ಹಬ್ಬದ ದಿನಗಳಲ್ಲಿ (Festival Days) ಅದರಲ್ಲೂ ಚಳಿಗಾಲದಲ್ಲಿ ಬೆಳಗಿನ ತಿಂಡಿ (Morning Breakfast) ಯಾವಾಗಲೂ ಪೋಷಕಾಂಶಗಳಿಂದ (Nutrients) ಸಮೃದ್ಧವಾಗಿರಬೇಕು. ಅದಕ್ಕಾಗಿ ನೀವು ಧಾನ್ಯಗಳಾದ ಬೇಳೆ ಕಾಳುಗಳು, ಮೆಕ್ಕೆಜೋಳ, ಜೋಳ, ರಾಗಿ (Ragi), ನವಣೆ, ಉದ್ದು ಸೇರಿದಂತೆ ಹಲವು ಕಾಳುಗಳಿಂದ ನಿಮ್ಮಿಷ್ಟದ ತಿಂಡಿ ಮಾಡಿ ಸೇವನೆ ಮಾಡಬಹುದು. ಅದರಲ್ಲಿ ವಿಶೇಷವಾಗಿ ಬೆಳಗಿನ ತಿಂಡಿಗೆ ರಾಗಿ ಗಂಜಿ, ರಾಗಿ ರೊಟ್ಟಿ, ರಾಗಿ ದೋಸೆ ಸೇರಿದಂತೆ ರಾಗಿಯಿಂದ ಮಾಡಿದ ಪದಾರ್ಥ, ರೆಸಿಪಿಗಳು (Recipes) ಹೊಟ್ಟೆ ತುಂಬಿಸುತ್ತವೆ. ಮತ್ತು ಆರೋಗ್ಯಕರ (Healthy) ಆಯ್ಕೆ ಆಗಿದೆ. ನಾವು ಈ ಮಕರ ಸಂಕ್ರಾಂತಿ ಹಬ್ಬದ ಬೆಳಗಿನ ಜಾವ ರಾಗಿಯ ಖಿಚಡಿ (Ragi Khichadi) ಮಾಡಿ ಸೇವಿಸಿದರೆ ಅದ್ಭುತ ಪೋಷಕಾಂಶ ಪಡೆಯಬಹುದು.
ಬೆಳಗಿನ ತಿಂಡಿಗೆ ರಾಗಿ ಕಿಚಡಿ ರೆಸಿಪಿ
ಬೇಳೆ, ಬಜರಾ, ಮೆಕ್ಕೆಜೋಳ, ರಾಗಿ ಸೇರಿದಂತೆ ಕೆಲವು ಧಾನ್ಯಗಳು ಉತ್ತಮವಾಗಿವೆ. ಇವುಗಳ ಸೇವನೆ ಆರೋಗ್ಯ ಬೆನೆಫಿಟ್ಸ್ ನೀಡುತ್ತದೆ. ಅದರಲ್ಲೂ ವಿಶೇಷವಾಗಿ ರಾಗಿ ಚಳಿಗಾಲದ ಸೂಪರ್ ಫುಡ್. ಚಳಿಗಾಲದಲ್ಲಿ ರಾಗಿ ಕಿಚಡಿ ಪೋಷಕಾಂಶ ಸಮೃದ್ಧವಾಗಿರುತ್ತದೆ.
ದೇಹಕ್ಕೆ ಅಗತ್ಯವಿರುವ ಶಕ್ತಿ ನೀಡುತ್ತದೆ. ರಾಗಿ ಪ್ರಮುಖ ಧಾನ್ಯವಾಗಿದೆ. ಕ್ಯಾಲ್ಸಿಯಂ, ಕಾರ್ಬೋಹೈಡ್ರೇಟ್, ಆಹಾರದ ಫೈಬರ್, ಪ್ರೋಟೀನ್ ಮತ್ತು ಅನೇಕ ಅಗತ್ಯ ಸೂಕ್ಷ್ಮ ಪೋಷಕಾಂಶಗಳು ಇದರಲ್ಲಿವೆ. ರಾಗಿ ಸತು ಮತ್ತು ಮೆಗ್ನೀಸಿಯಂನ ಪ್ರಮುಖ ಮೂಲ ಆಗಿದೆ.
ರಾಗಿಯಲ್ಲಿರುವ ಫೈಟೊಕೆಮಿಕಲ್ಸ್ ಹೃದಯದ ಆರೋಗ್ಯ ಬಲಪಡಿಸುತ್ತವೆ. ಇದು ಹೆಚ್ಚಿನ ಶಕ್ತಿ ಮತ್ತು ಹೃದಯದ ಆರೋಗ್ಯಕರ ಆಹಾರ ಆಗಿದೆ.
ರಾಗಿ ಖಿಚಡಿ ವಿಶೇಷತೆ
ಅನೇಕ ಪೋಷಕಾಂಶ ಸಮೃದ್ಧ ರಾಗಿಯು ಚಳಿಗಾಲದ ಆಹಾರವಾಗಿದೆ. ಇದು ಒಳಗಿನಿಂದ ದೇಹವನ್ನು ಬೆಚ್ಚಗಿರಿಸುತ್ತದೆ. ರಾಗಿ ಕಿಚಡಿ ಸಾಕಷ್ಟು ದೇಸಿ ತುಪ್ಪ, ತಾಜಾ ಮಜ್ಜಿಗೆ ಅಥವಾ ಹಾಲಿನ ಜೊತೆ ಬಡಿಸಲಾಗುತ್ತದೆ.
ಫೈಬರ್ ಅಂಶವು ಹೊಟ್ಟೆಯಲ್ಲಿ ಭಾರವಾದ ಭಾವನೆ ಉಂಟು ಮಾಡಲ್ಲ. ತುಪ್ಪವನ್ನು ಸೇರಿಸಿದರೆ ಮಲಬದ್ಧತೆ ಉಂಟಾಗುವುದಿಲ್ಲ.
ರಾಗಿ ಖಿಚಡಿ ಮಾಡುವುದು ಹೇಗೆ?
ಆರೋಗ್ಯಕರ ಬಾಜ್ರಾ ಕಿಚಡಿ ಮಾಡಲು ಬೇಕಾಗುವ ಸಾಮಗ್ರಿಗಳು
1 ಬೌಲ್ ರಾಗಿ, ಅರ್ಧ ಬೌಲ್ ಹೆಸರು ಬೇಳೆ ಅಥವಾ ಕಡಲೆ ಬೇಳೆ, ಅರ್ಧ ಬಟ್ಟಲು ಅಕ್ಕಿ, ಉಪ್ಪು ರುಚಿಗೆ ತಕ್ಕಂತೆ, ಶುದ್ಧ ಅಥವಾ ದೇಸಿ ತುಪ್ಪ ಬೇಕು.
ರಾಗಿ ಕಿಚಡಿ ಮಾಡುವ ವಿಧಾನ
ಮೊದಲು ರಾಗಿಯನ್ನು ಚೆನ್ನಾಗಿ ಸ್ವಚ್ಛಗೊಳಿಸಿ. ನಂತರ ಸ್ವಲ್ಪ ನೀರು ಹಾಕಿ ಚೆನ್ನಾಗಿ ತೊಳೆದು ನೀರು ಹೋಗಲಾಡಿಸಿ. ನಂತರ ಒದ್ದೆಯಾದ ರಾಗಿ ಕಾಳುಗಳನ್ನು ಮಿಕ್ಸರ್ ನಲ್ಲಿ ಸ್ವಲ್ಪ ಉಪ್ಪಿಟ್ಟಿನ ರವಾದ ಹದಕ್ಕೆ ರುಬ್ಬಿಕೊಳ್ಳಿ.
ನಂತರ ಆಳವಾದ ತಟ್ಟೆಗೆ ಹಾಕಿ, ರಾಗಿಯ ಸಿಪ್ಪೆ ಹೊರಗೆ ತೆಗೆಯಿರಿ. ರಾಗಿ ಸಂಪೂರ್ಣವಾಗಿ ಸ್ವಚ್ಛಗೊಳಿಸಿ. ನಂತರ ಕುಕ್ಕರ್ನಲ್ಲಿ ಸುಮಾರು ಮೂರರಿಂದ ನಾಲ್ಕು ಲೋಟ ನೀರು ಹಾಕಿ ಕುದಿಸಿ.
ಅದು ಬೆಂದ ನಂತರ ರಾಗಿ, ಬೇಳೆ ಮತ್ತು ಅಕ್ಕಿಯನ್ನು ಪ್ರತ್ಯೇಕವಾಗಿ ತೊಳೆದು ಕುದಿಯುವ ನೀರಿಗೆ ಹಾಕಿ. ಆಗಾಗ್ಗೆ ತಿರುವುತ್ತಾ ಇರಿ. ರುಚಿಗೆ ತಕ್ಕಂತೆ ಉಪ್ಪು ಸೇರಿಸಿ. ಮೂರು ಸೀಟಿ ಬಂದ ನಂತರ ಕುಕ್ಕರ್ ಆಫ್ ಮಾಡಿ.
ಇದನ್ನೂ ಓದಿ: 30 ವಯಸ್ಸಿನ ನಂತರ ಈ ಆಹಾರಗಳನ್ನು ಸೇವಿಸುವುದರಿಂದ ಜ್ಞಾಪಕ ಶಕ್ತಿ ವೃದ್ಧಿಸುತ್ತದೆ!
ರಾಗಿ ಕಿಚಡಿಯನ್ನು ತುಪ್ಪ, ಬೆಲ್ಲ, ತಾಜಾ ಮಜ್ಜಿಗೆ ಅಥವಾ ಹಾಲಿನ ಜೊತೆ ಬಡಿಸಿ ಸೇವಿಸಿ. ತಟ್ಟೆಗೆ ಹಾಕಿ ತಿಂದರೆ ರುಚಿ ಹೆಚ್ಚು. ಪೋಷಕಾಂಶ ಭರಿತ ರಾಗಿ ಕಿಚಡಿ ಆರೋಗ್ಯಕ್ಕೆ ಒಳ್ಳೆಯದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ