• Home
  • »
  • News
  • »
  • lifestyle
  • »
  • Breakfast: ಸಂಡೇ ಸ್ಪೆಷಲ್, ತರಕಾರಿ ಬಟಾಣಿ ರೈತಾ ಜೊತೆಗೆ ಅಕ್ಕಿ ರೊಟ್ಟಿ ಸೇವಿಸಿ; ಇಲ್ಲಿದೆ ರೆಸಿಪಿ

Breakfast: ಸಂಡೇ ಸ್ಪೆಷಲ್, ತರಕಾರಿ ಬಟಾಣಿ ರೈತಾ ಜೊತೆಗೆ ಅಕ್ಕಿ ರೊಟ್ಟಿ ಸೇವಿಸಿ; ಇಲ್ಲಿದೆ ರೆಸಿಪಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಅಕ್ಕಿ ರೊಟ್ಟಿ ತುಂಬಾ ಟೇಸ್ಟಿ. ಇದನ್ನು ಮಾಡುವುದು ತುಂಬಾ ಸರಳ ಮತ್ತು ಸುಲಭ. ಮಕ್ಕಳಿಂದ ದೊಡ್ಡವರವರೆಗೂ ಅಚ್ಚುಮೆಚ್ಚಿನ ತಿಂಡಿ ಇದಾಗಿದೆ. ಜೊತೆಗೆ ಬಟಾಣಿ ರೈತಾ ತುಂಬಾ ಇಷ್ಟ ಪಟ್ಟು ತಿನ್ನುವ ತರಕಾರಿ ಆಗಿದೆ. ಚಳಿಗಾಲದಲ್ಲಿ ಜನರು ಇದನ್ನು ವಿವಿಧ ರೀತಿಯಲ್ಲಿ ತಮ್ಮ ಆಹಾರದಲ್ಲಿ ಸೇರಿಸುವುದು ತಮ್ಮ ರುಚಿಗೆ ತಕ್ಕಂತೆ ರೆಸಿಪಿ ಮಾಡಿ ಸೇವನೆ ಮಾಡ್ತಾರೆ.

ಮುಂದೆ ಓದಿ ...
  • Share this:

    ಬೆಳಗಿನ ತಿಂಡಿಗೆ (Morning Breakfast) ನೀವು ಹಲವು ಪದಾರ್ಥಗಳ (Ingredients) ವೆರೈಟಿ ತಿಂಡಿ ಮಾಡಿ ಸೇವಿಸಿರಬಹುದು. ಇಂದು ನಾವು ಜನಪ್ರಿಯ (Famous) ಕಾಲೋಚಿತ ತರಕಾರಿ ಬಟಾಣಿ ರೈತಾ ಮತ್ತು ಅಕ್ಕಿ ರೊಟ್ಟಿ (Akki Roti) ಮಾಡುವುದು ಹೇಗೆ ನೋಡೋಣ. ಅಕ್ಕಿ ರೊಟ್ಟಿ ತುಂಬಾ ಟೇಸ್ಟಿ. ಇದನ್ನು ಮಾಡುವುದು ತುಂಬಾ ಸರಳ ಮತ್ತು ಸುಲಭ. ಮಕ್ಕಳಿಂದ ದೊಡ್ಡವರವರೆಗೂ ಅಚ್ಚುಮೆಚ್ಚಿನ ತಿಂಡಿ ಇದಾಗಿದೆ. ಜೊತೆಗೆ ಬಟಾಣಿ ರೈತಾ ತುಂಬಾ ಇಷ್ಟ ಪಟ್ಟು ತಿನ್ನುವ ತರಕಾರಿ ಆಗಿದೆ. ಚಳಿಗಾಲದಲ್ಲಿ ಜನರು ಇದನ್ನು ವಿವಿಧ ರೀತಿಯಲ್ಲಿ ತಮ್ಮ ಆಹಾರದಲ್ಲಿ ಸೇರಿಸುವುದು ತಮ್ಮ ರುಚಿಗೆ ತಕ್ಕಂತೆ ರೆಸಿಪಿ ಮಾಡಿ ಸೇವನೆ ಮಾಡ್ತಾರೆ.


    ಬೆಳಗಿನ ತಿಂಡಿಗೆ ತರಕಾರಿ ಬಟಾಣಿ ರೈತಾ ಮತ್ತು ಅಕ್ಕಿ ರೊಟ್ಟಿ ರೆಸಿಪಿ


    ಚಳಿಗಾಲದಲ್ಲಿ ನಿಮ್ಮ ಆಹಾರದಲ್ಲಿ ತಾಜಾ ಬಟಾಣಿ ಸೇರಿಸಿ. ಅಗತ್ಯ ಪೋಷಕಾಂಶಗಳಿಂದ ಕೂಡಿರುವ ಚಿಕ್ಕ ಬಟಾಣಿಗಳು ರಕ್ತದೊತ್ತಡದಿಂದ ಹಿಡಿದು ಮಧುಮೇಹ ಮತ್ತು ಹೃದಯದ ಆರೋಗ್ಯ ಕಾಪಾಡಲು ಪ್ರಯೋಜನಕಾರಿ.


    ಬಟಾಣಿ ರೈತಾ ರೆಸಿಪಿಗೆ ಬೇಕಾಗುವ ಪದಾರ್ಥಗಳು


    ತಾಜಾ ಹಸಿರು ಬಟಾಣಿ 250 ಗ್ರಾಂ, ಮೊಸರು 2 ಕಪ್, ಕೊತ್ತಂಬರಿ ಸೊಪ್ಪು 4 ಚಮಚ, ಉಪ್ಪು ರುಚಿಗೆ ತಕ್ಕಂತೆ, ಸಣ್ಣದಾಗಿ ಕೊಚ್ಚಿದ ಹಸಿರು ಮೆಣಸಿನಕಾಯಿ 2, ಕರಿಮೆಣಸು, ಹುರಿದ ಜೀರಿಗೆ ಪುಡಿ, ಜೀರಿಗೆ, ತುಪ್ಪ ಬೇಕು.




    ಬಟಾಣಿ ರೈತಾ ಪಾಕವಿಧಾನ ಹೀಗಿದೆ


    ಈಗ ಮೊಸರಿಗೆ ಹಸಿರು ಬಟಾಣಿ, ಕೊತ್ತಂಬರಿ ಸೊಪ್ಪು, ಹುರಿದ ಜೀರಿಗೆ ಮತ್ತು ಉಪ್ಪು ಸೇರಿಸಿ ಮತ್ತು ಎಲ್ಲವನ್ನೂ ಹಾಕಿರಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ. ನಂತರ ಈಗ ಬಾಣಲೆಗೆ ಸ್ವಲ್ಪ ತುಪ್ಪ ಹಾಕಿ ಬಿಸಿ ಮಾಡಿ. ತುಪ್ಪಕ್ಕೆ ಜೀರಿಗೆ, ಹಸಿಮೆಣಸಿನಕಾಯಿ, ಕರಿಮೆಣಸಿನ ಪುಡಿ ಸೇರಿಸಿ ಬೇಯಿಸಿ. ನಂತರ ಮೊಸರು ಸೇರಿಸಿ.


    ಅಕ್ಕಿ ರೊಟ್ಟಿ ಪಾಕವಿಧಾನ


    ಅಕ್ಕಿ ರೊಟ್ಟಿ ಅಕ್ಕಿ ಹಿಟ್ಟು, ಮಸಾಲೆ, ಗಿಡಮೂಲಿಕೆ ಮತ್ತು ತರಕಾರಿ ಹಾಕಿ ಮಾಡಲಾಗುತ್ತದೆ. ಕರ್ನಾಟಕ ಜನಪ್ರಿಯ ಉಪಹಾರ ಅಕ್ಕಿ ರೊಟ್ಟಿ. ಅಕ್ಕಿ ರೊಟ್ಟಿ ಗ್ಲುಟನ್ ಫ್ರೀ ಹಾಗೂ ರುಚಿಕರ ಮತ್ತು ತಯಾರಿಸಲು ಸುಲಭ. ಅಕ್ಕಿ ರೊಟ್ಟಿಯನ್ನು ಸಾಮಾನ್ಯವಾಗಿ ತೆಂಗಿನಕಾಯಿ ಚಟ್ನಿ ಜೊತೆ ತಿನ್ನುತ್ತಾರೆ. ಇಂದು ನೀವು ಬಟಾಣಿ ರೈತಾ ಜೊತೆ ಅಕ್ಕಿ ರೊಟ್ಟಿ ತಿಂದು ನೋಡಿ.


    ಕಪ್ ಅಕ್ಕಿ ಹಿಟ್ಟು, ಕಾಲು ಟೀ ಚಮಚ ಉಪ್ಪು, ತಾಜಾ ತೆಂಗಿನಕಾಯಿ ತುರಿ, ಅರ್ಧ ಟೀಚಮಚ ಜೀರಿಗೆ, ಸಣ್ಣಗೆ ಕತ್ತರಿಸಿದ ಒಂದು ಹಸಿರು ಮೆಣಸಿನಕಾಯಿ,  ಸಣ್ಣಗೆ ಕತ್ತರಿಸಿದ ತಾಜಾ ಕರಿಬೇವಿನ ಎಲೆಗಳು,


    ಸಾಂದರ್ಭಿಕ ಚಿತ್ರ


    ಎರಡು ಟೀ ಸ್ಪೂನ್ ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು, ಸಬ್ಬಸಿಗೆ ಎಲೆಗಳು, ಮೂರು ಟೀ ಸ್ಪೂನ್ ಸಣ್ಣಗೆ ಕತ್ತರಿಸಿದ ಈರುಳ್ಳಿ. ಕಾಲು ಕಪ್ ತುರಿದ ಕ್ಯಾರೆಟ್,


    ಸೌತೆಕಾಯಿ, ಬಾಟಲ್ ಸೋರೆಕಾಯಿ, ಅರ್ಧ ಟೀಚಮಚ ತುರಿದ ಶುಂಠಿ ಬೇಕು. ಈ ಎಲ್ಲಾ ಪದಾರ್ಥಗಳನ್ನು ಬಟ್ಟಲಿಗೆ ಹಾಕಿ ನೀರು ಹಾಕುತ್ತಾ ಚೆನ್ನಾಗಿ ನಾದಿಕೊಳ್ಳಿ. ನಂತರ ಒಲೆ ಮೇಲೆ ತವೆ ಇಡಿ.


    ಇದನ್ನೂ ಓದಿ: ಪ್ರತಿನಿತ್ಯ ಚ್ಯವನ​ ಪ್ರಾಶ ಸೇವನೆ ಮಾಡುವುದರಿಂದ ಏನೆಲ್ಲಾ ಪ್ರಯೋಜನ ಇದೆ ನೋಡಿ


    ನಂತರ ಹಿಟ್ಟಿನ ಚಿಕ್ಕ ಚಿಕ್ಕ ಉಂಡೆಯಿಂದ ರೊಟ್ಟಿ ಮಾಡಿ, ತವೆ ಮೇಲೆ ಸ್ವಲ್ಪ ಎಣ್ಣೆ ಹಾಕಿ ಎರಡೂ ಬದಿ ಚೆನ್ನಾಗಿ ಬೇಯಿಸಿ. ನಂತರ ಬಟಾಣಿ ರೈತಾ ಜೊತೆ ಸೇವಿಸಿ. ಅಕ್ಕಿ ರೊಟ್ಟಿ ಮತ್ತು ಬಟಾಣಿ ರೈತಾ ಪೋಷಕಾಂಶ ಭರಿತ ತಿಂಡಿಯಾಗಿದ್ದು, ಹೊಸ ಅನುಭವ ಕೊಡುತ್ತದೆ.

    Published by:renukadariyannavar
    First published: