• Home
  • »
  • News
  • »
  • lifestyle
  • »
  • Morning Breakfast: ಡಯಟ್ ತಜ್ಞರು ಶಿಫಾರಸ್ಸು ಮಾಡುವ ಕ್ವಿನೋವಾ ಚಿಲ್ಲಾದ ರೆಸಿಪಿ

Morning Breakfast: ಡಯಟ್ ತಜ್ಞರು ಶಿಫಾರಸ್ಸು ಮಾಡುವ ಕ್ವಿನೋವಾ ಚಿಲ್ಲಾದ ರೆಸಿಪಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ರಾತ್ರಿಯ ದೀರ್ಘ ನಿದ್ರೆಯ ನಂತರ ನಮ್ಮ ದಿನದ ಮೊದಲ ಊಟ ಉಪಹಾರ. ಹಾಗಾಗಿ ಅದರಲ್ಲಿ ಅರಿಶಿನ ಹಾಕಿ ಸೇವಿಸುವುದು ತುಂಬಾ ಮುಖ್ಯ. ಇಲ್ಲಿದಿದ್ರೆ ದಿನವಿಡೀ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಎದುರಿಸಬೇಕಾಗುತ್ತದೆ. ಒಟ್ಟಾರೆ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಪೋಷಕಾಂಶಗಳಲ್ಲಿ ಸಮೃದ್ಧವಾಗಿರುವ ಕ್ವಿನೋವಾ ಚಿಲ್ಲಾದ ರೆಸಿಪಿ ಮಾಡುವುದು ಹೇಗೆ ಎಂದು ನೋಡೋಣ.

ಮುಂದೆ ಓದಿ ...
  • Share this:

    ಬೆಳಗ್ಗೆ ಮಕ್ಕಳಿಗೆ ತಿಂಡಿ ಮಾಡಿ, ರೆಡಿ ಮಾಡ್ಬೇಕು, ಮನೆ ಕೆಲಸ ಆಗ್ಬೇಕು, ಗಂಡನಿಗೆ ತಿಂಡಿ ಕೊಡ್ಬೇಕು. ಆಫೀಸ್ ಗೆ ಹೋಗ್ಬೇಕು ಈ ಧಾವಂತದಲ್ಲಿ ಎಷ್ಟೋ ಜನರು ಬೆಳಗಿನ ತಿಂಡಿ (Morning Breakfast) ಸೇವನೆ ಮಾಡಲ್ಲ. ಅಥವಾ ಬ್ರೆಡ್ ಸಾಸ್, ಹಣ್ಣು ತಿಂದು ಹೋಗ್ತೀವಿ. ಖಾಲಿ ಹೊಟ್ಟೆಯಲ್ಲಿ ಬೆಳಗಿನ ಉಪಾಹಾರದಲ್ಲಿ ಈ ಆಹಾರ (Food) ಸೇವಿಸುವುದು ನಿಮ್ಮ ಆರೋಗ್ಯಕ್ಕೆ (Health) ಹಾನಿಕರ. ರಾತ್ರಿಯ ದೀರ್ಘ ನಿದ್ರೆಯ ನಂತರ ನಮ್ಮ ದಿನದ ಮೊದಲ ಊಟ ಉಪಹಾರ. ಹಾಗಾಗಿ ಅದರಲ್ಲಿ ಅರಿಶಿನ ಹಾಕಿ ಸೇವಿಸುವುದು ತುಂಬಾ ಮುಖ್ಯ. ಇಲ್ಲಿದಿದ್ರೆ ದಿನವಿಡೀ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಎದುರಿಸಬೇಕಾಗುತ್ತದೆ.


    ಉಪಹಾರ ಬಿಡುವುದು ಅಥವಾ ಅನಾರೋಗ್ಯಕರ ಪದಾರ್ಥ ಸೇವನೆ ಮಾಡುವುದು ಆಮ್ಲೀಯತೆ, ಮಲಬದ್ಧತೆ, ಗ್ಯಾಸ್ ಸಮಸ್ಯೆಗೆ ಕಾರಣವಾಗುತ್ತದೆ. ಇದ್ರಿಂದ ದೂರವಿರಲು ಬೆಳಗಿನ ಉಪಾಹಾರದಲ್ಲಿ ಫೈಬರ್ ಮತ್ತು ಅಗತ್ಯವಾದ ಪೋಷಕಾಂಶ ಸಮೃದ್ಧ  ಆಹಾರ ಸೇವಿಸಿ.


    ಬೆಳಗಿನ ತಿಂಡಿಗೆ ಕ್ವಿನೋವಾ ಚಿಲ್ಲಾದ ಪಾಕವಿಧಾನ


    ಪೂನಂ ಡಯಟ್ ತಜ್ಞರು ಪೂನಂ ದುನೇಜಾ, ಆರೋಗ್ಯಕರ ಉಪಹಾರ ಪಾಕವಿಧಾನವನ್ನು ಹಂಚಿಕೊಂಡಿದ್ದಾರೆ. ಒಟ್ಟಾರೆ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು, ಅವರು ಪ್ರಮುಖ ಪೋಷಕಾಂಶಗಳಲ್ಲಿ ಸಮೃದ್ಧವಾಗಿರುವ ಕ್ವಿನೋವಾ ಚಿಲ್ಲಾದ ಪಾಕವಿಧಾನ ಶೇರ್ ಮಾಡಿದ್ದಾರೆ.




    ರುಚಿ ಮತ್ತು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಆಗಿದೆ. ಹಾಗಾದ್ರೆ ಇದನ್ನು ಹೇಗೆ ತಯಾರಿಸಬೇಕೆಂದು ತಿಳಿಯೋಣ.


    ಕ್ವಿನೋವಾ ಚಿಲ್ಲಾದ ಪಾಕವಿಧಾನ ಬೇಕಾಗುವ ಪದಾರ್ಥಗಳು


    ಎರಡು ಕಪ್ ಕ್ವಿನೋವಾ, ಸಣ್ಣದಾಗಿ ಕೊಚ್ಚಿದ ಮಧ್ಯಮ ಗಾತ್ರದ ಒಂದು ಕ್ಯಾರೆಟ್, ಸಣ್ಣದಾಗಿ ಕೊಚ್ಚಿದ ಕಾಲು ಕಪ್ ಕ್ಯಾಪ್ಸಿಕಂ, ಸಣ್ಣದಾಗಿ ಕೊಚ್ಚಿದ ಹಸಿರು ಬೀನ್ಸ ಕಾಲು ಕಪ್, ಸಣ್ಣದಾಗಿ ಕೊಚ್ಚಿದ ಒಂದು ಮಧ್ಯಮ ಗಾತ್ರದ ಈರುಳ್ಳಿ, ಕಾಲು ಕಪ್ ಹಸಿರು ಬಟಾಣಿ, ಸಣ್ಣದಾಗಿ ಕೊಚ್ಚಿದ ಒಂದು ಟೀ ಸ್ಪೂನ್ ಹಸಿರು ಮೆಣಸಿನಕಾಯಿ,


    ಶುಂಠಿ ಒಂದು ಟೀಸ್ಪೂನ್, ಹುರಿದ ಕಡಲೆಕಾಯಿ ಕಾಲು ಕಪ್, ಉರಾದ್ ದಾಲ್ ಅರ್ಧ ಕಪ್, ತುಪ್ಪ / ಆಲಿವ್ ಎಣ್ಣೆ ಮೂರು ಟೀಸ್ಪೂನ್, ಅರಿಶಿನ ಪುಡಿ ಒಂದು ಟೀಸ್ಪೂನ್, ಕಪ್ಪು ಮೆಣಸು ಅರ್ಧ ಟೀಸ್ಪೂನ್, ಕರಿಬೇವಿನ ಎಲೆಗಳು ಆರು, ಕೊತ್ತಂಬರಿ ಎಲೆಗಳು ಅಗತ್ಯವಿರುವಷ್ಟು ನೀರು, ರುಚಿಗೆ ಉಪ್ಪು ಬೇಕು.


    ಕ್ವಿನೋವಾ ಚಿಲ್ಲಾ ಹೇಗೆ ತಯಾರಿಸುವುದು?


    ಕ್ವಿನೋವಾ ಮತ್ತು ಉದ್ದಿನಬೇಳೆಯನ್ನು ನೀರಿನಲ್ಲಿ ನೆನೆಸಿ ನಂತರ ಕ್ವಿನೋವಾದ ಸಿಪ್ಪೆಯನ್ನು ತೆಗೆಯಿರಿ. ಕ್ವಿನೋವಾ ಮತ್ತು ಉದ್ದಿನಬೇಳೆ ಊದಿದಾಗ, ಅದನ್ನು ಮಿಕ್ಸಿಗೆ ಹಾಕಿ ಮತ್ತು ಅಗತ್ಯವಿರುವಂತೆ ನೀರನ್ನು ಬಳಸಿ ನಯವಾದ ಪೇಸ್ಟ್ ಮಾಡಿ.


    ಒಂದು ಪ್ಯಾನ್ ತೆಗೆದುಕೊಂಡು ಅದಕ್ಕೆ ತುಪ್ಪ ಹಾಕಿ ಬಿಸಿಯಾಗಲು ಬಿಡಿ. ಬಿಸಿಯಾದ ತಕ್ಷಣ ಸಣ್ಣಗೆ ಹೆಚ್ಚಿದ ಶುಂಠಿ, ಕರಿಬೇವಿನ ಸೊಪ್ಪು ಮತ್ತು ಹಸಿಮೆಣಸಿನಕಾಯಿ ಹಾಕಿ ಚೆನ್ನಾಗಿ ಹುರಿಯಿರಿ.


    ಈಗ ಅದಕ್ಕೆ ಕತ್ತರಿಸಿದ ಈರುಳ್ಳಿ, ಕ್ಯಾರೆಟ್, ಹಸಿರು ಬೀನ್ಸ್, ಕ್ಯಾಪ್ಸಿಕಂ ಮತ್ತು ಹಸಿರು ಬಟಾಣಿಗಳನ್ನು ಸೇರಿಸಿ, ನಂತರ ಅರಿಶಿನ ಪುಡಿ ಮತ್ತು ರುಬ್ಬಿದ ಕರಿಮೆಣಸು ಸೇರಿಸಿ ಮಧ್ಯಮ ಉರಿಯಲ್ಲಿ ಎಲ್ಲವನ್ನೂ ಫ್ರೈ ಮಾಡಿ.


    ಸಿದ್ಧಪಡಿಸಿದ ಹಿಟ್ಟಿನಲ್ಲಿ ಹುರಿದ ತರಕಾರಿಗಳು ಮತ್ತು ಕಡಲೆಕಾಯಿ ಹಾಕಿ. ಈಗ ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ನಂತರ ಕೊತ್ತಂಬರಿ ಸೊಪ್ಪನ್ನು ಹಾಕಿ ಚೆನ್ನಾಗಿ ಕಲಸಿ. ಪ್ಯಾನ್ ತೆಗೆದುಕೊಂಡು ಮಧ್ಯಮ ಉರಿಯಲ್ಲಿ ಹಾಕಿ ಬಿಸಿ ಮಾಡಿ.


    ಇದನ್ನೂ ಓದಿ: ಕೂದಲ ಆರೋಗ್ಯಕ್ಕೆ ಎಣ್ಣೆ ಹಚ್ಚುವ ಸರಿಯಾದ ವಿಧಾನ ಯಾವುದು?


    ತುಪ್ಪ ಅನ್ವಯಿಸಿ ಮತ್ತು ಹಿಟ್ಟನ್ನು ಸುರಿದು ಹರಡಿ. ಎರಡೂ ಬದಿ ಕೆಂಪಾಗುವವರೆಗೆ ಬೇಯಿಸಿ ತೆಗೆಯಿರಿ. ಈಗ ಚಿಲ್ಲಾ ರೆಡಿ. ನಿಮ್ಮಿಷ್ಟದ ಚಟ್ನಿ ಜೊತೆ ತಿನ್ನಿರಿ.

    Published by:renukadariyannavar
    First published: