• Home
  • »
  • News
  • »
  • lifestyle
  • »
  • Morning Breakfast: ಬೆಳಗ್ಗಿನ ತಿಂಡಿಗೆ ಸವಿಯಿರಿ ಕಡಲೆಕಾಯಿ ಹಲ್ವಾ: ಇಲ್ಲಿದೆ ರೆಸಿಪಿ

Morning Breakfast: ಬೆಳಗ್ಗಿನ ತಿಂಡಿಗೆ ಸವಿಯಿರಿ ಕಡಲೆಕಾಯಿ ಹಲ್ವಾ: ಇಲ್ಲಿದೆ ರೆಸಿಪಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕಡಲೆಕಾಯಿ ಹಲವು ವಿಟಮಿನ್ ಹಾಗೂ ಪೋಷಕಾಂಶದಿಂದ ಸಮೃದ್ಧವಾಗಿದೆ. ಕಡಲೆಕಾಯಿ ಆರೋಗ್ಯಕರ ತೂಕ ಕಾಪಾಡಿಕೊಳ್ಳಲು ಸಹಕಾರಿ ಆಗಿದೆ. ಕಡಲೆಕಾಳನ್ನು ಸರಿಯಾದ ಪ್ರಮಾಣದಲ್ಲಿ ಪ್ರತಿದಿನ ಸೇವಿಸಿದರೆ ತೂಕ ನಿಯಂತ್ರಣ ಮಾಡಬಹುದು ಅಂತಾ ಕೆಲವು ಅಧ್ಯಯನಗಳು ತಿಳಿಸಿವೆ. ಕಡಲೆಕಾಯಿ ಹಲ್ವಾ ಮಾಡುವುದು ಹೇಗೆ ನೋಡೋಣ.

ಮುಂದೆ ಓದಿ ...
  • Share this:

    ಕಡಲೆಕಾಯಿ ಅಂದ್ರೆ ಶೇಂಗಾ (Peanuts) ಎಲ್ಲರಿಗೂ ಇಷ್ಟವಾದ ಧಾನ್ಯಗಳು. ಕಡಲೆಕಾಯಿಯನ್ನು ಹಲವು ಖಾದ್ಯಗಳ (Recipe) ತಯಾರಿಕೆಯಲ್ಲಿ ಬಳಕೆ ಮಾಡಲಾಗುತ್ತದೆ. ನೀವು ಕ್ಯಾರೆಟ್ ಹಲ್ವಾ ತಿಂದಿರಬಹುದು. ಯಾವತ್ತಾದ್ರೂ ಕಡಲೆಕಾಯಿ ಹಲ್ವಾ ತಿಂದಿದ್ದೀರಾ? ಇಲ್ಲ ಅನ್ನೋರು ಈಗಲೇ ಕಡಲೆಕಾಯಿ ಹಲ್ವಾ ರೆಸಿಪಿ ಬಗ್ಗೆ ತಿಳಿದುಕೊಳ್ಳಿ. ಬೆಳಗಿನ ತಿಂಡಿಗೆ (Morning Breakfast) ನೀವು ಖಾರದ ಖಾದ್ಯ ಪದಾರ್ಥ ತಿಂದು ಬೋರ್ ಆಗಿದ್ರೆ, ಸಿಹಿಯಾದ ಕಡಲೆಕಾಯಿ ಹಲ್ವಾ (Peanut Halwa) ಸೇವನೆ ಮಾಡಿ. ಇಲ್ಲಿ ಕಡಲೆಕಾಯಿ ಹಲ್ವಾ ಮಾಡುವುದು ಹೇಗೆ ಅಂತಾ ಹೇಳಲಾಗಿದೆ. ಅಂದ ಹಾಗೇ ಕಡಲೆಕಾಯಿ ದೀರ್ಘಕಾಲ ಹೊಟ್ಟೆ ತುಂಬಿಸಿಡುತ್ತದೆ. ಕಡಲೆಕಾಯಿಯಲ್ಲಿ ಉತ್ತಮ ಪ್ರಮಾಣದ ಫೈಬರ್, ಆರೋಗ್ಯಕರ ಕೊಬ್ಬು ಮತ್ತು ಪ್ರೋಟೀನ್ ಇದೆ.


    ಬೆಳಗಿನ ತಿಂಡಿಗೆ ಕಡಲೆಕಾಯಿ ಹಲ್ವಾ ರೆಸಿಪಿ


    ಕಡಲೆಕಾಯಿ ಹಲವು ವಿಟಮಿನ್ ಹಾಗೂ ಪೋಷಕಾಂಶದಿಂದ ಸಮೃದ್ಧವಾಗಿದೆ. ಕಡಲೆಕಾಯಿ ಆರೋಗ್ಯಕರ ತೂಕ ಕಾಪಾಡಿಕೊಳ್ಳಲು ಸಹಕಾರಿ ಆಗಿದೆ. ಕಡಲೆಕಾಳನ್ನು ಸರಿಯಾದ ಪ್ರಮಾಣದಲ್ಲಿ ಪ್ರತಿದಿನ ಸೇವಿಸಿದರೆ ತೂಕ ನಿಯಂತ್ರಣ ಮಾಡಬಹುದು ಅಂತಾ ಕೆಲವು ಅಧ್ಯಯನಗಳು ತಿಳಿಸಿವೆ.


    ಅಲ್ಲದೇ ಇಲ್ಲಿ ಹೇಳಲಾದ ಕಡಲೆಕಾಯಿ ಹಲ್ವಾದಲ್ಲಿ ಸಾಕಷ್ಟು ದೇಸಿ ಖಂಡ ಬಳಸಲಾಗಿದೆ. ಇದು ತೂಕ ನಷ್ಟಕ್ಕೆ ಸಹಾಯ ಮಾಡಲಿದೆ. ತುಂಬಾ ಜನರು ಮೂವಿ ನೋಡುವಾಗ, ಟಿವಿ ನೋಡುವಾಗ, ಕೆಲಸ ಮಾಡುವಾಗ, ಖಾಲಿ ಕುಳಿತಾಗ ಕಡಲೆಕಾಯಿ ತಿನ್ನಲು ಇಷ್ಟ ಪಡ್ತಾರೆ.




    ಕಡಲೆಕಾಯಿಯನ್ನು ಕಚ್ಚಾ ಆಗಿ, ಹುರಿದು, ಕುದಿಸಿ, ಫ್ರೈ ಮಾಡಿ ತಿನ್ನಬಹುದು. ಅಲ್ಲದೇ ಹಲವು ತಿಂಡಿಗಳಲ್ಲೂ ಬಳಕೆ ಮಾಡಬಹುದು. ವಿಂಟರ್ ಸೀಸನ್ ನಲ್ಲಿ ಶೇಂಗಾ ತಿನ್ನುವ ಖುಷಿಯೇ ಬೇರೆ. ಕಡಲೆಕಾಯಿಯನ್ನು ಚಳಿಗಾಲದಲ್ಲಿ ಉತ್ತಮ ಒಣ ಹಣ್ಣು ಎಂದು ಕರೆಯಲಾಗಿದೆ.


    ಇದು ಆಂತರಿಕವಾಗಿ ದೇಹವನ್ನು ಬೆಚ್ಚಗಿರಿಸುತ್ತದೆ. ರೋಗನಿರೋಧಕ ಶಕ್ತಿ ಕಾಪಾಡಲು ಸಹಾಯ ಮಾಡುತ್ತದೆ. ಇಂದು ಆರೋಗ್ಯಕರ ಮತ್ತು ಟೇಸ್ಟಿ ಕಡಲೆಕಾಯಿ ಹಲ್ವಾ ರೆಸಿಪಿ ಮಾಡುವುದು ಹೇಗೆ ಅಂತಾ ನೋಡೋಣ.


    ಕಡಲೆಕಾಯಿ ಹಲ್ವಾ ರೆಸಿಪಿಗೆ ಬೇಕಾಗುವ ಪದಾರ್ಥಗಳು


    ಎರಡು ಕಪ್ ಕಡಲೆಕಾಯಿ, ಅರ್ಧ ಲೀಟರ್ ಹಾಲು, ರುಚಿಗೆ ತಕ್ಕಂತೆ ದೇಸಿ ಖಂಡ, ಎಂಟು ಬಾದಾಮಿ, ಅರ್ಧ ಚಮಚ ಏಲಕ್ಕಿ ಪುಡಿ, ಒಂದು ಕಪ್ ದೇಸಿ ತುಪ್ಪ, ಬೇಕು.


    ಆರೋಗ್ಯಕರ ಕಡಲೆಕಾಯಿ ಕಡಲೆಕಾಯಿ ಹಲ್ವಾ ರೆಸಿಪಿ ಮಾಡುವ ವಿಧಾನ


    ಮೊದಲು ಒಲೆಯ ಮೇಲೆ ಪಾತ್ರೆ ಇಟ್ಟು ಬಿಸಿ ಮಾಡಿ. ಪಾತ್ರೆಗೆ ಎರಡು ಕಪ್ ಕಡಲೆಕಾಯಿಗಳನ್ನು ಹಾಕಿ ಚೆನ್ನಾಗಿ ಹುರಿಯಿರಿ. ಕಡಲೆಕಾಯಿ ಚೆನ್ನಾಗಿ ಹುರಿದ ನಂತರ ಅದರ ಸಿಪ್ಪೆ ತೆಗೆದು ತಟ್ಟೆಗೆ ಹಾಕಿ ಇಟ್ಟುಕೊಳ್ಳಿ.


    ಸಾಂದರ್ಭಿಕ ಚಿತ್ರ


    ಕಡಲೆಕಾಯಿಗಳು ಸ್ವಲ್ಪ ತಣ್ಣಗಾದ ನಂತರ ಕಡಲೆಕಾಳನ್ನು ಮಿಕ್ಸಿಗೆ ಹಾಕಿ ಒರಟಾಗಿ ರುಬ್ಬಿರಿ. ಮತ್ತೊಂದು ಪ್ಯಾನ್ ಅನ್ನು ಒಲೆಯ ಮೇಲಿಟ್ಟು ಬಿಸಿ ಮಾಡಿ. ಅದಕ್ಕೆ ಈಗ ದೇಸಿ ತುಪ್ಪ ಹಾಕಿ. ಬಿಸಿ ಮಾಡಿ.


    ತುಪ್ಪ ಬಿಸಿಯಾದ ನಂತರ ಅದಕ್ಕೆ ಕಡಲೆಕಾಳು ಮಿಶ್ರಣ ಸೇರಿಸಿ ಮತ್ತು ಹುರಿಯಿರಿ. ಬೆಂಕಿ ಕಡಿಮೆ ಇರಿಸಿ. ಕಡಲೆಕಾಯಿಯ ಬಣ್ಣವು ತಿಳಿ ಗೋಲ್ಡನ್ ಬಣ್ಣಕ್ಕೆ ತಿರುಗಿದಾಗ ಸ್ವಲ್ಪ ಹಾಲು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ. ಯಾವುದೇ ಗಂಟು ಇರದಂತೆ ನೋಡಿಕೊಳ್ಳಿ.


    ಇದನ್ನೂ ಓದಿ: ಸೌತೆಕಾಯಿ ಸೇವನೆಯಿಂದ ಇದೆ ಹಲವಾರು ಅಡ್ಡ ಪರಿಣಾಮ!


    ನಂತರ ದೇಸಿ ಖಂಡ್ ಮತ್ತು ಏಲಕ್ಕಿ ಪುಡಿ ಸೇರಿಸಿ, ಮಿಶ್ರಣ ಮಾಡಿ. ಹಾಲು ಸಂಪೂರ್ಣವಾಗಿ ಒಣಗುವವರೆಗೆ ಬೇಯಿಸಿ. ನಂತರ ಸಣ್ಣದಾಗಿ ಕೊಚ್ಚಿದ ಬಾದಾಮಿಯಿಂದ ಅಲಂಕರಿಸಿ ಸರ್ವ್ ಮಾಡಿ.

    Published by:renukadariyannavar
    First published: