• Home
  • »
  • News
  • »
  • lifestyle
  • »
  • Breakfast: ತೂಕ ಇಳಿಕೆಯ ಪ್ರಯತ್ನದಲ್ಲಿರೋರು ಬೆಳಗಿನ ತಿಂಡಿಗೆ ಮಾಡ್ಕೊಳ್ಳಿ ಓಟ್ಸ್ ಖಿಚಡಿ

Breakfast: ತೂಕ ಇಳಿಕೆಯ ಪ್ರಯತ್ನದಲ್ಲಿರೋರು ಬೆಳಗಿನ ತಿಂಡಿಗೆ ಮಾಡ್ಕೊಳ್ಳಿ ಓಟ್ಸ್ ಖಿಚಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ತೂಕ ನಿಯಂತ್ರಣ ಮತ್ತು ತೂಕ ಇಳಿಕೆಗೆ ಪ್ರಯತ್ನ ಮಾಡ್ತಿದ್ದರೆ ಓಟ್ಸ್ ಖಿಚಡಿ ನಿಮಗೆ ತುಂಬಾ ಸಹಾಯ ಮಾಡುತ್ತದೆ. ಹೆಸರು ಬೇಳೆ ಮತ್ತು ರೋಲ್ಡ್ ಓಟ್ಸ್‌ ನಿಂದ ತಯಾರಿಸಲಾದ ಅತ್ಯಂತ ಸರಳ ಮತ್ತು ಸುಲಭ ಆರೋಗ್ಯಕರ ಸಂಪೂರ್ಣ ಊಟದ ಪಾಕ ವಿಧಾನ ಇದಾಗಿದೆ.

  • Share this:

    ಬೆಳಗಿನ ತಿಂಡಿಗೆ (Morning Breakfast) ಇಂದು ನಾವು ಓಟ್ಸ್ ಖಿಚಡಿ ರೆಸಿಪಿ (Oats Khichadi Recipe) ಹೇಗೆ ಮಾಡುವುದು ಅಂತಾ ನೋಡೋಣ. ಆರೋಗ್ಯ ವೃದ್ಧಿಗೆ ಮತ್ತು ತೂಕ ನಷ್ಟಕ್ಕೆ (Weight Loss) ಓಟ್ಸ್ ಸೇವನೆ ಪರಿಣಾಮಕಾರಿ ಪ್ರಯೋಜನ (Benefits) ನೀಡುತ್ತದೆ ಎಂದು ಹೇಳಲಾಗುತ್ತದೆ. ನೀವು ತೂಕ ನಿಯಂತ್ರಣ ಮತ್ತು ತೂಕ ಇಳಿಕೆಗೆ ಪ್ರಯತ್ನ ಮಾಡ್ತಿದ್ದರೆ ಓಟ್ಸ್ ಖಿಚಡಿ ನಿಮಗೆ ತುಂಬಾ ಸಹಾಯ ಮಾಡುತ್ತದೆ. ಹೆಸರು ಬೇಳೆ ಮತ್ತು ರೋಲ್ಡ್ ಓಟ್ಸ್‌ ನಿಂದ ತಯಾರಿಸಲಾದ ಅತ್ಯಂತ ಸರಳ ಮತ್ತು ಸುಲಭ ಆರೋಗ್ಯಕರ ಸಂಪೂರ್ಣ ಊಟದ ಪಾಕ ವಿಧಾನ ಇದಾಗಿದೆ. ಬೆಳಗಿನ ಉಪಹಾರ ಮತ್ತು ರಾತ್ರಿಯ ಊಟಕ್ಕೂ ಓಟ್ಸ್ ಖಿಚಡಿ ರೆಸಿಪಿ ಸಹಕಾರಿ ಆಗಿದೆ.


    ಬೆಳಗಿನ ತಿಂಡಿಗೆ ಓಟ್ಸ್ ಖಿಚಡಿ ರೆಸಿಪಿ


    ಇದನ್ನು ಮೊಸರು ಮತ್ತು ಉಪ್ಪಿನಕಾಯಿ ಅಥವಾ ಚಟ್ನಿ ಜೊತೆ ಸೇವನೆ ಮಾಡಬಹುದು. ಆರೋಗ್ಯಕರ ತೂಕ ನಷ್ಟ ಖಿಚಡಿ ಪಾಕ ವಿಧಾನವನ್ನು ಅಕ್ಕಿ ಮತ್ತು ಬೇಳೆ ಕಾಳುಗಳ ಜೊತೆಗೂ ತಯಾರಿಸಲಾಗುತ್ತದೆ. ಬೇಳೆ ಕಾಳಿನಿಂದ ಮಾಡುವ ಪಾಕ ವಿಧಾನಗಳು ಮತ್ತು ಊಟಗಳು ಭಾರತದಾದ್ಯಂತ ಬಹಳ ಸಾಮಾನ್ಯ. ವಿವಿಧ ಸಂದರ್ಭಗಳಲ್ಲಿ ತಯಾರಿಸಲಾಗುತ್ತದೆ.


    ಪ್ರತಿ ಊಟದಲ್ಲಿ ಅಗತ್ಯ ಪ್ರಮಾಣದ ಕಾರ್ಬೋಹೈಡ್ರೇಟ್‌ಗಳನ್ನು ಅಕ್ಕಿ ಪೂರೈಸುತ್ತದೆ. ಜೊತೆಗೆ ರೋಲ್ಡ್ ಓಟ್ಸ್ ಖಿಚಡಿ ಪಾಕ ವಿಧಾನ ಸಹ ಸಾಕಷ್ಟು ಜನಪ್ರಿಯ ಆಯ್ಕೆಯಾಗಿದೆ. ಇದು ಆರೋಗ್ಯಕರ ಮತ್ತು ಪೌಷ್ಟಿಕ ಪದಾರ್ಥ ಆಗಿದೆ.


    ಇದನ್ನೂ ಓದಿ: ಮಹಿಳೆಯರ ಆರೋಗ್ಯಕ್ಕೆ ಸಮಸ್ಯೆಯಂತೆ ಈ ಮಧ್ಯಂತರ ಉಪವಾಸ


    ಆರೋಗ್ಯಕರ ಮತ್ತು ಟೇಸ್ಟಿ ಫ್ಯೂಷನ್ ಖಿಚಡಿಯನ್ನು ತಯಾರಿಸಲು ಹೆಸರು ಬೇಳೆ ಬಳಕೆ ಮಾಡಲಾಗುತ್ತದೆ. ಖಿಚಡಿಗೆ ನೀವು ವಿವಿಧ ತರಕಾರಿಗಳನ್ನೂ ಸೇರಿಸಬಹುದು. ಇದು ಹೆಚ್ಚು ಆರೋಗ್ಯಕರ ಸಂಪೂರ್ಣ ಹೊಟ್ಟೆ ತುಂಬಿದ ಭಾವನೆ ನೀಡುತ್ತದೆ.


    ಓಟ್ಸ್ ಖಿಚಡಿ ರೆಸಿಪಿ


    ಬೇಕಾಗುವ ಪದಾರ್ಥಗಳು


    ಎರಡು ಟೀ ಸ್ಪೂನ್ ತುಪ್ಪ, ಒಂದು ಟೀ ಸ್ಪೂನ್ ಜೀರಿಗೆ, ಒಂದು ಬೇ ಎಲೆ, ಒಂದು ಪಿಂಚ್ ಹಿಂಗ್, ಸಣ್ಣದಾಗಿ ಹೆಚ್ಚಿದ ಅರ್ಧ ಕಪ್ ಈರುಳ್ಳಿ, ಒಂದು ಟೀ ಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಎರಡು ಸೀಳಿದ ಮೆಣಸಿನಕಾಯಿ, ಸಣ್ಣದಾಗಿ ಕತ್ತರಿಸಿದ ಎರಡು ಟೊಮೆಟೊ, ಸಣ್ಣದಾಗಿ ಕತ್ತರಿಸಿದ ಬೀನ್ಸ್, ಮೂರು ಟೀ ಸ್ಪೂನ್ ಬಟಾಣಿ,


    ಸಣ್ಣದಾಗಿ ಕತ್ತರಿಸಿದ ಒಂದು ಕ್ಯಾರೆಟ್, ಅರ್ಧ ಟೀಸ್ಪೂನ್ ಅರಿಶಿನ, ಅರ್ಧ ಟೀಸ್ಪೂನ್ ಮೆಣಸಿನ ಪುಡಿ, ಒಂದು ಟೀಸ್ಪೂನ್ ಉಪ್ಪು, ಅರ್ಧ ಕಪ್ ನೆನೆಸಿದ ಹೆಸರು ಬೇಳೆ, ಒಂದು ಕಪ್ ರೋಲ್ಡ್ ಓಟ್ಸ್, ನಾಲ್ಕು ಕಪ್ ನೀರು, ಎರಡು ಚಮಚ ಸಣ್ಣದಾಗಿ ಕೊತ್ತಂಬರಿ ಸೊಪ್ಪು ಬೇಕು.


    ಓಟ್ಸ್ ಖಿಚಡಿ ರೆಸಿಪಿ ಮಾಡುವ ವಿಧಾನ


    ಮೊದಲು ಪ್ರೆಶರ್ ಕುಕ್ಕರ್‌ ನಲ್ಲಿ ಎರಡು ಚಮಚ ತುಪ್ಪ ಬಿಸಿ ಮಾಡಿ. ಒಂದು ಟೀಸ್ಪೂನ್ ಜೀರಿಗೆ, ಒಂದು ಬೇ ಎಲೆ ಮತ್ತು ಪಿಂಚ್ ಹಿಂಗ್ ಸೇರಿಸಿ. ಹದಗೊಳಿಸುವಿಕೆ ಸ್ಪ್ಲಟರ್ ಮಾಡಿ. ಸಣ್ಣದಾಗಿ ಹೆಚ್ಚಿದ ಅರ್ಧ ಕಪ್ ಈರುಳ್ಳಿ, ಒಂದು ಟೀ ಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಎರಡು ಸೀಳಿದ ಮೆಣಸಿನಕಾಯಿ ಹಾಕಿ ಸ್ವಲ್ಪ ಹುರಿಯಿರಿ.


    ಸಣ್ಣದಾಗಿ ಕತ್ತರಿಸಿದ ಎರಡು ಟೊಮೆಟೊ, ಸಣ್ಣದಾಗಿ ಕತ್ತರಿಸಿದ ಬೀನ್ಸ್, ಮೂರು ಟೀ ಸ್ಪೂನ್ ಬಟಾಣಿ, ಸಣ್ಣದಾಗಿ ಕತ್ತರಿಸಿದ ಒಂದು ಕ್ಯಾರೆಟ್, ಅರ್ಧ ಟೀಸ್ಪೂನ್ ಅರಿಶಿನ, ಅರ್ಧ ಟೀಸ್ಪೂನ್ ಮೆಣಸಿನ ಪುಡಿ, ಒಂದು ಟೀಸ್ಪೂನ್ ಉಪ್ಪು ಸೇರಿಸಿ. ಮಸಾಲೆ ಆರೊಮ್ಯಾಟಿಕ್ ಆಗುವವರೆಗೆ ಹುರಿಯಿರಿ.


    ಇದನ್ನೂ ಓದಿ: ಮಧುಮೇಹ ನಿಯಂತ್ರಣಕ್ಕೆ ಈ ಒಂದು ಮೂಲಿಕೆ ಪರಿಣಾಮಕಾರಿ!


    ಅರ್ಧ ಕಪ್ ನೆನೆಸಿದ ಹೆಸರು ಬೇಳೆ, ಒಂದು ಕಪ್ ರೋಲ್ಡ್ ಓಟ್ಸ್, ನಾಲ್ಕು ಕಪ್ ನೀರು, ಎರಡು ಚಮಚ ಸಣ್ಣದಾಗಿ ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಬೆರೆಸಿರಿ. ಈಗ ನಿಮ್ಮ ಓಟ್ಸ್ ರೆಸಿಪಿ ಸಿದ್ಧವಾಗಿದೆ. ಇದನ್ನು ರೈತಾ ಮತ್ತು ಉಪ್ಪಿನಕಾಯಿ ಜೊತೆ ಸೇವಿಸಿ.

    Published by:renukadariyannavar
    First published: