ಬೆಳಗಿನ ತಿಂಡಿಗೆ (Morning Breakfast) ಹಲವು ತರಹದ ಖಾದ್ಯಗಳು ಬೇಕಾಗುತ್ತವೆ. ಬೆಳಗಿನ ತಿಂಡಿಗೆ ವೆರೈಟಿ ವೆರೈಟಿ ರೆಸಿಪಿ (Verity Recipe) ಮಾಡಿ ಸೇವನೆ ಮಾಡುವುದು ಆರೋಗ್ಯ (Health) ವೃದ್ಧಿಸುತ್ತದೆ. ನೀವು ಡಯಟ್ (Diet) ಮಾಡ್ತಿದ್ರೆ, ತೂಕ ಇಳಿಕೆಗೆ (Weight Loss) ಟ್ರೈ ಮಾಡ್ತಿದ್ರೆ ಆರೋಗ್ಯಕರ ಖಾದ್ಯ ಸೇವನೆ ಮಾಡುವುದು ಮುಖ್ಯವಾಗುತ್ತದೆ. ಹೆಚ್ಚಿನ ಕ್ಯಾಲೋರಿ ಸೇವನೆ ಮಾಡುವುದು ಆರೋಗ್ಯ ಮತ್ತು ತೂಕ ನಷ್ಟ ಜರ್ನಿಗೆ ಸಮಸ್ಯೆ ತಂದೊಡ್ಡುತ್ತದೆ. ಹಾಗಾಗಿ ಲಘುವಾದ ಹಾಗೂ ಪೋಷಕಾಂಶ ಭರಿತ ಆಹಾರ ಸೇವನೆ ಮಾಡಬೇಕು ಅಂತಾರೆ ತಜ್ಞರು. ಇಂದು ನಾವು ಲಘು ಉಪಹಾರ ರವೆಯ ಡೋಕ್ಲಾ ರೆಸಿಪಿಯನ್ನು ಬೆಳಗಿನ ಉಪಹಾರಕ್ಕಾಗಿ ತಂದಿದ್ದೇವೆ.
ಬೆಳಗಿನ ತಿಂಡಿಗೆ ರವೆ ಧೋಕ್ಲಾ ರೆಸಿಪಿ
ಹಾಗಿದ್ರೆ ಬೆಳಗಿನ ತಿಂಡಿಗೆ ರವೆ ಡೋಕ್ಲಾ ರೆಸಿಪಿ ಮಾಡುವುದು ಹೇಗೆ ಅಂತಾ ತಿಳಿಯೋಣ.
ರವೆ ಡೋಕ್ಲಾ ರೆಸಿಪಿಗೆ ಬೇಕಾಗುವ ಪದಾರ್ಥಗಳು
ಮೊದಲು ಬ್ಯಾಟರ್ ಗೆ ಯಾವೆಲ್ಲಾ ಪದಾರ್ಥಗಳು ಬೇಕು ಅಂತಾ ನೋಡೋಣ.
ಒಂದು ಕಪ್ ರವೆ, ಒಂದು ಕಪ್ ಮೊಸರು, ಸಣ್ಣದಾಗಿ ಕೊಚ್ಚಿದ ಎರಡು ಹಸಿರು ಮೆಣಸಿನಕಾಯಿ, ಒಂದು ಚಮಚ ಶುಂಠಿ ಪೇಸ್ಟ್, ಒಂದು ಚಮಚ ಸಕ್ಕರೆ, ಒಂದು ಚಿಟಿಕೆ ಇಂಗು, ರುಚಿಗೆ ತಕ್ಕಷ್ಟು ಉಪ್ಪು, ಅರ್ಧ ಕಪ್ ನೀರು, ಒಂದು ಚಮಚ ಎನೋ ಹಣ್ಣಿನ ಉಪ್ಪು ಬೇಕು.
ಡೋಕ್ಲಾ ಮಾಡಲು ಬೇಕಾಗುವ ಪದಾರ್ಥಗಳು
ಎರಡು ಎಣ್ಣೆ, ಒಂದು ಚಮಚ ಸಾಸಿವೆ, ಅರ್ಧ ಚಮಚ ಜೀರಿಗೆ, ಸಣ್ಣದಾಗಿ ಹೆಚ್ಚಿದ ಎರಡು ಹಸಿರು ಮೆಣಸಿನಕಾಯಿ, ಎಂಟು ಕರಿಬೇವಿನ ಎಲೆಗಳು, ಒಂದು ಚಿಟಿಕೆ ಇಂಗು, ಒಂದು ಚಮಚ ನಿಂಬೆ ರಸ, ಎರಡು ಚಮಚ ತುರಿದ ತೆಂಗಿನಕಾಯಿ, ಎರಡು ಚಮಚ ಸಣ್ಣದಾಗಿ ಕೊಚ್ಚಿದ ಕೊತ್ತಂಬರಿ ಸೊಪ್ಪು ಬೇಕು.
ರವೆ ಡೋಕ್ಲಾ ರೆಸಿಪಿ ತಯಾರಿಸುವ ವಿಧಾನ ಹೀಗಿದೆ
ಒಂದು ಬೌಲ್ ಗೆ ರವೆ ಹಾಕಿ, ನಂತರ ಅದಕ್ಕೆ ಮೊಸರು ಸೇರಿಸಿ. ಹಾಗೂ ಎರಡನ್ನೂ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಅದಕ್ಕೆ ಉಪ್ಪು, ಅರಿಶಿನ ಪುಡಿ, ಇಂಗು, ಸಕ್ಕರೆ, ಹಸಿರು ಮೆಣಸಿನಕಾಯಿ,
ರುಚಿಗೆ ತಕ್ಕಂತೆ ಶುಂಠಿ ಪೇಸ್ಟ್ ಸೇರಿಸಿ ಮತ್ತು ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಅದಕ್ಕೆ ಎನೋ ಉಪ್ಪನ್ನು ಸೇರಿಸಿ. 20 ನಿಮಿಷ ಕಾಲ ಮುಚ್ಚಿ ನೆನೆಯಲು ಇರಿಸಿ.
ನಂತರ ಒಂದು ಟ್ರೇ ತೆಗೆದುಕೊಳ್ಳಿ. ಈಗ ಅದಕ್ಕೆ ಎಣ್ಣೆ ಹಾಕಿ ಚೆನ್ನಾಗಿ ಗ್ರೀಸ್ ಮಾಡಿ. ನಂತರ ಸಿದ್ಧಪಡಿಸಿ ನೆನೆಯಲು ಇಟ್ಟಿದ್ದ ಮಿಶ್ರಣವನ್ನು ಟ್ರೇ ಗೆ ಹಾಕಿರಿ. ನಂತರ ಸ್ಟ್ರೀಮರ್ ಇದ್ದರೆ ಸ್ಟೀಮ್ ಮಾಡಿ.
ನಿಮ್ಮ ಬಳಿ ಸ್ಟೀಮರ್ ಇಲ್ಲದೇ ಹೋದ್ರೆ ದೊಡ್ಡ ಪಾತ್ರೆಯಲ್ಲಿ ನೀರನ್ನು ಬಾಯಿ ಮುಚ್ಚಿ ಇರಿಸಿ. ಅದರಲ್ಲಿ ಡೋಕ್ಲಾ ಟ್ರೇ ಅನ್ನು ಮೇಲಕ್ಕೆ ಇರಿಸಿ, ಅದನ್ನು ಮುಚ್ಚಿ. ಹೀಗೆ 15 ನಿಮಿಷ ಡೋಕ್ಲಾವನ್ನು ಹಬೆಯಲ್ಲಿ ಚೆನ್ನಾಗಿ ಬೇಯಿಸಿ.
ನಂತರ ಅದನ್ನು ಹೊರಕ್ಕೆ ತೆಗೆದು ಒಂದು ನಿಮಿಷ ಬಿಟ್ಟು, ಚಾಕುವಿನ ಸಹಾಯದಿಂದ ಸಣ್ಣ ತುಂಡುಗಳಾಗಿ ಕತ್ತರಿಸಿ. ನಂತರ ಮಧ್ಯಮ ಉರಿಯಲ್ಲಿ ಬಾಣಲೆಗೆ ಬಿಸಿ ಮಾಡಲು ಇಡಿ. ಅದರಲ್ಲಿ ಎಣ್ಣೆ ಹಾಕಿ ಅದನ್ನು ಬಿಸಿ ಮಾಡಲು ಬಿಡಿ.
ನಂತರ ಸಾಸಿವೆ, ಜೀರಿಗೆ, ಹಸಿಮೆಣಸಿನಕಾಯಿ, ಕರಿಬೇವು ಮತ್ತು ಇಂಗು ಹಾಕಿ. ತಿಳಿ ಕೆಂಪು ಬಣ್ಣ ಬರುವವರೆಗೆ ಐವತ್ತು ಸೆಕೆಂಡ್ ವರೆಗೆ ಎಲ್ಲವನ್ನೂ ಚೆನ್ನಾಗಿ ಫ್ರೈ ಮಾಡಿ. ಈಗ ತಯಾರಾದ ಡೋಕ್ಲಾ ವನ್ನು ಸಮವಾಗಿ ಹರಡಿ.
ಇದನ್ನೂ ಓದಿ: ಥೈರಾಯ್ಡ್ ಸಮಸ್ಯೆ ಇದೆಯಾ? ಹಾಗಾದ್ರೆ ಈ ಆಹಾರಗಳನ್ನು ಮಿಸ್ ಮಾಡ್ದೇ ತಿನ್ನಿ
ನಂತರ ಡೋಕ್ಲಾವನ್ನು ತೆಂಗಿನಕಾಯಿ ಮತ್ತು ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ಸೇವಿಸಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ