• Home
  • »
  • News
  • »
  • lifestyle
  • »
  • Morning Breakfast: ಬೆಳಗ್ಗಿನ ತಿಂಡಿಗೆ ಪನೀರ್ ಮತ್ತು ಮಶ್ರೂಮ್ ಟೋಸ್ಟ್ ರೆಸಿಪಿ ಹೀಗೆ ಮಾಡಿ!

Morning Breakfast: ಬೆಳಗ್ಗಿನ ತಿಂಡಿಗೆ ಪನೀರ್ ಮತ್ತು ಮಶ್ರೂಮ್ ಟೋಸ್ಟ್ ರೆಸಿಪಿ ಹೀಗೆ ಮಾಡಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕೆಲವು ರೆಸಿಪಿಗಳನ್ನು ಬೆಳಗ್ಗೆ ಮತ್ತು ಸಾಯಂಕಾಲದ ತಿಂಡಿಯಾಗಿ ಸೇವನೆ ಮಾಡಬಹುದು. ನೀವು ಡಿಫರೆಂಟ್ ರೆಸಿಪಿ ಟ್ರೈ ಮಾಡಲು ನೋಡುತ್ತಿದ್ದರೆ ಅವುಗಳಲ್ಲಿ ಪನೀರ್ ಟಿಕ್ಕಾ ರೆಸಿಪಿ ಮತ್ತು ಮಶ್ರೂಮ್ ಟೋಸ್ಟ್ ರೆಸಿಪಿ ಹೇಗೆ ಮಾಡುವುದು ಎಂದು ಇಲ್ಲಿ ನಾವು ನೋಡೋಣ.

  • Share this:

    ಬೆಳಗಿನ ತಿಂಡಿಗೆ (Morning Breakfast) ನೀವು ಒಂದೇ ತರಹದ ರೆಸಿಪಿ (Recipe) ತಿಂದು ಬೇಜಾರಾಗಿದ್ದರೆ, ಡಿಫರೆಂಟ್ ಆಗಿ ಕೆಲ ತಿಂಡಿಗಳನ್ನು (Food) ನೀವು ಮಾಡಿ ಸೇವನೆ ಮಾಡಬಹುದು. ಕೆಲವು ತಿಂಡಿಗಳು ಬೆಳಗ್ಗೆ ಸೇವನೆ ಮಾಡುವುದು ಸಾಕಷ್ಟು ಹೆಲ್ದೀ ಮತ್ತು ರುಚಿಕರ (Healthy And Tasty) ಆಗಿರುತ್ತವೆ. ಇವುಗಳು ನಿಮ್ಮನ್ನು ದೀರ್ಘಕಾಲ ಹೊಟ್ಟೆ ತುಂಬಿದ (Stomach Full) ಅನುಭವ ನೀಡುತ್ತವೆ. ಕೆಲವು ರೆಸಿಪಿಗಳನ್ನು ಬೆಳಗ್ಗೆ ಮತ್ತು ಸಾಯಂಕಾಲದ ತಿಂಡಿಯಾಗಿ ಸೇವನೆ ಮಾಡಬಹುದು. ನೀವು ಡಿಫರೆಂಟ್ ರೆಸಿಪಿ ಟ್ರೈ ಮಾಡಲು ನೋಡುತ್ತಿದ್ದರೆ ಅವುಗಳಲ್ಲಿ ಪನೀರ್ ಟಿಕ್ಕಾ ರೆಸಿಪಿ ಮತ್ತು ಮಶ್ರೂಮ್ ಟೋಸ್ಟ್ ರೆಸಿಪಿ ಹೇಗೆ ಮಾಡುವುದು ಎಂದು ಇಲ್ಲಿ ನಾವು ನೋಡೋಣ.


    ಪನೀರ್ ಟಿಕ್ಕಾ ಟೋಸ್ಟ್ ರೆಸಿಪಿ


    ಪನೀರ್ ಟಿಕ್ಕಾ ಟೋಸ್ಟ್ ರೆಸಿಪಿ ಜನರು ಇಷ್ಟ ಪಟ್ಟು ತಿನ್ನುವ ಖಾದ್ಯಗಳಲ್ಲಿ ಒಂದು ಆಗಿದೆ. ಈ ಪನೀರ್ ಟಿಕ್ಕಾ ಟೋಸ್ಟ್ ಬೆಳಗಿನ ತಿಂಡಿಗೆ ಮಜವಾದ ರುಚಿ ಮತ್ತು ಅನುಭವ ನೀಡುತ್ತದೆ. ಇದನ್ನು ನೀವು ಮನೆಯಲ್ಲಿ ಖಂಡಿತ ಟ್ರೈ ಮಾಡಿ.


    ಪನೀರ್ ಟಿಕ್ಕಾ ಟೋಸ್ಟ್‌ ರೆಸಿಪಿ ಮಾಡಲು ಬೇಕಾಗುವ ಸಾಮಗ್ರಿಗಳು


    ಅರ್ಧ ಕಪ್ ಪನೀರ್, ಮೂರು ಟೀ ಸ್ಪೂನ್ ದಪ್ಪ ಮೊಸರು, ಎರಡು ಟೀ ಸ್ಪೂನ್ ಕಡಲೆ ಹಿಟ್ಟು, ಅರ್ಧ ಟೀ ಸ್ಪೂನ್ ಮೆಣಸಿನ ಪುಡಿ, ಅರ್ಧ ಟೀ ಸ್ಪೂನ್ ಕರಿಮೆಣಸು, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಅರಿಶಿನ ಬೇಕು.


    ಇದನ್ನೂ ಓದಿ: ಚರ್ಮದ ವಯಸ್ಸಾಗುವಿಕೆ ಪ್ರಕ್ರಿಯೆ ತಡೆಗೆ ವಿಟಮಿನ್ ಸಿ ಸೀರಮ್ ಹೇಗೆ ಪ್ರಯೋಜನಕಾರಿ?


    ಪನೀರ್ ಟಿಕ್ಕಾ ಟೋಸ್ಟ್ ರೆಸಿಪಿ ಮಾಡುವುದು ಹೇಗೆ?


    ಒಂದು ದೊಡ್ಡ ಬಟ್ಟಲಿನಲ್ಲಿ, ಮೊಸರು, ಕಡಲೆ ಹಿಟ್ಟು ಮತ್ತು ಎಲ್ಲಾ ಮಸಾಲೆ ಮಿಶ್ರಣ ಮಾಡಿ. ಅವುಗಳನ್ನು ಮಿಶ್ರಣ ಮಾಡಿ ನಂತರ ಪನೀರ್, ಈರುಳ್ಳಿ ಮತ್ತು ಕ್ಯಾಪ್ಸಿಕಂ ಸೇರಿಸಿ. ಅದನ್ನು 10 ನಿಮಿಷ ಪಕ್ಕಕ್ಕೆ ಇರಿಸಿ.


    ಈಗ ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಬಿಸಿ ಮಾಡಿ ನಂತರ ಅದಕ್ಕೆ ಮ್ಯಾರಿನೇಟ್ ಮಾಡಿದ ಪನೀರ್ ಹಾಕಿ. ಇದು ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಬೇಯಿಸಿ. ನಂತರ ಬ್ರೆಡ್ ಮೇಲೆ ಪನೀರ್ ಟಿಕ್ಕಾ ಹಾಕಿ ಮತ್ತು ಬ್ರೆಡ್ ಅನ್ನು ಗ್ರಿಲ್ ಮಾಡಿ. ನಂತರ ತೆಗೆಯಿರಿ. ಈಗ ನಿಮ್ಮ ನೆಚ್ಚಿನ ಪುದೀನ ಚಟ್ನಿ ಮತ್ತು ಟೊಮೆಟೊ ಕೆಚಪ್ನೊಂದಿಗೆ ಸೇವಿಸಿ.


    ಬೆಳಗಿನ ತಿಂಡಿಗೆ ಎರಡನೇ ರೆಸಿಪಿ ಹೀಗಿದೆ


    ಮಶ್ರೂಮ್ ಟೋಸ್ಟ್ ರೆಸಿಪಿ


    ಬೇಕಾಗುವ ಸಾಮಗ್ರಿಗಳು


    ಮಶ್ರೂಮ್ ರೆಸಿಪಿ ಮಸಾಲೆಯುಕ್ತ ಮತ್ತು ಗರಿಗರಿಯಾದ ಹೊರತಾಗಿ, ಇದು ತುಂಬಾ ರುಚಿಕರವಾಗಿದೆ. ಮಶ್ರೂಮ್ ಟೋಸ್ಟ್ ರೆಸಿಪಿ ಸಸ್ಯಾಹಾರಿಗಳಿಗೆ ಇಷ್ಟ. ಮನೆಯಲ್ಲಿ ಮಾಡುವುದು ತುಂಬಾ ಸುಲಭ. ಮಶ್ರೂಮ್ ಟೋಸ್ಟ್ ಮಾಡುವುದು ಹೇಗೆ ಎಂಬುದನ್ನು ನೋಡೋಣ.


    ಉದ್ದವಾಗಿ ಕತ್ತರಿಸಿದ ಮಶ್ರೂಮ್, ಸ್ಯಾಂಡ್‌ವಿಚ್ ಅಥವಾ ಬ್ರೌನ್ ಬ್ರೆಡ್, ಚಿಲ್ಲಿ ಫ್ಲೇಕ್ಸ್, ಕೊತ್ತಂಬರಿ ಸೊಪ್ಪು, ಬೆಳ್ಳುಳ್ಳಿ ನುಣ್ಣಗೆ ಕತ್ತರಿಸಿದ ಬೆಣ್ಣೆ, ಸಣ್ಣದಾಗಿ ಕೊಚ್ಚಿದ ಈರುಳ್ಳಿ, ಚೀಸ್ ಮತ್ತು ರುಚಿಗೆ ತಕ್ಕಂತೆ ಉಪ್ಪು.


    ಮಶ್ರೂಮ್ ಟೋಸ್ಟ್ ಮಾಡುವ ವಿಧಾನ


    ಮಶ್ರೂಮ್ ಟೋಸ್ಟ್ ಮಾಡಲು ಒಂದು ಪ್ಯಾನ್ ತೆಗೆದುಕೊಳ್ಳಿ. ಅದಕ್ಕೆ ಸ್ವಲ್ಪ ಬೆಣ್ಣೆ ಹಾಕಿ. ಈಗ ಕತ್ತರಿಸಿದ ಬೆಳ್ಳುಳ್ಳಿ, ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಿರಿ. ಇದನ್ನು ಹುರಿಯುವಾಗ ಚಮಚದೊಂದಿಗೆ ಬೆರೆಸಿ. ಈಗ ಅದಕ್ಕೆ ಉದ್ದವಾಗಿ ಕತ್ತರಿಸಿದ ಅಣಬೆ ಸೇರಿಸಿ ಚೆನ್ನಾಗಿ ಬೆರೆಸಿ. ಈಗ ಅದರ ಮೇಲೆ ಚಿಲ್ಲಿ ಫ್ಲೇಕ್ಸ್ ಹಾಕಿ ಚೆನ್ನಾಗಿ ಕಲಸಿ. ಇದಕ್ಕೆ ಉಪ್ಪು ಸೇರಿಸಿ.


    ಇದನ್ನೂ ಓದಿ: ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಳಕ್ಕೆ ಯಾವ ಅಂಶಗಳು ಮುಖ್ಯ ಕಾರಣವಾಗಿವೆ?


    ಈಗ ಬಾಣಲೆಗೆ ಸ್ವಲ್ಪ ಬೆಣ್ಣೆ ಹಾಕಿ ಬಿಸಿ ಮಾಡಿ. ಬ್ರೆಡ್ ಅನ್ನು ಬೇಯಿಸಿ. ಮತ್ತು ಪ್ಲೇಟ್ನಲ್ಲಿ ಇರಿಸಿ. ಈಗ ನೀವು ಹುರಿದ ಮಶ್ರೂಮ್ಗಳನ್ನು ಬ್ರೆಡ್ ಮೇಲೆ ಹಾಕಿ. ಈಗ ನಿಮ್ಮ ಮಶ್ರೂಮ್ ಟೋಸ್ಟ್ ಸಿದ್ಧ.

    Published by:renukadariyannavar
    First published: