ಸಾಮಾನ್ಯವಾಗಿ ಜನರು (People) ಉಪವಾಸದ (Fasting) ವೇಳೆ ಮಾತ್ರ ಸಾಬುದಾನ (Sabudana) ಪದಾರ್ಥಗಳನ್ನು ತಿನ್ನಲು ಇಷ್ಟ ಪಡ್ತಾರೆ. ಸಾಬುದಾನಿಯಲ್ಲಿ ಸಾಕಷ್ಟು ಪ್ರಮಾಣದ ಕಾರ್ಬೋಹೈಡ್ರೇಟ್ ಗಳು ಇವೆ. ಕಾರ್ಬೋಹೈಡ್ರೇಟ್ ಗಳು ದೇಹಕ್ಕೆ ಬೇಕಾದ ಅಗತ್ಯ ಶಕ್ತಿ ಒದಗಿಸಲು ಸಾಕಷ್ಟು ಪ್ರಯೋಜನ (Benefits) ನೀಡುತ್ತವೆ. ಹಾಗೂ ಸಾಬುದಾನಿ ಅಗತ್ಯ ಪೋಷಕಾಂಶಗಳಲ್ಲಿ ಒಂದಾಗಿದೆ. ಜೊತೆಗೆ ಉಪವಾಸದ ವೇಳೆ ಸಾಬುದಾನಿ ಸೇವನೆ ಮಾಡಿದರೆ ಶಕ್ತಿ ದೊರೆಯಲು ಸಹಾಯ ಆಗುತ್ತದೆ. ಜೊತೆಗೆ ಸಾಬುದಾನಿ ಆರೋಗ್ಯಕರ (Healthy) ಪದಾರ್ಥವಾಗಿದೆ. ಇದನ್ನು ಹಲವು ರೂಪಗಳಲ್ಲಿ ಸೇವನೆ ಮಾಡಲಾಗುತ್ತದೆ. ಸಾಬುದಾನಿ ಚಿಕ್ಕವರಿಂದ ದೊಡ್ಡವರವರೆಗೆ ಎಲ್ಲರಿಗೂ ಇಷ್ಟ ಆಗುತ್ತದೆ.
ಬೆಳಗಿನ ತಿಂಡಿಗೆ ಸಾಬುದಾನ ಪಡ್ಡು ರೆಸಿಪಿ
ಸಾಬುದಾನಿ ಸೇವನೆಯು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಜೊತೆಗೆ ದೇಹಕ್ಕೆ ಶಕ್ತಿ ಒದಗಿಸುತ್ತದೆ. ಬೆಳಗಿನ ತಿಂಡಿಗೆ ಸಾಬುದಾನ ಪಡ್ಡು ರೆಸಿಪಿ ತುಂಬಾ ಉತ್ತಮ. ಇದು ದೀರ್ಘಕಾಲ ಹೊಟ್ಟೆ ತುಂಬಿಸಿಡುತ್ತದೆ. ಆಗಾಗ್ಗೆ ಉಂಟಾಗುವ ಹಸಿವು ತಡೆಯುತ್ತದೆ. ದೇಹಕ್ಕೆ ಬೇಕಾದ ಶಕ್ತಿ ನೀಡುತ್ತದೆ.
ಇನ್ನು ವರದಿಯೊಂದರ ಪ್ರಕಾರ, ಸಾಬುದಾನ ಪದಾರ್ಥವು ಕಾರ್ಬೋಹೈಡ್ರೇಟ್, ಫೈಬರ್, ಪ್ರೋಟೀನ್, ಆರೋಗ್ಯಕರ ಕೊಬ್ಬು, ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಂ ಸೇರಿ ಹಲವು ಪ್ರಮುಖ ಪೋಷಕಾಂಶಗಳನ್ನು ಹೊಂದಿದೆ.
ಅಂದ ಹಾಗೇ ಕಾರ್ಬೋಹೈಡ್ರೇಟ್ಗಳು ಮತ್ತು ಕ್ಯಾಲೋರಿಗಳಲ್ಲಿ ಸಮೃದ್ಧವಾಗಿರುವ ಸಾಬುದಾನ ಹೆಚ್ಚು ಸೇವನೆ ತೂಕ ಹೆಚ್ಚಿಸುತ್ತದೆ. ಯಾರು ಅಧಿಕ ತೂಕ ಹೊಂದಿದ್ದಾರೋ, ಅವರು ಸೀಮಿತ ಪ್ರಮಾಣದಲ್ಲಿ ಸಾಬುದಾನ ಸೇವನೆ ಮಾಡಿ.
ನಿಮ್ಮ ಬೆಳಗಿನ ತಿಂಡಿಗೆ ಆರೋಗ್ಯಕರ ಮತ್ತು ಟೇಸ್ಟಿ ಸಾಬುದಾನ ಪಡ್ಡು ರುಚಿ ಹೆಚ್ಚಿಸುತ್ತದೆ. ಬೆಳಗ್ಗೆ ಇದು ಉತ್ತಮ ಆಯ್ಕೆಯಾಗಿದೆ. ಆರೋಗ್ಯಕರ ಪಾಕವಿಧಾನ ಆಗಿದೆ. ಇಲ್ಲಿ ರೆಸಿಪಿ ನೋಡೋಣ.
ಸಾಬುದಾನ ಪಡ್ಡು ರೆಸಿಪಿ
ಬೇಕಾಗುವ ಪದಾರ್ಥಗಳು
ಸಾಬುದಾನ - 2 ಕಪ್, ಬೇಯಿಸಿದ ಆಲೂಗಡ್ಡೆ - 1 ಕಪ್, ಹುರಿದ ಕಡಲೆಕಾಯಿ - 1 ಕಪ್, ಕೊತ್ತಂಬರಿ ಸೊಪ್ಪು - 1/4 ಕಪ್, ರುಚಿಗೆ ಉಪ್ಪು, ಸಣ್ಣದಾಗಿ ಕೊಚ್ಚಿದ 2ಹಸಿರು ಮೆಣಸಿನಕಾಯಿ, ತುರಿದ ಶುಂಠಿ, ಜೀರಿಗೆ - 1 ಟೀಚಮಚ, ಕರಿಮೆಣಸು 1/2 ಟೀಸ್ಪೂನ್, ನಿಂಬೆ ರಸ - 1 ಟೀಸ್ಪೂನ್, ತುಪ್ಪ ಬೇಕು.
ಸಾಬುದಾನ ಪಡ್ಡು ರೆಸಿಪಿ ಮಾಡುವ ವಿಧಾನ
ಮೊದಲು ನಾಲ್ಕೈದು ಗಂಟೆ ಸಾಬುದಾನ ನೀರಿನಲ್ಲಿ ನೆನೆಸಿಡಿ. ನಂತರ ಕಡಲೆಕಾಳನ್ನು ಹುರಿದು ಪುಡಿ ಮಾಡಿ. ಆಲೂಗಡ್ಡೆ ಕುದಿಸಿ. ಈಗ ಒಂದು ದೊಡ್ಡ ಬಟ್ಟಲು ತೆಗೆದುಕೊಳ್ಳಿ. ಬೇಯಿಸಿದ ಆಲೂಗಡ್ಡೆ ಸಿಪ್ಪೆ ತೆಗೆದು ಹಾಕಿ. ಸರಿಯಾಗಿ ಮ್ಯಾಶ್ ಮಾಡಿ.
ನಂತರ ನೆನೆಸಿದ ಸಾಬುದಾನಿಯನ್ನು ನೀರಿನಿಂದ ಹೊರ ತೆಗೆದು ಒಂದು ಪಾತ್ರೆಗೆ ಹಾಕಿ. ಹುರಿದ ಕಡಲೆಕಾಯಿ ಸೇರಿಸಿ. ನಂತರ ಇದಕ್ಕೆ ಕೊತ್ತಂಬರಿ ಸೊಪ್ಪು, ಹಸಿರು ಮೆಣಸಿನಕಾಯಿ, ಶುಂಠಿ, ಜೀರಿಗೆ, ಕರಿಮೆಣಸು, ನಿಂಬೆ ರಸ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ.
ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ನಯವಾದ ಹಿಟ್ಟು ತಯಾರಿಸಿ. ಕೈಗಳನ್ನು ತುಪ್ಪದಿಂದ ಗ್ರೀಸ್ ಮಾಡಿ. ಸಣ್ಣ ಉಂಡೆ ಮಾಡಿ. ಈಗ ನಾನ್ ಸ್ಟಿಕಿ ಪ್ಯಾನ್ ತೆಗೆದುಕೊಳ್ಳಿ. ಅದಕ್ಕೆ ತುಪ್ಪ ಹಾಕಿ. ಪ್ಯಾನ್ ಬಿಸಿ ಮಾಡಿ.
ಇದನ್ನೂ ಓದಿ: ಮೂಳೆಗಳ ಊತ ಹಾಗೂ ಪಾದಗಳ ಸುಡುವ ಸಂವೇದನೆ ಸಮಸ್ಯೆಗೆ ಕಾರಣವೇನು?
ಪ್ಯಾನ್ ಗಾತ್ರಕ್ಕೆ ತಕ್ಕಂತೆ 4 ರಿಂದ 5 ಉಂಡೆ ಮಾಡಿ ಪ್ಯಾನ್ ನಲ್ಲಿ ಇರಿಸಿ. ಎರಡೂ ಕಡೆ ಚೆನ್ನಾಗಿ ಬೇಯಿಸಿ. ಎರಡೂ ಕಡೆಯಿಂದ ಅದು ಕೆಂಪು ಬಣ್ಣಕ್ಕೆ ತಿರುಗಿದ ನಂತರ ಹೊರಕ್ಕೆ ತೆಗೆಯಿರಿ. ಮತ್ತು ನಿಮ್ಮ ನೆಚ್ಚಿನ ಚಟ್ನಿ ಜೊತೆ ಸೇವಿಸಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ