ಬೆಳಗಿನ ತಿಂಡಿಗೆ (Morning Breakfast) ವೆರೈಟಿ ರೆಸಿಪಿ (Verity Recipe), ಖಾದ್ಯ ಮಾಡಿ ಸೇವಿಸಬೇಕು ಎಂಬುದು ತಜ್ಞರ ಸಲಹೆ. ಬೆಳಗಿನ ತಿಂಡಿಗೆ ಪೋಷಕಾಂಶ (Nutrients) ಸಮೃದ್ಧ ಪದಾರ್ಥ ಸೇವನೆ ಮಾಡಬೇಕು. ಹಾಗಾಗಿ ಇಂದು ನಾವು ಪೋಷಕಾಂಶ ಸಮೃದ್ಧ, ಆರೋಗ್ಯಕರ ಪಾಲಕ್ ದಾಲ್ ಖಿಚಡಿ (Palak Dal Khichdi) ರೆಸಿಪಿ ತಂದಿದ್ದೇವೆ. ಇಂದು ನಾವು ಬೆಳಗಿನ ತಿಂಡಿಗೆ ಪಾಲಕ್ ದಾಲ್ ಖಿಚಡಿ ಮಾಡೋದು ಹೇಗೆ ಅಂತಾ ನೋಡೋಣ. ಅಂದ ಹಾಗೇ, ಪಾಲಕ್ ದಾಲ್ ಖಿಚಡಿ ಪೌಷ್ಠಿಕಾಂಶದಿಂದ ಸಮೃದ್ಧವಾಗಿದೆ. ಪಾಲಕ್ ದಾಲ್ ಖಿಚಡಿ ರುಚಿ ಸಹ ಚೆನ್ನಾಗಿರುತ್ತದೆ. ಇದನ್ನು ಸುಲಭ ಮತ್ತು ತ್ವರಿತವಾಗಿ ತಯಾರು ಮಾಡಬಹುದು.
ಬೆಳಗಿನ ತಿಂಡಿಗೆ ಪಾಲಕ್ ದಾಲ್ ಖಿಚಡಿ ರೆಸಿಪಿ
ಚಳಿಗಾಲದಲ್ಲಿ ಬೆಳಗಿನ ತಿಂಡಿಗೆ ಪಾಲಕ್ ದಾಲ್ ಖಿಚಡಿ ಅತ್ಯುತ್ತಮ ಆರಾಮದಾಯಕ ಆಹಾರ ಪದಾರ್ಥ ಆಗಿದೆ. ಪಾಲಕ್ ದಾಲ್ ಖಿಚಡಿ ಪಾಕವಿಧಾನವು ಕಾರ್ಬೋಹೈಡ್ರೇಟ್ ಮತ್ತು ಪ್ರೋಟೀನ್ ಸಮೃದ್ಧವಾಗಿದೆ.
ಕೆಂಪು ಮೆಣಸಿನಕಾಯಿ, ಕರಿಬೇವಿನ ಎಲೆ, ಮಸಾಲೆ ಪದಾರ್ಥಗಳ ಸಂಯೋಜನೆಯಿಂದ ಪಾಲಕ್ ದಾಲ್ ಖಿಚಡಿ ತಯಾರಿಸಲಾಗುತ್ತದೆ. ಇದು ಆರೋಗ್ಯಕರ ಪಾಕವಿಧಾನ ಆಗಿದೆ.
ಪಾಲಕ್ ದಾಲ್ ಖಿಚಡಿ ರೆಸಿಪಿಗೆ ಬೇಕಾಗುವ ಪದಾರ್ಥಗಳು
ಒಂದು ಕಪ್ ಪಾಲಕ್, ಸಣ್ಣದಾಗಿ ಕತ್ತರಿಸಿದ ಒಂದು ಈರುಳ್ಳಿ, ಸಣ್ಣದಾಗಿ ಕತ್ತರಿಸಿದ ಎರಡು ಟೊಮೆಟೊ, ಒಂದೂವರೆ ಕಪ್ ಅಕ್ಕಿ, ಒಂದು ಕಪ್ ದಾಲ್, ಒಂದು ಟೀಸ್ಪೂನ್ ಜೀರಿಗೆ, ಒಂದು ಟೀಸ್ಪೂನ್ ಸಾಸಿವೆ
ಒಂದು ಟೀಸ್ಪೂನ್ ಕೊತ್ತಂಬರಿ ಪುಡಿ, ಒಂದು ಟೀಸ್ಪೂನ್ ಅರಿಶಿನ ಪುಡಿ, ಉಪ್ಪು, ಕೆಂಪು ಮೆಣಸಿನ ಪುಡಿ, ಆರು ಕರಿಬೇವಿನ ಎಲೆಗಳು, ಒಂದು ಟೀಸ್ಪೂನ್ ತುಪ್ಪ, ಹಸಿರು ಮೆಣಸಿನಕಾಯಿ, ಒಂದು ಟೀಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್, ನೀರು ಬೇಕು.
ಪಾಲಕ್ ದಾಲ್ ಖಿಚಡಿ ರೆಸಿಪಿ ಮಾಡುವ ವಿಧಾನ
ಮೊದಲು 15 ನಿಮಿಷ ಅಕ್ಕಿಯನ್ನು ನೀರಿನಲ್ಲಿ ನೆನೆಸಿಡಿ. ಹಾಗೂ ಬೇಳೆಯನ್ನು ನೀರಿನಲ್ಲಿ ತೊಳೆದಿಡಿ. ಕುಕ್ಕರ್ ನಲ್ಲಿ ಎಣ್ಣೆ ಹಾಕಿ. ಎಣ್ಣೆ ಬಿಸಿಯಾದ ನಂತರ ಸಾಸಿವೆ, ಜೀರಿಗೆ, ಕರಿಬೇವಿನ ಸೊಪ್ಪು, ಹೊಸದಾಗಿ ತಯಾರಿಸಿದ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಚೆನ್ನಾಗಿ ಫ್ರೈ ಮಾಡಿ. ನಂತರ ಇದಕ್ಕೆ ಅರಿಶಿನ ಪುಡಿ,
ಕೊತ್ತಂಬರಿ ಪುಡಿ ಮತ್ತು ಮೆಣಸಿನ ಪುಡಿ ಸೇರಿಸಿ ಫ್ರೈ ಮಾಡಿ. ರುಚಿಗೆ ತಕ್ಕಂತೆ ಉಪ್ಪು ಹಾಕಿರಿ. ಲೋಟ ನೀರು ಮತ್ತು ಬೇಳೆ ಮತ್ತು ಅನ್ನವನ್ನು ಸೇರಿಸಿ. ಬೇಯಿಸಿ. ನಂತರ ಇದಕ್ಕೆ ತಾಜಾ ಪಾಲಕ ಸೇರಿಸಿ. ಕುಕ್ಕರ್ ಲಾಕ್ ಮಾಡಿ. 12 ನಿಮಿಷ ಬೇಯಿಸಿ. ಎರಡು ಸೀಟಿ ನಂತರ ಪ್ರೆಶರ್ ಕುಕ್ಕರ್ನಿಂದ ಪಾಲಾಕ್ ಖಿಚಡಿಯನ್ನು ತಟ್ಟೆಗೆ ಸರ್ವ್ ಮಾಡಿ ಸವಿಯಿರಿ.
ಪಾಲಕ್ ಸೊಪ್ಪಿನ ಆರೋಗ್ಯ ಪ್ರಯೋಜನಗಳು
ದೇಹದಲ್ಲಿ ರಕ್ತದ ಕೊರತೆ ಉಂಟಾಗುವುದಿಲ್ಲ
ದಿನನಿತ್ಯ ಪಾಲಾಕ್ ಸೊಪ್ಪಿನ ರಸ ಸೇವಿಸುವುದರಿಂದ ರಕ್ತಹಿನತೆಯ ಸಮಸ್ಯೆ ನಿವಾರಣೆಯಾಗುತ್ತದೆ. ದೇಹದಲ್ಲಿ ರಕ್ತದ ಕೊರತೆ ಇರುವವರು ತಮ್ಮ ಡಯಟ್ನಲ್ಲಿ ಪಾಲಕ್ ಸೊಪ್ಪನ್ನು ಅವಶ್ಯವಾಗಿ ಸೇರಿಸಿಕೊಳ್ಳಬೇಕು.
ಪಾಲಕ್ ಸೇವನೆಯಿಂದ ದೇಹದಲ್ಲಿ ರಕ್ತದ ಕೊರತೆ ಉಂಟಾಗುವುದಿಲ್ಲ. ರಕ್ತದೊತ್ತಡ ಹೆಚ್ಚು ಅಥವಾ ಕಡಿಮೆ ಇದ್ದರೆ ಪಾಲಕ್ ಸೊಪ್ಪನ್ನು ಸೇವನೆ ಮಾಡಿ.
ಇದನ್ನೂ ಓದಿ: ಡಯಟ್ ಮತ್ತು ವ್ಯಾಯಾಮ ಇಲ್ಲದೆ ದೇಹದ ತೂಕ ಇಳಿಸಲು ಇಲ್ಲಿವೆ ಸುಲಭ ವಿಧಾನಗಳು..!
ಕ್ಯಾನ್ಸರ್ ರೋಗಿಗಳಿಗೆ ದಿವ್ಯೌಷಧ
ಪಾಲಾಕ್ ಸೊಪ್ಪು ಕ್ಯಾನ್ಸರ್ ರೋಗಿಗಳಿಗೆ ದಿವ್ಯೌಷಧ. ಏಕೆಂದರೆ ಕ್ಯಾನ್ಸರ್ ಕಣಗಳನ್ನು ಕೊಲ್ಲಬಲ್ಲ ಶಕ್ತಿ ಪಾಲಾಕ್ ಸೊಪ್ಪಿನಲ್ಲಿದೆ.
ದೇಹದ ತೂಕ ಕಡಿಮೆ ಮಾಡಿಕೊಳ್ಳಬೇಕು ಎನ್ನುವವರು ಪಾಲಾಕ್ ಸೊಪ್ಪನ್ನು ಹೆಚ್ಚು ಸೇವಿಸಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ