‌ ನಿಂದ ಕೂಡಿದೆ. ಇದು ವಿಶೇಷವಾಗಿ ಉಪವಾಸದ ಸಮಯದಲ್ಲಿ ಹೆಚ್ಚು ಸೇವನೆ ಮಾಡಲಾಗುತ್ತದೆ. ಸಬ್ಬಕ್ಕಿ ದೋಸೆಯನ್ನು ನಿಮ್ಮಿಷ್ಟದ ಮಸಾಲೆಯುಕ್ತ ಚಟ್ನಿ ಮತ್ತು ಪಾಕವಿಧಾನದ ಜೊತೆ ಸೇವನೆ ಮಾಡಬಹುದು.

  • Share this:

    ಬೆಳಗಿನ ಉಪಹಾರಕ್ಕೆ (Morning Breakfast) ಸಬ್ಬಕ್ಕಿ ದೋಸೆ (Sabudana Dosa) ಹೇಗೆ ಮಾಡೋದು ಅಂತಾ ನೋಡೋಣ. ಸಬ್ಬಕ್ಕಿಯನ್ನು ಸಾಮಾನ್ಯವಾಗಿ ಉಪವಾಸ (Fasting) ಮತ್ತು ವ್ರತಾಚರಣೆಗಳಲ್ಲಿ ಹೆಚ್ಚು ಸೇವನೆ ಮಾಡ್ತಾರೆ. ಸಬಕ್ಕಿ ದೋಸೆಯನ್ನು ತಯಾರಿಸುವುದು ತುಂಬಾ ಸರಳ ಮತ್ತು ಸುಲಭ (Easy). ಸಬ್ಬಕ್ಕಿ ಸಾಕಷ್ಟು ಪೋಷಕಾಂಶಗಳಿಂದ (Nutrirnts) ಸಮೃದ್ಧವಾಗಿದೆ. ಸಬ್ಬಕ್ಕಿಯು ಕಾರ್ಬೋಹೈಡ್ರೇಟ್‌ಗಳು ಮತ್ತು ಫೈಬರ್‌ ನಿಂದ ಕೂಡಿದೆ. ಇದು ವಿಶೇಷವಾಗಿ ಉಪವಾಸದ ಸಮಯದಲ್ಲಿ ಹೆಚ್ಚು ಸೇವನೆ ಮಾಡಲಾಗುತ್ತದೆ. ಸಬ್ಬಕ್ಕಿ ದೋಸೆಯನ್ನು ನಿಮ್ಮಿಷ್ಟದ ಮಸಾಲೆಯುಕ್ತ ಚಟ್ನಿ ಮತ್ತು ಪಾಕವಿಧಾನದ ಜೊತೆ ಸೇವನೆ ಮಾಡಬಹುದು. ಹಾಗಾದ್ರೆ ಇಲ್ಲಿ ನಾವು ಗರಿಗರಿಯಾದ ಮತ್ತು ತ್ವರಿತ ಸಬ್ಬಕ್ಕಿ ದೋಸೆ ಪಾಕವಿಧಾನ ನೋಡೋಣ.


    ಬೆಳಗಿನ ತಿಂಡಿಗೆ ಸಬ್ಬಕ್ಕಿ ದೋಸೆ


    ದೋಸೆಯನ್ನು ಇನ್ನಷ್ಟು ಗರಿಗರಿಯಾಗಿ ಮಾಡಲು ದೋಸೆ ಹಿಟ್ಟಿಗೆ ಅಕ್ಕಿ ಹಿಟ್ಟನ್ನು ಸೇರಿಸಬಹುದು. ಆದರೆ ಉಪವಾಸ ಅಥವಾ ವ್ರತ ಭೋಜನಕ್ಕೆ ಅಕ್ಕಿ ಹಿಟ್ಟನ್ನು ಹಾಕುವುದಿಲ್ಲ. ಹಾಗಾಗಿ ನೀವು ಸಬ್ಬಕ್ಕಿ ದೋಸೆಯನ್ನು ಯಾವಾಗ ಮಾಡಿ ತಿನ್ನುತ್ತೀರಿ ಎಂದು ನೆನಪಿಡಿ.


    ಸಬ್ಬಕ್ಕಿ ದೋಸೆ ರೆಸಿಪಿ


    ಬೇಕಾಗುವ ಪದಾರ್ಥಗಳು


    ಒಂದು ಕಪ್ ಸಬ್ಬಕ್ಕಿ, ಒಂದು ಕಪ್ ಸಾಮಾ ಅಕ್ಕಿ, ಒಂದು ಬೇಯಿಸಿದ ಆಲೂಗಡ್ಡೆ, ನೀರು, ಒಂದು ಕಪ್ ಮೊಸರು, ಎರಡು ಸಣ್ಣಗೆ ಹೆಚ್ಚಿದ ಮೆಣಸಿನಕಾಯಿ, ಒಂದು ಇಂಚು ತುರಿದ ಶುಂಠಿ, ಎರಡು ಚಮಚ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು, ಒಂದು ಟೀಸ್ಪೂನ್ ಜೀರಿಗೆ, ಚಮಚ ಮೆಣಸು ಪುಡಿ, ಎರಡು ಚಮಚ ಕಡಲೆಕಾಯಿ ಪುಡಿ, ಒಂದು ಟೀಸ್ಪೂನ್ ಉಪ್ಪು ಬೇಕು.


    ಇದನ್ನೂ ಓದಿ: ಬಲಿಷ್ಠ ಮೂಳೆಗಳಿಗಾಗಿ ಬೇಕು ಕ್ಯಾಲ್ಶಿಯಂ ಮತ್ತು ವಿಟಮಿನ್ ಡಿ, ಇವು ಹೇಗೆ ಕೆಲಸ ಮಾಡುತ್ತವೆ?


    ಸಬ್ಬಕ್ಕಿ ದೋಸೆಗೆ ಚಟ್ನಿ ಮಾಡಲು ಬೇಕಾಗುವ ಸಾಮಗ್ರಿಗಳು


    ಒಂದು ಕಪ್ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು, ಕಪ್ ಸಣ್ಣಗೆ ಹೆಚ್ಚಿದ ಪುದೀನ, ಒಂದು ಇಂಚಿನ ತುರಿದ ಶುಂಠಿ, ಎರಡು ಮೆಣಸಿನಕಾಯಿ, ನಿಂಬೆ ರಸ, ಎರಡು ಚಮಚ ಹುರಿದ ಕಡಲೆಕಾಯಿ, ಟೀಚಮಚ ಉಪ್ಪು, ಕಪ್ ನೀರು ಬೇಕು.


    ಸಬ್ಬಕ್ಕಿ ದೋಸೆ ಮಾಡುವುದು ಹೇಗೆ?


    ಮೊದಲು ಒಂದು ಬಾಣಲೆಗೆ ಕಪ್ ಸಬ್ಬಕ್ಕಿ ಹಾಕಿ ಚೆನ್ನಾಗಿ ರೋಸ್ಟ್ ಮಾಡಿ. ನಂತರ ಸಂಪೂರ್ಣವಾಗಿ ತಣ್ಣಗಾಗಿಸಿ ಮತ್ತು ಮಿಕ್ಸರ್ ಜಾರ್ಗೆ ವರ್ಗಾಯಿಸಿ. ಅದಲ್ಲೆ ಕಪ್ ಸಾಮಾ ಅಕ್ಕಿ ಸೇರಿಸಿ. ನುಣ್ಣಗೆ ಪುಡಿ ಮಾಡಿರಿ ಮತ್ತು ದೊಡ್ಡ ಬಟ್ಟಲಿಗೆ ವರ್ಗಾಯಿಸಿ. ಬೇಯಿಸಿದ ಆಲೂಗಡ್ಡೆಯನ್ನು ಪುಡಿ ಮಾಡಿ. ಆಲೂಗೆಡ್ಡೆ ಪೇಸ್ಟ್ ಅನ್ನು ಅದೇ ಬಟ್ಟಲಿಗೆ ಹಾಕಿರಿ. ಈಗ ನೀರು, ಒಂದು ಕಪ್ ಮೊಸರು, ಎರಡು ಸಣ್ಣಗೆ ಹೆಚ್ಚಿದ ಮೆಣಸಿನಕಾಯಿ, ಒಂದು ಇಂಚು ತುರಿದ ಶುಂಠಿ, ಎರಡು ಚಮಚ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಸೇರಿಸಿ.


    ಒಂದು ಟೀಸ್ಪೂನ್ ಜೀರಿಗೆ, ಚಮಚ ಮೆಣಸು ಪುಡಿ, ಎರಡು ಚಮಚ ಕಡಲೆಕಾಯಿ ಪುಡಿ, ಒಂದು ಟೀಸ್ಪೂನ್ ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನೀರು ಸೇರಿಸಿ ಹಿಟ್ಟು ಚೆನ್ನಾಗಿ ಕಲೆಸಿ, ತೆಳುವಾದ ದೋಸೆ ಸ್ಥಿರತೆಗೆ ತನ್ನಿರಿ. ನಂತರ ಇಪ್ಪತ್ತು ನಿಮಿಷ ಮುಚ್ಚಿ ಮತ್ತು ವಿಶ್ರಾಂತಿಗೆ ಇಡಿ. ನಂತರ ಮತ್ತೆ ಒಂದು ಕಪ್ ನೀರನ್ನು ಸೇರಿಸಿ, ದೋಸೆಯ ಹದಕ್ಕೆ ತನ್ನಿರಿ.


    ಪ್ಯಾನ್ ಬಿಸಿ ಮಾಡಿ, ತುಪ್ಪ ಹರಡಿ, ದೋಸೆ ಹಾಕಿ. ಎರಡೂ ಬದಿ ಚೆನ್ನಾಗಿ ಬೇಯಿಸಿ, ಗರಿಗರಿಯಾಗುವವರೆಗೆ ಬೇಯಿಸಿ ತೆಗೆಯಿರಿ. ಈಗ ದೋಸೆ ಸಿದ್ಧವಾಗಿದೆ. ಚಟ್ನಿ ಜೊತೆ ಸೇವಿಸಿ.


    ಇದನ್ನೂ ಓದಿ: ಟೇಸ್ಟಿ ಎಂದು ಅತಿಯಾಗಿ ತಿನ್ನುವ ಚೀಸ್ ಯಾವೆಲ್ಲಾ ಅಡ್ಡ ಪರಿಣಾಮ ಉಂಟು ಮಾಡುತ್ತದೆ?


    ಸಬ್ಬಕ್ಕಿ ದೋಸೆಗೆ ಚಟ್ನಿ ಮಾಡುವುದು ಹೇಗೆ?


    ಮೊದಲು ಮಿಕ್ಸರ್ ಜಾರ್‌ ಗೆ ಒಂದು ಕಪ್ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು, ಕಪ್ ಸಣ್ಣಗೆ ಹೆಚ್ಚಿದ ಪುದೀನ, ಒಂದು ಇಂಚಿನ ತುರಿದ ಶುಂಠಿ, ಎರಡು ಮೆಣಸಿನಕಾಯಿ, ನಿಂಬೆ ರಸ, ಎರಡು ಚಮಚ ಹುರಿದ ಕಡಲೆಕಾಯಿ, ಟೀಚಮಚ ಉಪ್ಪು, ಕಪ್ ನೀರು ಸೇರಿಸಿ ನಯವಾದ ಪೇಸ್ಟ್ ಮಾಡಿ. ದೋಸೆ ಜೊತೆ ತಿನ್ನಿರಿ.

    Published by:renukadariyannavar
    First published: