ಇಂದು ನಾವು ಬೆಳಗ್ಗಿನ ತಿಂಡಿಗೆ (Morning Breakfast) ಪನೀರ್ ಚೀಸ್ ಪರಾಠಾ (Paneer Cheese Paratha) ಮಾಡುವುದು ಹೇಗೆ ಎಂದು ತಿಳಿಯೋಣ. ಪನೀರ್ ಚೀಸ್ ಪರಾಠಾ ಮತ್ತು ಪನೀರ್ ಚೀಸ್ ಸ್ಟಫ್ಡ್ ಪರೋಟಾ ಸಹ ನೀವು ಮಾಡಿ ಸೇವನೆ ಮಾಡಬಹುದು. ಪನೀರ್ ಅಂದ್ರೆ ಸಾಮಾನ್ಯವಾಗಿ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ಇಷ್ಟ ಪಟ್ಟು ತಿನ್ನುತ್ತಾರೆ. ಅದರಲ್ಲೂ ಚೀಸ್ ಎಲ್ಲರ ಇಷ್ಟದ ಪದಾರ್ಥ. ಅಷ್ಟೇ ಅಲ್ಲದೇ ಪನೀರ್ ಆರೋಗ್ಯಕರ ಪೋಷಕಾಂಶಗಳನ್ನು (Healthy Nutrients) ದೇಹಕ್ಕೆ ಒದಗಿಸುತ್ತದೆ. ಪನೀರ್ ಸೇವನೆ ರುಚಿ ಮತ್ತು ಆರೋಗ್ಯ ಎರಡಕ್ಕೂ ಉತ್ತಮ ಪ್ರಯೋಜನ ನೀಡುತ್ತದೆ. ಹಾಗಾಗಿ ನೀವು ಮನೆಯಲ್ಲಿ ಪನೀರ್ ಚೀಸ್ ಪರೋಟಾ ಮತ್ತು ಪನೀರ್ ಚೀಸ್ ಸ್ಟಫ್ಡ್ ಪರೋಟಾ ಮಾಡಿ ತಿನ್ನಿ.
ಬೆಳಗಿನ ತಿಂಡಿಗೆ ಪನೀರ್ ಚೀಸ್ ಪರೋಟಾ ರೆಸಿಪಿ ಹೀಗಿದೆ
ಈರುಳ್ಳಿ ಕ್ಯಾಪ್ಸಿಕಂ, ಕ್ಯಾರೆಟ್ ಸೇರಿದಂತೆ ವಿವಿಧ ತರಕಾರಿಗಳನ್ನು ಈ ಪನೀರ್ ಚೀಸ್ ಪರೋಟಾದಲ್ಲಿ ಬಳಕೆ ಮಾಡಲಾಗುತ್ತದೆ. ಚೀಸ್ ಹಾಗೂ ಮಸಾಲೆ, ಕತ್ತರಿಸಿದ ಹಸಿರು ಮೆಣಸಿನಕಾಯಿ ಹಾಕಿ ಮಾಡುವ ಈ ಪರಾಠಾ ರೆಸಿಪಿಯು ರುಚಿಯನ್ನು ಹೆಚ್ಚಿಸುತ್ತದೆ.
ಪನೀರ್ ಚೀಸ್ ಪರಾಠಾ ಸಾಕಷ್ಟು ಜನಪ್ರಿಯತೆ ಪಡೆದಿದೆ. ಇದನ್ನು ಲಘು ಉಪಹಾರವಾಗಿಯೂ ತಿನ್ನಲಾಗುತ್ತದೆ. ಪನೀರ್ ಚೀಸ್ ಪರೋಟಾ ಸಂಸ್ಕರಿಸಿದ ಚೀಸ್ ನ್ನು ಹೊಂದಿದೆ.
ಪನೀರ್ ಚೀಸ್ ಪರೋಟಾ ರೆಸಿಪಿ
ಬೇಕಾಗುವ ಪದಾರ್ಥಗಳು
ಒಂದೂವರೆ ಕಪ್ ಸಂಪೂರ್ಣ ಗೋಧಿ ಹಿಟ್ಟು, 1 ಟೀಸ್ಪೂನ್ ಎಣ್ಣೆ, ಉಪ್ಪು ರುಚಿಗೆ ತಕ್ಕಷ್ಟು, 1/2 ಕಪ್ ತುರಿದ ಸಂಸ್ಕರಿಸಿದ ಚೀಸ್, 1 ಕಪ್ ತುರಿದ ಪನೀರ್, 1/4 ಕಪ್ ನುಣ್ಣಗೆ ಕತ್ತರಿಸಿದ ಕ್ಯಾಪ್ಸಿಕಂ, 1/4 ಕಪ್ ಕತ್ತರಿಸಿದ ಈರುಳ್ಳಿ,
2 ಚಮಚ ನುಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು, ಒಂದೂವರೆ ಚಮಚ ಸಣ್ಣದಾಗಿ ಕೊಚ್ಚಿದ ಹಸಿರು ಮೆಣಸಿನಕಾಯಿ, ½ ಚಮಚ ಬೆಳ್ಳುಳ್ಳಿ ಪೇಸ್ಟ್, ½ ಚಮಚ ಮೆಣಸಿನ ಪುಡಿ, 1/4 ಚಮಚ ಮಸಾಲಾ, 6 ಟೀಸ್ಪೂನ್ ತುಪ್ಪ ಬೇಕು.
ಪನೀರ್ ಚೀಸ್ ಪರಾಠಾ ರೆಸಿಪಿ ಮಾಡುವ ವಿಧಾನ
ಗೋಧಿ ಹಿಟ್ಟಿಗೆ ಎಲ್ಲಾ ಪದಾರ್ಥಗಳನ್ನು ಸೇರಿಸಿ. ನಂತರ ನೀರನ್ನು ಸೇರಿಸುತ್ತಾ ಹಿಟ್ಟನ್ನು ಚೆನ್ನಾಗಿ ನಾದಿಕೊಳ್ಳಿ. ಹದಿನೈದು ನಿಮಿಷ ಹಾಗೆ ಇಡಿ. ನಂತರ ಹಿಟ್ಟಿನ ಉಂಡೆ ಮಾಡಿ. ವೃತ್ತಾಕಾರದಲ್ಲಿ ಲಟ್ಟಿಸಿ. ನಂತರ ತವೆ ಬಿಸಿ ಮಾಡಿ, ಸ್ವಲ್ಪ ತುಪ್ಪ ಅನ್ವಯಿಸಿ, ಪರೋಟಾ ಹಾಕಿ, ಎರಡೂ ಬದಿಯನ್ನು ಚೆನ್ನಾಗಿ ಬೇಯಿಸಿ. ಸರ್ವ್ ಮಾಡಿ.
ಪನೀರ್ ತಿನ್ನುವುದರಿಂದ ಆಗುವ ಪ್ರಯೋಜನಗಳು
ಕ್ಯಾನ್ಸರ್ ಅಪಾಯ ಕಡಿಮೆ ಮಾಡುತ್ತದೆ
ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಸಾಕಷ್ಟು ಜನರನ್ನು ಬಾಧಿಸುತ್ತಿದೆ. ಒಂದು ಮಿಲಿಯನ್ ಮಹಿಳೆಯರು ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ ಎಂದು ವರದಿಯೊಂದು ಹೇಳಿದೆ. ಪನೀರ್ ನಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂ ಇದೆ. ಇದು ಸ್ತನ ಕ್ಯಾನ್ಸರ್ ತಡೆಗೆ ಸಹಕಾರಿ. ಕೊಲೊನ್ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ಅನ್ನು ನಿಯಂತ್ರಿಸಲು ಸಹಕಾರಿ.
ಉತ್ತಮ ಮೂಳೆಗಳು ಮತ್ತು ಹಲ್ಲುಗಳ ರಚನೆಗೆ ಸಹಕಾರಿ
ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಮೂಳೆಗಳ ಬಲವರ್ಧನೆಗೆ ಸಹಕಾರಿ. ಹಲ್ಲುಗಳ ಆರೋಗ್ಯಕ್ಕೂ ಪನೀರ್ ಸೇವನೆ ಸಹಕಾರಿ. ಕ್ಯಾಲ್ಸಿಯಂ ನರ ಮತ್ತು ಸ್ನಾಯು ವ್ಯವಸ್ಥೆ ಸರಿಪಡಿಸುತ್ತದೆ.
ಇದನ್ನೂ ಓದಿ: ಬೆಳಗ್ಗಿನ ತಿಂಡಿಗೆ ತಯಾರಿಸಿ ವೆಜ್ ಪರೋಟ, ಸಲಾಡ್, ಇಲ್ಲಿದೆ ರೆಸಿಪಿ!
ತೂಕ ಇಳಿಸಲು ಪನೀರ್ ಸಹಕಾರಿ
ಪನೀರ್ ಸುಲಭವಾಗಿ ಜೀರ್ಣವಾಗುತ್ತದೆ. ಕೊಬ್ಬು ಸಂಗ್ರಹವಾಗುವ ಬದಲು ಜೀರ್ಣವಾಗಿ ಶಕ್ತಿ ಬಿಡುಗಡೆಯಾಗುತ್ತದೆ. ಕಡಿಮೆ ಕಾರ್ಬೋಹೈಡ್ರೇಟ್‌ಗಳು ತೂಕ ಇಳಿಸಲು ಸಹಾಯ ಮಾಡುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ