Morning Breakfast: ಬೆಳಗಿನ ತಿಂಡಿಗೆ ಮಾಡಿ ಆರೋಗ್ಯಕರ ರಾಗಿ ಖೀರ್; ಏನೆಲ್ಲಾ ಪ್ರಯೋಜನಗಳಿದೆ ಗೊತ್ತಾ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಬೆಳಗಿನ ತಿಂಡಿಗೆ ರಾಗಿ ಖೀರ್ ಮಾಡಿ ಸೇವನೆ ಮಾಡಿದರೆ ಇದು ದೇಹಕ್ಕೆ ಪೋಷಕಾಂಶ ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಹಾಗೂ ಆರೋಗ್ಯಕ್ಕೂ ಒಳ್ಳೆಯದು. ಇನ್ನು ರಾಗಿ ವಿಶ್ವದ ಅತ್ಯಂತ ಹಳೆಯ ಧಾನ್ಯಗಳಲ್ಲಿ ಒಂದು.

  • Share this:

    ದಿನವೂ ಬೆಳಗಿನ ತಿಂಡಿಗೆ (Morning Breakfast) ಹಲವು ಪದಾರ್ಥಗಳನ್ನು ತಿಂದು ಬೇಸರವಾಗಿದ್ರೆ ವಾರದಲ್ಲಿ ಒಂದು ದಿನ ಆರೋಗ್ಯಕರ ಖೀರ್ (Healthy Kheer) ಮಾಡಿ ಸೇವನೆ ಮಾಡಿ. ಇಂದು ನಾವು ಖೀರ್ ಮಾಡುವ ಪಾಕವಿಧಾನ (Recipe) ಹೇಗೆ ಅಂತಾ ತಿಳಿಯೋಣ. ಖೀರ್ ಹಬ್ಬಗಳಲ್ಲಿ (Festivals) ಹಾಗೂ ವಾರಾಂತ್ಯದಲ್ಲಿ ಮಾಡಿ ಸೇವಿಸುವ ವಿಶಿಷ್ಟ ಪ್ರಾಧಾನ್ಯತೆ ಇರುವ ಪದಾರ್ಥ. ಖೀರ್ ರುಚಿಯ (Taste) ಜೊತೆಗೆ ಆರೋಗ್ಯವನ್ನೂ ಸಹ ಹೆಚ್ಚಿಸುತ್ತದೆ. ನೀವು ಸಾಮಾನ್ಯವಾಗಿ ಅಕ್ಕಿ ಖೀರ್ ಮಾಡಿ ತಿಂದಿರಬಹುದು. ಯಾವತ್ತಾದರೂ ರಾಗಿ ಖೀರ್ ಮಾಡಿ ತಿಂದಿದ್ದೀರಾ? ರಾಗಿಯಲ್ಲಿ ಹಲವು ಪೋಷಕಾಂಶಗಳಿದ್ದು, ರುಚಿ ಮತ್ತು ಆರೋಗ್ಯ ವೃದ್ಧಿಸುತ್ತದೆ.


    ಬೆಳಗಿನ ತಿಂಡಿಗೆ ರಾಗಿ ಖೀರ್ ರೆಸಿಪಿ  


    ಬೆಳಗಿನ ತಿಂಡಿಗೆ ರಾಗಿ ಖೀರ್ ಮಾಡಿ ಸೇವನೆ ಮಾಡಿದರೆ ಇದು ದೇಹಕ್ಕೆ ಪೋಷಕಾಂಶ ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಹಾಗೂ ಆರೋಗ್ಯಕ್ಕೂ ಒಳ್ಳೆಯದು. ಇನ್ನು ರಾಗಿ ವಿಶ್ವದ ಅತ್ಯಂತ ಹಳೆಯ ಧಾನ್ಯಗಳಲ್ಲಿ ಒಂದು.


    ರಾಗಿಗೆ ತನ್ನದೇ ಆದ ಪ್ರಾಧಾನ್ಯತೆ ಇದೆ. ರಾಗಿಯು ಮುಖ್ಯ ಭೋಜನದ ಪದಾರ್ಥವಾಗಿದೆ. ರಾಗಿಯನ್ನು ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ ಮತ್ತು ತಮಿಳುನಾಡಿನಲ್ಲಿ ಬೆಳೆಸುತ್ತಾರೆ. ರಾಗಿಯು ಕ್ಯಾಲ್ಸಿಯಂ, ಪ್ರೊಟೀನ್, ಮೆಗ್ನೀಷಿಯಂ ಫೈಬರ್,




    ಕಬ್ಬಿಣ, ರಂಜಕ, ಕ್ಯಾರೋಟಿನ್, ಕಾರ್ಬೋಹೈಡ್ರೇಟ್, ರೈಬೋಫ್ಲಾವಿನ್, ಥಯಾಮಿನ್ ಸೇರಿದಂತೆ ಹಲವು ಪೋಷಕಾಂಶ ಹೊಂದಿದೆ. ಇದು ಪ್ರಮುಖ ರೋಗಗಳ ಚಿಕಿತ್ಸೆಗೆ ಮತ್ತು ತಡೆಗಟ್ಟುವಿಕೆಗೆ ಸಹಾಯ ಮಾಡುತ್ತದೆ. ಹಾಗಾಗಿ ರಾಗಿ ಬೆಳಗಿನ ತಿಂಡಿಗೆ ಉತ್ತಮ ಆಯ್ಕೆ ಆಗಿದೆ.


    ರಾಗಿ ಖೀರ್‌ ರೆಸಿಪಿ


    ಬೇಕಾಗುವ ಪದಾರ್ಥಗಳು


    ತುಪ್ಪ 1 ಟೀಸ್ಪೂನ್, ಏಲಕ್ಕಿ 1/2 ಟೀಸ್ಪೂನ್, ರಾಗಿ 1/2 ಕಪ್, ನೀರು 2 ಕಪ್, ಹಾಲು 1 ಲೀಟರ್, ಬೆಲ್ಲ 150 ಗ್ರಾಂ, ರೋಸ್ ವಾಟರ್ 1 ಟೀಸ್ಪೂನ್, ಹುರಿದ ಗೋಡಂಬಿ, ಪಿಸ್ತಾ, ಬಾದಾಮಿ ನಾಲ್ಕು ಚಮಚ ಬೇಕು.


    ರಾಗಿ ಖೀರ್ ರೆಸಿಪಿ ಮಾಡುವ ವಿಧಾನ ಹೀಗಿದೆ


    ಮೊದಲು ಪ್ರೆಶರ್ ಕುಕ್ಕರ್‌ ನಲ್ಲಿ ತುಪ್ಪ, ಏಲಕ್ಕಿ ಮತ್ತು ರಾಗಿಯ ಗಂಜಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಅದು ತಿಳಿ ಕಂದು ಬಣ್ಣ ಬರುವವರೆಗೆ ಕಡಿಮೆ ಉರಿಯಲ್ಲಿ ಬೇಯಿಸಿ. ನಂತರ ಇದಕ್ಕೆ ನೀರು ಹಾಕಿ ಚೆನ್ನಾಗಿ ಕಲೆಸಿ. ಗುಳ್ಳೆಗಳು ಬಂದು ಕುದಿಯುವವರೆಗೆ ಬೇಯಿಸಿ.


    ನಂತರ ಪ್ರತ್ಯೇಕ ಬಾಣಲೆಗೆ ಒಂದು ಕಪ್ ನೀರಿನಲ್ಲಿ ಬೆಲ್ಲದ ಸಿರಪ್ ತಯಾರಿಸಿ. ಬೇಯಿಸಿದ ರಾಗಿಗೆ ಹಾಲು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಖೀರ್ ದಪ್ಪ ಆಗುವವರೆಗೆ ಬೇಯಿಸಿ. ಪರಿಮಳಕ್ಕಾಗಿ ನೀವು ಇದಕ್ಕೆ ರೋಸ್ ವಾಟರ್ ಸಹ ಸೇರಿಸಿ ಸೇವನೆ ಮಾಡಬಹುದು.


    ಸಾಂದರ್ಭಿಕ ಚಿತ್ರ


    ಈಗ ಖೀರ್ ಸಿದ್ಧವಾಗಿದೆ. ಇದಕ್ಕೆ ಹುರಿದ ಡ್ರೈ ಫ್ರೂಟ್ಸ್ ಸೇರಿಸಿ ಮಿಶ್ರಣ ಮಾಡಿ ಸೇವನೆ ಮಾಡಿ.


    ರಾಗಿ ಖೀರ್ ಹೆಲ್ದೀ ಮತ್ತು ಪೋಷಕಾಂಶ ಭರಿತ ಪದಾರ್ಥ


    ರಾಗಿ ಖೀರ್‌ ನ ಪೌಷ್ಟಿಕಾಂಶದ ಮೌಲ್ಯ ಹೊಂದಿದೆ. ಅಕ್ಕಿಯ ಬದಲು ರಾಗಿ ಖೀರ್ ಸೇವಿಸುವುದು ಹೆಲ್ದೀ ಮತ್ತು ರುಚಿಕರ. ರಾಗಿಯು ಹಲವು ಕಾಯಿಲೆಗಳು ಇರುವ ರೋಗಿ ಸಹ ಸೇವನೆ ಮಾಡಬಹುದು. ರಾಗಿಯು ದೌರ್ಬಲ್ಯ ನಿವಾರಿಸಿ, ದೇಹಕ್ಕೆ ಶಕ್ತಿ ನೀಡುತ್ತದೆ.


    ಒಂದು ವರದಿ ಪ್ರಕಾರ, ರಾಗಿಯು ಆಂಟಿ-ಆಕ್ಸಿಡೆಂಟ್, ಆಂಟಿಫಂಗಲ್ ಮತ್ತು ಆಂಟಿ-ಕಾರ್ಸಿನೋಜೆನಿಕ್ ಗುಣಲಕ್ಷಣದಿಂದ ಸಮೃದ್ಧ ಆಗಿದೆ. ಇದು ರಕ್ತದ ಸಕ್ಕರೆ ಪ್ರಮಾಣ ಕಡಿಮೆ ಮಾಡುವ ಅಂಶ ಒಳಗೊಂಡಿದೆ.


    ಇದನ್ನೂ ಓದಿ: ನಿಮ್ಮ ಮನಸ್ಸಿನಲ್ಲಿ ಆಗೋ ಬದಲಾವಣೆ ಥೈರಾಯ್ಡ್‌ ಕಾಯಿಲೆಯ ಸೂಚನೆಯಂತೆ!


    ರಾಗಿಯನ್ನು ನೀವು ಕ್ಯಾನ್ಸರ್, ಮಧುಮೇಹ, ಅಧಿಕ ರಕ್ತದೊತ್ತಡ ಅಥವಾ ಶಿಲೀಂಧ್ರಗಳ ಸೋಂಕು ಅಥವಾ ತಡೆಗಟ್ಟುವಿಕೆಗೆ ರಾಗಿ ಸೇವನೆ ಮಾಡಿ. ಇದು ಸೂಕ್ತ ಪ್ರಯೋಜನ ನೀಡುತ್ತದೆ.

    Published by:renukadariyannavar
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು